ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ: ಮಹಿಳಾ ದೌರ್ಜನ್ಯದ ಸುತ್ತ ಸತ್ಯ ಮಿಥ್ಯಗಳು

By ಸೋಮನಗೌಡ.ಎಸ್.ಎಂ, ಕಟ್ಟಿಗೆಹಳ್ಳಿ
|
Google Oneindia Kannada News

ಪ್ರಾಣಿ, ಪಕ್ಷಿ, ಮರ, ಗಿಡಗಳಿಗೆ ಮಾತು ಬರುವಂತಿದ್ದರೆ ಮಹಿಳೆ ಪುರುಷನ ದೌರ್ಜನ್ಯಗಳಿಗೆ ಬೇಸತ್ತು ಬಹುಶಃ ಮಹಿಳೆಯರ ಪ್ರಕೃತಿಯ ಜೊತೆ ಹೆಣ್ಣಿನ ಮೈ, ಮನಸ್ಸು ಲೀನವಾಗಿ ಹೋಗುತ್ತಿತ್ತೇನೋ.

ನಾಗರಿಕತೆ ಬೆಳೆದಂತೆ ಆರಂಭವಾದ ಸ್ತ್ರೀ ಮೇಲಿನ ದೌರ್ಜನ್ಯ 21ನೇ ಶತಮಾನದಲ್ಲೂ ರೂಪಾಂತರಿ ರಾವಣನ ರೂಪಕವಾಗಿ ಬೆಳೆದು ನಿಂತಿದೆ. ಭಾರತೀಯರು ಎಂದು ಬೀಗುವ ನಾವು ಜಾಗತಿಕ ಮಟ್ಟದಲ್ಲಿ ಹೆಣ್ಣಿನ ಮೇಲೆ ನಿರಂತರ ಅಕ್ರಮಣ ನಡೆಸುವ ದೇಶದವರು ಎಂದು ಇನ್ನು ಮುಂದೆ ತಲೆ ತಗ್ಗಿಸುವಂತಹ ಪರಿಸ್ಥಿತಿಗಳು ಘಟಿಸಿವೆ. ಇತಿಹಾಸದುದ್ದಕ್ಕೂ ಹೆಣ್ಣು ಪುರುಷರಿಗೆ ಸಮನಾಗಿ ನಿಲ್ಲಬಲ್ಲಳೇ? ಎಂಬ ಪ್ರಶ್ನೆಗೆ ಉತ್ತರ ಪ್ರಶ್ನೆಯಾಗಿಯೇ ಉಳಿಯುತ್ತದೆ.

ಇವೆ ದಂತೆ ಹೆಣ್ಣನ್ನು ಅನುಭವಿಸಿ ಬಿಸಾಡುವ ಒಂದು ಸರಕನ್ನಾಗಿ ನೋಡುತ್ತಿದ್ದರೆ ʼಹಾಸುಂಡು ಬೀಸಿ ಒಗೆದಂತೆʼ ಭಾರತದಲ್ಲಿ ಹೆಣ್ಣಿನ ಕುರಿತಾದ ಅಸಮಾನತೆಯನ್ನು ವೇದ ಶಾಸ್ತ್ರಗಳ ಒಂದು ಭಾಗವೆಂಬಂತೆಯೇ ಕಾಣಲಾಯಿತು.

ಹೆಣ್ಣನ್ನು ಹೀನಾಯವಾಗಿ ನಡೆಸಿಕೊಳ್ಳುವ ಬರ್ಬರವಾದ ಸಂಪ್ರದಾಯಗಳ ಸಂಕೋಲೆಯಲ್ಲಿ ಬಂಧಿಸಿ, ಹಿಂಸಿಸುವ ಘಟನೆಗಳು ಒಂದಾ ಎರಡಾ... ಬಾಲ್ಯವಿವಾಹ, ಸತಿ ಸಹಗಮನ, ವೈದವ್ಯ, ಗೃಹ ಹಿಂಸೆಯಂತ ಅದೆಷ್ಟು ಕ್ರೌರ್ಯಗಳಿಂದ ಹೆಣ್ಣು ಮುಕ್ತಳಾಗಿಲ್ಲ. ಪ್ರತಿವರ್ಷ ಮಾರ್ಚ್‌8 ರಂದು ನಾವು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಆಚರಿಸಿ ಆಕೆಗೆ ಆ ದಿನ ಮೀಸಲಿಟ್ಟು ವಿಜೃಂಭಿಸುತ್ತೇವೆ. ಆದರೆ ಮರುದಿನವೇ ಆಕೆಯ ಮೇಲಿನ ಕ್ರೌರ್ಯದ ಸುದ್ದಿಗಳು ಮಾಧ್ಯಮಗಳಲ್ಲಿ ರಾರಾಜಿಸುತ್ತವೆ.

ಈ ನೆಲದ ಅಶ್ಪೃಶ್ಯರು ಮತ್ತು ಮಹಿಳೆಯರು

ಈ ನೆಲದ ಅಶ್ಪೃಶ್ಯರು ಮತ್ತು ಮಹಿಳೆಯರು

ನಿರ್ಭಯಾ ಪ್ರಕರಣ ನಡೆದಾಗ ಭಾರತದ ಎಲ್ಲ ಸಜ್ಜನ ನಾಗರಿಕರು ಬೆಚ್ಚಿಬಿದ್ದರು, ಅಲ್ಲಿ ಜಾತಿಯ ಪ್ರಶ್ನೆಯೇ ಬರಲಿಲ್ಲ. ಇನ್ನು ಕಳೆದ ವರ್ಷ ಘಟಿಸಿದ ಉತ್ತರ ಪ್ರದೇಶದ ಹತ್ರಾಸ್ ಘಟನೆಯ ನೆನೆಸಿಕೊಂಡರೆ ದುಃಖದಿಂದ ಗಂಟಲುಬ್ಬುತ್ತದೆ. ಇಷ್ಟೊಂದು ಬಾಧೆಗಳನ್ನು ಹೊತ್ತ ಸ್ತ್ರೀ ಕಷ್ಟಗಳನ್ನು ಕಟ್ಟಿಕೊಂಡ ಹೆಣ್ಣಿನ ಬಗ್ಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿದ ಮಾತು ಈ ಕ್ಷಣ ನೆನಪಾಗುತ್ತದೆ. ʼಇಡೀ ಜಗತ್ತಿನಲ್ಲಿ ಅತೀ ಹೆಚ್ಚು ದುಃಖಿತರು, ನೋವುಂಡವರು ಎಂದರೆ ಈ ನೆಲದ ಅಶ್ಪೃಶ್ಯರು ಮತ್ತು ಮಹಿಳೆಯರುʼ. ಡಾ.ಬಿ.ಆರ್‌.ಅಂಬೇಡ್ಕರ್‌ ಮಹಿಳೆಯನ್ನು ಜಾತಿ, ಧಾರ್ಮಿಕವಾಗಿ ವಿಂಗಡಿಸಿ ಮಾತನಾಡಲಿಲ್ಲ, ಬರೆಯಲಿಲ್ಲ. ತಮ್ಮ ಮನೆಯ ಒಂದು ಹೆಣ್ಣು ಅನುಭವಿಸಿದ ವೇದನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ.

ಜಾಗತಿಕವಾಗಿ ನಾವು ಎಷ್ಟೇ ಮುಂದುವರೆದಿದ್ದರೂ ಮಾನಸಿಕವಾಗಿ ನಾವು ಇಂತಹ ಘಟನೆಗಳಿಂದಾಗಿ ಅಧಃಪತನದ ಹಾದಿಯಲ್ಲಿದ್ದೇವೆ. ವರ್ತಮಾದ ಭಾರತದ ಹೆಣ್ಣು ತನ್ನನ್ನು ಆಧುನಿಕ ನಾಗರಿಕ ಭಾರತದ ಒಂದು ಭಾಗ ಎಂದು ಹಲವಾರು ಕ್ಷೇತ್ರಗಳಲ್ಲಿ ಕಂಡುಕೊಂಡಿದ್ದಾಳೆ. ಆದರೆ ಮನೆಯಂಬ ನಾಲ್ಕು ಗೋಡೆಯ ಒಳಗೆ, ಕಚೇರಿ ಎಂಬ ನಾಲ್ಕು ಗೋಡೆಗಳ ಒಳಗೆ ಹಿಂಸೆ, ನರಕಗಳ ಮಧ್ಯೆ ಬದುಕುವ ಹೆಣ್ಣಿನ ವೇದನೆ ಅರ್ಥಮಾಡಿಕೊಳ್ಳುವ ಗಂಡೆಂಬ ಹೆಣ್ಣು ಮನಸ್ಥಿತಿಯ ಗೆಳೆಯ, ಅಣ್ಣ, ತಮ್ಮ, ಅಪ್ಪ ಸ್ಥಾನ ತುಂಬುವ ಗಂಡಸು ಇನ್ನೂ ನಂಜುಂಡ ಮಹಿಳೆಗೆ ದೊರಕಿಲ್ಲ.

ಹುಟ್ಟಿನಿಂದಲೇ ವೇದನೆ ಅನುಭವಿಸುವ ಜೀವಿ

ಹುಟ್ಟಿನಿಂದಲೇ ವೇದನೆ ಅನುಭವಿಸುವ ಜೀವಿ

ಹುಟ್ಟಿನಿಂದಲೇ ವೇದನೆ ಅನುಭವಿಸುವ ಪ್ರಾಣಿಯಂತಿದ್ದರೆ ಅದು ಹೆಣ್ಣು ಮಾತ್ರ. ಬಸವಣ್ಣನವರು ʼದಯವೇ ಧರ್ಮದ ಮೂಲವಯ್ಯʼ ಎಂದು ಹೇಳಿ 800 ವರ್ಷಗಳೇ ಕಳೆದವು ಆದರೆ ದಯೆಯಿಲ್ಲದ ಈ ಸಮಾಜ ಹೆಣ್ಣಿನ ಮೇಲಿನ ದೌರ್ಜನ್ಯದ ನಿರಂತರವಾಗಿ ಸಾಗುತ್ತಿದೆ.

ನಮ್ಮನ್ನಾಳುವ ಪ್ರಜಾಸೇವಕರು ಎಂದು ಕರೆಸಿಕೊಳ್ಳುವ ದೊಡ್ಡ ಮನುಷ್ಯರ ಸಣ್ಣತನಗಳಿಗೆ ಅನೇಕ ಸಾಕ್ಷಿಗಳಿವೆ. ಮೇಲ್ನೋಟಕ್ಕೆ ಸ್ತ್ರೀಮೇಲೆ ತೋರುವ ಗೌರವ ಪ್ರಚಾರಕ್ಕಷ್ಟೇ ಮೀಸಲು. ಅದರಾಚೆ ಆಕೆ ಭೋಗದ ವಸ್ತು. ಇಂತಹ ವಿಕೃತ ಮನಸ್ಥಿತಿಯಿಂದ ದೇಶದಲ್ಲಿ ಅದೆಷ್ಟೋ ಅತ್ಯಾಚಾರ, ದೌರ್ಜನ್ಯ, ಹಿಂಬಾಲಿಸುವಿಕೆಯಂತ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ.

ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಪ್ರಕರಣಗಳು ಸಂಪೂರ್ಣ ಮುಕ್ತಿ ಸಿಕ್ಕಿಲ್ಲ. ರಾಷ್ಟ್ರೀಯ ಅಪರಾಧ ಬ್ಯೂರೋ (ಎನ್‌ಸಿಆರ್‌ಬಿ) 2020ರಲ್ಲಿ ವರದಿಯಲ್ಲಿ ತಿಳಿಸಿರುವಂತೆ ಪ್ರತಿವರ್ಷ ದೇಶದಲ್ಲಿ 32 ರಿಂದ 33 ಸಾವಿರ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. 2017 ಹಾಗೂ 2018 ಹೋಲಿಸಿದರೆ 2019ರಲ್ಲಿ ಅತ್ಯಾಚಾರ ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿರುವುದು ಸಮಾಧಾನಕರ ಸಂಗತಿ. ಆದರೆ 2020ರಲ್ಲಿ ಕೊರೊನಾ ಹಾವಳಿಯಿಂದ ಕೌಟುಂಬಿಕ ದೌರ್ಜನ್ಯ, ಹಿಂಸೆಯಂತ ಪ್ರಕರಣಗಳು ಹೆಚ್ಚಾಗಿ ಹೆಣ್ಣು ಬಲಹೀನಳಲ್ಲವೇ..?

ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹೆಚ್ಚು ಪ್ರಕರಣ

ದಕ್ಷಿಣ ಭಾರತದಲ್ಲಿ ಕೇರಳದಲ್ಲಿ ಹೆಚ್ಚು ಪ್ರಕರಣ

ದೇಶದಲ್ಲಿ 2017ರಲ್ಲಿ (33,658), 2018ರಲ್ಲಿ (33,977) ಮತ್ತು 2019ರಲ್ಲಿ (32,260) ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಅತ್ಯಾಚಾರ ಯತ್ನ ಪ್ರಕರಣಗಳು ಕಮ್ಮಿಆಗಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ದೇಶದಲ್ಲೇ 3 ರಾಜ್ಯಗಳು ಎಂದರೆ ಮಧ್ಯಪ್ರದೇಶ, ರಾಜಸ್ಥಾನ, ಉತ್ತರಪ್ರದೇಶ, ಅತ್ಯಾಚಾರ ಪ್ರಕರಣಗಳಲ್ಲಿ ದಕ್ಷಿಣ ಭಾರತದಲ್ಲಿ ಕೇರಳ (6,051) ಮೊದಲನೇ ಸ್ಥಾನದಲ್ಲಿದೆ. ಆಂಧ್ರಪ್ರದೇಶ(3,082), ತೆಲಂಗಾಣ (2,178), ಕರ್ನಾಟಕ (1,563) ಮತ್ತು ತಮಿಳುನಾಡು (977) ಪ್ರಕರಣಗಳು 2017-2019ವರೆಗೆ ದಾಖಲಾಗಿವೆ.

ದೇಶದಾದ್ಯಂತ 2019 ಅಂತ್ಯದ ವರೆಗೆ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲೇ ಶೇ.80ರಷ್ಟು ಪ್ರಕರಣಗಳು ಇತ್ಯರ್ಥವಾಗಿಲ್ಲ. 2018ರವೇಳೆಗೆ ದೇಶದ ನ್ಯಾಯಾಲಯಗಳಲ್ಲಿ 1.37 ಲಕ್ಷ ಅತ್ಯಾಚಾರ ಪ್ರಕರಣಗಳು ವಿಚಾರಣೆ ಬಾಕಿ ಉಳಿದಿತ್ತು. 2019ರಲ್ಲಿ ಹೊಸದಾಗಿ 24,848 ಪ್ರಕರಣಗಳು ನ್ಯಾಯಾಲಯಕ್ಕೆ ಬಂದಿವೆ. 2019ರಲ್ಲಿ 1,62,714 ಪ್ರಕರಣಗಳು ನ್ಯಾಯಾಲಯದಲ್ಲಿವೆ. 2019ರಲ್ಲಿ ದೇಶದ ಎಲ್ಲ ನ್ಯಾಯಾಲಯಗಳಲ್ಲಿ 17,109 ಅತ್ಯಾಚಾರ ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ ಎಂದು ವರದಿಯಲ್ಲಿ ತಿಳಿದು ಬಂದಿದೆ.

1,000 ತ್ವರಿತ ನ್ಯಾಯಾಲಯಗಳಿವೆ

1,000 ತ್ವರಿತ ನ್ಯಾಯಾಲಯಗಳಿವೆ

ಕೇಂದ್ರ ಸರ್ಕಾರವು ಮಹಿಳೆಯರ ಮೇಲಿನ ದೌರ್ಜನ್ಯಗಳ ವಿಚಾರಣೆಗಾಗಿಯೇ 1,000 ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಹೇಳಿತ್ತು. ಈಗ 664 ಮಾತ್ರ ಸ್ಥಾಪಿತವಾಗಿವೆ. ಇಷ್ಟಾದರೂ ಪ್ರತಿ ವರ್ಷ ಮಹಿಳಾ ದೌರ್ಜನ್ಯಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವುದು ಪುರುಷ ದೌರ್ಜನ್ಯಕ್ಕೆ ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?

ಇನ್ನು ಬಾಲ್ಯ ವಿವಾಹ ಎನ್ನುವಂತಹ ಬಿಡುಗು ರಾಜ್ಯದಲ್ಲಿ 5 ವರ್ಷಗಳಲ್ಲಿ ಹೆಚ್ಚಾಗುತ್ತಲೇ ಸಾಗಿದೆ. ಕರ್ನಾಟಕದಲ್ಲಿ ವಿಜಯಪುರ, ಬಾಗಲಕೋಟೆ, ಯಾದಗಿರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ.21.4 ರಷ್ಟು ಬಾಲ್ಯವಿವಾಹ ನಡೆದಿವೆ. 2020ರಲ್ಲಿ ಕೊರೊನಾ ಸೋಂಕಿನಿಂದ ಶಿಕ್ಷಣ ಮೊಟಕಾಗುತ್ತಿದ್ದಂತೆ ಮನೆಯಲ್ಲಿ ʼತಂದೆ-ತಾಯಿ ಜಗಳದ ಮಧ್ಯೆ ಹೆಣ್ಣು ಬಡವಾಯ್ತುʼ ಎನ್ನುವಂತೆ ಬಾಲ್ಯವಿವಾಹಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ

ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆ

ರಾಜ್ಯದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಮನೆಯ ಕನಿಷ್ಠ 3 ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಭಾಗಿವಹಿಸುತ್ತಿರುವ ವಿವಾಹಿತರ ಸಂಖ್ಯೆ 2019-20ರಲ್ಲಿ 82.7ಕ್ಕೆ ರಾಜ್ಯದಲ್ಲಿ ಏರಿಕೆಯಾಗಿರುವುದು ಸಂತಸದ ವಿಷಯ. ಇನ್ನು ಕಳೆದ 12 ತಿಂಗಳಲ್ಲಿ ಕೆಲಸ ಮಾಡಿ ನಗದು ರೂಪದ ಸಂಬಳ ಪಡೆದ ಮಹಿಳೆಯರ ಸಂಖ್ಯೆ ಶೇ.37ರಷ್ಟು, ಸಂತ ಮನೆ ಭೂಮಿ ಹೊಂದಿರುವ ಮಹಿಳೆಯರು ರಾಜ್ಯದಲ್ಲಿ ಶೇ.67.6ರಷ್ಟು, ಸ್ವಂತ ಬಳಕೆಯ ಬ್ಯಾಂಕ್‌ ಉಳಿತಾಯ ಖಾತೆ ಹೊಂದಿರುವ ರಾಜ್ಯದ ಮಹಿಳೆಯರ ಸಂಖ್ಯೆ ಶೇ.87.7 ಎಂದು ತಿಳಿದು ಬಂದಿದೆ.

ಇಷ್ಟೆಲ್ಲಾ ಒಳ್ಳೆಯ-ಕೆಟ್ಟ ಘಟನೆಗಳ ನಡುವೆಯೂ ಹೆಣ್ಣೆಂದರೆ ಆಕೆ ಕಾಮನ ಬಿಲ್ಲು. ಸವಾಲುಗಳ ಮಧ್ಯೆ ಮೇಲೆದ್ದು ಬಂದು ತನ್ನ ಬದುಕನ್ನು ಕಟ್ಟಿಕೊಳ್ಳುತ್ತಿರುವಾಗಲೂ ಪುರುಷ ಕೆಂʼಭೂತʼ ತನ್ನ ವಕ್ರದೃಷ್ಟಿಯನ್ನು ಬೀರುವುದು ಬಿಟ್ಟಿಲ್ಲ. ಈಗ ಮಹಿಳೆಯರ ಸ್ಥಿತಿಗತಿಗಳು ಸುಧಾರಣೆ ಹೊಂದಿರುವುದು ನಿಜ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮಹಿಳೆಯ ಸಾಧನೆ ಉಲ್ಲೇಖನಿಯವಾಗಿದೆ. ಉದ್ಯೋಗಾವಕಾಶಗಳೂ ಹೆಚ್ಚುತ್ತಿವೆ. ಆದರೆ ʼಭೋಗವಸ್ತುʼ ಎನ್ನುವ ದೃಷ್ಟಿಕೋನ ಮಾತ್ರ ಬದಲಾಗಿಲ್ಲ.

ಅನ್ನ, ವಸತಿ, ವಿದ್ಯೆ ಇದ್ದರೆ ಅದು ಸಮಾನತೆಯಲ್ಲ. ಗಂಡೆಂಬ ಬಂಡ ಮನಸ್ಸಿನಲ್ಲಿ ʼಕಾಮʼದೃಷ್ಟಿ ಮಂಜಾಗಿ ಸ್ತ್ರೀ ಮತ್ತು ಪುರುಷ ಸಮಾನತೆಯ ತಕ್ಕಡಿಯಲ್ಲಿ ಸಮನಾದಾಗ ಮಾತ್ರ ʼಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾಃʼ ಎಂಬ ಮಾತಿಗೆ ಮತ್ತು ಮಹಿಳಾ ದಿನಾಚರಣೆಗೂ ಅರ್ಥ ಬರುತ್ತದೆ. ಹೆಣ್ಣೆಂದರೆ ಭೋಗವಲ್ಲ... ಬಾನೆತ್ತರದ ಮನಸ್ಸು ಎಂದು ಎಲ್ಲ ಪುರುಷರು ಅರ್ಥಮಾಡಿಕೊಂಡರೆ ಅಪರಾಧ ಮುಕ್ತ ಸಮಸಮಾಜ ಸಾಧ್ಯ.

English summary
International Womens Day 2021: Somanagowda S. M in this article highlighted the Harassment on Women in all fields and focus on safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X