ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಹುಲಿ ದಿನದ ಇತಿಹಾಸ, ಮಹತ್ವ ಮತ್ತು ವೈಶಿಷ್ಟ್ಯ ತಿಳಿಯಿರಿ

|
Google Oneindia Kannada News

ಕಾಡಿನಲ್ಲಿ ನಿಂತು ಹುಲಿಯೊಂದು ಘರ್ಷಿಸಿದ ನಾಡಿನಲ್ಲಿ ನಿಂತ ಜನರ ಎದೆಯನ್ನು ನಡುಕ ಶುರುವಾಗುತ್ತೆ. ಹುಲಿಗಳ ಬಗ್ಗೆ ಸಾಮಾನ್ಯರಲ್ಲಿ ಮೊದಲಿನಿಂದ ಅಂಥದೊಂದು ಭಯದ ಅಭಿಪ್ರಾಯ ಸೃಷ್ಟಿಯಾಗಿ ಬಿಟ್ಟಿದೆ. ಜನರಂತೆ ಅವುಗಳದ್ದೂ ಒಂದು ಜೀವ ಮತ್ತು ಜೀವನವಿದ್ದೇ ಇರುತ್ತದೆ.

ನಾಡಿನಲ್ಲಿ ಬದುಕುತ್ತಿರುವ ಮನುಷ್ಯ ಕಾಡಿನ ನಾಶವನ್ನು ಮುಂದುವರಿಸಿದ್ದಾನೆ. ಹುಲಿಗಳ ಆವಾಸಸ್ಥಾನವನ್ನು ವಶಕ್ಕೆ ಪಡೆಯುತ್ತಿರುವ ಜನರಿಂದಾಗಿ ಕಾಡು ಪ್ರಾಣಿಗಳು ನಾಡಿನ ಕಡೆಗೆ ಲಗ್ಗೆ ಇಡುತ್ತಿವೆ. ಅದುವೇ ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುವಂತಾಗಿದೆ. ಇಂಥ ಹುಲಿಗಳ ಸಂರಕ್ಷಣೆಗೆ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ.

ಕರ್ನಾಟಕ; 6ನೇ ಹುಲಿ ಸಂರಕ್ಷಿತ ಪ್ರದೇಶ ಶೀಘ್ರವೇ ಘೋಷಣೆಕರ್ನಾಟಕ; 6ನೇ ಹುಲಿ ಸಂರಕ್ಷಿತ ಪ್ರದೇಶ ಶೀಘ್ರವೇ ಘೋಷಣೆ

ಜಗತ್ತಿನಲ್ಲಿ ಹುಲಿಗಳನ್ನು ಸಂರಕ್ಷಿಸುವ ಉದ್ದೇಶದಿಂದಲೇ ಪ್ರತಿ ವರ್ಷ ಜುಲೈ 29ರ ದಿನವನ್ನು "ಅಂತಾರಾಷ್ಟ್ರೀಯ ಹುಲಿ ದಿನ" ಎಂದು ಆಚರಿಸಲಾಗುತ್ತದೆ. ಈ ವಿಶೇಷ ಆಚರಣೆಯ ಉದ್ದೇಶ, ಗುರಿ, ಮಹತ್ವ ಹಾಗೂ ಇತಿಹಾಸವನ್ನು ಮುಂದೆ ಓದಿ ತಿಳಿಯಿರಿ.

ಅಂತಾರಾಷ್ಟ್ರೀಯ ಹುಲಿ ದಿನದ ಹಿನ್ನೆಲೆ

ಅಂತಾರಾಷ್ಟ್ರೀಯ ಹುಲಿ ದಿನದ ಹಿನ್ನೆಲೆ

ಇಡೀ ವಿಶ್ವದಲ್ಲೇ ಕೇವಲ 13 ರಾಷ್ಟ್ರಗಳಲ್ಲಿ ಮಾತ್ರ ಹುಲಿಗಳು ಕಂಡು ಬರುತ್ತವೆ. ಇಂಥ ಅಪರೂಪದ ಪ್ರಾಣಿಯನ್ನು ಸಂರಕ್ಷಿಸುವ ಉದ್ದೇಶದಿಂದ ಕಳೆದ 2010ರಲ್ಲಿ ರಷ್ಯಾದಲ್ಲಿ ಸೇಂಟ್ ಪೀಟರ್ಸ್ಬರ್ಗ್ ಟೈಗರ್ ಶೃಂಗಸಭೆಯಲ್ಲಿ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. 2022ರ ಹೊತ್ತಿಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ 13 ರಾಷ್ಟ್ರಗಳು ಘೋಷಿಸಿದವು.

ಅಂತಾರಾಷ್ಟ್ರೀಯ ಹುಲಿ ದಿನದ ಆಚರಣೆಗೆ ಕಾರಣ

ಅಂತಾರಾಷ್ಟ್ರೀಯ ಹುಲಿ ದಿನದ ಆಚರಣೆಗೆ ಕಾರಣ

ಭಾರತವು 1973ರಲ್ಲಿ ಹುಲಿಗಳನ್ನು ಉಳಿಸುವ ವಿಶಿಷ್ಟ ಯೋಜನೆಯೊಂದಿಗೆ ಪ್ರಾಜೆಕ್ಟ್ ಟೈಗರ್ ಅನ್ನು ಪ್ರಾರಂಭಿಸಲಾಯಿತು. ಅದರ ರಚನೆಯ ವರ್ಷದಲ್ಲಿ 9 ಹುಲಿಗಳ ಜಾತಿಗೆ ಮೀಸಲಾಗಿದ್ದು, ತದನಂತರದಲ್ಲಿ ಟೈಗರ್ ಪ್ರಾಜೆಕ್ಟ್ ವ್ಯಾಪ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಲಾಯಿದೆ. ಈ ವರ್ಷದ ವೇಳೆಗೆ ಕಾಡು ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು 13 ವ್ಯಾಪ್ತಿಯ ದೇಶದ ಸರ್ಕಾರಗಳು ಮಹತ್ವಾಕಾಂಕ್ಷೆಯ ಸಂರಕ್ಷಣಾ ಗುರಿಯನ್ನು ಹೊಂದಿವೆ.

ಹುಲಿಗಳ ವೈವಿಧ್ಯತೆ

ಹುಲಿಗಳ ವೈವಿಧ್ಯತೆ

ಸಾಮಾನ್ಯವಾಗಿ ಹುಲಿಗಳಲ್ಲಿ ಹಲವು ವೈವಿಧ್ಯತೆಗಳು ಇರುತ್ತದೆ. ಒಂದು ಹುಲಿಯು 13 ಅಡಿ ಎತ್ತರ ಹಾಗೂ 300 ಕೆಜಿವರೆಗೂ ತೂಕವನ್ನು ಹೊಂದಿರುತ್ತದೆ. ಆದರೆ ಸಿಂಹದ ರೀತಿ ಸಾಮೂಹಿಕವಾಗಿ ಬದುಕುವ ಪ್ರಾಣಿ ಇದಲ್ಲ. ಏಕಾಂಗಿಯಾಗಿ ಇರಲು ಬಯಸುವ ಬುದ್ಧಿವಂತ ಪ್ರಾಣಿಗಳ ಸಾಲಿನಲ್ಲಿ ಹುಲಿ ಕಾಣಿಸಿಕೊಳ್ಳುತ್ತದೆ. ಇನ್ನು ಅದರಲ್ಲಿ ಬಿಳಿ ಹುಲಿಗಳು, ಬಿಳಿ ಹುಲಿಗಳಲ್ಲಿ ಕಪ್ಪು ಪಟ್ಟೆಗಳು, ಕಂದು ಹುಲಿಗಳಲ್ಲಿ ಕಪ್ಪು ಪಟ್ಟೆಗಳು ಮತ್ತು ಚಿನ್ನದ ಹುಲಿಗಳ ಮೈ ಮೇಲೆ ಕಪ್ಪುಪಟ್ಟೆಗಳನ್ನು ಹೊಂದಿರುವ ಹುಲಿಗಳು ಇರುತ್ತವೆ.

ವಿವಿಧ ಬಣ್ಣಗಳ ಹುಲಿಗಳು ರಾಜಗಾಂಭಿರ್ಯದಿಂದ ನಡೆದುಕೊಂಡು ಹೋಗುವುದನ್ನು ನೋಡುವುದೇ ಅದ್ಭುತ ದೃಶ್ಯವಾಗಿ ಗೋಚರಿಸುತ್ತದೆ. ಇಲ್ಲಿಯವರೆಗೆ, ಬಾಲಿ ಟೈಗರ್, ಕ್ಯಾಸ್ಪಿಯನ್ ಟೈಗರ್, ಜಾವಾನ್ ಟೈಗರ್ ಮತ್ತು ಟೈಗರ್ ಹೈಬ್ರಿಡ್ಗಳು ಅಳಿವಿನಂಚಿನಲ್ಲಿರುವ ಪ್ರಭೇದಗಳಾಗಿವೆ. ಹುಲಿ ಸಂರಕ್ಷಣೆಯ ವಿಷಯದಲ್ಲಿ ಗಮನಹರಿಸುವುದು ಮುಖ್ಯವಾಗಿದೆ. ಏಕೆಂದರೆ ಇದು ನಮ್ಮ ಪರಿಸರ ವ್ಯವಸ್ಥೆಯ ಸಮತೋಲನವನ್ನು ರಕ್ಷಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಅಳಿವಿನಂಚಿನಲ್ಲಿರುವ ಪ್ರಾಣಿ ಹುಲಿ

ಅಳಿವಿನಂಚಿನಲ್ಲಿರುವ ಪ್ರಾಣಿ ಹುಲಿ

ಅಂತಾರಾಷ್ಟ್ರೀಯ ಮಟ್ಟದಲ್ಲಿ 1 ಲಕ್ಷಕ್ಕಿಂತ ಹೆಚ್ಚಾಗಿದ್ದ ಹುಲಿಗಳ ಸಂಖ್ಯೆಯು ಒಂದು ಶತಮಾನದಲ್ಲಿ ಶೇ.93ರಷ್ಟು ಕಡಿಮೆಯಾಗಿದೆ. ಹೀಗಾಗಿ ಹುಲಿಯನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿ ಎಂದು ವರ್ಗೀಕರಿಸಲಾಗಿದೆ. ಹುಲಿಗಳ ಆವಾಸಸ್ಥಾನವಾದ ಕಾಡುಗಳನ್ನು ನಾಶಪಡಿಸುವುದು ಹಾಗೂ ಬೇಟೆ ಆಡುವುದರಿಂದ ಅವುಗಳು ಅಪಾಯದ ಅಂಚಿನಲ್ಲಿವೆ. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಪ್ರಪಂಚದಾದ್ಯಂತ ಕೇವಲ 3,900 ಕಾಡು ಹುಲಿಗಳಿವೆ ಎಂದು ಅಂಕಿ-ಅಂಶಗಳಿಂದ ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಹುಲಿಗಳನ್ನು ಸಂರಕ್ಷಿಸುವ ಉದ್ದೇಶವನ್ನು ಇಟ್ಟುಕೊಂಡು ಅಂತಾರಾಷ್ಟ್ರೀಯ ಹುಲಿ ದಿನವನ್ನು ಆಚರಿಸಲಾಗುತ್ತಿದೆ.

Recommended Video

Yuvi - Hazel -ಈ ಮುದ್ದಾದ ಮಗುವಿಗೆ 6 ತಿಂಗಳ ಸಂಭ್ರಮ !! | *Cricket | OneIndia Kannada

English summary
International Tiger Day 2022: Know about Date, History, significance and why the day is celebrated in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X