• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂತಾರಾಷ್ಟ್ರೀಯ ದಾದಿಯರ ದಿನ: ಈ ತಾಯಂದಿರಿಗೆ ಜೀವದ ಭೀತಿಗಿಂತ ಕಾಯಕ ಪ್ರೀತಿ ಹೆಚ್ಚು

|
Google Oneindia Kannada News

ಪ್ರಪಂಚದಾದ್ಯಂತ 2022ರ ಮೇ 12ರ ಈ ದಿನವನ್ನು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲಾಗುತ್ತದೆ. ದಾದಿಯರ ಮಾನವೀಯತೆಯ ಸೇವೆಯನ್ನು ಗುರುತಿಸುವ ಹಾಗೂ ಗೌರವಿಸುವ ಉದ್ದೇಶದಿಂದ ಈ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.

ಬ್ರಿಟಿಷ್ ಸಮಾಜ ಸುಧಾರಕ, ಸಂಖ್ಯಾಶಾಸ್ತ್ರಜ್ಞ ಮತ್ತು ಮಾಡರ್ನ್ ನರ್ಸಿಂಗ್‌ನ ಸಂಸ್ಥಾಪಕ ಫ್ಲೊರೆನ್ಸ್ ನೈಟಿಂಗೇಲ್ ಅವರ ಜನ್ಮ ವಾರ್ಷಿಕೋತ್ಸವ. ಈ ದಿನವನ್ನು ಹಗಲಿರುಳು ಎನ್ನದೇ ಜನರಿಗಾಗಿ ಶ್ರಮಿಸುವ ಆರೋಗ್ಯ ವ್ಯವಸ್ಥೆಯ ಆಧಾರ ಸ್ತಂಭವಾಗಿರುವ ದಾದಿಯರಿಗೆ ಸಮರ್ಪಿಸಲಾಗುತ್ತಿದೆ.

ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?ಫ್ಲಾರೆನ್ಸ್ ನೈಟಿಂಗೇಲ್ ಯಾರು? ವಿಶ್ವ ದಾದಿಯರ ದಿನಾಚರಣೆ ಏಕೆ?

ಫ್ಲಾರೆನ್ಸ್ ನೈಟಿಂಗೇಲ್ ಅನ್ನು ಮಾಡರ್ನ್ ನರ್ಸಿಂಗ್‌ನ ಸಂಸ್ಥಾಪಕಿ ಎಂದು ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ಅಂತರರಾಷ್ಟ್ರೀಯ ದಾದಿಯರ ದಿನವಾಗಿ ಆಚರಿಸಲಾಯಿತು. 1974ರಲ್ಲಿ, ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸ್ ಪ್ರತಿ ವರ್ಷ ಮೇ 12 ಅನ್ನು ಅಂತರರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಲು ಘೋಷಿಸಿತು.

ದಾದಿಯರಿಗೆ ವಿಶೇಷ ಕಿಟ್ ವಿತರಣೆ

ದಾದಿಯರಿಗೆ ವಿಶೇಷ ಕಿಟ್ ವಿತರಣೆ

ಅಂತಾರಾಷ್ಟ್ರೀಯ ದಾದಿಯರ ದಿನದಂದು ಅಂತಾರಾಷ್ಟ್ರೀಯ ದಾದಿಯರ ಸಮಿತಿಯು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸುವ ಪ್ರತಿಯೊಬ್ಬ ದಾದಿಯರಿಗೆ ಕಿಟ್‌ಗಳನ್ನು ವಿತರಿಸುತ್ತದೆ. ಈ ಕಿಟ್‌ಗಳು ದಾದಿಯರ ಕೆಲಸಕ್ಕೆ ಸಂಬಂಧಿಸಿದ ಅನೇಕ ವಸ್ತುಗಳನ್ನು ಒಳಗೊಂಡಿದೆ. ದಾದಿಯರ ಸಹಕಾರ ಮತ್ತು ಸೇವೆಯಿಲ್ಲದೆ ಆರೋಗ್ಯ ರಕ್ಷಣಾ ವ್ಯವಸ್ಥೆಯು ಅಪೂರ್ಣವಾಗುತ್ತದೆ. ಆದ್ದರಿಂದ ಅವರ ಬಗ್ಗೆ ಕೃತಜ್ಞತೆ ತೋರಿಸಲು ಈ ದಿನವನ್ನು ಸ್ಮರಿಸಲಾಗುತ್ತದೆ.

ಕೋವಿಡ್-19 ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು

ಕೋವಿಡ್-19 ಕಾಲದಲ್ಲಿ ಯೋಧರಂತೆ ದುಡಿದ ದಾದಿಯರು

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಇಡೀ ಜಗತ್ತು ಪರಿತಪಿಸುವ ಸಂದರ್ಭದ ಮಧ್ಯೆಯೂ ಕೊರೊನಾ ಯೋಧರಂತೆ ದುಡಿದ ದಾದಿಯರು ಸಾಕಷ್ಟು ಜೀವಗಳನ್ನು ರಕ್ಷಿಸಿದ್ದಾರೆ. ಸಾರ್ವಜನಿಕರನ್ನು ರಕ್ಷಿಸುವ ಕಾಯಕದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟಿದ್ದಾರೆ. ಅದೆಷ್ಟೋ ಸಮಯದಲ್ಲಿ ತಮ್ಮ ಆತ್ಮೀಯರನ್ನೂ ಕಳೆದುಕೊಂಡಿದ್ದಾರೆ.

ನಾವು ಮುಂಚೂಣಿಯಲ್ಲಿರುವ ಕೊರೊನಾವೈರಸ್ ಯೋಧರ ಬಗ್ಗೆ ಮಾತನಾಡುತ್ತಿದ್ದೇವೆ. ಅವರು ತಮ್ಮ ಪ್ರಾಣದ ಅಪಾಯವನ್ನು ಲೆಕ್ಕಿಸದೇ ಸಾಮಾನ್ಯ ಜನರ ಜೀವ ರಕ್ಷಣೆಗಾಗಿ ವೈದ್ಯರು ಹಾಗೂ ದಾದಿಯರು ಅತ್ಯುತ್ತಮವಾಗಿ ಪ್ರಯತ್ನಿಸಿದ್ದಾರೆ.

ಕುಟುಂಬವೇ ದೂರ ದೂರ: ದಾದಿಯರ ಸೇವೆ ಮಹತ್ತರ

ಕುಟುಂಬವೇ ದೂರ ದೂರ: ದಾದಿಯರ ಸೇವೆ ಮಹತ್ತರ

ಸಾಮಾನ್ಯವಾಗಿ ರೋಗಿಗಳನ್ನು ಗುಣಪಡಿಸುವಲ್ಲಿ ವೈದ್ಯರು ಮಹತ್ತರವಾದ ಪಾತ್ರವನ್ನು ವಹಿಸಿದರೆ, ದಾದಿಯರು ಹಗಲು ರಾತ್ರಿ ರೋಗಿಗಳ ಸೇವಾ ಕಾಯಕದಲ್ಲಿಯೇ ತಮ್ಮ ದಿನವನ್ನು ಕಳೆಯುತ್ತಾರೆ. ಸ್ವತಃ ಕುಟುಂಬ ಸದಸ್ಯರಿಂದಲೇ ಅಂತರ ಕಾಯ್ದುಕೊಳ್ಳಬೇಕಾದ ಸವಾಲಿನ ಸಮಯದಲ್ಲೂ ಬೇರೆ ರೋಗಿಗಳಿಗಾಗಿ ತಮ್ಮ ಕುಟುಂಬವನ್ನು ದೂರವಿಟ್ಟು, ಕೋವಿಡ್-19 ಸೋಂಕಿನ ವಿರುದ್ಧ ದಾದಿಯರು ಹೋರಾಡಿದ ರೀತಿಗೆ ಭಾರತೀಯರು ಸಲಾಂ ಎನ್ನಲೇಬೇಕು.

  Virat Kohli ಅವರ ವಿಶೇಷ ಸಂದರ್ಶನ ಮಾಡಿದ Danish Sait | Oneindia Kannada
  ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ನಂತರದ ಸ್ಥಾನ

  ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ನಂತರದ ಸ್ಥಾನ

  ಕೊರೊನಾವೈರಸ್ ಇಲ್ಲದ ಕಾಲದಲ್ಲೂ ದಾದಿಯರ ಕಾಯಕ ಪ್ರೀತಿ ಕಡಿಮೆಯೇನೂ ಇರಲಿಲ್ಲ. ತಾಯಿ ತನ್ನ ಮಗುವನ್ನು ಹೇಗೆ ರಕ್ಷಿಸುವುದಕ್ಕೆ ಪರಿತಪಿಸುತ್ತಾಳೋ ಅದೇ ರೀತಿ ದಾದಿಯರು ತಮ್ಮ ರೋಗಿಗಳ ಆರೈಕೆಯಲ್ಲಿ ಯಾವುದೇ ಹಿಂಜರಿಕೆ ತೋರಿಸುವುದಿಲ್ಲ. ಹೀಗಾಗಿಯೇ ಜಗತ್ತಿನಲ್ಲಿ ದಾದಿಯರಿಗೆ ತಾಯಿಯ ಸ್ಥಾನವನ್ನೇ ನೀಡಲಾಗುತ್ತದೆ. ಇನ್ನು ಕೊರೊನಾವೈರಸ್ ಕಾಲದಲ್ಲಿ ಸೋಂಕು ಅಂಟಿದ ವ್ಯಕ್ತಿಯನ್ನು ಸಂಬಂಧಿಕರೇ ಹತ್ತಿರ ಬಿಟ್ಟುಕೊಳ್ಳುತ್ತಿರಲಿಲ್ಲ. ಅಂಥ ಸಂದರ್ಭದಲ್ಲಿ ದಾದಿಯರು ತೋರಿದ ಕಾಯಕ ಪ್ರೀತಿ ಎಲ್ಲರಿಗೂ ಮೆಚ್ಚುಗೆ ಆಗುವಂತಿತ್ತು.

  ಕೋವಿಡ್ 19 ರೋಗಿಯ ದೇಹವನ್ನು ತೊಳೆಯುವುದು, ಬಟ್ಟೆ ಹಾಕುವುದು, ಔಷಧಿ ಮತ್ತು ಆಮ್ಲಜನಕವನ್ನು ನೀಡುವುದು, ನಾಡಿಮಿಡಿತ, ರಕ್ತದೊತ್ತಡದ ಮಟ್ಟ(ಬಿಪಿ), ಸಕ್ಕರೆಯ ಮಟ್ಟ(ಶುಗರ್), ಆಮ್ಲಜನಕದ ಮಟ್ಟವನ್ನು ನಿಯಮಿತವಾಗಿ ಪರಿಶೀಲಿಸುವುದರಲ್ಲಿ ದಾದಿಯರು ಮುಂದಿದ್ದರು. ಇದು ದಾದಿಯರ ಕರ್ತವ್ಯವಾಗಿದ್ದರೂ ಜೀವದ ಮೇಲಿನ ಭೀತಿಗಿಂತ ಕಾಯಕದ ಮೇಲಿನ ಪ್ರೀತಿ ಹೆಚ್ಚಾಗಿದೆ. ರೋಗಿಗಳ ಜೀವ ರಕ್ಷಣೆಯೇ ಇವರಿಗೆ ಅಚ್ಚು-ಮೆಚ್ಚಾಗಿದೆ. ಒಟ್ಟಾರೆ ಹೇಳುವುದಾದರೆ ದಾದಿಯರ ಸೇವೆಯನ್ನು ಉದಾತ್ತ ಕೆಲಸವೆಂದು ಪರಿಗಣಿಸಲಾಗುತ್ತದೆ.

  English summary
  International Nurses Day 2022: History, Theme, significance, and Quotes in Kannada.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X