ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವ ಶ್ವಾನ ದಿನ: ಮನುಷ್ಯನ ಅತ್ಯಾಪ್ತ ಸ್ನೇಹಿತನೆಂದರೆ ನಾಯಿ

|
Google Oneindia Kannada News

ಮನುಷ್ಯನ ಬದುಕಿನಲ್ಲಿ ನಾಯಿಗಳು ವಹಿಸುವ ಪಾತ್ರವೇನು ಮತ್ತು ಅವುಗಳ ಮಹತ್ವವೇನು ಎಂಬುದರ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 26 ಅನ್ನು 'ವಿಶ್ವ ಶ್ವಾನ ದಿನ'ವನ್ನಾಗಿ ಆಚರಿಸಲಾಗುತ್ತೆ.

ನಿಯತ್ತಿಗೆ ಮತ್ತೊಮದು ಹೆಸರಾದ ನಾಯ ಮನುಷ್ಯನ ಬದುಕಿನೊಂದಿಗೆ ಹೇಗೆ ಬೆಸೆದುಕೊಂಡಿದೆ, ಮತ್ತು ಬೀದಿ ನಾಯಿಗಳು ಎಷ್ಟು ಹಿಂಸೆಗೆ ಒಳಗಾಗುತ್ತಿವೆ ಎಂಬುದರತ್ತ ಬೆಳಕು ಚೆಲ್ಲುವ ಪ್ರಯತ್ನವನ್ನೂ ಈ ದಿನ ಮಾಡಲಾಗುತ್ತಿದೆ.

ವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನವೈರಲ್ ವಿಡಿಯೋ: ಜಮ್ಮುವಿನಲ್ಲಿ ಸೇನಾ ಶ್ವಾನಗಳಿಂದ ಯೋಗ ಪ್ರದರ್ಶನ

ಮಾಲೀಕರಿಗೋಸ್ಕರ ಪ್ರಾಣವನ್ನೂ ಒತ್ತೆ ಇಡಲು ಸಿದ್ಧವಾಗುವ ನಿಯತ್ತಿನ ಮತ್ತೊಂದು ಹೆಸರೇ ಆಗಿ ನಾಯಿ ಪ್ರಖ್ಯಾತಿ ಪಡೆದಿದೆ. ತರವೇವಾರಿ ಹಾತಿಯ ನಾಯಿಗಳನ್ನು ಸಾಕುವುದು ಒಂದು ಶೋಕಿಯಾಗುತ್ತಿರುವ ಈ ಹೊತ್ತಲ್ಲಿ, ಬೀದಿಯಲ್ಲಿ ಹೊಟ್ಟೆಗಿಲ್ಲದೆ ಅಸುನೀಗುತ್ತಿರುವ ನಾಯಿಗಳತ್ತ ಗಮನ ಹರಿಸಿ ಎಂಬ ಸಂದೇಶವನ್ನು ಈ ದಿನ ನೀಡುತ್ತಿದೆ.

ಶ್ವಾನ ದಿನದ ಬಗ್ಗೆ

ಶ್ವಾನ ದಿನದ ಬಗ್ಗೆ

2004 ರಲ್ಲಿ ಕಾಲ್ಲೀನ್ ಪೈಗೆ ಎಂಬುವವರು ಅಂತಾರಾಷ್ಟ್ರೀಯ ಶ್ವಾನ ದಿನವನ್ನು ಆರಂಭಿಸಿದರು. ಪ್ರಾಣಿ ಹಿತರಕ್ಷಣಾ ಅಡ್ವೋಕೇಟ್ ಆಗಿರುವ ಅವರು ಬೀದಿ ನಾಯಿಗಳ ರಕ್ಷಣೆ ಮತು ಅವುಗಳಿಗೆ ರಕ್ಷಣೆಯ ನೀಡುವ ಉದ್ದೇಶದಿಂದ ಈ ದಿನವನ್ನು ಆರಂಭಿಸಿದರು. ಬೀದಿ ನಾಯಿಗಳನ್ನು ದತ್ತು ಪಡದೆಯುವುದಕ್ಕೆ ಪ್ರೋತ್ಸಾಹ ನೀಡುವುದೂ ಅವರ ಉದ್ದೇಶವಾಗಿತ್ತು.

ಆಚರಣೆ ಹೇಗೆ?

ಆಚರಣೆ ಹೇಗೆ?

ಈ ದಿನವನ್ನೂ ಹೀಗೆಯೇ ಆಚರಿಸಬೇಕು ಎಂದಿಲ್ಲ. ನೀವು ಸಾಕಿರುವ ನಾಯಿಗೆ ಹೆಚ್ಚಿನ ಸಮಯ ನೀಡಿ, ಅದರೊಂದಿಗೆ ಎಲ್ಲಾದರೂ ಪ್ರವಾಸಕ್ಕೆ ತೆರಲಿ, ಅಥವಾ ಬೀದಿಯಲ್ಲಿರುವ ನಾಯಿಗಳಿಗೆ ಆಹಾರ ನೀಡಿ, ಯಾವುದಾದರೂ ಒಂದು ಬೀದಿ ನಾಯಿಯನ್ನು ದತ್ತು ತೆಗೆದುಕೊಳ್ಳಿ, ಅಥವಾ ನಾಯಿಗಳ ರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಸಂಘಟನೆಯೊಂದಿಗೆ ಗುರುತಿಸಿಕೊಂಡು ಅಲ್ಲಿನ ಸೇವಾಕಾರ್ಯದಲ್ಲಿ ಭಾಗಿಯಾಗಬಹುದು.

ನಾಯಿ ಜೊತೆ ಕಾರಲ್ಲಿ ರಾಹುಲ್ ಗಾಂಧಿ ಫನ್ ರೈಡ್: ವೈರಲ್ ಚಿತ್ರ ನಾಯಿ ಜೊತೆ ಕಾರಲ್ಲಿ ರಾಹುಲ್ ಗಾಂಧಿ ಫನ್ ರೈಡ್: ವೈರಲ್ ಚಿತ್ರ

ನಿಮ್ಮನ್ನು ನೋಡಿ ಎಲ್ಲರಿಗಿಂತ ಹೆಚ್ಚು ಖುಷಿ ಪಡುವುದು ನಾಯಿ!

ನಿಮ್ಮನ್ನು ನೋಡಿ ಎಲ್ಲರಿಗಿಂತ ಹೆಚ್ಚು ಖುಷಿ ಪಡುವುದು ನಾಯಿ!

ನೀವು ಎಷ್ಟೋ ದಿನಗಳ ನಂತರ ವಾಪಸ್ ಮನೆಗೆ ಬಂದರೆ ಎಲ್ಲರಿಗಿಂತ ಹೆಚ್ಚು ಉದ್ವೇಗಕ್ಕೊಳಗಾಗುವುದು, ಖುಷಿ ಪಡುವುದು ನಿಮ್ಮ ನಾಯಿ! ನಾಯಿಗಳಿಗೆ ಮನುಷ್ಯನ ಮೇಲಿರುವಷ್ಟು ಬಾಂಧವ್ಯ, ಪ್ರೀತಿ ಬೇರೆ ಪ್ರಾಣಿಗಳಿಗೆ ಅಸಾಧ್ಯ. ಯಾವುದೇ ಸ್ವಾರ್ಥವಿಲ್ಲದೆ ಅವು ತನ್ನ ಒಡೆಯನನ್ನು ಪ್ರೀತಿಸುತ್ತವೆ.

ಮನುಷ್ಯನ ಉತ್ತಮ ಸ್ನೇಹಿತ

ಮನುಷ್ಯನ ಉತ್ತಮ ಸ್ನೇಹಿತ

ನಿಮ್ಮನ್ನು ಬಹುಬೇಗನೇ ಅರ್ಥಮಾಡಿಕೊಳ್ಳುವ ಸ್ನೇಹಿತ ಎಂದರೆ ನಿಮ್ಮ ನಾಯಿ. ನೀವು ಬೇಸರದಲ್ಲಿದ್ದರೆ, ಸಂತೋಷವಾಗಿದ್ದರೆ ಅದಕ್ಕೆ ತಕ್ಕಂತೆ ಮೂಕವಾಗಿಯೇ ಪ್ರತಿಕ್ರಿಯೆ ನೀಡುವ ನಾಯಿ ಮನುಷ್ಯನ ಆತ್ಮೀಯ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ!

ಕಳ್ಳರ ಪಾಲಿಗೆ ಸಿಂಹಸ್ವಪ್ನವಾದ ಮೈಸೂರಿನ 'ಗಜ' ಭಲೇ ಜೋರುಕಳ್ಳರ ಪಾಲಿಗೆ ಸಿಂಹಸ್ವಪ್ನವಾದ ಮೈಸೂರಿನ 'ಗಜ' ಭಲೇ ಜೋರು

English summary
International Dog Day is celebrated Every year on 26 August to make people aware the importance of dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X