ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ 2021: ಇತಿಹಾಸ, ಮಹತ್ವ

|
Google Oneindia Kannada News

ಇಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ, ಹೆಣ್ಣಿನ ಸುರಕ್ಷಿತೆ, ಶಿಕ್ಷಣದ ಕುರಿತು ಅರಿವು ಮೂಡಿಸುವ ಹಾಗೂ ಅವರ ಭದ್ರತೆಗೆ ಸಂಕಲ್ಪ ತೊಡುವ ದಿನ.

ಹೆಣ್ಣು ಮಕ್ಕಳಿಗೆ ರಕ್ಷಣೆ ಮತ್ತು ಅವಕಾಶಗಳನ್ನು ನೀಡುವುದರ ಜೊತೆಗೆ ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಭಾರತದಲ್ಲಿ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ.

2014-15ರಲ್ಲಿ ಪ್ರತಿ ಸಾವಿರ ಬಾಲಕರಿಗೆ 918 ಬಾಲಕಿಯರ ಅನುಪಾತವಿತ್ತು. ಈ ಪ್ರಮಾಣ 2019-20ರ ವೇಳೆಗೆ ಹೆಣ್ಣು ಮಕ್ಕಳ ಅನುಪಾತ 934ಕ್ಕೆ ಏರಿಕೆಯಾಗಿದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ವರ್ತನೆಯಲ್ಲೂ ಅಪಾರವಾದ ಸುಧಾರಣೆಗಳು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿವೆ.

International Day Of The Girl Child 2021: Date, Significance And History In Kannada

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪ್ರಾಧಾನ್ಯತೆ ನೀಡಿದ್ದು, ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷವಾಕ್ಯದ ಮೂಲಕ ಹೆಣ್ಣುಮಕ್ಕಳ ಸಬಲೀಕರಣದ ಅಗತ್ಯವನ್ನು ಒತ್ತಿ ಹೇಳಿದ್ದಾರೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಮ್ಮ ಪಾರಂಪರಿಕ ಜ್ಞಾನವೇ ಈ ಮಾತಿನಲ್ಲಿ ಅಡಗಿದ್ದು, ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಪ್ರಯತ್ನಗಳು ಸಾಗಿವೆ.

ಗಂಡಾಗಲಿ, ಹೆಣ್ಣಾಗಲಿ ಮಕ್ಕಳನ್ನು ದೇವರು ನಮಗೆ ಕೊಟ್ಟ ಅಮೂಲ್ಯ ಉಡುಗೊರೆ ಎಂದು ಪರಿಗಣಿಸಲಾಗುತ್ತದೆ. ಬದುಕಿನ ಅವಿಭಾಜ್ಯ ಅಂಗವಾದ ಪುತ್ರಿಯೊಂದಿಗಿನ ಬಾಂಧವ್ಯ ದಿನ ಪ್ರತಿದಿನವೂ ಪ್ರವರ್ಧಿಸುವಂಥದ್ದು. ಆದರೆ ಅಮ್ಮಂದಿರ ದಿನ, ಅಪ್ಪಂದಿರ ದಿನದಂತೆ ಈ ಸುಂದರ ಸಂಬಂಧದ ಮಹತ್ವ ತಿಳಿಸಲು, ಈ ಸಂಬಂಧವನ್ನು ಗೌರವಿಸಲು ಈ ದಿನದ ಆಚರಣೆ.

ಒಂದು ಕಾಲದಲ್ಲಿ ಹೆಣ್ಣು ಹುಟ್ಟುವುದನ್ನೇ ಕೀಳಾಗಿ ನೋಡಲಾಗುತ್ತಿದೆ. ಆದರೆ ಇಂದು ವಾತಾವರಣ ಬದಲಾಗಿದೆ. ಅನೇಕ ಮಂದಿ ಹೆಣ್ಣು ಮಕ್ಕಳ ಜನನವಾಗಲಿ ಎಂದು ಬಯಸುತ್ತಿದ್ದಾರೆ, ಅಲ್ಲದೇ ಪುತ್ರಿಯರ ಸಾಧನೆ ಕಂಡು ಸಂತಸಪಡುತ್ತಿದ್ದಾರೆ. ಅಷ್ಟೆ ಅಲ್ಲದೇ ಇಂದು ಗಂಡು ಮಕ್ಕಳೇ ಒಂದು ಎಷ್ಟೊ ಮಂದಿ ಜಗಳವಾಡುತ್ತ ಪತ್ನಿಯರಿಗೆ ಚಿತ್ರ ಹಿಂಸೆ ನೀಡುತ್ತಿರುವುದು ವಿಪರ್ಯಾಸ.

ಮಗ, ಮಗಳು ಅಥವಾ ಮಕ್ಕಳಿಗಾಗಿ ಸಡಗರ ಪಡಲು ನಿರ್ದಿಷ್ಟ ದಿನ ಬೇಕೆಂದಿಲ್ಲ. ಮನೆಮನಸ್ಸುಗಳಿಗೆ ಸದಾ ಹಬ್ಬವೆನಿಸುವ ಮಕ್ಕಳೆಂದರೆ ಸಾಕು ಅದೇ ಸಂಭ್ರಮ, ಸಡಗರ. ಆದರೆ ಪಿತೃಪ್ರಧಾನ ಸಮಾಜ ವ್ಯವಸ್ಥೆಯಲ್ಲಿ ಇಂದು ಕೂಡ ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಿಗಿಂತ ಕೀಳೆಂಬ ದೃಷ್ಟಿಯಲ್ಲಿ ನೋಡುತ್ತಿರುವುದು ಕಂಡುಬರುತ್ತದೆ.

ಈ ಲಿಂಗ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಪ್ರಚುರ ಪಡಿಸುವ ದೃಷ್ಟಿಯಿಂದ ವಿವಿಧ ದೇಶಗಳು ಮಗಳ ದಿನವನ್ನು ರಾಷ್ಟ್ರೀಯ ಉತ್ಸವವಾಗಿ ಆಚರಿಸಲು ನಿರ್ಧರಿಸಿವೆ. ಸರಕಾರ ಮತ್ತು ಕಾನೂನಿನ ಮುಂದೆ ಪ್ರತಿ ನಾಗರಿಕ ಸರಿಸಮಾನ ಎಂಬುದನ್ನು ಪ್ರತಿಯೊಬ್ಬರಿಗೆ ಮನವರಿಕೆ ಮಾಡಿಸುವುದು ಇದರ ಉದ್ದೇಶ.

ಈ ದಿನದ ಆಚರಣೆ ವರ್ಷದಿಂದ ವರ್ಷಕ್ಕೆ ಪರಿಣಾಮಕಾರಿಯಾಗುತ್ತಿದ್ದು, ಮೌಢ್ಯ, ಪೂರ್ವಗ್ರಹಗಳನ್ನು ಬದಿಗೆ ಸರಿಸುತ್ತ ಕಾಲ ಹೇಗೆ ಬದಲಾಗುತ್ತಿದೆ ಎಂಬುದನ್ನು ಈ ಆಚರಣೆಯ ಯಶಸ್ಸು ತೋರಿಸುತ್ತದೆ.

ಹೆಣ್ಣುಮಕ್ಕಳಿರುವ ಕುಟುಂಬಗಳು ಈ ದಿನವನ್ನು ಸಂತೋಷದಿಂದ ಆಚರಿಸುತ್ತಾರೆ. ಅದರಲ್ಲೂ ಈ ದಿನ ರಜಾದಿನವಾದ ಭಾನುವಾರವಾಗಿರುವುದರಿಂದ ಪುತ್ರಿಯರು ಮತ್ತು ಪೋಷಕರು ಜತೆಗೂಡಿ ಸಂಭ್ರಮದಿಂದ ಆಚರಿಸುತ್ತಾರೆ.

ಹೆಣ್ಣುಮಕ್ಕಳ ಆಚರಣೆ ಧ್ಯೇಯಗಳು:
-ಹೆಣ್ಣುಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಜೀವನಶೈಲಿಯ ಸುಧಾರಣೆಯನ್ನು ಪರಿಣಾಮಕಾರಿಯಾಗುವಂತೆ ಮಾಡಬೇಕು.
-ಸಮಾಜದಲ್ಲಿ ಹೆಣ್ಣು ಮಗುವಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದು ಮತ್ತು ಹೆಣ್ಣು ಮಗುವಿನತ್ತ ಸಮಾಜ ದೃಷ್ಟಿಕೋನ ಬದಲಿಸುವುದು
-ಭಾರತೀಯ ಸಮಾಜದಲ್ಲಿ ಹೆಣ್ಣು ಎದುರಿಸುವ ಎಲ್ಲ ತಾರತಮ್ಯವನ್ನು ತೊಡೆದು ಹಾಕುವುದು.
-ದೇಶದಲ್ಲಿ ಇತರರಂತೆ ಹೆಣ್ಣು ಮಗುವಿಗೂ ಎಲ್ಲ ಮೂಲಭೂತ ಹಕ್ಕುಗಳು ದೊರೆಯುವಂತೆ ಮಾಡುವುದು.
-ಹೆಣ್ಣು ಮಗುವಿನ ಮಹತ್ವ ಮತ್ತು ಅವರು ನಿರ್ವಹಿಸುವ ಪಾತ್ರದ ಕುರಿತು ಸಮಾಜದಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವುದು.
-ಭಾರತೀಯ ಜನರಲ್ಲಿ ಲಿಂಗಸಮಾನತೆಯ ಜಾಗೃತಿ ಉಂಟು ಮಾಡುವುದು.
-ಗರ್ಭಿಣಿಯರಿಗೆ ಪ್ರಸವಪೂರ್ವ ಆರೋಗ್ಯಸೇವೆಯ ಸೌಲಭ್ಯ.
-14 ವರ್ಷದವರೆಗಿನ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಕಡ್ಡಾಯ ಮತ್ತು ಉಚಿತ ಶಿಕ್ಷ ಣ.
-ಸ್ಥಳೀಯ ಸರಕಾರಿ ಸಂಸ್ಥೆಗಳಲ್ಲಿ ಮಹಿಳೆಯರಿಗೆ 1/3ರಷ್ಟು ಮೀಸಲು
-ದೇಶದಲ್ಲಿನ ಹಿಂದುಳಿದ ವರ್ಗಗಳ ಶಿಕ್ಷ ಣ ಪ್ರಗತಿಗಾಗಿ ಪಂಚವಾರ್ಷಿಕ ಕಾರ್ಯಕ್ರಮಗಳು
-ಶಾಲಾ ಮಕ್ಕಳಿಗೆ ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ, ಶೈಕ್ಷ ಣಿಕ ಪರಿಕರಗಳು; ಎಸ್‌ಸಿ, ಎಸ್‌ಟಿ ವರ್ಗದ ಹೆಣ್ಣುಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ.
-ಹೆಣ್ಣು ಮಕ್ಕಳ ಪಾಲನೆ ಮತ್ತು ಪ್ರಾಥಮಿಕ ಶಿಕ್ಷ ಣವನ್ನು ಖಾತ್ರಿಗಾಗಿ ಬಾಲವಾಡಿ ಮತ್ತು ಶಿಶುಮಂದಿರಗಳ ಆರಂಭ.
-ವಿವಾಹ ನೋಂದಣಿಯನ್ನು ಕಡ್ಡಾಯವಾಗಿ ಜಾರಿಗೊಳಿಸುವ ಮೂಲಕ ಸಾರ್ವಜನಿಕರಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು.
-ಲಿಂಗ ಅಸಮಾನತೆಯನ್ನು ತೊಡೆದು ಹಾಕುವ ಮೂಲಕ ಹೆಣ್ಣು ಮಕ್ಕಳು ಕಡ್ಡಾಯ ಶಿಕ್ಷಣದಲ್ಲಿ ಭಾಗವಹಿಸುವಂತೆ ಮಾಡಿ ಹೆಚ್ಚಿನ ಶಿಕ್ಷಣಕ್ಕೆ ಪೋತ್ಸಾಹ ನೀಡಬೇಕು.
-ಹೆಣ್ಣು ಮಕ್ಕಳಿಗೆ ಸಂಬಂಧಿಸಿದ ಕಾರ್ಯನೀತಿ, ಪೂರಕವಾದ ಕಾನೂನುಗಳು ಸರಿಯಾಗಿ ಜಾರಿಯಾಗುವಂತೆ ಮಾಡಬೇಕು.

ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಮಹತ್ವ:
- ಹೆಣ್ಣು ಮಕ್ಕಳ ಸಂಖ್ಯೆಯು ಕಡಿಮೆ ಆಗುತ್ತಿರುವ ವಿರುದ್ಧ ಜಾಗೃತಿ ಮೂಡಿಸುವುದು ಮತ್ತು ಹೆಣ್ಣು ಮಕ್ಕಳ ಬಗ್ಗೆ ಇರುವ ಮನಸ್ಥಿತಿ ಬದಲಾಯಿಸುವುದು.
- ಹೆಣ್ಣು ಮಕ್ಕಳ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವುದು.
- ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಮತ್ತು ಸಂಕಷ್ಟವನ್ನು ದೂರ ಮಾಡುವುದು.
-ಭಾರತದಲ್ಲಿ ಲಿಂಗ ತಾರತಮ್ಯವನ್ನು ದೂರ ಮಾಡುವ ಬಗ್ಗೆ ಅಭಿಯಾನ ಕೈಗೊಳ್ಳುವುದು. ಲಿಂಗದ ಬಗ್ಗೆ ಇರುತ ತಪ್ಪುಕಲ್ಪನೆ ಮತ್ತು ಮೂಢನಂಬಿಕೆ ದೂರ ಮಾಡುವುದು.
- ಭಾರತದಲ್ಲಿ ಹೆಣ್ಣು ಮಕ್ಕಳು ಎದುರಿಸುತ್ತಿರುವ ಅಸಮಾನತೆ ಹೋಗಲಾಡಿಸುವುದು ಮತ್ತು ಅದನ್ನು ನಿವಾರಣೆ ಮಾಡುವುದು.
- ಪ್ರತಿಯೊಬ್ಬ ಹೆಣ್ಣು ಮಗಳು ಕೂಡ ಸೂಕ್ತ ಗೌರವ ಪಡೆಯುವುದು

ಹೆಣ್ಣುಮಕ್ಕಳ ದಿನ ಆಚರಣೆ ಇತಿಹಾಸ:
ಹೆಣ್ಣು ಮಕ್ಕಳ ವಿರುದ್ಧ ನಡೆಯುವ ಶೋಷಣೆ, ಹೆಣ್ಣು ಭ್ರೂಣ ಹತ್ಯೆ, ಲೈಗಿಂಕ ಕಿರುಕುಳದಂತಹ ಹೇಯ ಕೃತ್ಯಗಳನ್ನು ತಡೆಗಟ್ಟಲು, ಹೆಣ್ಣು ಮಕ್ಕಳ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್‌ 11 ರಂದು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನ ಆಚರಿಸಲಾಗುತ್ತಿದೆ. ಡಿಸೆಂಬರ್ 19, 2011 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಕ್ಟೋಬರ್ 11 ಅನ್ನು ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನವೆಂದು ಘೋಷಿಸಿತು. 2012 ರಲ್ಲಿ ಈ ದಿನಾಚರಣೆಯನ್ನು ಪ್ರಾರಂಭಿಸಲಾಯಿತು.

ಹೆಣ್ಣು ಮಕ್ಕಳ ಸಂಖ್ಯೆಯು ಇಂದಿನ ದಿನಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುತ್ತಿದೆ, ಇದಕ್ಕೆ ಕಾರಣಗಳು ಹಲವಾರು ಇರಬಹುದು. ಆದರೆ ಮುಂದೊಂದು ದಿನ ಇದು ದೊಡ್ಡ ಮಟ್ಟದಲ್ಲಿ ಲಿಂಗಾನುಪಾತದಲ್ಲಿ ಗಂಭೀರ ಸಮಸ್ಯೆ ಉಂಟು ಮಾಡಬಹುದು. ಭಾರತದಲ್ಲೂ ಈ ಸಮಸ್ಯೆಯು ಕಾಡುತ್ತಲಿದೆ. ಇಷ್ಟು ಮಾತ್ರವಲ್ಲದೆ ಹೆಣ್ಣು ಮಕ್ಕಳು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಪ್ರಮುಖವಾಗಿ ಹೆಣ್ಣುಭ್ರೂಣ ಹತ್ಯೆ, ಲಿಂಗಭೇದ, ಲೈಂಗಿಕ ಕಿರುಕುಳ ಇತ್ಯಾದಿಗಳು. ಇಂತಹ ಸಮಸ್ಯೆ ನಿವಾರಣೆ ಮಾಡಲು ಹೆಣ್ಣು ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವುದು ಅತೀ ಅಗತ್ಯವಾಗಿದೆ.

ಪ್ರತೀ ವರ್ಷವು ಹೆಣ್ಣು ಮಕ್ಕಳ ಅಂತಾರಾಷ್ಟ್ರೀಯ ದಿನಕ್ಕೆ ಪ್ರತ್ಯೇಕ ಧ್ಯೇಯಗಳನ್ನು ಇಟ್ಟುಕೊಳ್ಳಲಾಗುತ್ತದೆ. ಮೊದಲ ಧ್ಯೇಯವು ಬಾಲ್ಯ ವಿವಾಹ ಕೊನೆಗೊಳಿಸುವುದು' ಆಗಿತ್ತು. 2013ರಲ್ಲಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಹೊಸ ಬದಲಾವಣೆ ಮತ್ತು 2014ರಲ್ಲಿ ಈ ಧ್ಯೇಯವು ಹದಿಹರೆಯದ ಹುಡುಗಿಯರನ್ನು ಸಶಕ್ತಗೊಳಿಸುವುದು: ಹಿಂಸೆಗೆ ಅಂತ್ಯ ಹಾಡುವುದು, 2016ರಲ್ಲಿ ಧ್ಯೇಯ ವಾಕ್ಯವು ಹುಡುಗಿಯ ಅಭಿವೃದ್ಧಿ - ಗುರಿಯ ಅಭಿವೃದ್ಧಿ: ಹುಡುಗಿಗೆ ಏನು ಮಹತ್ವದ್ದಾಗಿರುವುದು ಎಂಬ ಧ್ಯೇಯಗಳಡಿ ಆಚರಣೆ ಮಾಡಲಾಗಿತ್ತು.

English summary
The International Day of the Girl Child is celebrated annually on October 11 to empower and amplify the voices of young girls around the world.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X