ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಅತ್ಯಂತ ಕಿರಿಯ ಮೇಯರ್‌ಗೂ ಕೇರಳದ ಅತ್ಯಂತ ಕಿರಿಯ ಶಾಸಕನಿಗೂ ಮದುವೆ!

|
Google Oneindia Kannada News

ತಿರುವನಂತಪುರಂ ಜುಲೈ 13: ಸಿಪಿಐ(ಎಂ)ಗೆ ಸೇರಿದ ಕೇರಳದ ಇಬ್ಬರು ಯುವ ಜನ ಪ್ರತಿನಿಧಿಗಳು ಸೆಪ್ಟೆಂಬರ್‌ನಲ್ಲಿ ವಿವಾಹವಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೇಶದ ಅತ್ಯಂತ ಕಿರಿಯ ಮೇಯರ್ ಆರ್ಯ ರಾಜೇಂದ್ರನ್ ಮತ್ತು ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯ ಬಾಲುಸ್ಸೆರಿ ಶಾಸಕ ಸಚಿನ್ ದೇವ್ ಸೆಪ್ಟೆಂಬರ್ 4 ರಂದು ವಿವಾಹವಾಗಲಿದ್ದಾರೆ.

ಮೂಲಗಳ ಪ್ರಕಾರ, ಸೆಪ್ಟೆಂಬರ್ 4 ರಂದು ಬೆಳಿಗ್ಗೆ 11 ಗಂಟೆಗೆ ತಿರುವನಂತಪುರಂನಲ್ಲಿರುವ ಸಿಪಿಐ(ಎಂ) ಕೇಂದ್ರ ಕಚೇರಿಯಾದ ಎಕೆಜಿ ಸೆಂಟರ್‌ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮಾರ್ಚ್ 6 ರಂದು ಎಕೆಜಿ ಸೆಂಟರ್‌ನಲ್ಲಿ ನಡೆದ ಸಮಾರಂಭದಲ್ಲಿ ಸಿಪಿಐ(ಎಂ) ನಾಯಕರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಸಿಪಿಐ(ಎಂ)ನ ಹಲವು ಹಿರಿಯ ನಾಯಕರು ಭಾಗವಹಿಸಿದ್ದರು.

ಡಿಸೆಂಬರ್ 2020 ರಲ್ಲಿ, ಆರ್ಯ ರಾಜೇಂದ್ರನ್ ಅವರು ಕೇರಳದ ತಿರುವನಂತಪುರಂ ಕಾರ್ಪೊರೇಶನ್‌ನ ಉಸ್ತುವಾರಿ ವಹಿಸಿಕೊಂಡಾಗ, ಅವರು ಭಾರತದ ಅತ್ಯಂತ ಕಿರಿಯ ಮೇಯರ್ ಎಂಬ ಹೆಸರು ಪಡೆದಿದ್ದಾರೆ. ಅಧಿಕಾರ ಸ್ವೀಕರಿಸುವ ಸಮಯದಲ್ಲಿ, 21 ವರ್ಷದ ಆರ್ಯ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನಲ್ಲಿ ಓದುತ್ತಿದ್ದರು.

ಕೆಲವು ತಿಂಗಳ ನಂತರ, ಸಚಿನ್ ದೇವ್ ಅವರು ಸಿಪಿಎಂ ಟಿಕೆಟ್‌ನಲ್ಲಿ ಬಾಲುಸ್ಸೆರಿ ವಿಧಾನಸಭಾ ಸ್ಥಾನವನ್ನು ಗೆದ್ದ ನಂತರ ಕೇರಳ ವಿಧಾನಸಭೆಯಲ್ಲಿ ಅತ್ಯಂತ ಕಿರಿಯ ಶಾಸಕರಾದರು. 28 ವರ್ಷದ ಸಚಿನ್ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ) ರಾಜ್ಯ ಕಾರ್ಯದರ್ಶಿಯಾಗಿದ್ದರೆ, ಆರ್ಯ ಅದರ ರಾಜ್ಯ ಸಮಿತಿ ಸದಸ್ಯರಾಗಿದ್ದಾರೆ. ಅವರು ಎಡಪಕ್ಷಗಳ ಮಕ್ಕಳ ಘಟಕವಾದ ಬಾಲ ಸಂಘದ ರಾಜ್ಯಾಧ್ಯಕ್ಷರೂ ಆಗಿದ್ದಾರೆ.

ಇಬ್ಬತದ್ದೂ ಒಂದೇ ತತ್ವ

ಇಬ್ಬತದ್ದೂ ಒಂದೇ ತತ್ವ

ಆರ್ಯ ರಾಜೇಂದ್ರನ್ ತಿರುವನಂತಪುರದ ಮೇಯರ್. ಕಾಲೇಜು ವಿದ್ಯಾರ್ಥಿನಿಯಾಗಿದ್ದ ಆಕೆಗೆ 2020ರಲ್ಲಿ ಮಾರ್ಕ್ಸ್‌ವಾದಿ ಪಕ್ಷದಿಂದ ಮೇಯರ್ ಹುದ್ದೆ ನೀಡಲಾಗಿತ್ತು. ಕಳೆದ ಸ್ಥಳೀಯ ಚುನಾವಣೆಯಲ್ಲಿ ಕೇರಳ ಹೆಚ್ಚಿನ ಸಂಖ್ಯೆಯಲ್ಲಿ ಯುವಕರಿಗೆ ಸ್ಪರ್ಧಿಸಲು ಅವಕಾಶ ನೀಡಿತ್ತು. ಅದರ ಮೂಲಕ ಅಧಿಕಾರಕ್ಕೆ ಬಂದವರು ಆರ್ಯ ರಾಜೇಂದ್ರನ್. ಆಗ ಅವರ ವಯಸ್ಸು 21. ಸಚಿನ್ ದೇವ್ (28) ಕೇರಳ ವಿಧಾನಸಭೆಯ ಅತ್ಯಂತ ಕಿರಿಯ ಶಾಸಕ ಆಗಿದ್ದಾರೆ. ಅವರು ಭಾರತೀಯ ವಿದ್ಯಾರ್ಥಿ ಸಂಘದ ರಾಜ್ಯ ಕಾರ್ಯದರ್ಶಿಯೂ ಆಗಿದ್ದಾರೆ.

ಜೊತೆಗೆ ಸಂಸ್ಥೆಯ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಆಗಿದ್ದಾರೆ. ಆರ್ಯ ಮತ್ತು ಸಚಿನ್ ಚಿಕ್ಕ ವಯಸ್ಸಿನಿಂದಲೂ ಭಾರತೀಯ ವಿದ್ಯಾರ್ಥಿ ಒಕ್ಕೂಟದಲ್ಲಿ ಬೆಳೆದವರು. ಹಾಗಾಗಿ ಇಬ್ಬರ ನಡುವೆ ಉತ್ತಮ ಸ್ನೇಹವಿದೆ. ಇಬ್ಬರೂ ಒಂದೇ ತತ್ವವನ್ನು ಹೊಂದಿದ್ದಾರೆಂದು ತಿಳಿದಿದೆ. ಇದರಿಂದಾಗಿ ಇಬ್ಬರನ್ನೂ ಜೋಡಿ ಮಾಡಲು ಅವರ ಮನೆಯವರು ನಿರ್ಧರಿಸಿದ್ದಾರೆ.

ರಾಜಕೀಯ ಸಿದ್ಧಾಂತ

ರಾಜಕೀಯ ಸಿದ್ಧಾಂತ

ಸಚಿನ್ ದೇವ್ ಕೋಝಿಕೋಡ್ ನ ನೆಲ್ಲಿಕೋಡು ಪ್ರದೇಶದಲ್ಲಿದ್ದಾರೆ. ಅವರು ಸರ್ಕಾರಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಅಧ್ಯಯನ ಮಾಡಿದರು. ಆರ್ಯ ರಾಜೇಂದ್ರನ್ ಮತ್ತು ಸಚಿನ್ ದೇವ್ ಶೀಘ್ರದಲ್ಲೇ ವಿವಾಹವಾಗಲಿದ್ದು ಮದುವೆ ದಿನಾಂಕ ಇನ್ನೂ ನಿರ್ಧಾರವಾಗಿಲ್ಲ ಎಂದು ಸಚಿನ್ ದೇವ್ ತಂದೆ ಹೇಳಿದ್ದಾರೆ.

ನಮ್ಮಿಬ್ಬರ ರಾಜಕೀಯ ಸಿದ್ಧಾಂತ ಒಂದೇ ಎಂದು ಆರ್ಯ ಹೇಳುತ್ತಾರೆ. ನಾವು ಒಳ್ಳೆಯ ಸ್ನೇಹಿತರು. ಇಬ್ಬರೂ ಭಾರತೀಯ ವಿದ್ಯಾರ್ಥಿ ಸಂಘದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ನಾವು ಮದುವೆಯಾಗಲು ನಿರ್ಧರಿಸಿದ್ದೇವೆ. ಇದನ್ನು ನಮ್ಮ ಪೋಷಕರಿಗೆ ಹೇಳಿದ್ದೆವು. ಅವರು ಒಪ್ಪಿದರು ಎಂದಿದ್ದಾರೆ.

ಜನರಿಂದ ಆಯ್ಕೆಯಾದ ಪ್ರತಿನಿಧಿಗಳು

ಜನರಿಂದ ಆಯ್ಕೆಯಾದ ಪ್ರತಿನಿಧಿಗಳು

ನಾವಿಬ್ಬರೂ ಜನರಿಂದ ಆಯ್ಕೆಯಾದ ಪ್ರತಿನಿಧಿಗಳಾಗಿರುವುದರಿಂದ ಯಾವುದೇ ವದಂತಿಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಪಕ್ಷಕ್ಕೂ ತಿಳಿಹೇಳಿದ್ದೇವೆ ಎಂದರು. 2020ರ ತಿರುವನಂತಪುರ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಒಟ್ಟು 100 ವಾರ್ಡ್‌ಗಳಲ್ಲಿ 52 ವಾರ್ಡ್‌ಗಳನ್ನು ಮಾರ್ಕ್ಸ್‌ಸ್ಟ್ ಪಕ್ಷ ಗೆದ್ದಿದೆ. ಅದೇ ರೀತಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಳುಚೇರಿ ಕ್ಷೇತ್ರದ ಅಭ್ಯರ್ಥಿ ಎಂದು ಘೋಷಣೆಯಾಗಿದ್ದ ಸಚಿನ್ ದೇವ್ 20 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ದೇಶದ ಯುವ ಮೇಯರ್ ಮತ್ತು ಕೇರಳ ವಿಧಾನಸಭೆಯ ಯುವ ಶಾಸಕ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ.

'ಎಲ್‌ಕೆಜಿ ಮಗು' ಟೀಕೆ

'ಎಲ್‌ಕೆಜಿ ಮಗು' ಟೀಕೆ

ನಗರಸಭೆ ಕಚೇರಿಯಲ್ಲಿ ಬಿಜೆಪಿ ಪುರಸಭಾ ಸದಸ್ಯ ಕರಮನ ಅಜಿತ್ ಮಾತನಾಡಿ, "ಜನರ ತೆರಿಗೆ ಹಣದಲ್ಲಿ ಲಕ್ಷಗಟ್ಟಲೆ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಮೇಯರ್ ಕುರ್ಚಿ ಎಲ್‌ಕೆಜಿ ಮಕ್ಕಳು ನಾಶ ಮಾಡುವ ವಸ್ತುಗಳಲ್ಲ" ಎಂದು ಆರ್ಯ ರಾಜೇಂದ್ರನ್ ಅವರನ್ನು ಟೀಕಿಸಿದ್ದರು. ಅದೇನೆಂದರೆ ಆರ್ಯ ಅವರ ಚಿಕ್ಕ ವಯಸ್ಸನ್ನು ಟೀಕಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಆರ್ಯ, "ಕಳೆದ ಆರು ತಿಂಗಳಿಂದ ನೀವು ನಾನಾ ಟೀಕೆಗಳನ್ನು ಮಾಡಿದ್ದೀರಿ. ನೀವು ಮಾತ್ರವಲ್ಲ, ಯಾರಾದರೂ ನ್ಯಾಯಯುತ ವಿಮರ್ಶೆಗಳನ್ನು ಪೋಸ್ಟ್ ಮಾಡಬಹುದು. ವಯಸ್ಸು ಮತ್ತು ಅನುಭವದ ಕಾರಣದಿಂದ ನೀವೆಲ್ಲರೂ ನನ್ನನ್ನು ವೈಯಕ್ತಿಕವಾಗಿ ಟೀಕಿಸಿದ್ದೀರಿ. ಈ ವಯಸ್ಸಿನಲ್ಲಿ ಮೇಯರ್ ಆಗುವುದಾದರೆ ಅದಕ್ಕೆ ತಕ್ಕಂತೆ ನಡೆದುಕೊಳ್ಳುವುದು ಗೊತ್ತು ಎಂದರ್ಥ, ಅಂತಹ ಸಂಸ್ಥೆಯಿಂದ ಬೆಳೆದಿದ್ದೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ಮೇಯರ್ ನಿಮ್ಮ ಮನೆಯಲ್ಲಿ ಸಹೋದರಿ ಮತ್ತು ತಾಯಿಯಂತೆ ಎಂದು ನಿಮಗೆ ಅನಿಸುತ್ತದೆ. ಮಹಿಳೆಯರನ್ನು ಯಾರು ಟೀಕಿಸಿದರೂ ಅದು ತಪ್ಪು," ಎಂದು ಎದಿರೇಟು ನೀಡಿದ್ದರು.

Recommended Video

Rohit Sharma ಹೊಡೆದ ಬಿಗ್ ಸಿಕ್ಸರ್ ಗೆ ಪುಟ್ಟ ಹುಡುಗಿಗೆ ಗಾಯ! ಇಲ್ನೋಡಿ ವಿಡಿಯೋ | *Cricket | OneIndia Kannada

English summary
Country's youngest Mayor Arya Rajendran and youngest Member of Kerala Legislative Assembly Balussery MLA Sachin Dev will get married on September 4.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X