• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟೋನಿ ಬ್ರೂಕ್‌ನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ರುಚಿ ಭೋಜನ ಸವಿಯಿರಿ

|

ಬೆಂಗಳೂರು ಸೆ. 27: ಕಿವಿಗೆ ತಂಪೆನಿಸುವ ಝುಳು ಝುಳು ನೀರಿನ ಶಬ್ದ ಕೇಳುತ್ತಾ. ಹರಿಯುತ್ತಿರುವ ಹಿತವಾದ ನೀರಿನಲ್ಲಿ ಪಾದಗಳನ್ನು ಆಡಿಸುತ್ತಾ, ಸವಿಯಾದ ಪದಾರ್ಥಗಳನ್ನು ಸೇವಿಸುವ ಅವಕಾಶ ಬಹಳಷ್ಟು ಜನರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ. ಬೆಂಗಳೂರು ನಗರದ ಒಳಗೆ ಇಂತಹ ಸುಂದರ ಅನುಭೂತಿಯನ್ನ ಪಡೆಯುವ ಅವಕಾಶವನ್ನು ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ವಿ ಕಲ್ಪಿಸಿಕೊಟ್ಟಿದ್ದಾರೆ.

ಹೌದು, ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ - ಸ್ಟೋನಿ ಬ್ರೂಕ್‌ ಅಕ್ಟೋಬರ್‌ 5 ರಂದು ಗ್ರಾಹಕರಿಗೆ ಪ್ರಾರಂಭವಾಗಲಿದೆ.

1 ರು ಇಡ್ಲಿ 'ಅಜ್ಜಿ' ಬಾಳಲ್ಲಿ ಬೆಳಕು ಮೂಡಿಸಿದ ಆನಂದ್ ಮಹೀಂದ್ರಾ ಟ್ವೀಟ್

ಸ್ಟ್ರೀಂ ರೆಸ್ಟೋರೆಂಟ್‌ ನ ವಿಶೇಷತೆಗಳು: ಹತ್ತು ಸಾವಿರ ಲೀಟರ್‌‌ ಪುನರ್ಬಳಕೆ ನೀರನ್ನು ಬಳಸಿ ಈ ರೆಸ್ಟೋರೆಂಟ್‌ ನಲ್ಲಿ ನೀರು ಹರಿಯುವ ಪ್ರದೇಶವನ್ನು ನಿರ್ಮಿಸಲಾಗಿದೆ. ಸುತ್ತಲೂ ಹಸಿರು ಹಾಗೂ ಗಿಡ ಮರಗಳಿಂದ ಕಂಗೊಳಿಸುತ್ತಿರುವ ಈ ರೆಸ್ಟೋರೆಂಟ್‌ ನಲ್ಲಿ ಒಟ್ಟಿಗೆ 250 ಜನರು ಹರಿಯುವ ನೀರಿನಲ್ಲಿ ಕುಳಿತು ಭೋಜನ ಸವಿಯಬಹುದಾಗಿದೆ.

ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅಡುಗೆ ಮಾಡುವ ಸಂದೇಶ್ ಚಮತ್ಕಾರ

ಫಿಲಿಫೈನ್ಸ್‌ ದೇಶದ ವಾಟರ್‌ ಫಾಲ್‌ ರೆಸ್ಟೋರೆಂಟ್‌ ನಿಂದ ಪ್ರಭಾವಿತರಾದ ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ವಿ ನಗರದ ಜನತೆಗೆ ಹೊಸತಾದ ಅನುಭವ ನೀಡುವ ಉದ್ದೇಶದಿಂದ ಈ ಹರಿಯುವ ನೀರಿನ ರೆಸ್ಟೋರೆಂಟನ್ನು ಪ್ರಾರಂಭಿಸಿದ್ದೇವೆ. ಈ ರೆಸ್ಟೋರೆಂಟ್‌ ನಲ್ಲಿ ಯಾವುದೇ ಅಬ್ಬರದ ಸಂಗೀತವನ್ನು ಹಾಕಲಾಗುವುದಿಲ್ಲಾ. ಹರಿಯುವ ನೀರಿನ ಝುಳು ಝುಳು ನಾದವೇ ಇಲ್ಲಿಯ ಸಂಗೀತವಾಗಿರಲಿದೆ ಎನ್ನುತ್ತಾರೆ ರೆಸ್ಟೊರೆಂಟ್‌ ನ ಮಾಲೀಕರಾದ ವಿನಯ್‌ ವಿ.

ಫೀಶ್ ಪೆಡಿಕ್ಯೂರ್‌:

ಫೀಶ್ ಪೆಡಿಕ್ಯೂರ್‌:

ಈ ರೆಸ್ಟೋರೆಂಟ್‌ ನ ಮತ್ತೊಂದು ವಿಶೇಷತೆ ಫಿಶ್ ಪೆಡಿಕ್ಯೂರ್‌. ಇಂತಹ ಅನುಭವ ನೀಡಲಿರುವ ದೇಶದಲ್ಲೇ ಮೊದಲ ರೆಸ್ಟೋರೆಂಟ್‌ ಇದಾಗಿರಲಿದೆ. ರೆಸ್ಟೋರೆಂಟ್‌ ಗೆ ಬರುವ ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಮೊದಲು ಈ ಫಿಶ್ ಪೆಡಿಕ್ಯೂರ್‌ ನಲ್ಲಿ ಕಾಲ ಕಳೆಯಬಹುದು. ನಂತರ ಅವರವರ ಅಗತ್ಯತೆಯ ತಕ್ಕಂತೆ ಸೀಟೀಂಗನ್ನು ನೀಡಲಾಗುವುದು.

ಐದು ರೀತಿಯ ಸೀಟಿಂಗ್‌ ಏರಿಯಾ:

ಐದು ರೀತಿಯ ಸೀಟಿಂಗ್‌ ಏರಿಯಾ:

ಕೇವಲ ಹರಿಯುವ ನೀರು ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಐದು ರೀತಿಯ ಸೀಟಿಂಗ್‌ ಏರಿಯಾವನ್ನು ಸ್ಟೋನೀ ಬ್ರೂಕ್‌ ನಲ್ಲಿ ನಿರ್ಮಿಸಲಾಗಿದೆ. ಸ್ಟ್ರೀಂ ವಾಟ್‌, ಅಂಡರ್‌ ಗ್ರೌಂಡ್‌, ಅರ್ಥ, ರೂಫ್‌ ಟಾಪ್‌ ಹಾಗೂ ಕಾರುಗಳಲ್ಲಿ ಸೀಟಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಬಳಸಿದ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಖಾಸಗಿಯಾದ ಡೈನಿಂಗ್‌ ಏರಿಯಾವನ್ನು ರಚಿಸಲಾಗಿದೆ.

ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಹಾಗೂ ಪೇಪರ್ ಸ್ಟ್ರಾಗಳು:

ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಹಾಗೂ ಪೇಪರ್ ಸ್ಟ್ರಾಗಳು:

ಪರಿಸರ ಸ್ನೇಹಿಯಾಗಿರುವ ರೆಸ್ಟೋರೆಂಟ್‌ ಇದಾಗಿರಬೇಕು ಎನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ಈ ಹಿನ್ನಲೆಯಲ್ಲಿ ರೆಸ್ಟೋರೆಂಟ್‌ ನಲ್ಲಿ ನೀರು ಕುಡಿಯಲು ವಿನೂತನವಾಗಿ ಬಿದರಿನ ಮಗ್‌ ಗಳು ಹಾಗೂ ಪೇಪರ್‌ ಸ್ಟ್ರಾಗಳನ್ನು ನೀಡಲಾಗುವುದು. ಅಲ್ಲದೆ, ದುಬಾಯಿ ಯಿಂದ ತರಿಸಲಾಗಿರುವ ವಿಶಿಷ್ಟ ಪ್ಲೇಟ್ ಹಾಗೂ ಕಟ್ಲರಿಗಳನ್ನ ಇಲ್ಲಿ ಬಳಸಲಾಗುತ್ತಿದೆ.

ಐದು ದೇಶಗಳ ಖಾದ್ಯ, ವೈನ್‌ ಗಳ ಭಂಡಾರ:

ಐದು ದೇಶಗಳ ಖಾದ್ಯ, ವೈನ್‌ ಗಳ ಭಂಡಾರ:

ಇಟಾಲಿಯನ್‌ ವೈನ್‌ ಗಳ ಭಂಡಾರವೇ ಇಲ್ಲಿದೆ. ದೇಶ - ವಿದೇಶದ ಪ್ರಮುಖ ವೈನ್‌ ಗಳನ್ನು ಇಲ್ಲಿ ಸವಿಯಬಹುದಾಗಿದೆ. ಕೇವಲ ವೈನ್‌ ಮಾತ್ರ ಇಲ್ಲಿ ದೊರೆಯಲಿದೆ.

ಐದು ದೇಶಗಳ ಖಾದ್ಯಗಳು:

ಸ್ಟೋನಿ ಬ್ರೂಕ್‌ ನಲ್ಲಿ ಚೈನೀಸ್‌, ಥಾಯಿ, ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತ ದೇಶದ ಎಲ್ಲಾ ಥರಹದ ಥರೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ವೈನ್‌ ಜೊತೆಯಲ್ಲಿ ಸವಿಯಬಹುದಾದ ಖಾದ್ಯಗಳ ಪಟ್ಟಿಯೇ ಇಲ್ಲಿರಲಿದೆ.

ಕಾಪರ್‌ - ವುಡ್‌ ಫೈರ್‌ ಪಿಜ್ಜಾ:

ಕಾಪರ್‌ - ವುಡ್‌ ಫೈರ್‌ ಪಿಜ್ಜಾ:

ತಾಮ್ರದ ಉಪಯೋಗ ಎಲ್ಲರಿಗೂ ತಿಳಿದೇ ಇದೆ. ತಾಮ್ರದ ಒಳ್ಳೆಯ ಗುಣವನ್ನು ತನ್ನ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಹಾಗೂ ಬೆಂಕಿಯ ಶಾಖವನ್ನು ಸರಿಯಾದ ಉಪಯೋಗ ಮಾಡುವ ದೃಷ್ಟಿಯಿಂದ ತಾಮ್ರದ ಕೋಟಿಂಗ್‌ ಇರುವ ದೊಡ್ಡ ಒವನ್ನು ನಿರ್ಮಿಸಲಾಗಿದೆ. ಈ ಓವನ್‌ ನ್ನು ವುಡ್‌ ಫೈರ್‌ ನಿಂದ ಬಿಸಿಗೊಳಿಸಲಾಗುವುದು. ಈ ಕಾಪರ್‌ - ವುಡ್‌ ಫೈರ್‌ ಪಿಜ್ಜಾ ಸವಿಯನ್ನು ಸವಿದವನೇ ಬಲ್ಲ.

English summary
India's first Steam Restaurant Stonny Brook is opening on Oct 03 at Rajarajeshwari Nagar, Bengaluru. Customers can experience ambience from Oct 05.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more