ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗ್ನಾ 360 ಸಮೀಕ್ಷೆ: ಶೇ82ರಷ್ಟು ಭಾರತೀಯರಿಗಿದೆ ಅಧಿಕ ಒತ್ತಡ

|
Google Oneindia Kannada News

ಮುಂಬೈ, ಏಪ್ರಿಲ್ 01 : ಅಮೆರಿಕ ಮೂಲದ ಜಾಗತಿಕ ಆರೋಗ್ಯ ಸೇವಾ ಕಂಪನಿಯಾದ ಸಿಗ್ನಾ ಕಾರ್ಪೊರೇಷನ್ ಮತ್ತು ಭಾರತೀಯ ಕಂಪನಿಯಾದ ಟಿಟಿಕೆ ಸಮೂಹದ ಜಂಟಿ ಸಹಭಾಗಿತ್ವದ ಸಿಗ್ನಾ ಟಿಟಿಕೆ ಹೆಲ್ತ್ ಇನ್ಶೂರೆನ್ಸ್ ಮತ್ತು ಮಣಿಪಾಲ ಸಮೂಹ 2019ರ ಸಿಗ್ನಾ 360 ಕ್ಷೇಮ ಸಮೀಕ್ಷೆ- ವೆಲ್ ಅಂಡ್ ಬಿಯಾಂಡ್ ಬಿಡುಗಡೆ ಮಾಡಿದೆ.

ಈ ಸಮೀಕ್ಷೆಯಿಂದ ತಿಳಿದುಬಂದಂತೆ ಇತರ ಮುಂದುವರಿದ ದೇಶಗಳು ಮತ್ತು ಉದಯೋನ್ಮುಖ ದೇಶಗಳಾದ ಅಮೆರಿಕ, ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತು ಆಸ್ಟ್ರೇಲಿಯಾಗೆ ಹೋಲಿಸಿದರೆ ಭಾರತದಲ್ಲಿ ಒತ್ತಡದ ಮಟ್ಟವು ಅತ್ಯಧಿಕವಾಗಿದೆ. ಸುಮಾರು ಶೇಕಡ 82ರಷ್ಟು ಭಾರತೀಯ ಜನಸಮುದಾಯ ಮಾನಸಿಕ ಒತ್ತಡದಿಂದ ಬಳಲುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅದರಲ್ಲೂ ಮುಖ್ಯವಾಗಿ ಸ್ಯಾಂಡ್‍ವಿಚ್ ಪೀಳಿಗೆ (35-49 ವರ್ಷ) ಅತ್ಯಧಿಕ ತೊಂದರೆಗೊಳಗಾದ ಸಮೂಹವಾಗಿದೆ. ಈ ವಯೋಮಿತಿಯವರಲ್ಲಿ ಶೇಕಡ 89ರಷ್ಟು ಮಂದಿ ಅಧಿಕ ಮಟ್ಟದ ಮಾನಸಿಕ ಒತ್ತಡ ಹೊಂದಿದ್ದಾರೆ. ದೇಶದಲ್ಲಿ ಇಂಥ ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣಗಳೆಂದರೆ ಕೆಲಸ, ಆರೋಗ್ಯ ಮತ್ತು ಹಣಕಾಸು ಸಂಬಂಧಿತ ವಿಷಯಗಳು.

ಸಿಗ್ನಾ 360 ಕ್ಷೇಮ ಸಮೀಕ್ಷೆ ಐದನೇ ವರ್ಷ ಸಮೀಕ್ಷೆಯನ್ನು ಕೈಗೊಂಡಿದ್ದು, ಪ್ರಮುಖ ಐದು ಸೂಚ್ಯಂಕಗಳಾದ ದೈಹಿಕ, ಕುಟುಂಬ, ಸಾಮಾಜಿಕ, ಹಣಕಾಸು ಮತ್ತು ಉದ್ಯೋಗದ ವಿಚಾರದಲ್ಲಿ ಜನತೆಯ ಭಾವನೆಯನ್ನು ಪರಿಶೀಲಿಸಿದೆ. ಇದರರ ಜತೆಗೆ ಅಸಂಖ್ಯಾತ ಆರೋಗ್ಯ ಸಂಬಂಧಿತ ವಿಷಯಗಳು ಸಿಗ್ನಾದ ಅತ್ಯಂತ ಸಮಗ್ರ ಸಮೀಕ್ಷೆಯನ್ನು ಹೆಚ್ಚು ಪ್ರಸ್ತುತಗೊಳಿಸಿವೆ. ಈ ಬಾರಿಯ ಸಮೀಕ್ಷೆಯಲ್ಲಿ ಮುಖ್ಯವಾಗಿ ಭಾರತದ ಉದ್ಯೋಗ ಸ್ಥಳಗಳ ಕಲ್ಯಾಣ ಯೋಜನೆಗಳಿಗೆ ಒತ್ತು ನೀಡಲಾಗಿದೆ. ಇದು ಇತರ ಎಲ್ಲ ಮಾರಯಕಟ್ಟೆಗಳಿಗಿಂತ ಅಧಿಕ ಪಾಲ್ಗೊಳ್ಳುವಿಕೆಯಿಂದ ಕೂಡಿದ್ದು ವಿಸ್ತೃತವಾಗಿದೆ.

ಲೋಕಸಭೆ ಚುನಾವಣೆಯ ಕುರಿತು ಸಮಗ್ರ ಮಾಹಿತಿ ಕನ್ನಡದಲ್ಲಿ

ಸಿಗ್ನಾದ ಈ ವರ್ಷದ ಧ್ಯೇಯವಾಕ್ಯ "ವೆಲ್ ಅಂಡ್ ಬಿಯಾಂಡ್" ಎನ್ನುವುದಾಗಿದ್ದು, ಎಲ್ಲರೂ ಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವಂತೆ ಮಾಡುವ ಗುರಿ ಹೊಂದಿದೆ. ತಮ್ಮ ಕಲ್ಯಾಣದ ಪ್ರಯಾಣದಲ್ಲಿ ಜನರನ್ನು ಹೆಚ್ಚು ಸಶಕ್ತರನ್ನಾಗಿ ಮಾಡುವುದು ಸಿಗ್ನಾ ಗುರಿಯಾಗಿದೆ. ಇದರ ಜತೆಗೆ ಜನರು ಸ್ವತಃ ತಾವೇ ತಮ್ಮ ಸುಕ್ಷೇಮವನ್ನು ನಿಯಂತ್ರಿಸುವ ಮತ್ತು ಆರೋಗ್ಯ ವಿಚಾರಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವ ಸಾಧನಗಳ ಆಯ್ಕೆಯನ್ನು ನೀಡುವ ಗುರಿಯನ್ನು ಹೊಂದಿದೆ

 ಹೃದಯ ಆರೋಗ್ಯ ಬಗ್ಗೆ ಜಾಗೃತಿ ಕೊರತೆ

ಹೃದಯ ಆರೋಗ್ಯ ಬಗ್ಗೆ ಜಾಗೃತಿ ಕೊರತೆ

ಸಮೀಕ್ಷೆಯಲ್ಲಿ ಪಾಲ್ಗೊಂಡವರು ತಮ್ಮದೇ ದೇಹ ತೂಕ ಸೂಚ್ಯಂಕ (ಬಿಎಂಐ) ಬಗ್ಗೆ ಅರಿತುಕೊಂಡಿದ್ದಾರೆಯೇ ಮತ್ತು ರಕ್ತದ ಒತ್ತಡ ಸಂಖ್ಯೆಯ ಬಗ್ಗೆ ತಿಳಿದುಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ, ಭಾರತೀಯರು ನೀಡಿದ ಉತ್ತರದಂತೆ ಭಾರತ ಜಾಗತಿಕ ಸರಾಸರಿಗಿಂತ ಉತ್ತಮ ಸ್ಥಾನದಲ್ಲಿದೆ. ಹೃದಯ ಆರೋಗ್ಯ ಸೂಚ್ಯಂಕದ ಬಗ್ಗೆ ಭಾರತೀಯರು ಸರಾಸರಿ ಕಾಳಜಿ ಹೊಂದಿದ್ದಾರೆ. ಶೇಕಡ 61ರಷ್ಟು ಮಂದಿ ತಮ್ಮ ಬಿಎಂಐ ಬಗ್ಗೆ ತಿಳಿವಳಿಕೆ ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಈ ಪ್ರಮಾಣ ಶೇಕಡ 51ರಷ್ಟಿದೆ. ಶೇಕಡ 76ರಷ್ಟು ಮಂದಿ ತಮ್ಮ ರಕ್ತದ ಒತ್ತಡದ ಬಗ್ಗೆ ಅರಿವು ಹೊಂದಿದ್ದು, ಜಾಗತಿಕವಾಗಿ ಶೇಕಡ 66ರಷ್ಟು ಮಂದಿಗೆ ಮಾತ್ರವೇ ಈ ಅರಿವು ಇದೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಹೃದಯ ಸಮಸ್ಯೆಯ ಸಾಧ್ಯತೆಯ ಬಗ್ಗೆ ಸರಾಸರಿ 2.2

ಹೃದಯ ಸಮಸ್ಯೆಯ ಸಾಧ್ಯತೆಯ ಬಗ್ಗೆ ಸರಾಸರಿ 2.2

ಆದಾಗ್ಯೂ, ಹೃದಯ ಸಮಸ್ಯೆಯ ಸಾಧ್ಯತೆಯ ಬಗ್ಗೆ ಸರಾಸರಿ 2.2ರಷ್ಟು ಗುಣಲಕ್ಷಣಗಳ ಬಗ್ಗೆ ಮಾತ್ರ ಅರಿವು ಹೊಂದಿದ್ದಾರೆ. ಜಾಗತಿಕವಾಗಿ ಜನ ಸರಾಸರಿ 2.4 ರೋಗಕಾರಕ ಲಕ್ಷಣಗಳ ಅರಿವು ಹೊಂದಿದ್ದಾರೆ. ಇದಕ್ಕಿಂತಲೂ ಆತಂಕದ ವಿಚಾರವೆಂದರೆ, ಕಳೆದ ಆರು ತಿಂಗಳಲ್ಲಿ, ಸಮೀಕ್ಷೆಗೆ ಸ್ಪಂದಿಸದವರಿಗೆ ಸರಾಸರಿ 2.3ರಷ್ಟು ರೋಗಲಕ್ಷಣ ಅನುಭವಕ್ಕೆ ಬಂದಿದೆ. ಜಾಗತಿಕವಾಗಿ ಈ ಪ್ರಮಾಣ ಕೇವಲ 1.8. ಪ್ರತಿ ಮೂವರ ಪಯಕಿ ಒಬ್ಬರಿಗೆ ರಕ್ತದ ಒತ್ತಡವನ್ನು ಜೀವನಶೈಲಿ ಬದಲಾವಣೆಯಿಂದ ನಿಯಂತ್ರಿಸಲು ಸಾಧ್ಯ ಎಂಬ ಬಗ್ಗೆ ಅರಿವು ಇಲ್ಲ. ಇದು ಹೃದಯ ಆರೋಗ್ಯ ಶಿಕ್ಷಣ ವಿಚಾರದಲ್ಲಿ ಕೇವಲ ಶೇಕಡ 38ರಷ್ಟು ಮಂದಿಗೆ ಮಾತ್ರ ಹೃದಯ ಆರೋಗ್ಯವನ್ನು ಪತ್ತೆ ಮಾಡುವ ಮತ್ತು ನಿರ್ವಹಿಸುವ ಬಗ್ಗೆ ಅರಿವು ಇರುವುದನ್ನು ಸೂಚಿಸಿದೆ.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಪ್ರತಿ ಮೂವರ ಪೈಕಿ ಒಬ್ಬರಿಗೆ ರಕ್ತದ ಒತ್ತಡವಿದೆ

ಪ್ರತಿ ಮೂವರ ಪೈಕಿ ಒಬ್ಬರಿಗೆ ರಕ್ತದ ಒತ್ತಡವಿದೆ

"ಸಮೀಕ್ಷೆಗೆ ಒಳಪಡಿಸಿದ ಪ್ರತಿ ಮೂವರ ಪೈಕಿ ಒಬ್ಬರಿಗೆ ರಕ್ತದ ಒತ್ತಡವನ್ನು ಜೀವನಶೈಲಿ ಬದಲಾವಣೆಯಿಂದ ಗುಣಪಡಿಸಬಹುದು ಎನ್ನುವುದು ತಿಳಿದಿಲ್ಲ. ಅರಿವಿಗೆ ಬಾರದ ಈ ಸ್ಥಿತಿಗೆ ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ಅದು ಮಾರಣಾಂತಿಕ ಹೃದಯಾಘಾತ ಮತ್ತು ಪಾರ್ಶ್ವವಾಯುವಿಗೆ ಕಾರಣವಾಗಬಲ್ಲದು. ಭಾರತದಲ್ಲಿ ಕಂಡುಬಂದ ಪ್ರಮುಖ ಆತಂಕಕಾರಿ ಅಂಶವೆಂದರೆ, ಹೃದಯ ರೋಗಗಳ ಪ್ರಕರಣ ಮತ್ತು ಪಾರ್ಶ್ವವಾಯು ಪ್ರಕರಣಗಳು ಕಳೆದ 25 ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿರುವುದು.

ಆದ್ದರಿಂದ ಪ್ರತಿಯೊಬ್ಬರಿಗೂ ಹೃದಯ ಆರೋಗ್ಯಕ್ಕೆ ಪೂರಕವಾದ ಜೀವನಶೈಲಿಯ ಬಗ್ಗೆ ಜಾಗೃತಿಯನ್ನು ಹೆಚ್ಚಿಸುವುದು ತೀರಾ ಅಗತ್ಯ. ಕೇವಲ ಆರೋಗ್ಯ ಸಮಸ್ಯೆ ಇರುವ ಜನರಿಗೆ ಮಾತ್ರವಲ್ಲದೇ ಎಲ್ಲರಿಗೂ ಜಾಗೃತಿ ಮೂಡಿಸಿದಲ್ಲಿ ಮಾತ್ರ ಹೃದಯ ರೋಗದ ಅಪಾಯ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಕ್ಷೇಮ ಗುಣಮಟ್ಟವನ್ನು ಸುಧಾರಿಸಲು ಸಾಧ್ಯ" ಎನ್ನುತ್ತಾರೆ ಸಿಗ್ನಾ ಟಿಟಿಕೆ ಹೆಲ್ತ್ ಇನ್ಶೂರೆನ್ಸ್ ನ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸುನ್ ಸಿಕ್ದರ್.

ಸ್ಯಾಂಡ್‍ವಿಚ್ ಪೀಳಿಗೆ ಸಂಕಷ್ಟದಲ್ಲಿ

ಸ್ಯಾಂಡ್‍ವಿಚ್ ಪೀಳಿಗೆ ಸಂಕಷ್ಟದಲ್ಲಿ

ಇತರ ವಯೋಮಾನಕ್ಕೆ ಹೋಲಿಸಿದರೆ, ಭಾರತದ ಸ್ಯಾಂಡ್‍ವಿಚ್ ಪೀಳಿಗೆ (35 ರಿಂದ 49 ವರ್ಷ ವಯೋಮಿತಿ) ಒಟ್ಟಾರೆ ಸೂಚ್ಯಂಕದಲ್ಲಿ ಅತ್ಯಂತ ಕನಿಷ್ಠ ಅಂಕಗಳನ್ನು ಸಂಪಾದಿಸಿದೆ. ಇವರು ನಿರ್ದಿಷ್ಟವಾಗಿ ತಮ್ಮ ದೈಹಿಕ, ಹಣಕಾಸು ಮತ್ತು ಉದ್ಯೋಗದ ಕ್ಷೇಮದ ಬಗ್ಗೆ ಹೆಚ್ಚಿನ ಆತಂಕ ಹೊಂದಿದ್ದಾರೆ. ಮುಂದಿನ ವರ್ಷಗಲಲ್ಲಿ ಭಾರತದ ಶ್ರಮಶಕ್ತಿಯ ಪ್ರಮುಖ ಭಾಗವಾಗುವ ಈ ವಯೋಮಾನದ ಜನತೆಯ ಇಂಥ ಮಾನಸಿಕ ಒತ್ತಡದ ಮಟ್ಟವನ್ನು ಸೂಕ್ತವಾಗಿ ನಿರ್ವಹಿಸುವ ಅಗತ್ಯತೆ ಇದೆ.

ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡ

ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡ

ಈ ವಯೋಮಾನದವರಲ್ಲಿ ಶೇಕಡ 89ರಷ್ಟು ಮಂದಿ ಒಂದಲ್ಲ ಒಂದು ಬಗೆಯ ಮಾನಸಿಕ ಒತ್ತಡವನ್ನು ಎದುರಿಸುತ್ತಿದ್ದಾರೆ. ಸಹಸ್ರಮಾನ ಪೀಳಿಗೆಯ ಶೇಕಡ 87ರಷ್ಟು ಮಂದಿ ಹಾಗು 50ಕ್ಕಿಂತ ಅಧಿಕ ವಯಸ್ಸಿನವರಲ್ಲಿ ಶೇಕಡ 64ರಷ್ಟು ಮಂದಿ ಈ ಸಮಸ್ಯೆ ಎದುರಿಸುತ್ತಿದ್ದಾರೆ. ಇದರ ಪರಿಣಾಮವಾಗಿ, ಆರೋಗ್ಯಕರ ದೇಹತೂಕವನ್ನು ನಿರ್ವಹಿಸುವುದು ಸವಾಲಿನ ಕೆಲಸವಾಗಿದೆ. ಒಟ್ಟು ಜನಸಂಖ್ಯೆಯಲ್ಲಿ ಕೇವಲ ಅರ್ಧದಷ್ಟು ಮಂದಿ ಮಾತ್ರ ಆರೋಗ್ಯಕರ ದೇಹತೂಕವನ್ನು ನಿರ್ವಹಿಸುತ್ತಿದ್ದಾರೆ.

ಹಣಕಾಸು ವಿಚಾರದಲ್ಲಿ ತಾವು ಸದೃಢವಾಗಿದ್ದೇವೆ

ಹಣಕಾಸು ವಿಚಾರದಲ್ಲಿ ತಾವು ಸದೃಢವಾಗಿದ್ದೇವೆ

ಸಹಸ್ರಮಾನದ ಪೀಳಿಗೆಯಲ್ಲಿ ಶೇಕಡ 58ರಷ್ಟು ಮಂದಿ ಮತ್ತು ಇತರ ವಯೋಮಾನದವರಲ್ಲಿ ಶೇಕಡ 55ರಷ್ಟು ಮಂದಿ ಆರೋಗ್ಯಕರ ದೇಹತೂಕ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಸಮೀಕ್ಷೆಗೆ ಒಳಪಡಿಸಿದವರಲ್ಲಿ ಅರ್ಧಕ್ಕಿಂತ ಕಡಿಮೆ ಮಂದಿ ಹಣಕಾಸು ವಿಚಾರದಲ್ಲಿ ತಾವು ಸದೃಢವಾಗಿದ್ದೇವೆ ಎಂಬ ಭಾವನೆ ಹೊಂದಿದ್ದಾರೆ. ತಮ್ಮ ಪೋಷಕರ ವೈದ್ಯಕೀಯ ಅಗತ್ಯತೆಗಳನ್ನು ನಿರ್ವಹಿಸುವ ಹಣಕಾಸು ಸಾಮಥ್ರ್ಯದ ಬಗ್ಗೆ ಅವರು ಪ್ರಶ್ನಿಸುತ್ತಾರೆ. ಕೇವಲ ಶೇಕಡ 51ರಷ್ಟು ಮಂದಿ ಮಾತ್ರ ತಮ್ಮಲ್ಲಿ ಈ ಸಾಮರ್ಥ್ಯವಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಹಸ್ರಮಾನದ ಪೀಳಿಗೆಯವರಲ್ಲಿ ಶೇಕಡ 58 ಹಾಗೂ 50ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಶೇಕಡ 62ರಷ್ಟು ಮಂದಿ ಈ ಅಭಿಪ್ರಾಯ ಹೊಂದಿದ್ದಾರೆ.

ಕೆಲಸದ ಸ್ಥಳದಲ್ಲಿ ಸೂಕ್ತ ಕಲ್ಯಾಣ ಕಾರ್ಯಕ್ರಮ: ಮಹಿಳೆಯರ ಬಯಕೆ

ಕೆಲಸದ ಸ್ಥಳದಲ್ಲಿ ಸೂಕ್ತ ಕಲ್ಯಾಣ ಕಾರ್ಯಕ್ರಮ: ಮಹಿಳೆಯರ ಬಯಕೆ

ಜಾಗತಿಕವಾಗಿ ಕಂಡುಬಂದ ಅಂಶಗಳಿಗಿಂತ ಭಿನ್ನವಾಗಿ ಭಾರತದಲ್ಲಿ ಶೇಕಡ 85ರಷ್ಟು ಪುರುಷರು ಉದ್ಯೋಗಸ್ಥ ಮಹಿಳೆಯರಿಗಿಂತ ಹೆಚ್ಚಿನ ಮಾನಸಿಕ ಒತ್ತಡ ಹೊಂದಿದ್ದಾರೆ. ಮಹಿಳೆಯರಲ್ಲಿ ಈ ಪ್ರಮಾಣ ಶೇಕಡ 82. ಆದಾಗ್ಯೂ, ನಿರ್ವಹಿಸಲಾಗದ ಒತ್ತಡದ ವಿಚಾರಕ್ಕೆ ಬಂದಾಗ ಮಹಿಳೆಯರು ಮತ್ತು ಪುರುಷರಲ್ಲಿ ಶೇಕಡ 5ರಷ್ಟು ಮಂದಿ ಈ ಸಮಸ್ಯೆ ಹೊಂದಿದ್ದಾರೆ. ಇತರ ಮಾರುಕಟ್ಟೆಗಳಿಗೆ ಸಮಾನವಾಗಿ ಬಹುತೇಕ ಮಹಿಳೆಯರು (ಶೇಕಡ 87) ಕೆಲಸದ ಸ್ಥಳದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದು ಎಲ್ಲ ವರ್ಗದ ನಿರ್ದಿಷ್ಟ ಅಗತ್ಯತೆಗಳನ್ನು ಪೂರೈಸುವಲ್ಲಿ ಸಹಕಾರಿ ಎಂಬ ಅಭಿಪ್ರಾಯ ಹೊಂದಿದ್ದಾರೆ. ಹಿರಿಯ ವ್ಯವಸ್ಥಾಪನಾ ಸಿಬ್ಬಂದಿ ಇಂಥ ಕಾರ್ಯಕ್ರಮಗಳಿಗೆ ಸೂಕ್ತ ಬೆಂಬಲ ನೀಡುತ್ತಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಹಿಳೆಯರಲ್ಲಿ ಅಧಿಕ ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣಗಳೆಂದರೆ ಕೆಲಸದ ಒತ್ತಡ, ಹಣಕಾಸು ಕಳಕಳಿ ಮತ್ತು ವೈಯಕ್ತಿಕ ಆರೋಗ್ಯದ ಬಗೆಗಿನ ಆತಂಕಗಳು.

ಒಂಟಿ ಮಹಿಳೆಯರು ಹೇಗೆ ಭಿನ್ನ

ಒಂಟಿ ಮಹಿಳೆಯರು ಹೇಗೆ ಭಿನ್ನ

ತುಲನಾತ್ಮಕವಾಗಿ ಭಾರತದ ಅರೋಗ್ಯಕರ ಸುಕ್ಷೇಮ ಸಂಖ್ಯೆಯ ಹೊರತಾಗಿಯೂ, ಕೆಲಸದ ಸ್ಥಳದ ಕಲ್ಯಾಣ ಕಾರ್ಯಕ್ರಮವನ್ನು ಮತ್ತಷ್ಟು ಹೆಚ್ಚಿಸಲು ಸಾಕಷ್ಟು ಅವಕಾಶಗಳಿವೆ. ಮಾನಸಿಕ ಸುಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನಿಡುವುದು ಮತ್ತು ಸ್ಥಿತಿಸ್ಥಾಪಕತ್ವ ಹೊಂದಿದ ಕೆಲಸದ ವಾತಾವರಣವನ್ನು ಅನುಷ್ಠಾನಗೊಳಿಸುವುದು, ತಮ್ಮ ಜೀವನ ಹಂತಕ್ಕೆ ಅನುಗುಣವಾಗಿ ಉದ್ಯೋಗಸ್ಥ ಮಹಿಳೆಯರು ಹೇಗೆ ಭಿನ್ನವಾಗಿರುತ್ತಾರೆ ಎನ್ನುವುದನ್ನು ಪರಿಗಣಿಸುವುದು, ವಿವಾಹವಾಗಿ ಮಕ್ಕಳನ್ನು ಹೊಂದಿದ ಮಹಿಳೆಯರಿಗಿಂತ ಒಂಟಿ ಮಹಿಳೆಯರು ಹೇಗೆ ಭಿನ್ನ ಎನ್ನುವುದನ್ನು ಪರಿಗಣಿಸುವುದು ಅಗತ್ಯ.

ಕೆಲಸದ ಸ್ಥಳದ ಕಲ್ಯಾಣ ಸಾಧಿಸುವುದು

ಕೆಲಸದ ಸ್ಥಳದ ಕಲ್ಯಾಣ ಸಾಧಿಸುವುದು

ಜಾಗತಿಕವಾಗಿ ಶೇಕಡ 36ರಷ್ಟು ಮಂದಿ ಮಾತ್ರ ಕೆಲಸದ ಸ್ಥಳದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಹೊಂದಿದ್ದಾಗಿ ಹೇಳಲಾಗಿದೆ. ಆದರೆ ಭಾರತದಲ್ಲಿ ಈ ಪ್ರಮಾಣ ಶೇಕಡ 66ರಷ್ಟಿದೆ. ಶೇಕಡ 56ರಷ್ಟು ಮಂದಿ ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದಾಗ್ಯೂ ಶೇಕಡ 71ರಷ್ಟು ಮಂದಿ, ಈ ಯೋಜನೆಗಳು ಕೇವಲ ದೈಹಿಕ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದು, ಮಾನಸಿಕ ಸುಕ್ಷೇಮವನ್ನು ಕಡೆಗಣಿಸಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಉದ್ಯೋಗದಾತರ ಬೆಂಬಲ ಪಡೆಯುತ್ತಿದ್ದಾರೆ

ಉದ್ಯೋಗದಾತರ ಬೆಂಬಲ ಪಡೆಯುತ್ತಿದ್ದಾರೆ

ಶೇಕಡ 71ರಷ್ಟು ಮಂದಿಗೆ ಇಂಥ ಒತ್ತಡವನ್ನು ನಿಭಾಯಿಸಲು ಉದ್ಯೋಗದಾತರ ಬೆಂಬಲ ಪಡೆಯುತ್ತಿದ್ದಾರೆ. ಆದರೆ ಇಂಥ ಬೆಂಬಲ ತೃಪ್ತಿದಾಯಕ ಎಂಬ ಅಭಿಪ್ರಾಯವನ್ನು ಶೇಕಡ 59ರಷ್ಟು ಮಂದಿ ಹೊಂದಿದ್ದಾರೆ. ಜಾಗತಿಕವಾಗಿ ಇಂಥ ತೃಪ್ತಿ ಪ್ರಮಾಣ ಶೇಕಡ 28ರಷ್ಟಿದೆ. ಇಷ್ಟಾಗಿಯೂ ಇದರಲ್ಲಿ ಸುಧಾರಣೆಗೆ ಅವಕಾಶವಿದ್ದು, ಕೆಲಸದಲ್ಲಿ ಶೇಕಡ 85ರಷ್ಟು ಭಾಗ ಸದಾ ಚಾಲ್ತಿಯಲ್ಲಿರುವ ಸ್ಥಿತಿಯಲ್ಲಿದೆ. ಜಾಗತಿಕವಾಗಿ ಈ ಪ್ರಮಾಣ ಸರಾಸರಿ 64 ಆಗಿದೆ.

ಸಹೋದ್ಯೋಗಿಗಳ ಮಾನಸಿಕ ಒತ್ತಡ ಪರಿಣಾಮ ಬೀರುತ್ತದೆ

ಸಹೋದ್ಯೋಗಿಗಳ ಮಾನಸಿಕ ಒತ್ತಡ ಪರಿಣಾಮ ಬೀರುತ್ತದೆ

ಸಮೀಕ್ಷೆಗೆ ಒಳಪಡಿಸಿದವರಲ್ಲಿ ಶೇಕಡ 96ರಷ್ಟು ಮಂದಿ ಉದ್ಯೋಗದ ಸ್ಥಳದಲ್ಲಿ ಸಹೋದ್ಯೋಗಿಗಳ ಮಾನಸಿಕ ಒತ್ತಡ ಪರಿಣಾಮ ಬೀರುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದು, ಜಾಗತಿಕವಾಗಿ ಈ ಪ್ರಮಾಣ ಶೇಕಡ 91 ಆಗಿದೆ. ಕುತೂಹಲದ ವಿಚಾರವೆಂದರೆ ಭಾರತದಲ್ಲಿ, ಜಾಗತಿಕ ಭಾವನೆಗಳಿಗೆ ವಿರುಉದ್ಧವಾಗಿ ಪ್ರಮುಖ ಪರಿಣಾಮಗಳು ಧನಾತ್ಮಕತೆ ಬಗೆಗೆ ಇವೆ. ಸಹೋದ್ಯೋಗಿಗಳ ಮಾನಸಿಕ ಒತ್ತಡವನ್ನು ಗುರುತಿಸುವ ಪ್ರಮಾಣ ಭಾರತೀಯರಲ್ಲಿ ಅಧಿಕ. ಈ ಮೂಲಕ ಭಾರತೀಯರು ತಮ್ಮ ಸ್ವಂತ ಒತ್ತಡವನ್ನು ನಿಭಾಯಿಸುವ ಬಗ್ಗೆ ಹೆಚ್ಚು ಪ್ರಜ್ಞಾಪೂರ್ವಕವಾಗಿದ್ದಾರೆ.

ಉದ್ಯೋಗದಾತರ ಬೆಂಬಲ ಪಡೆಯುತ್ತಿದ್ದಾರೆ

ಉದ್ಯೋಗದಾತರ ಬೆಂಬಲ ಪಡೆಯುತ್ತಿದ್ದಾರೆ

ಜಾಗತಿಕ ಮನಸ್ಥಿತಿಗೆ ಭಿನ್ನವಾಗಿ ಸಹೋದ್ಯೋಗಿಗಳ ಬಗ್ಗೆಯೂ ಹೆಚ್ಚಿನ ಕಳಕಳಿಯನ್ನು ಹೊಂದಿರುವುದು ಕಂಡುಬಂದಿದೆ. ನಿರಾಶಾದಾಯಕ ಕೆಲಸದ ವಾತಾವರಣ, ನೈತಿಕತೆ ಮಟ್ಟ ಕಡಿಮೆಯಾಗಿರುವುದು ಮತ್ತು ಕಡಿಮೆ ಉತ್ಪಾದಕತೆ ಇಂಥ ಮಾನಸಿಕ ಒತ್ತಡದ ಪ್ರಮುಖ ಕಾರಣಗಳಾಗಿವೆ. ಭಾರತೀಯ ಉದ್ಯೋಗದಾತರು ಕೆಲ ಒಳ್ಳೆಯ ಕೆಲಸಗಳನ್ನು ಈ ನಿಟ್ಟಿನಲ್ಲಿ ಮಾಡುತ್ತಿದ್ದು, ಜಾಗತಿಕ ಮನಸ್ಥಿತಿಗೆ ಹೋಲಿಸಿದರೆ ಉದ್ಯೋಗಿಗಳು ಹೆಚ್ಚು ತೃಪ್ತಿಯ ಭಾವನೆ ಹೊಂದಿದ್ದಾರೆ ಹಾಗೂ ಕಡಿಮೆ ಪ್ರಮಾಣದಲ್ಲಿ ನಿರಾಶಾವಾದಿಗಳಾಗಿದ್ದಾರೆ.

English summary
Cigna TTK Health Insurance, a joint venture between U.S. based global health service leader, Cigna Corporation and Indian conglomerate TTK Group and Manipal Group released the results of its 2019 Cigna 360 Well-Being Survey - Well and Beyond.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X