ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿಕೆಟ್ ದರ ಕಡಿತಗೊಳಿಸಿದ ಭಾರತೀಯ ರೈಲ್ವೆ: ಯಾವೆಲ್ಲಾ ರೈಲಿನಲ್ಲಿ ದರ ಕಡಿಮೆ?

|
Google Oneindia Kannada News

ನವದೆಹಲಿ, ನವೆಂಬರ್‌ 18: ಭಾರತೀಯ ರೈಲ್ವೆ ಬುಧವಾರ ಹೊಸ ಪ್ರಕಟಣೆಯನ್ನು ಹೊರಡಿಸಿದೆ. ವಾಯುವ್ಯ ರೈಲ್ವೆ ವಲಯದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕನಿಷ್ಠ 32 ರೈಲುಗಳ ವಿಶೇಷ ರೈಲು ಎಂಬ ಟ್ಯಾಗ್‌ ಅನ್ನು ಕೈಬಿಟ್ಟಿದೆ. ಇದರಿಂದಾಗಿ ಈ ರೈಲುಗಳಲ್ಲಿ ಟಿಕೆಟ್‌ ದರವು ಕಡಿಮೆ ಮಾಡಲಾಗುವುದು ಎಂದು ಕೂಡಾ ಭಾರತೀಯ ರೈಲ್ವೆಯು ತಿಳಿಸಿದೆ.

ಭಾರತೀಯ ರೈಲ್ವೆ ಸಚಿವಾಲಯವು ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಹಾಕಲಾಗಿದ್ದ ವಿಶೇಷ ಟ್ಯಾಗ್‌ ಅನ್ನು ತೆಗೆಯಲಾಗುತ್ತದೆ ಎಂದು ತಿಳಿಸಿದೆ. ರೈಲು ಪ್ರಯಾಣ ದರವು ಕೊರೊನಾ ವೈರಸ್‌ ಸೋಂಕಿಗೂ ಮುನ್ನ ಎಷ್ಟು ಇತ್ತು, ಅಷ್ಟೇ ಇರಲಿದೆ ಎಂದು ಮಾಹಿತಿ ನೀಡಿದೆ.

ಗಮನಿಸಿ: ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ, ರದ್ಧತಿ ಸೇವೆ 7 ದಿನ ಆರು ಗಂಟೆ ಸ್ಥಗಿತಗಮನಿಸಿ: ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ, ರದ್ಧತಿ ಸೇವೆ 7 ದಿನ ಆರು ಗಂಟೆ ಸ್ಥಗಿತ

ಕಳೆದ ವರ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂಪೂರ್ಣ ಲಾಕ್‌ಡೌನ್‌ ಅನ್ನು ಘೋಷಣೆ ಮಾಡಿದ ಬಳಿಕ ರೈಲುಗಳನ್ನು ಕೂಡಾ ಸ್ಥಗಿತ ಮಾಡಲಾಗಿತ್ತು. ಆದರೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಲಾಕ್‌ಡೌನ್‌ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಬಳಿಕ ಕೆಲವು ಪ್ರಯಾಣಿಕ ರೈಲುಗಳು ಆರಂಭ ಮಾಡಲಾಗಿತ್ತು. ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ರೈಲ್ವೆಯು ಟಿಕೆಟ್‌ ದರದ ಶೇಕಡ ಮೂವತ್ತರಷ್ಟು ಅಧಿಕ ದರವನ್ನು ವಿಧಿಸು‌ತ್ತಿದ್ದವು. ಆದರೆ ಈಗ ಪ್ರಯಾಣಿಕರು ಶೇಕಡ 30 ರಷ್ಟು ಟಿಕೆಟ್‌ ದರವನ್ನು ಉಳಿತಾಯ ಮಾಡಿಕೊಳ್ಳಬಹುದಾಗಿದೆ.

Indian Railways Slashes Ticket Fare, Drops Special Tag From 32 Trains

ಶುಕ್ರವಾರದಂದು ಜೋನಲ್‌ ರೈಲ್ವೇಗಳಿಗೆ ಬರೆದ ಪತ್ರದಲ್ಲಿ ರೈಲ್ವೇ ಬೋರ್ಡ್ ಟಿಕೆಟ್‌ ದರವನ್ನು ಕೋವಿಡ್‌ ಪೂರ್ವದಲ್ಲಿ ಎಷ್ಟಿತ್ತೋ ಅಷ್ಟಕ್ಕೆ ಇಳಿಕೆ ಮಾಡಲು ತಿಳಿಸಲಾಗಿದೆ. "ಇನ್ನು ಮುಂಗಡವಾಗಿ ಕಾಯ್ದಿರಿಸಿದ ಟಿಕೆಟ್‌ಗಳಿಗೆ ಯಾವುದೇ ದರದ ವ್ಯತ್ಯಾಸಗಳು ಇರುವುದಿಲ್ಲ ಹಾಗೂ ಯಾವುದೇ ಮರುಪಾವತಿ ಇರುವುದಿಲ್ಲ," ಎಂದು ಸ್ಪಷ್ಟಪಡಿಸಿದೆ. ಆದರೆ ಎಂದಿನಿಂದ ರೈಲ್ವೇ ಟಿಕೆಟ್‌ ದರವು ಕೋವಿಡ್‌ಗೂ ಮುಂಚಿನ ದರಕ್ಕೆ ಹಿಂದಿರುಗಲಿದೆ ಎಂಬುವುದು ಇನ್ನೂ ಕೂಡಾ ಸ್ಪಷ್ಟವಾಗಿಲ್ಲ.

IRCTC ಕೆಲವು ರೈಲುಗಳಲ್ಲಿ 'ಪ್ರಮಾಣೀಕೃತ ಸಾತ್ವಿಕ ಆಹಾರ' ಲಭ್ಯ!IRCTC ಕೆಲವು ರೈಲುಗಳಲ್ಲಿ 'ಪ್ರಮಾಣೀಕೃತ ಸಾತ್ವಿಕ ಆಹಾರ' ಲಭ್ಯ!

ಯಾವೆಲ್ಲಾ ರೈಲುಗಳಲ್ಲಿ ಟಿಕೆಟ್‌ ದರವು ಕಡಿಮೆ ಆಗಲಿದೆ?

ಉತ್ತರ ಪಶ್ಚಿಮ ರೈಲ್ವೆಯು ಹೊರಡಿಸಿರುವ ಪ್ರಕಟಣೆಯ ಪ್ರಕಾರ ಒಟ್ಟು ಸುಮಾರು 32 ರೈಲುಗಳಲ್ಲಿ ಟಿಕೆಟ್‌ ದರವನ್ನು ಕಡಿಮೆ ಮಾಡಲಾಗುತ್ತದೆ. ಈ ಪಟ್ಟಿಯಲ್ಲಿ ಬೆಂಗಳೂರು, ಮೈಸೂರಿನ ರೈಲುಗಳು ಕೂಡಾ ಇದೆ. ಆ ರೈಲುಗಳು ಯಾವುದು ಎಂಬ ಪಟ್ಟಿ ಈ ಕೆಳಗಿದೆ:

* ಅಜ್ಮೀರ್-ದಾದರ್-ಅಜ್ಮೀರ್ ಸೂಪರ್‌ಫಾಸ್ಟ್ ಟ್ರೈ ವೀಕ್ಲಿ ಸ್ಪೆಶಲ್‌ , ರೈಲು ಸಂಖ್ಯೆ 02990/02989
* ಶ್ರೀ ಗಂಗಾನಗರ-ಬಾಂದ್ರಾ ಟರ್ಮಿನಸ್-ಶ್ರೀಗಂಗಾನಗರ ಪ್ರತಿನಿಧಿ, ರೈಲು ಸಂಖ್ಯೆ 09708/09707
* ಬಿಕಾನೇರ್-ದಾದರ್-ಬಿಕಾನೇ ಬೈ-ವೀಕ್ಲಿ ಸೂಪರ್‌ ಫಾಸ್ಟ್‌ ಸ್ಪೆಶಲ್‌, ರೈಲು ಸಂಖ್ಯೆ 02489/02490
* ಜೈಪುರ-ಪುಣೆ-ಜೈಪುರ ಬೈ-ವೀಕ್ಲಿ ಸೂಪರ್‌ ಫಾಸ್ಟ್‌ ಸ್ಪೆಶಲ್‌, ರೈಲು ಸಂಖ್ಯೆ 02940/02939
* ಭಗತ್ ಕಿ ಕೋಠಿ - ಬಾಂದ್ರಾ ಟರ್ಮಿನಸ್ - ಭಗತ್ ಕಿ ಕೋಠಿ ಬೈ-ವೀಕ್ಲಿ ಸ್ಪೆಶಲ್‌, ರೈಲು ಸಂಖ್ಯೆ 04817/04818
* ಉದಯಪುರ ನಗರ-ಹೊಸ ಜಲ್ಪೈಗುರಿ-ಉದಯಪುರ ನಗರ ವೀಕ್ಲಿ, ರೈಲು ಸಂಖ್ಯೆ 09601/09602
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ಟ್ರೈ ವೀಕ್ಲಿ ಸ್ಪೆಶಲ್‌, ರೈಲು ಸಂಖ್ಯೆ 04854/044853
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ಟ್ರೈ ವೀಕ್ಲಿ ಸ್ಪೆಶಲ್‌, ರೈಲು ಸಂಖ್ಯೆ, 04864/04863
* ಜೋಧ್‌ಪುರ-ವಾರಣಾಸಿ-ಜೋಧ್‌ಪುರ ವೀಕ್ಲಿ ರೈಲು, ರೈಲು ಸಂಖ್ಯೆ, 04866/04865
* ಬಿಕಾನೇರ್-ಕೋಲ್ಕತ್ತಾ-ಬಿಕಾನೇರ್ ವೀಕ್ಲಿ ಸೂಪರ್‌ಫಾಸ್ಟ್‌ ಸ್ಪೆಶಲ್‌ ರೈಲು ಸಂಖ್ಯೆ, 02495/02496
* ಜೈಪುರ-ದೌಲತ್‌ಪುರ್ ಚೌಕ್-ಜೈಪುರ ಪ್ರತಿನಿಧಿ ಸ್ಪೆಶಲ್‌ ರೈಲು ಸಂಖ್ಯೆ, 09717/09718
* ಬಿಕಾನೇರ್-ದೆಹಲಿ ಸರೈ ರೋಹಿಲ್ಲಾ-ಬಿಕಾನೇರ್ ಪ್ರತಿನಿಧಿ ಸೂಪರ್‌ಫಾಸ್ಟ್ ಸ್ಪೆಶಲ್‌, ರೈಲು ಸಂಖ್ಯೆ 02458/02457
* ದೆಹಲಿ-ಬಟಿಂಡಾ-ದೆಹಲಿ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 04731/04732
* ಶ್ರೀಗಂಗಾನಗರ-ದೆಹಲಿ-ಶ್ರೀಗಂಗಾನಗರ ಪ್ರತಿನಿಧಿ ಸೂಪರ್‌ಫಾಸ್ಟ್ ಸ್ಪೆಶಲ್, ರೈಲು ಸಂಖ್ಯೆ 02471/02472
* ಬಾರ್ಮರ್ - ಋಷಿಕೇಶ - ಬಾರ್ಮರ್ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 04888/04887
* ಅಜ್ಮೀರ್-ಅಮೃತಸರ-ಅಜ್ಮೀರ್ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 09611/09612
* ಅಜ್ಮೀರ್-ಅಮೃತಸರ-ಅಜ್ಮೀರ್ ವೀಕ್ಲಿ ಸ್ಪೆಶಲ್, ರೈಲು ಸಂಖ್ಯೆ 09613/09614
* ಅಜ್ಮೀರ್-ಸೀಲ್ದಾ - ಅಜ್ಮೀರ್ ಪ್ರತಿನಿಧಿ ಸ್ಪೆಶಲ್, ರೈಲು ಸಂಖ್ಯೆ 02988/0298
* ಮಧುರೈ-ಬಿಕಾನೇರ್-ಮಧುರೈ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06053/06054
* ಚೆನ್ನೈ ಎಗ್ಮೋರ್-ಜೋಧಪುರ-ಚೆನ್ನೈ ಎಗ್ಮೋರ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06067/06068
* ಜಮ್ಮು ತಾವಿ-ಅಜ್ಮೀರ್-ಜಮ್ಮುತ್ವಿ ಪ್ರತಿನಿಧಿ ಸ್ಪೆಶಲ್‌, ರೈಲು ಸಂಖ್ಯೆ 02422/02421
* ಜೋಧ್‌ಪುರ-ಬೆಂಗಳೂರು-ಜೋಧ್‌ಪುರ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06507/06508
* ಅಜ್ಮೀರ್-ಮೈಸೂರು-ಅಜ್ಮೀರ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06209/06210
* ಅಜ್ಮೀರ್-ರಾಜೇಂದ್ರನಗರ-ಅಜ್ಮೀರ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 02396/02395
* ಜೈಪುರ-ಹೈದರಾಬಾದ್-ಜೈಪುರ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 02719/02720
* ಹೌರಾ-ಬಾರ್ಮರ್-ಹೌರಾ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 02323/02324
* ಅಜ್ಮೀರ್-ಬೆಂಗಳೂರು-ಅಜ್ಮೀರ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06206/06205
* ಜೋಧ್‌ಪುರ-ಬೆಂಗಳೂರು-ಜೋಧ್‌ಪುರ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 06533/06534
* ನಾಂದೇಡ್-ಶ್ರೀಗಂಗಾನಗರ-ನಾಂದೇಡ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 07623/07624
* ಬಾಂದ್ರಾ ಟರ್ಮಿನಸ್ - ಜೈಸಲ್ಮೇರ್ - ಬಾಂದ್ರಾ ಟರ್ಮಿನಸ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 02929/02930
* ಬಿಕಾನೆರ್-ಬಾಂದ್ರಾ ಟರ್ಮಿನಸ್-ಬಿಕಾನೆರ್ ವೀಕ್ಲಿ ಫೆಸ್ಟಿವಲ್‌ ಸ್ಪೆಶಲ್‌, ರೈಲು ಸಂಖ್ಯೆ 02473/02474
* ಶ್ರೀಗಂಗಾನಗರ-ಹರಿದ್ವಾರ-ಶ್ರೀಗಂಗಾನಗರ ಪ್ರತಿನಿಧಿ ಸ್ಪೆಶಲ್‌ ರೈಲು ಸಂಖ್ಯೆ 04712/04711

Recommended Video

600 ವರ್ಷಗಳ ನಂತರ ನಾಳೆ ಸಂಭವಿಸಲಿದೆ ಸುದೀರ್ಘ ಚಂದ್ರಗ್ರಹಣ | Oneindia Kannada

(ಒನ್‌ಇಂಡಿಯಾ ಸುದ್ದಿ)

English summary
Indian Railways Slashes Ticket Fare, Drops Special Tag From 32 Trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X