ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Baby Berth: ತಾಯಿ ಮಡಿಲಿನ ಕಂದಮ್ಮಗಳಿಗೆ ವಿಶೇಷ ಸೀಟ್ ಒದಗಿಸಿದ ಭಾರತೀಯ ರೈಲ್ವೆ

|
Google Oneindia Kannada News

ನವದೆಹಲಿ, ಮೇ 10: ಪುಟ್ಟ ಮಕ್ಕಳನ್ನು ಹೊಂದಿರುವ ತಾಯಂದಿರು ರೈಲುಗಳಲ್ಲಿ ಪ್ರಯಾಣಿಸುವುದೇ ದೊಡ್ಡ ಸವಾಲು. ಅದರಲ್ಲೂ ಸ್ಲೀಪರ್‌ ಕೋಚ್ ರೈಲುಗಳಲ್ಲಿ ಪ್ರಯಾಣಿಸಬೇಕಾದರೆ ಎದುರಾಗುವ ಸಮಸ್ಯೆಗಳು ಒಂದು ಎರಡಲ್ಲ. ಆದರೆ ಈಗ ಇದಕ್ಕೆ ಪರಿಹಾರ ಒದಗಿಸಲು ರೈಲ್ವೆ ಮುಂದಾಗಿದೆ.

ಪುಟ್ಟ ಮಗುವನ್ನು ಮಡಿಲಿನಲ್ಲಿ ಇಟ್ಟುಕೊಂಡು ರೈಲು ಪ್ರಯಾಣ ಮಾಡುವ ತಾಯಂದಿರ ಅನುಕೂಲಕ್ಕಾಗಿ ವಿಭಿನ್ನ ಹಾಗೂ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇನ್ನು ಮುಂದೆ ಪುಟ್ಟ ಮಕ್ಕಳನ್ನು ಹೊಂದಿರುವವರಿಗಾಗಿಯೇ ವಿಶೇಷ ಸೀಟ್ ಅನ್ನು ನಿಗದಿ ಮಾಡಲಾಗಿದೆ.

ಗೂಡ್ಸ್‌ ರೈಲಿಗಾಗಿ ಮೇ 24 ರವರೆಗೆ 1100 ಪ್ರಯಾಣಿಕ ರೈಲುಗಳು ರದ್ದುಗೂಡ್ಸ್‌ ರೈಲಿಗಾಗಿ ಮೇ 24 ರವರೆಗೆ 1100 ಪ್ರಯಾಣಿಕ ರೈಲುಗಳು ರದ್ದು

ಹೌದು ಇದು ತಾಯಂದಿರ ದಿನದ ವಿಶೇಷ ಕೊಡುಗೆ ಎಂದು ಭಾರತೀಯ ರೈಲ್ವೆ ಹೇಳಿದೆ. ಲಕ್ನೋ ಮತ್ತು ದೆಹಲಿ ವಿಭಾಗಗಳು ಜಂಟಿಯಾಗಿ ಈ ಪ್ರಯತ್ನಕ್ಕೆ ಕೈ ಹಾಕಿವೆ. ಉತ್ತರದ ರೈಲ್ವೆಗಳಲ್ಲಿ ತಮ್ಮ ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸುವ ತಾಯಂದಿರ ಅನುಕೂಲಕ್ಕಾಗಿ ಮಡಚಬಹುದಾದ 'ಬೇಬಿ ಬರ್ತ್' ಅನ್ನು ಪರಿಚಯಿಸಿದೆ. ಈ ವ್ಯವಸ್ಥೆ ಹಾಗೂ ಅದರ ವಿಶೇಷತೆಯನ್ನು ವರದಿಯಲ್ಲಿ ತಿಳಿಯೋಣ.

ವಿಶಿಷ್ಟ ಯೋಜನೆಗೆ ಪ್ರಾಯೋಗಿಕ ಚಾಲನೆ

ವಿಶಿಷ್ಟ ಯೋಜನೆಗೆ ಪ್ರಾಯೋಗಿಕ ಚಾಲನೆ

12 ಮತ್ತು 60ನೇ ಬರ್ತ್‌ಗಳಲ್ಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಲಕ್ನೋ ಮೇಲ್ 12230ರ AC ಮೂರು-ಶ್ರೇಣಿಯ (194129/C) B4 ಕೋಚ್‌ನಲ್ಲಿ ಈ ವೈಶಿಷ್ಟ್ಯಮಯ ಆಗಿರುವ ಪ್ರಾಯೋಗಿಕ ಯೋಜನೆಯಯನ್ನು ಪರಿಚಯಿಸಲಾಗಿದೆ. "ಬೇಬಿ ಸೀಟ್ ಅನ್ನು ಮುಖ್ಯವಾಗಿ ಕೆಳಗಿನ ಸೀಟ್ ಜೊತೆಗೆ ಜೋಡಿಸಲಾಗಿದೆ. ಇದು ಹಿಂಜ್‌ಗಳನ್ನು ಹೊಂದಿರುವುದರಿಂದ ಅದನ್ನು ಮಡಚಬಹುದಾಗಿದೆ. ಅದರ ಬಳಕೆ ಇಲ್ಲದಿದ್ದಾಗ, ಅದನ್ನು ಸ್ಟಾಪ್‌ನೊಂದಿಗೆ ಸುರಕ್ಷಿತಗೊಳಿಸಬಹುದು. ಇದರಿಂದ ಮಗುವಿಗೆ ಸೀಟನ್ನು ಹೊಂದಿಸುವುದು ತುಂಬಾ ಸುಲಭವಾಗುತ್ತದೆ" ಎಂದು ಲಕ್ನೋ ವಿಭಾಗದ ವಿಭಾಗೀಯ ಮೆಕ್ಯಾನಿಕಲ್ ಇಂಜಿನಿಯರ್ ಅತುಲ್ ಸಿಂಗ್ ಹೇಳಿದ್ದಾರೆ.

ಮಗುವಿನ ಸುರಕ್ಷಿತ ಪ್ರಯಾಣಕ್ಕಾಗಿ ಸೀಟ್

ಮಗುವಿನ ಸುರಕ್ಷಿತ ಪ್ರಯಾಣಕ್ಕಾಗಿ ಸೀಟ್

ಭಾರತೀಯ ರೈಲ್ವೆಯಲ್ಲಿ ತಾಯಿ ಜೊತೆಗೆ ಮಗುವಿನ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮಗುವಿಗಾಗಿ ವಿಶೇಷ ಸೀಟ್ ವ್ಯವಸ್ಥೆಯನ್ನು ಮಾಡಲಾಗಿದೆ. "ಬೇಬಿ ಸೀಟಿನ ಆಯಾಮಗಳು 770 ಎಂಎಂ ಉದ್ದ, 255 ಎಂಎಂ ಅಗಲ ಮತ್ತು 76.2 ಎಂಎಂ ಎತ್ತರವಾಗಿರುತ್ತದೆ. ಮಗುವನ್ನು ಸುರಕ್ಷಿತವಾಗಿರಿಸಲು ಇದು ಪಟ್ಟಿಗಳನ್ನು ಹೊಂದಿದೆ" ಎಂದು ಅತುಲ್ ಸಿಂಗ್ ಹೇಳಿದ್ದಾರೆ.

ದೇಶದ ಎಲ್ಲಾ ರೈಲುಗಳಲ್ಲಿ ಬೇಬಿ ಸೀಟ್ ವ್ಯವಸ್ಥೆ ಜಾರಿ

ದೇಶದ ಎಲ್ಲಾ ರೈಲುಗಳಲ್ಲಿ ಬೇಬಿ ಸೀಟ್ ವ್ಯವಸ್ಥೆ ಜಾರಿ

"ರೈಲ್ವೆ ಮಂಡಳಿಯ ಇತ್ತೀಚಿನ ಪರಿಶೀಲನಾ ಸಭೆಯಲ್ಲಿ, ಮಹಾರಾಷ್ಟ್ರ ಮೂಲದ ಎಂಜಿನಿಯರ್ ನಿತಿನ್ ಡಿಯೋರ್ ತಮ್ಮ ಪುಟ್ಟ ಮಗುವಿನೊಂದಿಗೆ ಪ್ರಯಾಣಿಸುವಾಗ ತಾಯಂದಿರನ್ನು ಬೆಂಬಲಿಸುವ ವೈಶಿಷ್ಟ್ಯವನ್ನು ರಚಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಈ ಕಲ್ಪನೆಗೆ ಬೇಬಿ ಸೀಟ್ ರೂಪದಲ್ಲಿ ಆಕಾರವನ್ನು ನೀಡಲಾಗಿದೆ. ಪ್ರಯಾಣಿಸುವ ತಾಯಂದಿರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಂಡಿದ್ದು, ಅದು ಯಶಸ್ವಿಯಾದರೆ ರೈಲ್ವೆಯ ಎಲ್ಲಾ ರೈಲುಗಳಲ್ಲಿ ಬೇಬಿ ಸೀಟ್‌ಗಳನ್ನು ಅಳವಡಿಸಲಾಗುವುದು" ಎಂದು ಲಕ್ನೋ ವಿಭಾಗದ ವಿಭಾಗೀಯ ರೈಲ್ವೇ ಮ್ಯಾನೇಜರ್ ಸುರೇಶ್ ಕುಮಾರ್ ಸಪ್ರಾ ಹೇಳಿದ್ದಾರೆ.

ತಾಯಂದಿರಿಗಾಗಿ ವಿಶೇಷ ವಿಭಾಗ ರಚಿಸಲು ಸೂಕ್ತ ಕ್ರಮ

ತಾಯಂದಿರಿಗಾಗಿ ವಿಶೇಷ ವಿಭಾಗ ರಚಿಸಲು ಸೂಕ್ತ ಕ್ರಮ

"ಸದ್ಯ ಪುಟ್ಟ ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ಈ ಸೀಟ್ ಅನ್ನು ಕಾಯ್ದಿರಿಸಲು ಯಾವುದೇ ಕಾರ್ಯವಿಧಾನವಿಲ್ಲ. ಆದರೆ ಅವರು ಕೆಳಗಿನ ಸೀಟನ್ ಅನ್ನು ನಿಗದಿಪಡಿಸಿದ ಪ್ರಯಾಣಿಕರೊಂದಿಗೆ ಸೀಟನ್ನು ಬದಲಾಯಿಸಲು ಆನ್-ಬೋರ್ಡ್ ರೈಲು ಟಿಕೆಟ್ ಪರೀಕ್ಷಕರನ್ನು ಸಂಪರ್ಕಿಸಬಹುದು. ಮಗುವಿನ ಸೀಟ್ ಅನ್ನು ಅದರೊಂದಿಗೆ ಲಗತ್ತಿಸಲಾಗುತ್ತದೆ. ವಿಶೇಷ ಸೀಟ್‌ಗಾಗಿ ಪುಟ್ಟ ಮಕ್ಕಳನ್ನು ಹೊಂದಿರುವ ತಾಯಂದಿರಿಗಾಗಿ ಪ್ರತ್ಯೇಕ ವಿಭಾಗವನ್ನು ರಚಿಸಲು ಶೀಘ್ರದಲ್ಲೇ CRIS ಅನ್ನು ತಂಡ ಸಂಪರ್ಕಿಸುತ್ತದೆ" ಎಂದು ಸುರೇಶ್ ಕುಮಾರ್ ಸಪ್ರಾ ತಿಳಿಸಿದರು.

English summary
Indian Railways introduced baby berth in selected trains to support mothers. Know about new facility in railways.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X