ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Chandrashekhar Patil: ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಜೀವನಚರಿತ್ರೆ

|
Google Oneindia Kannada News

ಕನ್ನಡದ ಹಿರಿಯ ಸಾಹಿತಿ, ನಾಟಕಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಚಂದ್ರಶೇಖರ ಪಾಟೀಲ (ಚಂಪಾ) ವಿಧಿವಶರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 83 ವರ್ಷದ ಚಂಪಾರನ್ನು ಬೆಂಗಳೂರು ಕೋಣನಕುಂಟೆ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಇಹಲೋಕ ತ್ಯಜಿಸಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿ ಚಂಪಾ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಕನ್ನಡದ ಹಿರಿಯ ಸಾಹಿತಿಯಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಚಂದ್ರಶೇಖರ ಪಾಟೀಲ ಅವರು ಕನ್ನಡಕ್ಕಾಗಿ ಸಲ್ಲಿಸಿದ ಸೇವೆ ಅಪಾರವಾಗಿದೆ.

83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ83ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರ ವ್ಯಕ್ತಿಚಿತ್ರ

ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದ ಚಂಪಾ, ಆನಂತರ ಸಾಹಿತಿಯಾಗಿ, ಪತ್ರಕರ್ತರಾಗಿ ನಾಡಿನಾದ್ಯಂತ ಹೆಸರು ಮಾಡಿದರು. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಉಪನ್ಯಾಸಕರಾಗಿ ಬೋಧಕ ವೃತ್ತಿ ಆರಂಭಿಸಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಲೇ ತಮ್ಮ ಕಾವ್ಯ ಹಾಗೂ ನಾಟಕಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಚಂದ್ರಶೇಖರ್ ಪಾಟೀಲ್ ಅವರ ಬಾಲ್ಯ, ಕೌಟುಂಬಿಕ ಹಿನ್ನೆಲೆ, ಶಿಕ್ಷಣ, ಸಾಹಿತ್ಯ ಲೋಕಕ್ಕೆ ಅವರು ಸಲ್ಲಿಸಿದ ಸೇವೆ ಹಾಗೂ ಪಡೆದ ಪ್ರಶಸ್ತಿಗಳ ಕುರಿತು ಅವರ ಜೀವನವನ್ನು ಪರಿಚಯಿಸುವ ಕುರಿತು ಒಂದು ವಿವರಣಾತ್ಮಕ ವರದಿ ಇಲ್ಲಿದೆ ಓದಿ.

Indian Poet Chandrashekhar Patil biography, education, family and awards

ಜೀವನ ಮತ್ತು ಶಿಕ್ಷಣ:

ಕನ್ನಡದ ಕವಿ, ನಾಟಕಕಾರ, ವಿಮರ್ಶಕ, ಹೋರಾಟಗಾರರಾದ ಚಂಪಾ' ನಮದಿಂದ ಪ್ರಖ್ಯಾತರಾದ ಚಂದೃಶೇಖರ ಪಾಟೀಲ ಅವರು 1939ರಲ್ಲಿ ಹಾವೇರಿ ಜಿಲ್ಲೆಯ ಹತ್ತಿಮತ್ತೂರಿನಲ್ಲಿ ಜನಿಸಿದರು. ಹತ್ತಿಮತ್ತೂರು-ಹಾವೇರಿಗಳಲ್ಲಿ ಕನ್ನಡ ಶಾಲೆ-ಹೈಸ್ಕೂಲ್ ಮುಗಿಸಿ, 1956ರಲ್ಲಿ ಕರ್ನಾಟಕ ಕಾಲೇಜಿಗೆ ಸೇರಿದರು. 1960ರಲ್ಲಿ ಬಿ.ಎ. ಪೂರೈಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ 1962ರಲ್ಲಿ ಎಂ.ಎ. ಮಾಡಿದರು.

ಸಾಹಿತ್ಯ ಲೋಕದಲ್ಲಿ ಚಂಪಾ:

1969ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾದರು. 1996ರಲ್ಲಿ ಪ್ರೊಫೆಸರ್ ಮತ್ತು ಅಧ್ಯಕ್ಷರಾದರು. 1980-83ರಲ್ಲಿ ಧಾರವಾಡದ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಗೋಕಾಕ್ ಚಳವಳಿಗೆ ಪ್ರೇರಣೆ ನೀಡಿದ ಪ್ರಮುಖರಲ್ಲಿ ಒಬ್ಬರಾಗಿದ್ದರು. ನವೆಂಬರ್ 2004 ರಿಂದ 2008ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅಂತರಂಗ ನಾಟಕ ಕೂಟ 'ಮ್ಯಾಳ' ಮುಂತಾದ ಸಂಸ್ಥೆಗಳ ಮೂಲಕ ರಂಗಚಳುವಳಿಯಲ್ಲಿ ಕ್ರಿಯಾಶೀಲರಾರು. 1970ರ ದಶಕದ ಸಾಂಸ್ಕೃತಿಕ ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ.

ಪ್ರಶಸ್ತಿ ತಂದುಕೊಟ್ಟ ಕಾವ್ಯ ಮತ್ತು ನಾಟಕ ಕೃತಿ:

ಬಾನು (ಕಾವ್ಯ-1960) ಕಾವ್ಯಕ್ಕೆ ಗೋಕರ್ಣದ ಗೌಡಶಾನಿ (ನಾಟಕ-1974), ಗಾಂಧೀಸ್ಮರಣ (ಕಾವ್ಯ-1976) ಇವುಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಗ್ರಂಥ ಪ್ರಶಸ್ತಿಗಳು ದೊರೆತಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂದೇಹ ಮಾಧ್ಯಮ ಪ್ರಶಸ್ತಿಗಳು ಸಿಕ್ಕಿವೆ. ದಿನಕರ ದೇಸಾಯಿ ಪ್ರಶಸ್ತಿ ಇವರ ಅರ್ಧಸತ್ಯದ ಹುಡುಗಿ ಕಾವ್ಯಕ್ಕೆ ದೊರೆತಿದೆ.

ಚಂಪಾ ಕೃತಿಗಳು:

ಸಂಕ್ರಮಣ ಕಾವ್ಯವೆಂಬ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ನಿರಂತರವಾಗಿ ಪ್ರಕಟಿಸಿದ ಚಂಪಾ, ಹತ್ತಕ್ಕೂ ಹೆಚ್ಚು ಗ್ರಂಥಗಳನ್ನು ಸಂಪಾದಿಸಿದ್ದಾರೆ. ಬಾನುಲಿ, ಮಧ್ಯಬಿಂದು, ಹೂವು ಹಣ್ಣು ತಾರೆ, ಓ ಎನ್ನ ದೇಶ ಬಾಂಧವರೇ, ಗುಂಡಮ್ಮನ ಹಾಡು ಮೊದಲಾದ ಕವನ ಸಂಗ್ರಹ ಹೊರತಂದಿದ್ದಾರೆ. ಕೊಡೆಗಳು, ಗೋಕರ್ಣದ ಗೌಡಶಾನಿ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮೊದಲಾದ ನಾಟಕಗಳನ್ನು ರಚಿಸಿದ್ದಾರೆ. ಬೇಂದ್ರೆ-ನಾನು ಕಂಡಂತೆ, ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ, ಚಂಪಾದಕೀಯ ಇತ್ಯಾದಿ ಕೃತಿಗಳನ್ನು ರಚಿಸಿದ್ದಾರೆ. ಇಂಗ್ಲಿಷಿನಲ್ಲಿ ಹತ್ತಾರು ನಿಯತಕಾಲಿಕೆಗಳಿಗೆ ಲೇಖಕರಾಗಿರುವ ಇವರು ಇಂಗ್ಲಿಷಿನಲ್ಲಿ ಪೊಯಮ್ಸ್ ಅಂಡ್ ಪ್ಲೇಸ್ ಎಂಬ ಗ್ರಂಥವನ್ನು (ಕನ್ನಡದಿಂದ ಅನುವಾದಿಸಿದ ಕೃತಿಗಳು) ಹೊರತಂದಿದ್ದಾರೆ.

ಮಾತೃಭಾಷಾ ಮಾಧ್ಯಮ ಚಳುವಳಿ:

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡವೇ ಬೋಧನಾ ಮಾಧ್ಯಮವಾಗಿರಬೇಕು, ಬೇಕಿದ್ದರೆ ಇಂಗ್ಲಿಷನ್ನು ಪ್ರಾಥಮಿಕ 5ನೇ ತರಗತಿಯಿಂದ (ಮಿಡ್ಲ್‍ಸ್ಕೂಲ್) ಕಲಿಸಬೇಕು, ಕೇಂದ್ರ ಪಠ್ಯಕ್ರಮದ (ಹಿಂದಿ ಇಂಗ್ಲಿಷ್) ಮಾಧ್ಯಮಗಳ ಶಾಲೆಗಳಲ್ಲಿ ಕರ್ನಾಟಕದಲ್ಲಿ ಕನ್ನಡವನ್ನು ಕಲಿಸಬೇಕು- ಎಂಬ ವಿಷಯಗಳ ಬಗ್ಗೆ ಚಂಪಾ ಸರ್ಕಾರದೊಡನೆ ಹೋರಾಡಿದರು. ನಾಡಿನ ಶಿಕ್ಷಣತಜ್ಞರನ್ನು, ವಿದ್ವಾಂಸರನ್ನು ಕಾನೂನು ತಜ್ಞರನ್ನು ಕನ್ನಡ ಸಂಘಟನೆಗಳ ಪ್ರಮುಖರನ್ನು ಆಹ್ವಾನಿಸಿ ಸಮಾಲೋಚನಾ ಸಭೆ ಏರ್ಪಡಿಸಿ ಕನ್ನಡ ಮಾಧ್ಯಮದ ಸಮಸ್ಯೆಗಳನ್ನು ಚರ್ಚಿಸಿದರು. ಶಿಕ್ಷಣ ಸಚಿವರಾಗಿದ್ದವರೊಡನೆ ಸಭೆ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸಲು ಅನುಮತಿ ಪಡೆದು ಆಂಗ್ಲಮಾಧ್ಯಮದಲ್ಲಿ ಶಾಲೆ ನಡೆಸುತ್ತಿದ್ದ ಸುಮಾರು 2215 ಶಾಲೆಗಳ ಮಾನ್ಯತೆಯನ್ನು ರದ್ದು ಮಾಡಿಸುವಲ್ಲಿ ಚಂಪಾ ಅವರು ಯಶಸ್ವಿಯಾದವರು.

ಕನ್ನಡ ನುಡಿ - ಕನ್ನಡಗಡಿ ಜಾಗೃತಿ ಜಾಥಾ

ಚಂಪಾ ಅವರು ಕರ್ನಾಟಕದ ಗಡಿಪ್ರದೇಶಗಳಲ್ಲಿ ಜಿಲ್ಲಾ ಘಟಕಗಳ ಸಹಯೋಗದೊಡನೆ, ಸಾಹಿತಿ ಕಲಾವಿದರದೊಂದಿಗೆ ಜಾಗೃತಿ ಜಾಥಾ ನಡೆಸಿದರು. ಗಡಿನಾಡ ಸಮಸ್ಯೆಗಳ ಪರಿಹಾರಕ್ಕಾಗಿ ಹಿಂದಿನ ಅಧ್ಯಕ್ಷರಲ್ಲಿ ಒಬ್ಬರಾದ ಬಿ. ಶಿವಮೂರ್ತಿ ಶಾಸ್ತ್ರಿಗಳು ಹೋರಾಟ ಮಾಡಿದ್ದರು. ಆ ಕಾರ್ಯವನ್ನು ಚಂಪಾ ಮುಂದುವರಿಸಿದರು. ಹೊಗೇನಕಲ್‍ನಲ್ಲಿ ತಮಿಳುನಾಡು ಸರ್ಕಾರ ಆರಂಭಿಸಿದ ವಿದ್ಯುತ್ ಯೋಜನೆಯನ್ನು ವಿರೋಧಿಸಿ ಇವರ ಅವಧಿಯಲ್ಲಿ ನಡೆದ ಚಳವಳಿಯಲ್ಲಿ ಪರಿಷತ್ತು ಪಾಲ್ಗೊಂಡಿತು.

ಗಡಿವಿವಾದದ ಬಗ್ಗೆ ಶಾಶ್ವತ ಪರಿಹಾರ ಕರಡುಕೊಳ್ಳಲು ಮಹಾಜನ್ ವರದಿಯನ್ನು ಜಾರಿಗೆ ತರಲು ಒತ್ತಾಯ ಮಾಡಲು 2006ರ ಅಕ್ಟೋಬರ್ 4ರಂದು ಕರ್ನಾಟಕ ಬಂದ್‍ ಗೆ ನಾಡಿನ ಸಂಘ ಸಂಸ್ಥೆಗಳು ಕರೆ ನೀಡಿದವು. ಪರಿಷತ್ತು ಈ ಬಂದ್‍ ನಲ್ಲಿ ಸಕ್ರಿಯವಾಗಿ ಪಾಲ್ಗೊಂಡಿತು.

ಕನ್ನಡ ಹೋರಾಟಕ್ಕೆ ಜಯ:

2007ರಲ್ಲಿ ಶಿಕ್ಷಣ ಸಚಿವರಾದ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ತಿಗೆ ಆಮಂತ್ರಿಸಿ, ಗಣ್ಯ ಸಾಹಿತಿಗಳ ಕನ್ನಡ ಪರ ಹೋರಾಟಗಾರರ ಸಮ್ಮುಖದಲ್ಲಿ ಸಭೆ ನಡೆಸಿದರು. ಕನ್ನಡ ಮಾಧ್ಯಮದಲ್ಲಿ ಶಾಲೆ ನಡೆಸಲು ಅನುಮತಿ ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿಯ ೨೨೧೫ ಶಾಲೆಗಳನ್ನು ಕನ್ನಡ ದ್ರೋಹಿ ಶಾಲೆಗಳೆಂದು ಪರಿಗಣಿಸಿ ಇವುಗಳನ್ನು ರದ್ದು ಮಾಡಲು ಹಕ್ಕೊತ್ತಾಯ ಮಾಡಿದಾಗ ಸರ್ಕಾರ ಶಾಲೆಯ ಮಾನ್ಯತೆಯನ್ನು ರದ್ದುಮಾಡಿತು.

ಭಾರತ ಸರ್ಕಾರವು ತಮಿಳು ಭಾಷೆಯನ್ನು "ಶಾಸ್ತ್ರೀಯ ಭಾಷೆ"ಯೆಂದು ಘೋಷಿಸಿತು. ಒಂದು ಸಾವಿರ ವರ್ಷದ ಲಿಖಿತ ಇತಿಹಾಸವಿದ್ದು, ಮೌಲಿಕ ಸಾಹಿತ್ಯ ರಚನೆ ಆಗಿದ್ದ ಭಾಷೆಯನ್ನು ಶಾಸ್ತ್ರೀಯಭಾಷೆ ಎಂದು ಘೋಷಿಸಲಾಗುತ್ತದೆ. "ಶಾಸ್ತ್ರೀಯ ಭಾಷೆ" ಎಂಬ ಘೋಷಣೆಯ ಅಡಿಯಲ್ಲಿ ತಮಿಳುಭಾಷೆ ಸಂಸ್ಕೃತಿಯ ಅಭಿವೃದ್ಧಿಗೆ ಕೋಟಿಗಟ್ಟಲೆ ರೂಪಾಯಿಗಳನ್ನು ಕೇಂದ್ರ ಸರ್ಕಾರದಿಂದ ತಮಿಳುನಾಡು ಅನುದಾನ ಪಡೆಯತೊಡಗಿತು. ತಮಿಳಿನಷ್ಟೇ ಪ್ರಾಚೀನವಾಗಿರುವ ಕನ್ನಡ ಭಾಷೆಗೂ ಶಾಸ್ತ್ರೀಯ ಭಾಷೆಯ ಸ್ಥಾನ ಸಿಗಬೇಕೆಂದು ಕನ್ನಡ ಅಭಿಮಾನಿಗಳು ಹೋರಾಟಕ್ಕಿಳಿದರು. ಚಂಪಾ' ನೇತೃತ್ವದ ಸಾಹಿತ್ಯ ಪರಿಷತ್ತು ಈ ಹೋರಾಟಕ್ಕೆ ನಾಯಕತ್ವವನ್ನು ಒದಗಿಸಿತು.

ಕಾನ್ವೆಂಟ್ ಶಾಲೆಯ ಮಕ್ಕಳು ಇಂಗ್ಲಿಷ್‍ನಲ್ಲಿ ಪರಿಣತಿ ಸಾಧಿಸಿ ಉನ್ನತ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ ಹಾಗೂ ಕನ್ನಡ ಮಾಧ್ಯಮಗಳ ಶಾಲೆಯ ಮಕ್ಕಳು ಇಂಗ್ಲಿಷ್ ಭಾಷಾ ಸಾಮರ್ಥ್ಯದಲ್ಲಿ ಹಿಂದುಳಿದ ಪರಿಣಾಮ ಉದ್ಯೋಗಾವಕಾಶ ಕಳೆದುಕೊಳ್ಳುತ್ತಾರೆ. ಆದ್ದರಿಂದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್‍ನ್ನು ಕಲಿಸಬೇಕೆಂಬ ಒತ್ತಾಯಕ್ಕೆ ಮಣಿದು 2007ರ ಜೂನ್‍ ನಲ್ಲಿ ಸರ್ಕಾರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‍ನ್ನು ಕಡ್ಡಾಯವಾಗಿ ಕಲಿಸಲು ಆಜ್ಞೆ ಹೊರಡಿಸಿದಾಗ ಇದನ್ನು ವಿರೋಧಿಸಿ 2007 ಜೂನ್ 1ರಂದು ಪರಿಷತ್ತಿನ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.

ಕಾವೇರಿ ನದಿ ನೀರು ಹಂಚಿಕೆಯಲ್ಲಿ ನ್ಯಾಯಮಂಡಳಿ ತೀರ್ಪನ್ನು ವಿರೋಧಿಸಿ ಹೊಗೇನಕಲ್‍ನಲ್ಲಿ ತಮಿಳುನಾಡು ಆರಂಭಿಸಿದ ವಿದ್ಯುತ್ ಯೋಜನೆ ವಿರೋಧಿಸಿ ಚಳವಳಿಯನ್ನು ಇವರ ನೇತೃತ್ವದಲ್ಲಿ ಪರಿಷತ್ತು ನಡೆಸಿತು.

Recommended Video

Brazil: ಪ್ರಕೃತಿ ವಿಕೋಪ ಎಂಥದ್ದು ನೋಡಿ | Oneindia Kannada

English summary
Indian Poet Chandrashekhar Patil biography, education, family and awards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X