ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರತಿ ಪ್ರಭಾಕರ್ ಅಮೆರಿಕ ಸರ್ಕಾರಕ್ಕೆ ವೈಜ್ಞಾನಿಕ ಸಲಹೆಗಾರ್ತಿ

|
Google Oneindia Kannada News

ಜೋ ಬೈಡೆನ್ ಆಡಳಿತದ ಸರ್ಕಾರದಲ್ಲಿ ಸ್ಥಾನ ಪಡೆಯುವಲ್ಲಿ ಮತ್ತೊಬ್ಬ ಭಾರತೀಯ ಮೂಲದ ವ್ಯಕ್ತಿ ಯಶಸ್ವಿಯಾಗಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಈ ವಾರ ಭಾರತೀಯ ಮೂಲದ ಭೌತಶಾಸ್ತ್ರಜ್ಞೆ ಆರತಿ ಪ್ರಭಾಕರ್ ಅವರನ್ನು ತಮ್ಮ ವೈಜ್ಞಾನಿಕ ಸಲಹೆಗಾರರನ್ನಾಗಿ ನಾಮನಿರ್ದೇಶನ ಮಾಡಲಿದ್ದಾರೆ. ಆರತಿ ಪ್ರಭಾಕರ್ ವೈಟ್ ಹೌಸ್ ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ (OSTP) ನಿರ್ದೇಶಕಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ.

ಕರ್ತವ್ಯ ಲೋಪದ ಆಧಾರದ ಮೇಲೆ ಫೆಬ್ರವರಿ 7 ರಂದು ರಾಜೀನಾಮೆ ನೀಡಿದ ಎರಿಕ್ ಲ್ಯಾಂಡರ್ ಸ್ಥಾನವನ್ನು 63 ವರ್ಷದ ಆರತಿ ಪ್ರಭಾಕರ್ ಅಲಂಕರಿಸಲಿದ್ದಾರೆ. ಆರತಿ ಪ್ರಭಾಕರ್ ವೈಟ್ ಹೌಸ್ ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಡೈರೆಕ್ಟರ್ ಆಗಲು ಸೆನೆಟ್ ಅನುಮೋದನೆಯ ಅಗತ್ಯವಿದೆ. ಪ್ರಕ್ರಿಯೆ ಸಂಪೂರ್ಣವಾಗಲು ಇನ್ನು ಒಂದು ತಿಂಗಳು ಸಮಯ ಬೇಕಾಗುತ್ತದೆ.

ಭಾರತ, ಇಸ್ರೇಲ್, ಅಮೆರಿಕ, ಯುಎಇ ಸೇರಿ I2U2 ಗುಂಪು, ಮುಂದಿನ ತಿಂಗಳು ಸಭೆಭಾರತ, ಇಸ್ರೇಲ್, ಅಮೆರಿಕ, ಯುಎಇ ಸೇರಿ I2U2 ಗುಂಪು, ಮುಂದಿನ ತಿಂಗಳು ಸಭೆ

ಆದರೆ ಈ ಕೂಡಲೇ ಅಮೆರಿಕ ಅಧ್ಯಕ್ಷರಿಗೆ ವಿಜ್ಞಾನ ಸಲಹೆಗಾರರಾಗಿ ಕೆಲಸ ಮಾಡಬಹುದು. ವಿಜ್ಞಾನ ಸಲಹೆಗಾರರಾಗಿ ಸಮಸ್ಯಾತ್ಮಕ ವಿಜ್ಞಾನ ನೀತಿ ಸಮಸ್ಯೆಗಳನ್ನು ಪರಿಹರಿಸುವುದು ಸೇರಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ. ಉದಾಹರಣೆಗೆ ಚೀನಾದೊಂದಿಗೆ ಸ್ಪರ್ಧಿಸಲು ಅಮೆರಿಕವನ್ನು ಹೇಗೆ ಸಜ್ಜಾಗಿರಿಸುವುದು ಎಂಬುದು ಇದರಲ್ಲಿ ಸೇರಿದೆ.

ಅಮೆರಿಕ ಅಧ್ಯಕ್ಷರನ್ನು ಮನೆಯಿಂದ ಹೊರಕಳಿಸುವಂತೆ ಮಾಡಿದ ಪುಟ್ಟ ವಿಮಾನ ಅಮೆರಿಕ ಅಧ್ಯಕ್ಷರನ್ನು ಮನೆಯಿಂದ ಹೊರಕಳಿಸುವಂತೆ ಮಾಡಿದ ಪುಟ್ಟ ವಿಮಾನ

ಭಾರತೀಯ ಮೂಲದ ಭೌತಶಾಸ್ತ್ರಜ್ಞೆ

ಭಾರತೀಯ ಮೂಲದ ಭೌತಶಾಸ್ತ್ರಜ್ಞೆ

ಫೆಬ್ರವರಿ 2, 1959 ರಂದು ನವದೆಹಲಿಯಲ್ಲಿ ಜನಿಸಿದ ಆರತಿ ಪ್ರಭಾಕರ್, ಟೆಕ್ಸಾಸ್‌ನಲ್ಲಿ ಆರಂಭಿಕ ಶಿಕ್ಷಣ ಪಡೆದರು. 1984ರಲ್ಲಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಪಿಎಚ್‌ಡಿ ಗಳಿಸಿದ ನಂತರ ಫೆಡರಲ್ ಸರ್ಕಾರಕ್ಕೆ ಕೆಲಸ ಮಾಡಲು ಆರಂಭಿಸಿದರು.

ಅನ್ವಯಿಕ ಭೌತಶಾಸ್ತ್ರಜ್ಞೆಯಾದ ಆರತಿಯರವನ್ನು 1993 ರಲ್ಲಿ ಬಿಲ್ ಕ್ಲಿಂಟನ್ ಆಡಳಿತವು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿಯ (NIST) ಮುಖ್ಯಸ್ಥರನ್ನಾಗಿ ನೇಮಕ ಮಾಡಿತ್ತು. ತನ್ನ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಆರತಿ ಪ್ರಭಾಕರ್ ಸಿಲಿಕಾನ್ ವ್ಯಾಲಿಯಲ್ಲಿ ಎರಡು ದಶಕಗಳ ಕಾಲ ನೆಲೆಸಿದ್ದರು.

ಬರಾಕ್ ಒಬಾಮ ಅವಧಿಯಲ್ಲೂ ಕೆಲಸ

ಬರಾಕ್ ಒಬಾಮ ಅವಧಿಯಲ್ಲೂ ಕೆಲಸ

ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಆರತಿ ಪ್ರಭಾಕರ್ ಅವರನ್ನು ಡಿಫೆನ್ಸ್ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (ಡಿಎಆರ್ ಪಿಎ) ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಿದರು. 2012 ಜುಲೈ 30ರಿಂದ 2017 ಜನವರಿ 20 ರವರೆಗೆ ಸೇವೆ ಸಲ್ಲಿಸಿದರು.

1993 ರಿಂದ 1997 ರವರೆಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸ್ಟ್ಯಾಂಡರ್ಡ್ಸ್ ಅಂಡ್ ಟೆಕ್ನಾಲಜಿ (NIST) ಗೆ ಮುಖ್ಯಸ್ಥರಾಗಿದ್ದರು. ಎನ್ಐಎಸ್‌ಟಿ ಮುಖ್ಯಸ್ಥರಾದ ಮೊದಲ ಮಹಿಳೆ ಆರತಿ ಪ್ರಭಾಕರ್. ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ (OSTP) ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಅನಿಸಿಕೊಳ್ಳಲಿದ್ದಾರೆ.

ಜೋ ಬೈಡೆನ್ ಸರ್ಕಾರದಲ್ಲಿ ಆರತಿ ಪ್ರಭಾಕರ್ ಕೆಲಸ

ಜೋ ಬೈಡೆನ್ ಸರ್ಕಾರದಲ್ಲಿ ಆರತಿ ಪ್ರಭಾಕರ್ ಕೆಲಸ

ವೈಜ್ಞಾನಿಕ ಸಲಹೆಗಾರ್ತಿಯಾಗಲಿರುವ ಆರತಿ ಪ್ರಭಾಕರ್, ವಿಜ್ಞಾನಕ್ಕಾಗಿ ಅಮೆರಿಕ ಅಧ್ಯಕ್ಷರ ಕಾರ್ಯಸೂಚಿಯನ್ನು ಪೂರೈಸಲು ಸಹಾಯ ಮಾಡಲಿದ್ದಾರೆ. ಜೋ ಬೈಡೆನ್ ಜನವರಿ 15, 2021 ರಂದು ಬರೆದ ಪತ್ರದಲ್ಲಿ ವಿಜ್ಞಾನಕ್ಕಾಗಿ ತಮ್ಮ ಕಾರ್ಯಸೂಚಿಯನ್ನು ಉಲ್ಲೇಖಿಸಿದ್ದಾರೆ. ಪತ್ರವು ಐದು ಅಂಶಗಳ ಯೋಜನೆಯನ್ನು ವಿವರಿಸಿದೆ, ಇದರಲ್ಲಿ ಅಧ್ಯಕ್ಷ ಬೈಡೆನ್ ಈ ಮೊದಲು ಸಲಹೆಗಾರ್ತಿಯಾಗಿದ್ದ ಎರಿಕ್ ಲ್ಯಾಂಡರ್ ಅವರಿಗೆ ಸಾರ್ವಜನಿಕ ಆರೋಗ್ಯವನ್ನು ಸುಧಾರಿಸಲು ಮತ್ತು ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಸಲಹೆ ನೀಡುವಂತೆ ಸೂಚಿಸಿದ್ದರು.

ವೈಜ್ಞಾನಿಕ ಕ್ಷೇತ್ರದ ಅಭಿವೃದ್ಧಿಗೆ ಯತ್ನ

ವೈಜ್ಞಾನಿಕ ಕ್ಷೇತ್ರದ ಅಭಿವೃದ್ಧಿಗೆ ಯತ್ನ

ಕೃತಕ ಬುದ್ಧಿಮತ್ತೆಯಂತಹ (ಎಐ) ಉದಯೋನ್ಮುಖ ಹೈಟೆಕ್ ಕ್ಷೇತ್ರಗಳಲ್ಲಿ ಅಮೆರಿಕ ಅಗ್ರ ಸ್ಥಾನದಲ್ಲಿ ಉಳಿಸಿಕೊಳ್ಳಲು ಬೈಡೆನ್ ಶ್ರಮಿಸುತ್ತಿದ್ದಾರೆ. ಇದೇ ಸಮಯದಲ್ಲಿ, ಅಧ್ಯಕ್ಷ ಜೋ ಬೈಡೆನ್ ಕ್ವಾಂಟಮ್ ಮಾಹಿತಿ ವಿಜ್ಞಾನ ಸಂಶೋಧನಾ ಸಮುದಾಯದಲ್ಲಿ ಅಸಮಾನತೆ ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಆರತಿ ಪ್ರಭಾಕರ್ ಅವರ ಡಿಎಪಿಆರ್ ಎ (DARPA) ಯ ನಿಕಟ ಜ್ಞಾನವು ಹೊಸ ಅಡ್ವಾನ್ಸ್ಡ್ ರಿಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ ಫಾರ್ ಹೆಲ್ತ್ (ARPA-H) ಮತ್ತು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನದಲ್ಲಿ (NSF) ಹೊಸ ತಂತ್ರಜ್ಞಾನ ನಿರ್ದೇಶನಾಲಯದಲ್ಲಿ ಬೈಡೆನ್ ಆಡಳಿತಕ್ಕೆ ಸಹಾಯ ಮಾಡುತ್ತದೆ.

English summary
United States President Joe Biden nominated Indian-origin physicist Aarti Prabhakar as his scientific advisor this week. The 63-year-old Aarti Prabhakar will replace Eric Lander, who resigned in February 7 on grounds of bullying his staff and creating a hostile work environment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X