ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಟಾಪ್ ಮೋಸ್ಟ್ ಗುಪ್ತಚರ ಸಂಸ್ಥೆಯಲ್ಲೂ ಭಾರತೀಯರ ಛಾಪು; ಸಿಐಎ ಸಿಟಿಒ ಮೂಲಚಂದಾನಿ

|
Google Oneindia Kannada News

ವಾಷಿಂಗ್ಟನ್, ಮೇ 3: ವಿಶ್ವದ ಅನೇಕ ದೊಡ್ಡ ಕಂಪನಿಗಳಿಗೆ ಭಾರತೀಯರು ಸಿಇಒಗಳಾಗಿ ಮಿಂಚುತ್ತಿದ್ದಾರೆ. ಭಾರತೀಯರ ಪ್ರಾಬಲ್ಯ ಇಲ್ಲದ ಕ್ಷೇತ್ರಗಳೇ ವಿರಳ ಎನ್ನುವಂತಾಗಿದೆ. ಈಗ ವಿಶ್ವದ ಅತ್ಯಂತ ಪ್ರಬಲ ಗುಪ್ತಚರ ಸಂಸ್ಥೆ ಎಂದು ಪರಿಗಣಿಸಲಾಗಿರುವ ಅಮೆರಿಕದ ಸಿಐಎಯ ಉನ್ನತಮಟ್ಟದ ಹುದ್ದೆಗೆ ಭಾರತಿಯರೊಬ್ಬರು ಲಗ್ಗೆಹಾಕಿದ್ದಾರೆ. ಭಾರತ ಸಂಜಾತ ನಂದ್ ಮೂಲಚಂದಾನಿ (Nand Mulchandani) ಅವರು ಸಿಐಎ ಸಂಸ್ಥೆಯ ಸಿಟಿಒ ಅಗಿ ನೇಮಕವಾಗಿದ್ದಾರೆ. ಅಷ್ಟೇ ಅಲ್ಲ, ಸಿಐಎ ಸಂಸ್ಥೆಯ ಚೊಚ್ಚಲ ಸಿಟಿಒ ಎಂಬ ಸಾರ್ವಕಾಲಿಕ ದಾಖಲೆಗೆ ಮೂಲಚಂದಾನಿ ಬಾಜನರಾದಂತಾಗಿದೆ.

ಅಮೆರಿಕದ ಸೆಂಟ್ರಲ್ ಇಂಟೆಲಿಜೆನ್ಸ್ ಏಜೆನ್ಸಿ (ಸಿಐಎ) ನಿರ್ದೇಶಕ ವಿಲಿಯಮ್ ಜೆ ಬರ್ನ್ಸ್ ಅವರು ನೂತನ ಸಿಟಿಒ ಆಗಿ ನಂದ್ ಮೂಲಚಂದಾನಿ ನೇಮಕವಾಗಿರುವ ವಿಚಾರವನ್ನು ಸಾರ್ವತ್ರಿಕಗೊಳಿಸಿದರು. ತಂತ್ರಜ್ಞಾನದ ಬಗ್ಗೆ ಹೆಚ್ಚು ಗಮನ ಕೊಡಬೇಕೆಂದು ಸೂಚನೆ ಬಂದ ಹಿನ್ನೆಲೆಯಲ್ಲಿ ಚೀಫ್ ಟೆಕ್ನಾಲಜಿ ಆಫೀಸರ್ ಹುದ್ದೆಯನ್ನ ಮೊದಲ ಬಾರಿಗೆ ಸೃಷ್ಟಿಸಲಾಗಿದೆ. ಸಾಕಷ್ಟು ಅನುಭವ ಇರುವ ಮೂಲಚಂದಾನಿ ಅವರು ಈ ತಂಡದ ಭಾಗವಾಗಿ ಆಗಮನವಾಗುತ್ತಿರುವುದು ಬಹಳ ಖುಷಿ ತಂದಿದೆ" ಎಂದು ವಿಲಿಯಮ್ ಜೆ ಬರ್ನ್ಸ್ ಹೇಳಿದ್ದಾರೆ.

ಜೂಲಿಯನ್ ಅಸ್ಸಾಂಜೆ ಗಡಿಪಾರಿಗೆ ಅಧಿಕೃತ ಆದೇಶಜೂಲಿಯನ್ ಅಸ್ಸಾಂಜೆ ಗಡಿಪಾರಿಗೆ ಅಧಿಕೃತ ಆದೇಶ

ನಂದ್ ಮೂಲಚಂದಾನಿ ಅವರು ಕ್ಯಾಲಿಫೋರ್ನಿಯಾದ ಸಿಲಿಕಾನ್ ವ್ಯಾಲಿಯಲ್ಲಿ ವಿವಿಧ ಕಂಪನಿಗಳಲ್ಲಿ 25 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಅಮೆರಿಕದ ರಕ್ಷಣಾ ಇಲಾಖೆಯಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ. ತಮ್ಮನ್ನು ಸಿಐಎ ಸಂಸ್ಥೆಯ ಸಿಟಿಒ ಆಗಿ

Indian origin Nand Mulchandani the CIAs first CTO

ನೇಮಕವಾಗಿರುವ ಬಗ್ಗೆ ನಂದ್ ಮೂಲಚಂದಾನಿ ಹೇಳಿದ್ದು ಹೀಗೆ:
"ಸಿಐಎಯಲ್ಲಿ ಈ ಹುದ್ದೆ ಸಿಗುತ್ತಿರುವುದ ನನ್ನ ಪಾಲಿಗೆ ಸಿಕ್ಕ ಗೌರವ. ಸಿಐಎಯಲ್ಲಿರುವ ಅಪ್ರತಿಮ ತಂತ್ರಜ್ಞಾನ ನಿಪುಣರ ತಂಡದೊಂದಿಗೆ ಸೇರಿ ಸಮಗ್ರ ತಂತ್ರಜ್ಞಾನ ಕಾರ್ಯತಂತ್ರ ರೂಪಿಸಲು ಎದಿರುನೋಡುತ್ತಿದ್ದೇನೆ" ಎಂದಿದ್ದಾರೆ.

ಸಿಟಿಒ ಆಗಿ ಮೂಲಚಂದಾನಿ ಜವಾಬ್ದಾರಿ ಏನಿರುತ್ತೆ?
ಈಗಿನ ಕಾಲಘಟ್ಟದಲ್ಲಿ ತಂತ್ರಜ್ಞಾನ ದಿನದಿನೇ ಆವಿಷ್ಕಾರಗೊಳ್ಳುತ್ತಲೇ ಇರುತ್ತದೆ. ಹೊಸಹೊಸ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಹಿಸುತ್ತಲೇ ಇರುತ್ತದೆ. ಶತ್ರುಗಳ ಚಲನವಲನ ಇತ್ಯಾದಿ ಮಾಹಿತಿಯನ್ನು ಬಹಳ ರಹಸ್ಯವಾಗಿ ಪತ್ತೆ ಮಾಡುವ ಗುಪ್ತಚರ ಸಂಸ್ಥೆಗಳು ತಾಂತ್ರಿಕವಾಗಿ ಬಹಳ ಪರಿಪಕ್ವವಾಗಿರಬೇಕು, ಅಪ್‌ಡೇಟ್ ಆಗಿರಬೇಕು. ಈ ಹಿನ್ನೆಲೆಯಲ್ಲಿ ಸಿಐಎಯ ಏಜೆಂಟ್‌ಗಳಾಗಲೀ, ಗುಪ್ತಚರ ಕಾರ್ಯಗಳಿಗಾಗಲೀ ಅತ್ಯಾಧುನಿಕ ತಂತ್ರಜ್ಞಾನದ ಬೆಂಬಲ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಿಐಎಗೆ ಸೂಕ್ತ ತಂತ್ರಜ್ಞಾನ ವ್ಯವಸ್ಥೆ ಹೊಣೆಗಾರಿಕೆ ನಂದ್ ಮೂಲಚಂದಾನಿ ಅವರ ಹೆಗಲಿಗೆ ಇದೆ.

50ನೇ ದಿನದ ವಿಶೇಷ: ರಷ್ಯಾ ಕಾದಾಟ V/s ಉಕ್ರೇನ್‌ ಬತ್ತಳಿಕೆಗೆ ಯುಎಸ್ ಶಸ್ತ್ರಾಸ್ತ್ರ!50ನೇ ದಿನದ ವಿಶೇಷ: ರಷ್ಯಾ ಕಾದಾಟ V/s ಉಕ್ರೇನ್‌ ಬತ್ತಳಿಕೆಗೆ ಯುಎಸ್ ಶಸ್ತ್ರಾಸ್ತ್ರ!

ನಂದ್ ಮೂಲಚಂದಾನಿ ಯಾರು?
70 ವರ್ಷದ ನಂದ್ ಮೂಲಚಂದಾನಿ ಅವರು ಹುಟ್ಟಿದ್ದು ಭಾರತದಲ್ಲಿ. ಅವರ ಶಾಲಾ ಶಿಕ್ಷಣ ದೆಹಲಿಯಲ್ಲೇ ಆಗಿದ್ದು. ಅಮೆರಿಕದ ನ್ಯೂಯಾರ್ಕ್‌ನ ಕಾರ್ನೆಲ್ ಯೂನಿವರ್ಸಿಟಿಯಲ್ಲಿ ಪದವಿ, ಸ್ಟಾನ್‌ಫೋರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಎಂಎಸ್, ಹಾರ್ವರ್ಡ್‌ನಲ್ಲಿ ಮತ್ತೊಂದು ಮಾಸ್ಟರ್ಸ್ ಪದವಿ, ಹೀಗೆ ಸಾಕಷ್ಟು ಶಿಕ್ಷಣ ಪಡೆದಿದ್ದಾರೆ.

ಒಬ್ಲಿಕ್ಸ್ (Oblix), ಡಿಟರ್ಮಿನಾ (Determina), ಓಪನ್ ಡಿಎನ್‌ಎಸ್ (OpenDNS), ಸ್ಕೇಲ್ಎಕ್ಸ್‌ಟ್ರೀಮ್ (ScaleXtreme) ಕಂಪನಿಗಳ ಸ್ಥಾಪಕರಾದವರು. ಹೀಗೆ ಹೊಸ ತಂತ್ರಜ್ಞಾನಗಳನ್ನ ಆವಿಷ್ಕರಿಸುವುದರಲ್ಲಿ ಅವರು ಸೈ ಎನಿಸಿದವರು. ಇವರು ಸ್ಥಾಪಿಸಿದ ಕಂಪನಿಗಳನ್ನ ಓರಾಕಲ್, ಸಿಸ್ಕೋ, ವಿಎಂವೇರ್ (VMware), ಸಿಟ್ರಿಕ್ಸ್ (Citrix) ಸಂಸ್ಥೆಗಳು ಖರೀದಿ ಮಾಡಿವೆ.

Recommended Video

DJ ಹಾಡಿಗೆ ಅಜ್ಜಿಯ ಸೂಪರ್ ಎನರ್ಜಿಟಿಕ್ ಡ್ಯಾನ್ಸ್ ವೈರಲ್ | Oneindia Kannada

ನಂದ್ ಮೂಲಚಂದಾನಿ ಅವರಿಗೆ ಸಿಎಐಎಯಲ್ಲಿ ಸಿಟಿಒ ಸ್ಥಾನ ಸಿಗಲು ಮತ್ತೊಂದು ಪ್ರಮುಖ ಕಾರಣ ಎಂದರೆ ರಕ್ಷಣಾ ಇಲಾಖೆಯಲ್ಲಿ ಅವರಿಗಿರುವ ಅನುಭವ. ಅಮೆರಿಕದ ರಕ್ಷಣಾ ಇಲಾಖೆಯ ಜಂಟಿ ಕೃತಕ ಬುದ್ಧಿಮತ್ತೆ ಕೇಂದ್ರದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಇವರ ತಾಂತ್ರಿಕ ನೈಪುಣ್ಯತೆ ಗಮನಿಸಿ ಈಗ ಇನ್ನೂ ಮಹತ್ತರವಾದ ಜವಾಬ್ದಾರಿ ಕೊಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Indian-origin Nand Mulchandani has been appointed as the first Chief Technology Officer of the United States intelligence agency CIA.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X