• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆಜಾನ್ ಮಳೆಕಾಡು ಉಳಿಸಲು ಭಾರತೀಯನ ಅವಿರತ ಶ್ರಮ

|
Google Oneindia Kannada News

ಇದು ಭಾರತೀಯನ ಕಥೆ, ಭೂಮಿ ಪಾಲಿನ ಆಕ್ಸಿಜೆನ್ ಚೀಲ ಉಳಿಸಲು ಹೋರಾಡುತ್ತಿರುವ ಧೀರನ ಸಾಹಸ. ಅಮೆಜಾನ್ ಮಳೆಕಾಡು ಯಾರಿಗೆ ಗೊತ್ತಿಲ್ಲ ಹೇಳಿ..? ಶಾಲಾ ಪುಸ್ತಕದಿಂದ ಹಿಡಿದು, ಪ್ರತಿನಿತ್ಯ ಸುದ್ದಿಗಳಲ್ಲೂ ಹರಿದಾಡುವ ಈ ನಿತ್ಯಹರಿದ್ವರ್ಣ ಕಾಡು ಅಳಿವಿನಂಚಿಗೆ ಬಂದು ತಲುಪಿದೆ. ಭೂಮಿ ಪಾಲಿನ ಆಕ್ಸಿಜೆನ್ ಚೀಲ ಎಂದೇ ಕರೆಸಿಕೊಳ್ಳುವ 'ಅಮೆಜಾನ್' ಮಳೆಕಾಡು, ದಿನದಿಂದ ದಿನಕ್ಕೆ ನಾಶವಾಗುತ್ತಿದೆ.

ಹೀಗಾಗಿ ಈ ಕಾಡನ್ನು ರಕ್ಷಿಸಲು ಲಕ್ಷಾಂತರ ಸ್ವಯಂ ಸೇವಕರು ಹೋರಾಡುತ್ತಿದ್ದಾರೆ. ಅದರಲ್ಲೂ ಭಾರತೀಯನೊಬ್ಬ 'ಅಮೆಜಾನ್‌' ರಕ್ಷಣೆಗಾಗಿ ಪಣತೊಟ್ಟು ನಿಂತಿದ್ದು, 30 ವರ್ಷಗಳಿಂದಲೂ ಕಾಡಿನ ಅಸ್ಮಿತೆ ಕಾಪಾಡಲು ಹೋರಾಡುತ್ತಿದ್ದಾರೆ. ಇಂತಹ ಸ್ಫೂರ್ತಿದಾಯಕ ಕೆಲಸ ಮಾಡುತ್ತಿರುವ ವ್ಯಕ್ತಿಯೇ ಕೇರಳ ಮೂಲದ ಶಾಜಿ ಥಾಮಸ್.

ಭೂಮಿಗೆ ಹೃದಯಾಘಾತ..! ಮಳೆ ಕಾಡನ್ನು ಕಿತ್ತು ತಿನ್ನುತ್ತಿರುವ ಕಿರಾತಕರು..!ಭೂಮಿಗೆ ಹೃದಯಾಘಾತ..! ಮಳೆ ಕಾಡನ್ನು ಕಿತ್ತು ತಿನ್ನುತ್ತಿರುವ ಕಿರಾತಕರು..!

1989ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬ್ರೆಜಿಲ್‌ಗೆ ತೆರಳಿದ ಶಾಜಿ ಥಾಮಸ್ ಅಲ್ಲಿಂದ ಹಿಂದಿರುಗುವ ಯೋಚನೆ ಮಾಡಲಿಲ್ಲ. ಇಲ್ಲಿ ಹುಟ್ಟಿ ಅಲ್ಲಿ ಬೆಳೆದ ಶಾಜಿ ಥಾಮಸ್ ವೃತ್ತಿಯಲ್ಲಿ ವಕೀಲರೂ ಆಗಿದ್ದವರು. ಡಾಕ್ಟರೇಟ್‌ನ್ನೂ ಪಡೆದಿರುವ ಶಾಜಿ ಥಾಮಸ್ ಪ್ರಕೃತಿಯ ಮಗನಾಗಿ ಅಮೆಜಾನ್ ತಪ್ಪಲಿನಲ್ಲೇ ಬದುಕುತ್ತಿದ್ದಾರೆ.

ಕಾಡು ಕಾಪಾಡುವುದು ಸುಲಭವಲ್ಲ..!

ಕಾಡು ಕಾಪಾಡುವುದು ಸುಲಭವಲ್ಲ..!

ಅಮೆಜಾನ್ ಕಾಡಿನಲ್ಲಿ ಬೆಳೆದ ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಶಾಜಿ ಥಾಮಸ್, ಅಲ್ಲಿನ ಭಯಾನಕತೆ ಬಗ್ಗೆಯೂ ತಿಳಿಸುತ್ತಾರೆ. ಅಮೆಜಾನ್ ಕಾಡು ಕಳ್ಳರು ಹಾಗೂ ದಂಧೆಕೋರರ ಅಡ್ಡೆಯಾಗಿದೆ. ಅಲ್ಲಿನ ಸ್ಥಳೀಯ ನಿವಾಸಿಗಳು ಜೀವನ ನಡೆಸುವುದೇ ಕಷ್ಟಕರವಾಗಿದೆ. ಇನ್ನು ಕಾಡಿನಲ್ಲಿ ನಡೆಯುವ ಅನಾಚಾರಗಳ ಬಗ್ಗೆ ಧ್ವನಿ ಎತ್ತಿದ್ದರೆ ಅಂತಹವರನ್ನು ಹತ್ಯೆ ಮಾಡುವುದಕ್ಕೂ ದಂಧೆಕೋರರು ಹಿಂಜರಿಯುವುದಿಲ್ಲ. ಇಂತಹ ಪರಿಸ್ಥಿತಿಯ ನಡುವೆ ಶಾಜಿ ಥಾಮಸ್ ಮಹತ್ತರ ಸಾಧನೆಯನ್ನೇ ಮಾಡಿದ್ದಾರೆ. ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ ಅಮೆಜಾನ್ ರಕ್ಷಿಸಲು ಹಗಲು, ರಾತ್ರಿ ಎನ್ನದೆ ಶ್ರಮಪಡುತ್ತಿದ್ದಾರೆ.

ಬೀಫ್ ಮಾಫಿಯಾ ದೌರ್ಜನ್ಯ

ಬೀಫ್ ಮಾಫಿಯಾ ದೌರ್ಜನ್ಯ

ಅಮೆಜಾನ್ ಮೇಲೆ ದೌರ್ಜನ್ಯ ವಿಪರೀತವಾಗಿದೆ. ಸೋಯಾಬೀನ್, ಬೀಫ್ ಎಕ್ಸ್‌ಪೋರ್ಟ್ ಉದ್ಯಮದ ಚಂಡಮಾರುತಕ್ಕೆ ಸಿಲುಕಿರುವ ಅಮೆಜಾನ್ ಕಾಡು ನಾಶವಾಗಿ ಹೋಗುತ್ತಿದೆ. ಅಮೆಜಾನ್ ರೈನ್ ಫಾರೆಸ್ಟ್‌ ನಾಶಗೊಳಿಸುತ್ತಿರುವ ಎರಡೂ ಉದ್ಯಮಗಳ ಬಗ್ಗೆ ಇತ್ತೀಚೆಗೆ ರಿವೀಲ್ ಆದ ಮಾಹಿತಿ ಬೆಚ್ಚಿಬೀಳಿಸುವಂತಿದೆ. ಈಗಾಗಲೇ ಅಮೆಜಾನ್ ಕಾಡಿನ ಶೇಕಡ 20ರಷ್ಟು ಭಾಗ ಹಾಳಾಗಿ ಹೋಗಿದೆ. ಕಾಡುಗಳ್ಳರು, ಕೃಷಿ ಕಾರಣ ನೀಡಿ ಕಾಡನ್ನ ಕಡಿಯುತ್ತಿರುವವರು ಹಾಗೂ ಬೀಫ್ ಮಾಫಿಯಾ ನಿತ್ಯಹರಿದ್ವರ್ಣ ಕಾಡನ್ನ ನಾಶ ಮಾಡುತ್ತಿದೆ. ಗ್ಲೋಬಲ್ ವಾರ್ಮಿಂಗ್ ಕೂಪದಲ್ಲಿ ನರಳುತ್ತಿರುವ ಪ್ರಪಂಚಕ್ಕೆ ಇದು ಆಘಾತ ನೀಡಿದೆ. ಅಮೆಜಾನ್ ಕಾಡಿನ ಸುತ್ತಮುತ್ತ ಬೆಳೆಯುವ ಕೃಷಿ ಪದಾರ್ಥ ಹಾಗೂ ಬೀಫ್ ಉದ್ಯಮ ಯುರೋಪ್ ಮೇಲೆ ಅವಲಂಬಿತವಾಗಿದೆ. ಯುರೋಪ್ ರಾಷ್ಟ್ರಗಳಿಗೆ ರಫ್ತು ಮಾಡುತ್ತಿರುವ ಶೇಕಡ 20ರಷ್ಟು ಸೋಯಾ ಹಾಗೂ ಶೇಕಡ 17ರಷ್ಟು ಬೀಫ್ ಅಕ್ರಮವಾಗಿದೆ. ಇನ್ನು ಸ್ಮಗ್ಲರ್‌ಗಳ ಪಾಲಿಗಂತು ಈ ಅಮೆಜಾನ್ ಕಾಡು ಅಕ್ಷಯಪಾತ್ರೆಯಾಗಿದೆ.

ನೂರಾರು ಕೋಟಿ ಎಕರೆ ಅರಣ್ಯ..!

ನೂರಾರು ಕೋಟಿ ಎಕರೆ ಅರಣ್ಯ..!

ಅಮೆಜಾನ್ ಅರಣ್ಯದಲ್ಲಿ ಇರುವಷ್ಟು ಕಾಡು ಜಗತ್ತಿನ ಯಾವ ಭಾಗದಲ್ಲೂ ಸಿಗೋದಕ್ಕೆ ಸಾಧ್ಯವಿಲ್ಲ. ಇದಕ್ಕೆ ಸಹಕಾರಿಯಾಗಿರೋದು ಅಲ್ಲಿನ ವಾತಾವರಣ. ಸುಮಾರು 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ನಷ್ಟು ಅರಣ್ಯ ಪ್ರದೇಶವನ್ನ ಅಮೆಜಾನ್ ಹೊಂದಿದೆ. ಎಕರೆ ಲೆಕ್ಕದಲ್ಲಿ ಹೇಳುವದಾದರೆ ಸುಮಾರು 130 ಕೋಟಿ ಎಕರೆಗೂ ಹೆಚ್ಚಿನ ಪ್ರದೇಶ. ಇಷ್ಟು ಪ್ರಮಾಣದ ಕಾಡಿನಲ್ಲಿ ಬಹುಪಾಲು ಅರಣ್ಯ ಹರಡಿರುವುದು ಬ್ರೆಜಿಲ್‌ನಲ್ಲಿ. ಎಡಬಿಡದೆ ಸುರಿಯುವ ಮಳೆ, ಸದಾ ತುಂಬಿ ಹರಿಯುವ ಅಮೆಜಾನ್ ನದಿಯ ಸುತ್ತಮುತ್ತಲೂ ದಟ್ಟವಾದ ಮರ-ಗಿಡಗಳು ಬೆಳೆದು ನಿಂತಿವೆ. ಜೌಗು ಪ್ರದೇಶವಾಗಿರುವ ಕಾಡು ಊಹೆಗೆ ನಿಲುಕದಷ್ಟು ಅರಣ್ಯ ಸಂಪತ್ತು ಹೊಂದಿದೆ. ಅಧ್ಯಯನವೊಂದರ ಪ್ರಕಾರ ಅಮೆಜಾನ್‌ನ 1 ಹೆಕ್ಟೇರ್ ಪ್ರದೇಶದಲ್ಲಿ 750 ಜಾತಿಯ ಮರಗಳು ಹಾಗೂ 1500ಕ್ಕೂ ಹೆಚ್ಚು ಜಾತಿಯ ಗಿಡಗಳನ್ನ ಕಾಣಬಹುದು. ಕೇವಲ 1 ಹೆಕ್ಟೆರ್ ಅಂದರೆ ಸುಮಾರು 2.47 ಎಕರೆ ಪ್ರದೇಶದಲ್ಲೇ ಇಷ್ಟು ಅರಣ್ಯ ಸಂಪತ್ತು ಅಡಗಿದೆ ಎಂದರೆ 5.5 ಮಿಲಿಯನ್ ಸ್ಕ್ವೇರ್ ಕಿಲೋಮೀಟರ್‌ ಜಾಗದಲ್ಲಿ ಇನ್ನೆಂತಹ ಸಂಪತ್ತು ಇರಬೇಡ ಊಹಿಸಿ.

ಕಾಡುಗಳ್ಳರಿಗೆ ಸ್ವರ್ಗ..!

ಕಾಡುಗಳ್ಳರಿಗೆ ಸ್ವರ್ಗ..!

ಅಮೆಜಾನ್‌ನಲ್ಲಿ ಅದರಲ್ಲೂ ಬ್ರೆಜಿಲ್‌ನಲ್ಲಿ ಹರಡಿರುವ ಅಮೆಜಾನ್ ಅರಣ್ಯದಲ್ಲಿ ಅಡಗಿರುವ ಸಂಪತ್ತಿನ ಮೇಲೆ ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರು ಕಣ್ಣಿಟ್ಟಿದ್ದಾರೆ. ಒಂದ್ಕಡೆ ಕೃಷಿಕರು ಕಾಡು ಕಡಿದು ವ್ಯವಸಾಯ ಮಾಡಿದರೆ, ಸ್ಮಗ್ಲರ್ಸ್ ಇದೇ ಕಾಡಲ್ಲಿ ಕೊಕೇನ್‌ ರೀತಿಯ ಮಾದಕ ವಸ್ತುಗಳನ್ನ ಬೆಳೆಯುತ್ತಿದ್ದಾರೆ. ಇಲ್ಲಿ ಸಿಗುವ ಅಪಾರ ಪ್ರಮಾಣದ ಸಂಪತ್ತು ದೋಚುತ್ತಿದ್ದಾರೆ. ಇಷ್ಟೇ ಅಲ್ಲ ಅಮೆಜಾನ್‌ನ ಎಷ್ಟೋ ಗಣಿಗಾರಿಕೆಗಳು ಸ್ಮಗ್ಲರ್ಸ್ ಹಿಡಿತದಲ್ಲೇ ಇವೆ. ಕಳ್ಳದಾರಿ ಮೂಲಕ ಇಲ್ಲಿ ದೋಚಿದ ಅರಣ್ಯ ಸಂಪತ್ತನ್ನು ಕಾಡುಗಳ್ಳರು ನೆರೆಯ ಅಮೆರಿಕ ಸೇರಿದಂತೆ ದೂರದ ಯೂರೋಪ್ ರಾಷ್ಟ್ರಗಳಿಗೂ ಕದ್ದು ಸಾಗಿಸುತ್ತಿದ್ದಾರೆ. ಹೀಗಾಗಿ ಅಮೆಜಾನ್ ಪಾತ್ರದಲ್ಲಿ ಕತ್ತಲಾದರೆ ಸಾಕು ಜೆಸಿಬಿ, ಗರಗಸ, ಟ್ರಕ್‌ ಆರ್ಭಟ ಜೋರಾಗೇ ಇರುತ್ತೆ. ಬ್ರೆಜಿಲ್‌ನ ಸ್ಥಳೀಯ ಆಡಳಿತಗಳು ಸ್ಮಗ್ಲರ್ಸ್ ಬೆನ್ನಿಗೇ ನಿಂತಿವೆ. ಅಧಿಕಾರಿಗಳ ಕಥೆ ಕೇಳೋದೆ ಬೇಡ, ಅಷ್ಟರಮಟ್ಟಿಗೆ ಕಾಡುಗಳ್ಳರ ಹಾವಳಿ ಇದೆ. ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಲಾಭಕ್ಕಾಗಿ ಬಂಡವಾಳಿಗರ ಫೈಟಿಂಗ್..!

ಅರಣ್ಯ ಸಂಪತ್ತು ಇರುವ ಕಡೆ ಕೈಗಾರಿಕೆಗೆ ಬೇಕಾದ ಕಚ್ಚಾವಸ್ತುಗಳು ಸುಲಭವಾಗಿ ಸಿಗುತ್ತವೆ. ಇದೇ ಕಾರಣಕ್ಕೆ ಅಮೆಜಾನ್ ನಾಡು ಬ್ರೆಜಿಲ್‌ನಲ್ಲಿ ಹೂಡಿಕೆ ಮಾಡಲು ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಈಗಾಗಲೇ ಲಕ್ಷಾಂತರ ಕೋಟಿ ಬಂಡವಾಳ ಇದೇ ಕಾಡನ್ನು ನಂಬಿ ಹರಿದುಬಂದಿದೆ. ಬ್ರೆಜಿಲ್ ಸದ್ಯದ ಮಟ್ಟಿಗೆ ಬಂಡವಾಳಿಗರ ಸ್ವರ್ಗ ಕೂಡ. ಇನ್ನು ಇಲ್ಲಿ ಅಡಗಿರುವ ಅಪಾರ ಗಣಿ ಸಂಪತ್ತು ದೋಚುವ ಹುನ್ನಾರ ಶ್ರೀಮಂತ ರಾಷ್ಟ್ರಗಳದ್ದು. ಹೀಗಾಗಿಯೇ ಅಮೆಜಾನ್‌ನಲ್ಲಿ ಗಣಿಗಾರಿಕೆಗೆ ವಿಶ್ವದ ಬಲಿಷ್ಠ ರಾಷ್ಟ್ರಗಳು ಅತ್ಯುತ್ಸಾಹ ತೋರುತ್ತಿವೆ. ಇದರ ಪರಿಣಾಮವೇ ದಟ್ಟ ಅರಣ್ಯ ನಾಶವಾಗಿ, ಬೆಂಗಾಡು ರೂಪುಗೊಳ್ಳುತ್ತಿದೆ. ಇಲ್ಲಿ ಪ್ರಮುಖವಾಗಿ ಟಿಂಬರ್ ಉದ್ಯಮ, ಫಾರ್ಮಸಿ, ಗಣಿಗಾರಿಕೆಗಳ ಮೇಲೆ ಉದ್ಯಮಿಗಳು ಕಣ್ಣು ನೆಟ್ಟಿದ್ದಾರೆ. ಅಲ್ಲದೆ ಅಪಾರ ಪ್ರಮಾಣದ ಔಷಧಿ ಸಸ್ಯಗಳನ್ನು ಕೂಡ ದೋಚುತ್ತಿದ್ದಾರೆ.

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಮೂಲ ನಿವಾಸಿಗಳ ಜೀವಕ್ಕೆ ಕುತ್ತು

ಅಮೆಜಾನ್ ಅರಣ್ಯ ಸಸ್ಯ ಸಂಕುಲ ಹಾಗೂ ಪ್ರಾಣಿಗಳಿಗೆ ಮಾತ್ರ ಜಾಗ ನೀಡಿಲ್ಲ. ಇಲ್ಲಿ ಸಾವಿರಾರು ಕಾಡು ಜನಾಂಗಗಳು ವಾಸ ಇವೆ. ಇವರೆಲ್ಲಾ ಇಲ್ಲಿನ ಮೂಲ ನಿವಾಸಿಗಳು. ಆದರೆ ಆಧುನಿಕ ಜಗತ್ತಿನಲ್ಲಿ ಇವರಿಗೂ ಇಲ್ಲಿ ಸ್ಥಾನವೇ ಇಲ್ಲದಂತಾಗಿದೆ. ಸ್ಮಗ್ಲರ್ಸ್ ಹಾಗೂ ಕಾಡುಗಳ್ಳರ ಕೈಯಲ್ಲಿ ಸಿಲುಕಿ ಸಾವಿರಾರು ಕಾಡು ಜನರು ಪ್ರಾಣಬಿಟ್ಟಿದ್ದಾರೆ. ಹಲವರು ಕಾಡನ್ನೇ ತೊರೆದು ನಾಡು ಸೇರಿದ್ದಾರೆ. ಇನ್ನೂ ಆಧುನಿಕ ಜಗತ್ತಿನ ಜೊತೆಗೆ ಸಂಪರ್ಕವನ್ನೇ ಹೊಂದದ ಕೆಲವು ಜನಾಂಗಗಳು ಅಲ್ಲೇ ನರಳಿ ನರಳಿ ಪ್ರಾಣಬಿಡುವ ಸ್ಥಿತಿ ಇದೆ. ಆದರೆ ಇದ್ಯಾವುದೂ ಬ್ರೆಜಿಲ್ ಸರ್ಕಾರಕ್ಕೆ ಕಾಣುತ್ತಿಲ್ಲ. ಇದೇ ರೀತಿ ಅಮೆಜಾನ್ ಹರಡಿರುವ ಪೆರು, ಕೊಲಂಬಿಯಾ, ಬೊಲಿವಿಯಾ, ವೆನಿಜುವೆಲಾ ದೇಶಗಳಲ್ಲೂ ಮುಗ್ಧ ಕಾಡುಜನರ ಮಾರಣಹೋಮ ನಡೆಯುತ್ತಿದೆ.

English summary
Indian-origin lawyer Shaji Thomas who went to Brazil in 1989 after getting a scholarship, is fighting to protect Amazon rain forest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X