• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2019 ರಲ್ಲಿ ಭಾರತ ಕಳೆದುಕೊಂಡ 'ರಾಜಕೀಯ ರತ್ನಗಳು'

|

ವರ್ಷ 2019 ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ವರ್ಷದ ಕೊನೆಯಲ್ಲಿ ನಿಂತು ನೋವು-ನಲಿವುಗಳನ್ನು ಲೆಕ್ಕ ಹಾಕಿ ಮುಂದಕ್ಕೆ ಹೋಗುವ ಸಮಯವಿದು.

ರಾಜಕೀಯದ ಮಟ್ಟಿಗೆ 2019 ಅತ್ಯಂತ ಸಕ್ರಿಯ ವರ್ಷ. ಬಾಲಿವುಡ್, ಕ್ರಿಕೆಟ್ ಎರಡನ್ನೂ ಮೀರಿ ರಾಜಕೀಯ ಜನರ ನಡುವಲ್ಲಿ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಏರ್ಪಡಿಸಿತ್ತು. ಉತ್ತಮ, ಕೆಟ್ಟ ಎರಡೂ ರೀತಿಯ ರಾಜಕೀಯ ಸಂದರ್ಭಗಳನ್ನು 2019 ಕಟ್ಟಿಕೊಟ್ಟಿತು.

Flashback 2019; ದೇಶವನ್ನು ಬೆಚ್ಚಿ ಬೀಳಿಸಿದ ಘಟನೆಗಳು

ಹಲವು ಪ್ರಮುಖ ಘಟನೆಗಳು 2019 ರಲ್ಲಿ ನಡೆದವು, ಹಲವು ಹೊಸ ನಾಯಕರ ಉದಯವಾಯಿತು, ಹಲವರು ನೇಪಥ್ಯಕ್ಕೆ ಸರಿದರು. ಇದರ ಜೊತೆಗೆ ಇದೇ ವರ್ಷದಲ್ಲಿ ಹಲವು ರಾಜಕೀಯ ನಾಯಕರೂ ಕಾಲವಾಗಿ ತಮ್ಮ ಗುರುತುಗಳನ್ನು ಬಿಟ್ಟುಹೋದರು. ಇಂಥಹವರನ್ನು ಮತ್ತೊಮ್ಮೆ ಲೇಖನದ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನವಿದು.

2019 ರಲ್ಲಿ ನಿಧನರಾದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ರಾಜಕೀಯ ನಾಯಕರುಗಳ ಪಟ್ಟಿ ಇಲ್ಲಿದೆ.

ಶಿವಾಜಿರಾವ್ ದೇಶ್‌ಮುಖ್-ಜನವರಿ 14

ಶಿವಾಜಿರಾವ್ ದೇಶ್‌ಮುಖ್-ಜನವರಿ 14

ಕಾಂಗ್ರೆಸ್‌ನ ಹಿರಿಯ ನಾಯಕ ಶಿವಾಜಿರಾವ್ ದೇಶ್‌ಮುಖ 84ನೇ ವಯಸ್ಸಿನಲ್ಲಿ ಜನವರಿ 14 ರಂದು ನಿಧನರಾದರು. ಅವರು ಎರಡು ಬಾರಿ ಸಂಸದರಾಗಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಮಹಾರಾಷ್ಟ್ರದ ಪ್ರಮುಖ ಕಾಂಗ್ರೆಸ್‌ ನಾಯಕರಲ್ಲಿ ಒಬ್ಬರಾಗಿದ್ದರು.

ವಿವೇಕಾನಂದ ರೆಡ್ಡಿ- ಮಾರ್ಚ್‌ 15

ವಿವೇಕಾನಂದ ರೆಡ್ಡಿ- ಮಾರ್ಚ್‌ 15

ವಿವೇಕಾನಂದ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು. ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಚಿಕ್ಕಪ್ಪ, ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ತಮ್ಮ ವಿವೇಕಾನಂದ ರೆಡ್ಡಿ ಎರಡು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಅಣ್ಣನೊಂದಿಗೆ ಕಾಂಗ್ರೆಸ್ ನಲ್ಲಿದ್ದ ವೆಂಕನ್ನ ನಂತರ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್ ಸೇರಿದ್ದರು. ಅವರು ಮಾರ್ಚ್‌ 15 ರಂದು ಹೃದಯಾಘಾತದಿಂದ ನಿಧನಹೊಂದಿದರು.

ಜಗನ್ ಚಿಕ್ಕಪ್ಪ ಸಾವು: ಅಸಹಜ ಸಾವಿನ ಬಗ್ಗೆ ದೂರು ದಾಖಲು

ಮನೋಹರ ಪರಿಕ್ಕರ್- ಮಾರ್ಚ್ 17

ಮನೋಹರ ಪರಿಕ್ಕರ್- ಮಾರ್ಚ್ 17

ಬಿಜೆಪಿ ಯ ಪ್ರಮುಖ ನಾಯಕರಾಗಿದ್ದ ಮನೋಹರ ಪರಿಕ್ಕರ್ ಅವರು ಮಾರ್ಚ್‌ 17 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಗೋವಾ ಸಿಎಂ ಆಗಿದ್ದ ಪರಿಕ್ಕರ್ ಕೇಂದ್ರ ರಕ್ಷಣಾ ಮಂತ್ರಿಯಾಗಿ ಹಲವು ಮಹತ್ವದ ಬದಲಾವಣೆಗಳಿಗೆ ಕಾರಣರಾಗಿದ್ದರು.

ಮುಖ್ಯಮಂತ್ರಿ ಹುದ್ದೆಯಲ್ಲಿದ್ದಾಗಲೇ ಸಾವನ್ನಪ್ಪಿದ 18ನೇ ವ್ಯಕ್ತಿ ಮನೋಹರ್ ಪರಿಕರ್

ಶೀಲಾ ದೀಕ್ಷಿತ್- ಜುಲೈ 20

ಶೀಲಾ ದೀಕ್ಷಿತ್- ಜುಲೈ 20

ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಜುಲೈ 20 ರಂದು ನಿಧನ ಹೊಂದಿದರು. ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್, ಕಾಂಗ್ರೆಸ್‌ ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಕಳೆದ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಎರಡರಲ್ಲೂ ಅವರು ಸೋತರು.

'ದೆಹಲಿಯ ರೂಪ ಬದಲಿಸಿದ ನಾಯಕಿ'ಗೆ ಗಣ್ಯರ ಶ್ರದ್ಧಾಂಜಲಿ

ಸುಷ್ಮಾಸ್ವರಾಜ್- ಆಗಸ್ಟ್ 6

ಸುಷ್ಮಾಸ್ವರಾಜ್- ಆಗಸ್ಟ್ 6

ಭಾರತ ಕಂಡ ದಿಟ್ಟ ಮಹಿಳಾ ರಾಜಕಾರಣಿಗರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6 ರಂದು ಅನಾರೋಗ್ಯದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬಿಜೆಪಿ ನಾಯಕಿಯಾಗಿ ಕೇಂದ್ರ ಸಚಿವೆಯಾಗಿ ಅವರು ಮೂಡಿಸಿದ ಛಾಪು ಬಹುಕಾಲ ಭಾರತದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ. ಟ್ವಿಟ್ಟರ್ ಅನ್ನು ಹೆಲ್ಪ್‌ಲೈನ್ ಆಗಿ ಬದಲಿಸಿದ ಶ್ರೇಯ ಅವರಿಗೇ ಸಲ್ಲಬೇಕು.

ಸುಷ್ಮಾ ಸ್ವರಾಜ್‌ಗೆ ಶಸ್ತ್ರಚಿಕಿತ್ಸೆ ಮಾಡೊಲ್ಲ ಎಂದಿದ್ದ ವೈದ್ಯರು: ಸತ್ಯ ಬಿಚ್ಚಿಟ್ಟ ಪತಿ

ಅರುಣ್ ಜೇಟ್ಲಿ- ಆಗಸ್ಟ್ 24

ಅರುಣ್ ಜೇಟ್ಲಿ- ಆಗಸ್ಟ್ 24

ಬಿಜೆಪಿಯ ಎತ್ತರದ ನಾಯಕರಲ್ಲಿ ಅರುಣ್ ಜೇಟ್ಲಿ ಸಹ ಒಬ್ಬರು. ನೋಟ್‌ ರದ್ದು, ಜಿಎಸ್‌ಟಿ ಅಂತಹಾ ಮಹತ್ವದ ನಿರ್ಣಯ ಕೈಗೊಂಡಾಗ ಅವರು ಹಣಕಾಸು ಸಚಿವರಾಗಿದ್ದರು. ಜೇಟ್ಲಿ ಅವರು ಆಗಸ್ಟ್ 24 ರಂದು ನಿಧನರಾದರು. ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಅವರಿಗೆ 66 ವರ್ಷ ವಯಸ್ಸಾಗಿತ್ತು.

ಸರಕಾರಿ ಗೌರವದೊಂದಿಗೆ ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ಅಂತ್ಯ ಸಂಸ್ಕಾರ

ರಾಮ್‌ಜೆಠ್‌ ಮಲಾನಿ- ಸೆಪ್ಟೆಂಬರ್ 08

ರಾಮ್‌ಜೆಠ್‌ ಮಲಾನಿ- ಸೆಪ್ಟೆಂಬರ್ 08

ಕೇಂದ್ರ ಮಂತ್ರಿಗಳೂ, ಹಿರಿಯ ನ್ಯಾಯವಾದಿಗಳೂ ಆಗಿದ್ದ ರಾಮ್‌ಜೇಠ್ ಮಲಾನಿ ಅವರು ಸೆಪ್ಟೆಂಬರ್ 8 ರಂದು ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಮೋದಿಯನ್ನು ಬೆಂಬಲಿಸಿದ್ದ ಅವರು, ನಂತರ ಮೋದಿಯನ್ನು ತೆಗಳಿದ್ದರು.

ಹಿರಿಯ ವಕೀಲ ರಾಮ್ ಜೇಠ್ಮಲಾನಿ ವಿಧಿವಶ

ಜೈಪಾಲ್ ರೆಡ್ಡಿ- ಜುಲೈ 28

ಜೈಪಾಲ್ ರೆಡ್ಡಿ- ಜುಲೈ 28

ಐದು ಬಾರಿ ಸಂಸದರಾಗಿ, ಕೇಂದ್ರದ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್‌ ನ ಹಿರಿಯ ನಾಯಕ ಜೈಪಾಲ್ ರೆಡ್ಡಿ ಅವರು ಜುಲೈ 28 ರಂದು ಮರಣಹೊಂದಿದರು. ಪಕ್ಷಾತೀತವಾಗಿ ಹಲವಾರು ರಾಜಕೀಯ ನಾಯರ ಆತ್ಮೀಯ ಸ್ನೇಹವನ್ನು ಜೈಪಾಲ್ ರೆಡ್ಡಿ ಸಂಪಾದಿಸಿದ್ದರು.

ಸದನದಲ್ಲೇ ಗಳ-ಗಳನೇ ಅತ್ತ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು

English summary
India lost many politicians in 2019. Here is the list of famous politicians who passed away in 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X