ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

74ನೇ ಸೇನಾ ದಿನ: ಭಾರತದಲ್ಲಿ ಈ ಆಚರಣೆ ಇತಿಹಾಸ, ಮಹತ್ವ ಮತ್ತು ಪ್ರಾಮುಖ್ಯತೆ

|
Google Oneindia Kannada News

ನವದೆಹಲಿ, ಜನವರಿ 13: ಭಾರತೀಯ ಸೇನಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವುದಕ್ಕೆ ನಿರ್ಧರಿಸಲಾಗಿದೆ. ನವದೆಹಲಿಯಲ್ಲಿ ನಡೆಯಲಿರುವ ಸೇನಾ ದಿನಾಚರಣೆ ವೇಳೆ ಭಾರತೀಯ ಸೇನಾ ಯೋಧರಿಗೆ ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿ ವಿನ್ಯಾಸಗೊಳಿಸಿರುವ ಹೊಸ ಸಮವಸ್ತ್ರವನ್ನು ಪರಿಚಯಿಸಲಾಗುತ್ತದೆ.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಂಡಿದ್ದನ್ನು ಗುರುತಿಸಿ ಭಾರತದಲ್ಲಿ ಪ್ರತಿವರ್ಷ ಜನವರಿ 15 ರಂದು ಸೇನಾ ದಿನವನ್ನು ಆಚರಿಸಲಾಗುತ್ತದೆ. ಕೆ. ಎಂ.ಕಾರ್ಯಪ್ಪ ಅವರು ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ 15 ಜನವರಿ 1949 ರಂದು ಅಧಿಕಾರ ವಹಿಸಿಕೊಂಡಿದ್ದರು.

ರಾಷ್ಟ್ರೀಯ ಸೇನಾ ದಿನ: ರಾಷ್ಟ್ರಪತಿ, ಪ್ರಧಾನಿಯಿಂದ ಯೋಧರ ಸ್ಮರಣೆರಾಷ್ಟ್ರೀಯ ಸೇನಾ ದಿನ: ರಾಷ್ಟ್ರಪತಿ, ಪ್ರಧಾನಿಯಿಂದ ಯೋಧರ ಸ್ಮರಣೆ

ಭಾರತೀಯ ಸೇನಾ ದಿನಾಚರಣೆಯ ಅಂಗವಾಗಿ ಪ್ರತಿವರ್ಷ ಸೇನಾ ಪರೇಡ್, ವೀರಯೋಧರ ಪ್ರಶಸ್ತಿ ಪ್ರದಾನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. 2022ರಲ್ಲಿ 74ನೇ ಭಾರತೀಯ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಈ ಆಚರಣೆ ಹಿಂದಿನ ಕಾರಣ ಮತ್ತು ಪ್ರಾಧಾನ್ಯತೆಯ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಭಾರತೀಯ ಸೇನಾ ದಿನದ ಮಹತ್ವ ಮತ್ತು ಇತಿಹಾಸ

ಭಾರತೀಯ ಸೇನಾ ದಿನದ ಮಹತ್ವ ಮತ್ತು ಇತಿಹಾಸ

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಮೊದಲ ಬಾರಿಗೆ 1895ರ ಏಪ್ರಿಲ್ 1ರಂದು ಭಾರತೀಯ ಸೇನೆಯನ್ನು ಸ್ಥಾಪಿಸಲಾಗಿದ್ದು, ಅಂದು ಅದನ್ನು ಬ್ರಿಟಿಷ್ ಭಾರತೀಯ ಸೇನೆ ಎಂದು ಕರೆಯಲಾಗುತ್ತಿತ್ತು. 1947ರ ಆಗಸ್ಟ್ 15ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಆದರೆ 1949ರ ಜನವರಿ 15ರಂದು ಮೊದಲ ಬಾರಿಗೆ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಆಗಿ ಕೆ. ಎಂ.ಕಾರ್ಯಪ್ಪ ಅಧಿಕಾರ ವಹಿಸಿಕೊಂಡರು. ಅಂದು ಫ್ರಾನ್ಸಿಸ್ ಬಟ್ಚರ್ ಕೆ ಎಂ ಕಾರ್ಯಪ್ಪನವರಿಗೆ ಅಧಿಕಾರ ಹಸ್ತಾಂತರಿಸಿದರು. ಬ್ರಿಟಿಷ್ ಅಧಿಕಾರಿಯಿಂದ ಅಧಿಕಾರ ಹಸ್ತಾಂತರವಾದ ದಿನವು ಭಾರತೀಯ ಇತಿಹಾಸದಲ್ಲಿ ಮಹತ್ವ ಪಡೆದುಕೊಂಡಿದ್ದು, ಇದರ ಜ್ಞಾಪಕಾರ್ಥವಾಗಿ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಇದೇ ದಿನದಂದು ದೇಶಕ್ಕಾಗಿ ಪ್ರಾಣತ್ಯಾಗ ಮಾಡಿರುವ ಯೋಧರಿಗೆ ಗೌರವ ಸಲ್ಲಿಸಲಾಗುತ್ತದೆ.

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಹಿನ್ನೆಲೆ

ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಹಿನ್ನೆಲೆ

ಬ್ರಿಟಿಷ್ ಆಡಳಿತ ಅಂತ್ಯಗೊಂಡ ನಂತರದಲ್ಲಿ ಸ್ವತಂತ್ರ್ಯ ಭಾರತದಲ್ಲಿ ಮೊದಲ ಬಾರಿಗೆ ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂಡವರೇ ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರಿಯಪ್ಪ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಹಾಗೂ ಕೆ ಎಂ ಕಾರ್ಯಪ್ಪ, ಭಾರತೀಯ ಸೇನೆಯ ಪಂಚತಾರಾ ಶ್ರೇಣಿ ಅಧಿಕಾರಿಗಳು ಎನಿಸಿದ್ದಾರೆ. 1920 ರಿಂದ 1950ರವರೆಗೆ ಮೂರು ದಶಕಗಳ ಕಾಲ ಸೇನೆಯಲ್ಲಿ ಕೆ ಎಂ ಕಾರ್ಯಪ್ಪ ಸೇವೆ ಸಲ್ಲಿಸಿದ್ದಾರೆ. 1947ರಲ್ಲಿ ಯುನೈಟೆಡ್ ಕಿಂಗಡಮ್‌‌ನ ಕಿಂಬೆರ್ಲಿಯಲ್ಲಿರುವ ಇಂಪೆರಿಯಲ್ ಡಿಫೆನ್ಸ್ ಕಾಲೇಜಿನಲ್ಲಿ ಯುದ್ಧದ ಉನ್ನತ ಮಟ್ಟದ ತಂತ್ರಗಳ ಬಗ್ಗೆ ತರಬೇತಿ ಪಡೆದ, ಮೊದಲ ಭಾರತೀಯರು ಕಾರ್ಯಪ್ಪ ಆಗಿದ್ದಾರೆ. ಭಾರತೀಯ ಸೇನೆಯ ಕಮಾಂಡರ್-ಇನ್-ಚೀಫ್ ಆಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲು ಕಾರ್ಯಪ್ಪನವರು, ಪೂರ್ವ ಮತ್ತು ಪಶ್ಚಿಮ ವಿಭಾಗದ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ಇವರು ಅಧಿಕೃತವಾಗಿ ಭಾರತೀಯ ಸೇನೆಯ ಮೊದಲ ಕಮಾಂಡರ್-ಇನ್-ಚೀಫ್ ಅಧಿಕಾರ ವಹಿಸಿಕೊಂಡ ದಿನವನ್ನು ಗುರುತಿಸುವ ಉದ್ದೇಶದಿಂದಲೇ ಜನವರಿ 15 ಅನ್ನು ಭಾರತೀಯ ಸೇನಾ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಭಾರತೀಯ ಸೇನಾ ದಿನಾಚರಣೆ 2022ರ ವಿಶೇಷತೆ

ಭಾರತೀಯ ಸೇನಾ ದಿನಾಚರಣೆ 2022ರ ವಿಶೇಷತೆ

ಸ್ವಾತಂತ್ರ್ಯ ಭಾರತದ ಘನತೆ, ಗೌರವ ಮತ್ತು ಸುರಕ್ಷತೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ಭಾರತೀಯ ಸೇನಾ ಯೋಧರನ್ನು ಗೌರವಿಸುವ ಉದ್ದೇಶದಿಂದ ಪ್ರತಿವರ್ಷ ದೇಶದ ಎಲ್ಲಾ ಸೇನಾ ಕೇಂದ್ರ ಕಚೇರಿಗಳಲ್ಲಿ ಸೇನಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ದೇಶಾದ್ಯಂತ ಈ ದಿನವನ್ನು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ದೆಹಲಿ ಕಂಟೇನ್ಮೆಂಟ್ ಕಾರ್ಯಪ್ಪ ಮೈದಾನದಲ್ಲಿ ಪ್ರಮುಖ ಸೇನಾ ಪರೇಡ್ ನಡೆಸಲಾಗುತ್ತದೆ. ಇದೇ ವೇಳೆ ವಿಶೇಷ ಸಾಧನೆ ತೋರಿದ ಯೋಧರಿಗೆ ಹಾಗೂ ದೇಶಕ್ಕಾಗಿ ಪ್ರಾಣ ಅರ್ಪಿಸಿರುವ ವೀರ ಸೇನಾನಿಗಳಿಗೆ ಪ್ರಶಸ್ತಿಗಳ ಮೂಲಕ ಗೌರವ ಸಲ್ಲಿಸಲಾಗುತ್ತದೆ.

ಸೇನಾ ದಿನ 2022ರ ಉಲ್ಲೇಖಗಳು

ಸೇನಾ ದಿನ 2022ರ ಉಲ್ಲೇಖಗಳು

ಭಾರತೀಯ ಸೇನಾ ದಿನವನ್ನು ಆಚರಿಸಲು ಹಾಗೂ ಈ ವಿಶೇಷ ದಿನದ ಕುರಿತು ಶುಭಾಷಯಗಳನ್ನು ತಿಳಿಸುವುದಕ್ಕೆ ಹಲವು ಸಂದೇಶಗಳನ್ನು ಉಲ್ಲೇಖಿಸಲಾಗುತ್ತಿದೆ. ದೇಶದ ಸೇನಾ ಯೋಧರಿಗೆ ಗೌರವ ಅರ್ಪಿಸಲು, ಹೊಸ ಉತ್ಸಾಹವನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಹೇಳುವ ಕೆಲವು ಸಾಲುಗಳನ್ನು ಮುಂದೆ ಓದಿ.

- ಒಂದೋ ನಾನು ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಹಿಂತಿರುಗುತ್ತೇನೆ, ಅಥವಾ ನಾನು ಅದನ್ನು ಸುತ್ತಿ ಹಿಂತಿರುಗುತ್ತೇನೆ, ಆದರೆ ನಾನು ಖಂಡಿತವಾಗಿಯೂ ಹಿಂತಿರುಗುತ್ತೇನೆ: ಕ್ಯಾಪ್ಟನ್ ವಿಕ್ರಮ್ ಬತ್ರಾ.

- "ನನ್ನ ರಕ್ತವನ್ನು ಸಾಬೀತುಪಡಿಸುವ ಮೊದಲು ಸಾವು ಬಂದರೆ, ನಾನು ಸಾವನ್ನು ಕೊಲ್ಲುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ; ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ

- ಒಬ್ಬ ವ್ಯಕ್ತಿ ತಾನು ಸಾಯಲು ಹೆದರುವುದಿಲ್ಲ ಎಂದು ಹೇಳಿದರೆ, ಅವನು ಸುಳ್ಳು ಹೇಳುತ್ತಾನೆ ಅಥವಾ ಅವನು ಗೂರ್ಖಾ ಆಗಿರುತ್ತಾನೆ: ಫೀಲ್ಡ್ ಮಾರ್ಷಲ್ ಮಾಣಿಕ್ ಶಾ

- ಕೆಲವು ಗುರಿಗಳು ತುಂಬಾ ಯೋಗ್ಯವಾಗಿವೆ, ವಿಫಲವಾಗುವುದು ಸಹ ಅದ್ಭುತವಾಗಿರುತ್ತದೆ; ಕ್ಯಾಪ್ಟನ್ ಮನೋಜ್ ಕುಮಾರ್ ಪಾಂಡೆ

- ನಮ್ಮ ಕೊನೆಯ ವ್ಯಕ್ತಿ ಮತ್ತು ನಮ್ಮ ಕೊನೆಯ ಸುತ್ತಿಗೆ ಹೋರಾಡುತ್ತೇನೆಯೇ ವಿನಃ, ನಾನು ಒಂದು ಇಂಚು ಹಿಂದೆ ಸರಿಯುವುದಿಲ್ಲ: ಮೇಜರ್ ಸೋಮನಾಥ್ ಶರ್ಮಾ

- ನಾನು ಅಪಘಾತದಲ್ಲಿ ಸಾಯುವುದಿಲ್ಲ ಅಥವಾ ಯಾವುದೇ ಕಾಯಿಲೆಯಿಂದ ಸಾಯುವುದಿಲ್ಲ, ನನ್ನ ಸಾವು ಕಣ್ಣು ಕೊರೈಸುವ ಹಾಗಿರಲಿದೆ: ಮೇಜರ್ ಸುಧೀರ್ ವಾಲಿಯಾ

- ಕೇವಲ ಆಪ್ತ ಸ್ನೇಹಿತರು ಹಾಗೂ ಬದ್ಧ ವೈರಿಗಳು ಮಾತ್ರ ನಮ್ಮನ್ನು ತಲುವುದಕ್ಕೆ ಸಾಧ್ಯ: ಭಾರತೀಯ ಸೇನೆ

- ನಾವು ಅಚಾನಕ್ಕಾಗಿ ಬದುಕುತ್ತೇವೆ, ನಾವು ಅಚಾನಕ್ಕಾಗಿ ಪ್ರೀತಿಸುತ್ತೇವೆ, ಆದರೆ ವೃತ್ತಿಪರರಾಗಿ ಸಾಯುತ್ತೇವೆ: ಅಧಿಕಾರಿಗಳ ತರಬೇತಿ ಕೇಂದ್ರ, ಚೆನ್ನೈ.

Recommended Video

How to Wear a Mask Properly | Right Ways To wear a Mask | Oneindia Kannada

English summary
Indian Army Day 2022: Date, History, Quotes and Why January 15 is celebrated as Army Day in India in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X