ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಚೀನಾ ಬಗ್ಗು ಬಡಿಯಲು ಭಾರತೀಯ ಸೇನೆಗೆ ನವೀಕೃತ ಶಸ್ತ್ರಾಸ್ತ್ರ!

|
Google Oneindia Kannada News

ನವದೆಹಲಿ, ಅಕ್ಟೋಬರ್ 21: ಭಾರತ ಮತ್ತು ಚೀನಾ ನಡುವಿನ ಪೂರ್ವ ಲಡಾಖ್ ನಡುವಿನ ತಿಕ್ಕಾಟ ಮುಂದುವರಿದಿದೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಪಶ್ಚಿಮ ವಲಯದ ಮೇಲೆ ಗಮನ ಕೇಂದ್ರೀಕರಿಸಿರುವ ಭಾರತೀಯ ಸೇನೆಯು ಪೂರ್ವ ವಲಯದಲ್ಲೂ ತನ್ನ ಶಸ್ತ್ರಾಸ್ತ್ರವನ್ನು ನವೀಕರಿಸುವುದರ ಜೊತೆಗೆ ಶಸ್ತ್ರಾಸ್ತ್ರ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ.

ಭಾರತೀಯ ಸೇನೆಯು ತನ್ನ ವಿಂಟೇಜ್ ಏರ್ ಡಿಫೆನ್ಸ್ ಬೋಫೋರ್ಸ್ ಗನ್‌ಗಳನ್ನು ಅಪ್‌ಗ್ರೇಡ್ ಮಾಡಿದೆ. ಇದರ ಜೊತೆಗೆ ಹೊಸ ಅಲ್ಟ್ರಾ ಲೈಟ್ ಹೊವಿಟ್ಜರ್ M777 ಫಿರಂಗಿ ಬಂದೂಕುಗಳನ್ನು ಗಡಿಗೆ ತಂದು ನಿಲ್ಲಿಸುತ್ತಿದೆ.

ವಿವಾದಿತ ಗಡಿ ಪ್ರದೇಶದಲ್ಲಿ ಸೇನಾ ಚಟುವಟಿಕೆ ಜೊತೆ ಗಸ್ತು ತಿರುಗುವಿಕೆ ಹೆಚ್ಚಿಸಿದ ಚೀನಾ!ವಿವಾದಿತ ಗಡಿ ಪ್ರದೇಶದಲ್ಲಿ ಸೇನಾ ಚಟುವಟಿಕೆ ಜೊತೆ ಗಸ್ತು ತಿರುಗುವಿಕೆ ಹೆಚ್ಚಿಸಿದ ಚೀನಾ!

ದೇಶದ ಭದ್ರತೆ ಮತ್ತು ಕಾರ್ಯತಂತ್ರದ ಕಾಳಜಿ ಹಿನ್ನೆಲೆಯಲ್ಲಿ ಪೂರ್ವ ಕಮಾಂಡ್‌ನ ತವಾಂಗ್ ವಲಯದ ಅಧಿಕಾರಿಗಳು ಈ ಪ್ರದೇಶದಲ್ಲಿ ಲಭ್ಯವಿರುವ ಇಂತಹ ಬಂದೂಕುಗಳು ಮತ್ತು ಫಿರಂಗಿಗಳ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ವಿವರಗಳನ್ನು ಹಂಚಿಕೊಂಡಿಲ್ಲ.

145 ಎಂ777 ಬಂದೂಕು ಖರೀದಿಸಿರುವ ಭಾರತ

145 ಎಂ777 ಬಂದೂಕು ಖರೀದಿಸಿರುವ ಭಾರತ

ಭಾರತ ಒಟ್ಟು 145 ಎಂ777 ಗನ್‌ಗಳನ್ನು ಖರೀದಿಸಿದೆ. 2018ರಲ್ಲಿ ಮೊದಲ ಬಾರಿಗೆ ಈ ಗನ್‌ಗಳನ್ನು ಪರಿಚಯಸಿಲಾಗಿದ್ದು, ಇದುವರೆಗೂ ಈ ಪೈಕಿ ಅರ್ಧದಷ್ಟು ಬಂದೂಕುಗಳನ್ನು ಪೂರೈಕೆ ಮಾಡಲಾಗಿದೆ. ಕಳೆದ ವರ್ಷದಿಂದ ಈ ಅಲ್ಟ್ರಾ ಲೈಟ್ ಆಯುಧಗಳನ್ನು ಪೂರ್ವ ವಲಯದಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಾಸ್ತವ ಗಡಿ ನಿಯಂತ್ರಣ ರೇಖೆಯ ವಲಯದಾದ್ಯಂತ ಮೂರು ರೆಜಿಮೆಂಟ್‌ಗಳನ್ನು ನಿಯೋಜಿಸಲಾಗಿದೆ.

ತವಾಂಗ್ ಸೆಕ್ಟರ್ ನಲ್ಲಿ ಫಿರಂಗಿ ದಳದ ಮುಖ್ಯಸ್ಥರಾಗಿರುವ ಬ್ರಿಗೇಡಿಯರ್ ಸಂಜೀವ್ ಕುಮಾರ್, ಅಲ್ಫ್ರಾ ಲೈಟ್ ಹೊವಿಟ್ಜರ್ ಬೊಫೋರ್ಸ್ ಗನ್ ಮೇಲೆ ಹಲವಾರು ಅನುಕೂಲಗಳನ್ನು ಹೊಂದಿದ್ದು, ಇದು 1980ರ ದಶಕದ ಅಂತ್ಯದಿಂದ ಭಾರತದ ಫಿರಂಗಿದಳದ ಆಧಾರವಾಗಿದೆ ಎಂದಿದ್ದಾರೆ.

ಬೋಫೋರ್ಸ್ ಮತ್ತು ಎಂ777 ಬಂದೂಕಿನ ನಡುವೆ ವ್ಯತ್ಯಾಸ

ಬೋಫೋರ್ಸ್ ಮತ್ತು ಎಂ777 ಬಂದೂಕಿನ ನಡುವೆ ವ್ಯತ್ಯಾಸ

ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಸುಮಾರು 13,000 ಅಡಿ ಎತ್ತರದ ಸ್ಥಳದಲ್ಲಿ ಮಾತನಾಡಿದ ಫಿರಂಗಿ ದಳದ ಮುಖ್ಯಸ್ಥರಾಗಿರುವ ಬ್ರಿಗೇಡಿಯರ್ ಸಂಜೀವ್ ಕುಮಾರ್, "ಬೊಫೋರ್ಸ್‌ಗಿಂತ ಎಂ777 ಫಿರಂಗಿಗಳನ್ನು ಹೊಂದಿರುವ ಪ್ರಯೋಜನಕಾರಿಯಾಗಿದೆ. ಕಡಿಮೆ ತೂಕ ಹೊಂದಿರುವ ಈ ಫಿರಂಗಿಗಳನ್ನು ಹಳೆಯ ಮತ್ತು ಭಾರವಾದ ಬಂದೂಕುಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಾಗದ ಪ್ರದೇಶಗಳಲ್ಲಿ ಇವುಗಳನ್ನು ನಿಯೋಜಿಸಿ ಬಳಸಿಕೊಳ್ಳಬಹುದು. ಚಿನೂಕ್ ಹೆಲಿಕಾಪ್ಟರ್‌ಗಳನ್ನು ಬಳಸಿ ಅವುಗಳನ್ನು ಕಣಿವೆಗಳಿಗೆ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಅಗತ್ಯಕ್ಕೆ ಅನುಗುಣವಾಗಿ ಎಲ್‌ಎಸಿಗೆ ಇನ್ನಷ್ಟು ಮುಂದೆ ಹೋಗಲು ಅನುಕೂಲಕರವಾಗಿದೆ," ಎಂದು ಅವರು ಹೇಳಿದ್ದಾರೆ.

ತವಾಂಗ್‌ನಂತಹ ಎತ್ತರದ ಪ್ರದೇಶಗಳಲ್ಲಿ ಅಪರೂಪದ ವಾತಾವರಣ ಕಡಿಮೆ ಗಾಳಿಯ ಪ್ರತಿರೋಧವನ್ನು ಹೊಂದಿರುತ್ತದೆ. ಇದು ಅದರ ವ್ಯಾಪ್ತಿಯನ್ನು 40 ಕಿಮೀ ಸಾಮರ್ಥ್ಯಕ್ಕಿಂತ ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಬೋಫೋರ್ಸ್ ಗನ್‌ಗಳಿಗಿಂತ ಹೋವಿಟ್ಜರ್‌ಗಳು ಹೆಚ್ಚು ನಿಖರವಾಗಿದೆ ಎಂದು ಕುಮಾರ್ ಹೇಳಿದರು.

ಎಲ್ಎಸಿಯಲ್ಲಿ ಬೋಫೋರ್ಸ್ ಬಂದೂಕು

ಎಲ್ಎಸಿಯಲ್ಲಿ ಬೋಫೋರ್ಸ್ ಬಂದೂಕು

ಭಾರತೀಯ ಸೇನೆಯು ಅದಾಗ್ಯೂ ಬೋಫೋರ್ಸ್ ಬಂದೂಕುಗಳನ್ನು ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸುವುದನ್ನು ಮುಂದುವರಿಸಿದೆ. ಸೇನೆಯು ಅವುಗಳನ್ನು ಹೊಸ ಸ್ವಯಂಚಾಲಿತ ವ್ಯವಸ್ಥೆಗಳೊಂದಿಗೆ ಅಪ್‌ಗ್ರೇಡ್ ಮಾಡಿದೆ. ಅದು ಬೋಫೋರ್ಸ್ ಬಂದೂಕುಗಳ ನಿಖರತೆ ಹೆಚ್ಚಿಸುವುದಲ್ಲದೆ, ಗುಂಡು ಹಾರಿಸುವ ವೇಗವನ್ನೂ ಹೆಚ್ಚಿಸುತ್ತದೆ. ಬೋಫೋರ್ಸ್ ರೆಜಿಮೆಂಟಿನ ಕ್ಯಾಪ್ಟನ್ ಪ್ರತೀಕ್ LAC ಗೆ ಸಮೀಪದಲ್ಲಿ ನಿಯೋಜಿಸಲಾಗಿರುವ "ಕಾಲಾಳುಪಡೆ ತುಕಡಿಗಳಿಗೆ ಗನ್ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಇತ್ತೀಚಿಗೆ ವೇಗ ಮತ್ತು ನಿಖರತೆಯನ್ನು ಹೊಂದಿರುವ ಸೇನೆಯನ್ನು ಗಡಿಯಲ್ಲಿ ನಿಯೋಜಿಸಲಾಗಿದೆ," ಎಂದು ಹೇಳಿದ್ದಾರೆ. ಈ ಬಂದೂಕುಗಳು 40 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಪರಿಣಾಮಕಾರಿ ಶಕ್ತಿಯನ್ನು ಹೊಂದಿವೆ.

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕಾರ್ಯವೇಗ ಹೆಚ್ಚಳ

ಭಾರತೀಯ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕಾರ್ಯವೇಗ ಹೆಚ್ಚಳ

ಮೊದಲು ಎಂಟು ನಿಮಿಷ ತೆಗೆದುಕೊಳ್ಳುತ್ತಿದ್ದ ಕಾರ್ಯಾಚರಣೆಗೆ ಇಂದು ನವೀಕೃತ ಫಿರಂಗಿಗಳನ್ನು ಬಳಸುವುದರಿಂದ ಆ ಕಾರ್ಯವು ಕೆಲವೇ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ. ಸೇನೆಯ ಗುರಿ ತಲುಪುವ ನಿಟ್ಟಿನಲ್ಲಿ ಎಲ್ಲ ಮಾಹಿತಿಯು ಸ್ಥಳಕ್ಕೆ ಬರಲಿದ್ದು, ಅದು ಮುಂದೆ ನಿಯೋಜನೆಯಾದ ಸಿಬ್ಬಂದಿಗೆ ರವಾನೆಯಾಗಲಿದೆ. ಕೆಲವೇ ಸೆಕೆಂಡುಗಳಲ್ಲಿ ಗುಂಡಿನ ದಾಳಿ ನಡೆಸುವ ಶಕ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ನಮ್ಮ ಸೇನೆಯ ಸಾಮರ್ಥ್ಯ ಹೆಚ್ಚಾಗಲಿದ್ದು, ವೈವಿಧ್ಯಮಯವಾಗಿ ಕೆಲಸ ಮಾಡುತ್ತದೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದಾರೆ.

575 ಕೋಟಿ ಬಳಸಿ 200 ಗನ್ ನವೀಕರಣ

575 ಕೋಟಿ ಬಳಸಿ 200 ಗನ್ ನವೀಕರಣ

ಕಳೆದ 1960ರ ಎಲ್ 70 ಸ್ವೀಡಿಷ್ ಏರ್ ಡಿಫೆನ್ಸ್ ಗನ್‌ಗಳನ್ನು ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಅಪ್‌ಗ್ರೇಡ್ ಮಾಡಿದೆ. ಈ ಬಂದೂಕುಗಳು ಸಣ್ಣ ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ವಿಮಾನಗಳು ಸೇರಿದಂತೆ ವೈಮಾನಿಕ ದಾಳಿಗಳು ಮತ್ತು ಬೆದರಿಕೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿದೆ. ಈ ಬಂದೂಕುಗಳ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ 200 ಗನ್‌ಗಳನ್ನು ಸುಮಾರು 575 ಕೋಟಿ ವೆಚ್ಚದಲ್ಲಿ ಅಪ್‌ಗ್ರೇಡ್ ಮಾಡಲಾಗಿದೆ.

ಕ್ಯಾಪ್ಟನ್ ಸರಿಯಾ ಅಬ್ಬಾಸಿ ಈ ಎಲ್ 70 ಸ್ವೀಡಿಷ್ ಏರ್ ಡಿಫೆನ್ಸ್ ಗನ್‌ಗಳ ಬಗ್ಗೆ ಮಾಹಿತಿ ನೀಡಿದ್ದಾರೆ. "ಈ ಬಂದೂಕುಗಳಿಗೆ ಸಂಬಂಧಿಸಿದ ಮಿತಿಗಳನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ನಿವಾರಿಸಲಾಗಿದೆ. ಆದ್ದರಿಂದ ಇದು ಎಲ್ಲಾ ಕೆಳಮಟ್ಟದ ವಾಯು ಬೆದರಿಕೆಗಳ ವಿರುದ್ಧ ಪ್ರಬಲವಾದ ಆಯುಧವಾಗಲಿದೆ. ನಿಗದಿತ ಗುರಿಯನ್ನು ಲಾಕ್ ಇನ್ ಮಾಡಿ ನಂತರ ಅದನ್ನು ಟ್ರ್ಯಾಕ್ ಮಾಡುವ ಗನ್ ಅನ್ನು ಕೈಯಾರೆ ಹಾರಿಸಬೇಕು. ಇದು ನಿಮಿಷಕ್ಕೆ 300 ಸುತ್ತುಗಳವರೆಗೆ ಶೂಟ್ ಮಾಡಬಹುದಾದ ಸಾಮರ್ಥ್ಯವನ್ನು ಹೊಂದಿದೆ," ಎಂದು ಹೇಳಿದ್ದಾರೆ.

ಕೆಲವು ಬಂದೂಕುಗಳು ಎಲ್ಎಸಿ ಬಳಿಯಲ್ಲಿ ನಿಯೋಜನೆ

ಕೆಲವು ಬಂದೂಕುಗಳು ಎಲ್ಎಸಿ ಬಳಿಯಲ್ಲಿ ನಿಯೋಜನೆ

ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ 15 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಈ ಪೈಕಿ ಕೆಲವು ಬಂದೂಕುಗಳನ್ನು ಬಳಸಲು ಉದ್ದೇಶಿಸಲಾಗಿದೆ. ಸುಮಾರು 3.5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಅವುಗಳ ಫೈರಿಂಗ್ ನಿಖರತೆಯನ್ನು ಹೆಚ್ಚಿಸಲು ಹಗಲು, ರಾತ್ರಿ ಟೆಲಿವಿಷನ್ ಕ್ಯಾಮೆರಾ, ಥರ್ಮಲ್ ಇಮೇಜಿಂಗ್ ಕ್ಯಾಮೆರಾ, ವೇಗದ ರೇಡಾರ್‌ನೊಂದಿಗೆ ಹೆಚ್ಚಿನ ರೆಸಲ್ಯೂಶನ್ ಎಲೆಕ್ಟ್ರೋ ಆಪ್ಟಿಕ್ ಸೆನ್ಸರ್‌ಗಳೊಂದಿಗೆ ನವೀಕರಿಸಲಾಗಿದೆ.

ಪೂರ್ವ ಗಡಿಯಲ್ಲಿ ಚೀನಾವನ್ನು ಎದುರಿಸಲು ಈ ಸಿದ್ಧತೆ

ಪೂರ್ವ ಗಡಿಯಲ್ಲಿ ಚೀನಾವನ್ನು ಎದುರಿಸಲು ಈ ಸಿದ್ಧತೆ

ಭಾರತವು ಪೂರ್ವ ಗಡಿಯಲ್ಲಿ ಚೀನಾದ ಆಕ್ರಮಣಕಾರಿ ನೀತಿಯಿಂದ ರಕ್ಷಣಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಈ ಹೊಸ ತಂತ್ರಜ್ಞಾನ ಮತ್ತು ನವೀಕರಣಗಳನ್ನು ಮಾಡಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ. ಏಕೆಂದರೆ ಚೀನಾ ಕೂಡ ಈ ಪ್ರದೇಶದಲ್ಲಿ ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದೆ. ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಮಂಗಳವಾರ ವರದಿ ಮಾಡಿದ್ದು, ಚೀನಾ ಕೂಡ "ಭಾರತದ 100 ಕ್ಕೂ ಹೆಚ್ಚು ಸುಧಾರಿತ ಲಾಂಗ್-ರೇಂಜ್ ರಾಕೆಟ್ ಲಾಂಚರ್‌ಗಳನ್ನು ಭಾರತದ ಎತ್ತರದ ಗಡಿಗಳಿಗೆ ನಿಯೋಜಿಸಿದೆ. ಉಭಯ ಕಡೆಯವರು ತಮ್ಮ ಸುದೀರ್ಘವಾದ ಗಡಿ ವಿವಾದಗಳನ್ನು ಬಗೆಹರಿಸಿಕೊಳ್ಳುವ ಚರ್ಚೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಿವೆ.

ಚೀನಾದಿಂದ ತರಬೇತಿ ಮತ್ತು ಗಸ್ತು ತಿರುಗುವಿಕೆ ಹೆಚ್ಚಳ

ಚೀನಾದಿಂದ ತರಬೇತಿ ಮತ್ತು ಗಸ್ತು ತಿರುಗುವಿಕೆ ಹೆಚ್ಚಳ

"ಚೀನಾದ ಸೇನೆಯಿಂದ ಗಡಿ ಗಸ್ತು ತಿರುಗುವುದು ಮತ್ತು ವಾರ್ಷಿಕ ತರಬೇತಿ ಹೆಚ್ಚಾಗುತ್ತಿದೆ. ಕೆಲವು ಪ್ರದೇಶಗಳಲ್ಲಿ ಪೀಪಲ್ಸ್ ಲಿಬರೇಷನ್ ಆರ್ಮಿಯ ಗಸ್ತುಗಳಲ್ಲಿ ಅಲ್ಪ ಹೆಚ್ಚಳ ಕಂಡುಬಂದಿದ್ದು, ಮತ್ತಷ್ಟು ಯೋಧರನ್ನು ಸೇರಿಸಿರುವ ಶಂಕೆಯಿದೆ. ಆದರೆ ಗಸ್ತು ಮಾದರಿಗಳಲ್ಲಿ ಯಾವುದೇ ರೀತಿಯ ಗಮನಾರ್ಹ ಬದಲಾವಣೆಗಳಿಲ್ಲ. ಆಳ ಪ್ರದೇಶಗಳಲ್ಲಿನ ವ್ಯಾಯಾಮಗಳ ವಾರ್ಷಿಕ ತರಬೇತಿಯಲ್ಲಿ ಸ್ವಲ್ಪ ಹೆಚ್ಚಳವಾಗಿದೆ. ಮೀಸಲುದ ರಚನೆಗಳು ತರಬೇತಿ ಪ್ರದೇಶಗಳಾಗಿ ಉಳಿದುಕೊಂಡಿವೆ," ಎಂದು ಈಸ್ಟರ್ನ್ ಆರ್ಮಿ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.

ಪೂರ್ವ ವಲಯದಲ್ಲಿ ಭಾರತೀಯ ಪಡೆಯ ಶಕ್ತಿ ಪ್ರದರ್ಶನ

ಭಾರತೀಯ ಸೇನೆಯ ಯೋಧರು ಅರುಣಾಚಲ ಪ್ರದೇಶದ ಪೂರ್ವ ವಲಯದ ಒರಟಾದ ಹವಾಮಾನ ಪರಿಸ್ಥಿತಿಗಳು ಮತ್ತು ಭೂಪ್ರದೇಶಗಳಲ್ಲಿ ಆಕ್ರಮಣಕಾರಿ ತರಬೇತಿ, ತೀವ್ರ ಶಸ್ತ್ರಾಭ್ಯಾಸವನ್ನು ನಡೆಸಿದರು. ಆ ಮೂಲಕ ಭಾರತೀಯ ಸೇನೆಯ ಸೈನಿಕರು ಚೀನಾದ ಕಡೆಯಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಶಕ್ತಿ ಪ್ರದರ್ಶಿಸಿದರು.

English summary
Indian Army Adds Firepower With New Inductions And Upgrades In Eastern Sector of LAC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X