ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಮೂಲದ ರಾಧಾ ಅಯ್ಯಂಗಾರ್‌ಗೆ ಅಮೆರಿಕ ರಕ್ಷಣಾ ಇಲಾಖೆಯಲ್ಲಿ ಉನ್ನತ ಹುದ್ದೆ

|
Google Oneindia Kannada News

ವಾಷಿಂಗ್ಟನ್, ಜೂನ್ 16: ಅಮೆರಿಕದಲ್ಲಿ ಭಾರತೀಯ ಮೂಲದ ಸಮುದಾಯದವರು ಸಾಕಷ್ಟು ಮಂದಿ ಉನ್ನತ ಸ್ತರಕ್ಕೆ ಏರಿದ್ದಾರೆ. ಅಮೆರಿಕದ ಅನೇಕ ಕಂಪನಿಗಳಲ್ಲಿ ಸಿಇಒವರೆಗಿನ ಉನ್ನತ ಹುದ್ದೆಗಳನ್ನು ಭಾರತೀಯ ಮೂಲದವರು ಗಿಟ್ಟಿಸಿದ್ದಾರೆ. ಸರಕಾರಿ ಇಲಾಖೆಗಳಲ್ಲೂ ಉನ್ನತ ಹುದ್ದೆ ಹೊಂದಿದ್ಧಾರೆ. ಈ ಪಟ್ಟಿಗೆ ಈಗ ರಾಧಾ ಅಯ್ಯಂಗಾರ್ ಪ್ಲಂಬ್ ಸೇರ್ಪಡೆಯಾಗಿದ್ದಾರೆ. ಭಾರತೀಯ ಅಮೆರಿಕನ್ ಸಮುದಾಯದ ರಾಧಾ ಅಯ್ಯಂಗಾರ್ ಇದೀಗ ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಉಪ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಐದು ವಿವಿಧ ಉನ್ನತ ಹುದ್ದೆಗಳಿಗೆ ಗುರುವಾರ ನೇಮಕಾತಿ ಮಾಡಿಕೊಳ್ಳುವ ವಿಚಾರವನ್ನು ಪ್ರಕಟಿಸಿದ್ಧಾರೆ. ಅಮೆರಿಕ ರಕ್ಷಣಾ ಇಲಾಖೆಯ ಅಕ್ವಿಸಿಶನ್ ಅಂಡ್ ಸಸ್ಟೈನ್ಮೆಂಟ್ ವಿಭಾಗದಲ್ಲಿ ಉಪ ಅಧೀನ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ಹಾಗೆಯೇ, ಸೈಪ್ರಸ್, ಲಾಟ್ವಿಯಾ, ಆಫ್ರಿಕನ್ ಯೂನಿಯನ್‌ಗಳಿಗೆ ಅಮೆರಿಕದ ರಾಯಭಾರಿ ಕಚೇರಿಯ ಉನ್ನತ ಹುದ್ದೆ ನೇಮಕಾತಿಯೂ ಅಗಿದೆ.

ಸ್ಪೆಲಿಂಗ್‌ ಬೀ ಗೆದ್ದ ಭಾರತ ಮೂಲದ ಹರಣಿ ಲೋಗನ್‌ಸ್ಪೆಲಿಂಗ್‌ ಬೀ ಗೆದ್ದ ಭಾರತ ಮೂಲದ ಹರಣಿ ಲೋಗನ್‌

ರಾಧಾ ಅಯ್ಯಂಗಾರ್ ಅವರು ಸದ್ಯ ಅಮೆರಿಕದ ರಕ್ಷಣಾ ಇಲಾಖೆಯ ಉಪಕಾರ್ಯದರ್ಶಿಯವರ ಮುಖ್ಯ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ಧಾರೆ. ಅವರ ದಕ್ಷ ಸೇವೆಯನ್ನು ಗಮನಿಸಿ ಈಗ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತಿದೆ.

ದಕ್ಷಿಣ ಭಾರತ ಮೂಲದ ರಾಧಾ ಅಯ್ಯಂಗಾರ್ ಪ್ಲಂಬ್ ಅವರು ಅಮೆರಿಕದ ರಕ್ಷಣಾ ಇಲಾಖೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಗೂಗಲ್, ಫೇಸ್‌ಬುಕ್ ಮೊದಲಾದ ಖಾಸಗಿ ಸಂಸ್ಥೆಗಳಲ್ಲಿ ಉನ್ನತ ಸ್ತರದಲ್ಲಿ ಕೆಲಸ ಮಾಡಿದ ಅನುಭವಿ ಎನಿಸಿದ್ಧಾರೆ. ಶೈಕ್ಷಣಿಕ, ಸರಕಾರಿ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಕೆಲಸ ಮಾಡಿರುವ ಅವರು ನೀತಿ ಸಂಶೋಧನೆ ಮತ್ತು ಸುರಕ್ಷತೆ ವಿಶ್ವಾಸಾರ್ಹತೆ ವಿಚಾರಗಳಲ್ಲಿ ಪರಿಣಿತಿ ಹೊಂದಿರುವುದು ಅವರ ಪ್ರೊಫೈಲ್ ಹೇಳುತ್ತದೆ.

ಬಡ್ಡಿ ದರ 75 ಮೂಲಾಂಕದಷ್ಟು ಹೆಚ್ಚಳ; 1994ರ ಬಳಿಕ ಅಮೆರಿಕ ಕಂಡ ಅತಿದೊಡ್ಡ ಏರಿಕೆಬಡ್ಡಿ ದರ 75 ಮೂಲಾಂಕದಷ್ಟು ಹೆಚ್ಚಳ; 1994ರ ಬಳಿಕ ಅಮೆರಿಕ ಕಂಡ ಅತಿದೊಡ್ಡ ಏರಿಕೆ

ಅಯ್ಯಂಗಾರ್ ಶೈಕ್ಷಣಿಕ ಸಾಧನೆ

ಅಯ್ಯಂಗಾರ್ ಶೈಕ್ಷಣಿಕ ಸಾಧನೆ

ರಾಧಾ ಅಯ್ಯಂಗಾರ್ ಅವರು ಅಮೆರಿಕದ ಎಂಐಟಿ ವಿವಿಯಲ್ಲಿ ಬಿಎಸ್ ಪದವಿ ಪಡೆದಿದ್ದಾರೆ. ಬಳಿಕ ಪ್ರಿನ್ಸ್‌ಟನ್ ಯೂನಿವರ್ಸಿಟಿಯಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ಮತ್ತು ಎಂಎಸ್ ಮಾಡಿದ್ದಾರೆ. ಹಾರ್ವರ್ಡ್ ವಿವಿಯಲ್ಲಿ ಸಂಶೋಧನೆ ನಡೆಸಿದ್ದಾರೆ. ಬಳಿಕ ಪ್ರತಿಷ್ಠಿತ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ದೊಡ್ಡ ಖಾಸಗಿ ಕಂಪನಿಗಳಲ್ಲಿ ಕೆಲಸ

ದೊಡ್ಡ ಖಾಸಗಿ ಕಂಪನಿಗಳಲ್ಲಿ ಕೆಲಸ

ರಾಧಾ ಅಯ್ಯಂಗಾರ್ ಪ್ಲಂಬ್ ಈ ಹಿಂದೆ ಫೇಸ್‌ಬುಕ್ ಸಂಸ್ಥೆಯ ನೀತಿ ವಿಶ್ಲೇಷಣೆ ವಿಭಾಗದ ಜಾಗತಿಕ ಮುಖ್ಯಸ್ಥೆಯಾಗಿ ಕೆಲಸ ಮಾಡಿದ್ದರು. ಫೇಸ್‌ಬುಕ್‌ನಲ್ಲಿ ಅವರು ಪ್ರಮುಖವೆನಿಸುವ ಅಂತಾರಾಷ್ಟ್ರೀಯ ಸುರಕ್ಷತೆ ವಿಷಯಗಳತ್ತ ಹೆಚ್ಚಿನ ಗಮನ ನೆಟ್ಟಿದ್ದರು.

ಗೂಗಲ್‌ನಲ್ಲೂ ಅವರು ಟ್ರಸ್ಟ್ ಅಂಡ್ ಸೇಫ್ಟಿಯ ಸಂಶೋಧನಾ ವಿಭಾಗದ ನಿರ್ದೇಶಕರಾಗಿದ್ದರು. ಅಲ್ಲಿ ಬ್ಯುಸಿನೆಸ್ ಅನಾಲಿಟಿಕ್ಸ್, ಡಾಟಾ ಸೈನ್ಸ್ ಮತ್ತು ಟೆಕ್ನಿಕಲ್ ರೀಸರ್ಚ್‌ನಲ್ಲಿರುವ ತಂಡಗಳನ್ನು ನಿರ್ವಹಿಸುತ್ತಿದ್ದರು. ಹಾಗೆಯೇ ರಾಂಡ್ ಕಾರ್ಪೊರೇಶನ್‌ನಲ್ಲಿ (RAND Corporation) ಅವರು ಹಿರಿಯ ಅರ್ಥಶಾಸ್ತ್ರಜ್ಞರಾಗಿಯೂ ಕೆಲಸ ಮಾಡಿದ್ಧಾರೆ.

ಅಮೆರಿಕದಲ್ಲಿರುವ ಭಾರತೀಯ ಸಾಧಕರು

ಅಮೆರಿಕದಲ್ಲಿರುವ ಭಾರತೀಯ ಸಾಧಕರು

ಅಮೆರಿಕದಲ್ಲಿ ದೊಡ್ಡ ಹೆಸರು ಮಾಡಿದ ಮತ್ತು ಉನ್ನತ ಸ್ತರಕ್ಕೆ ಏರಿದ ಭಾರತೀಯ ಸಮುದಾಯದವರ ಪಟ್ಟಿ ದೊಡ್ಡದೇ ಇದೆ. ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷೆಯಾಗಿ ಏರಿದ್ದು ಒಂದು ಮೈಲಿಗಲ್ಲು. ಭವಿಷ್ಯದಲ್ಲಿ ಕಮಲಾ ಅವರು ಅಧ್ಯಕ್ಷ ಸ್ಥಾನಕ್ಕೆ ಏರಿದರೂ ಅಚ್ಚರಿ ಇಲ್ಲ. ದಶಕಗಳ ಹಿಂದೆಯೇ ಬಾಬಿ ಜಿಂದಾಲ್ ಅವರು ಲೂಸಿಯಾನ ರಾಜ್ಯದ ರಾಜ್ಯಪಾಲರಾಗಿ ಆಯ್ಕೆಯಾಗಿದ್ದರು. ಕಾಶ್ಯಪ್ ಪಟೇಲ್ ಅವರು ರಕ್ಷಣಾ ಕಾರ್ಯದರ್ಶಿ ಕ್ರಿಸ್ ಮಿಲ್ಲರ್ ಅವರ ಮುಖ್ಯಸಿಬ್ಬಂದಿಯಾಗಿ ಆಯ್ಕೆಯಾಗಿದ್ದರು. ವಿವೇಕ್ ಮೂರ್ತಿ ಅವರು ಅಮೆರಿಕದ ಮುಖ್ಯ ಸರ್ಜನ್ ಆಗಿ ನೇಮಕವಾಗಿದ್ದರು.

ಉನ್ನತ ಹುದ್ದೆಗಳನ್ನೇರಿದ ಇತರ ಭಾರತೀಯರು

ಉನ್ನತ ಹುದ್ದೆಗಳನ್ನೇರಿದ ಇತರ ಭಾರತೀಯರು

ಅಮೆರಿಕದ ಕಾರ್ಪೊರೇಟ್ ಕಂಪನಿಗಳಲ್ಲಿ ಭಾರತೀಯರು ಇನ್ನೂ ಹೆಚ್ಚು ಪ್ರಭಾವಿಗಳೆನಿಸಿದ್ದಾರೆ. ಫೇಸ್‌ಬುಕ್, ಗೂಗಲ್, ಐಬಿಎಂ, ಟ್ವಿಟ್ಟರ್ ಇತ್ಯಾದಿ ದೈತ್ಯ ಕಂಪನಿಗಳ ಅತ್ಯುನ್ನತ ಹುದ್ದೆಗಳಲ್ಲಿ ಭಾರತೀಯರು ಇದ್ದಾರೆ. ಅದರ ಒಂದು ಪಟ್ಟಿ ಇಲ್ಲಿದೆ.
ಪರಾಗ್ ಅಗರ್ವಾಲ್: ಟ್ವಿಟ್ಟರ್ ಸಿಇಒ
ಅರವಿಂದ್ ಕೃಷ್ಣ: ಐಬಿಎಂ ಸಿಇಒ
ಸುಂದರ್ ಪಿಚೈ: ಗೂಗಲ್ ಸಿಇಒ
ಸತ್ಯ ನಾದೆಲ್ಲಾ: ಮೈಕ್ರೋಸಾಫ್ಟ್ ಸಿಇಒ
ಅಜಯಪಾಲ್ ಬಾಂಗಾ: ಮಾಸ್ಟರ್‌ಕಾರ್ಡ್ ಸಿಇಒ
ಸುಬ್ರಾ ಸುರೇಶ್: ನ್ಯಾಷನಲ್ ಸೈನ್ಸ್ ಫೌಂಡೇಶನ್‌ನ ನಿರ್ದೇಶಕ
ದೇವೇನ್ ಶರ್ಮಾ: ಸ್ಟಾಂಡರ್ ಅಂಡ್ ಪೂರ್ಸ್‌ನ ಅಧ್ಯಕ್ಷ

(ಒನ್ಇಂಡಿಯಾ ಸುದ್ದಿ)

Recommended Video

ಐರ್ಲೆಂಡ್ ವಿರುದ್ಧದ ಸರಣಿಗೆ ಸೆಲೆಕ್ಟ್ ಆಗಿಲ್ಲ ಅಂತ ರಾಹುಲ್ ತೆವಾಟಿಯಾ ಮಾಡಿದ್ದೇನು?|*Cricket | OneIndia Kannada

English summary
US President Joe Biden has nominated Indian-American Radha Iyengar Plumb as Deputy Under Secretary of Defense for Acquisition and Sustainment, U.S. Department of Defense.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X