• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಗನಿಗೆ ಡಿವೋರ್ಸ್ ಕೊಡುತ್ತಾಳೆಂದು ಸೊಸೆಯನ್ನು ಕೊಂದನಾ ಮಾವ?; ಅಮೆರಿಕದಲ್ಲಿ ಭಾರತೀಯನ ಬಂಧನ

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಅ. 7: ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಮಹಿಳೆಯೊಬ್ಬಳ ಹತ್ಯೆ ಪ್ರಕರಣದಲ್ಲಿ ಆಕೆಯ ಮಾವನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಅರೋಪಿ ಭಾರತೀಯ ಮೂಲದವರಾಗಿದ್ದಾರೆ. ಕೊಲೆಯಾದ ಮಹಿಳೆ ವಾಲ್ಮಾರ್ಟ್ ಉದ್ಯೋಗಿ ಎನ್ನಲಾಗಿದೆ.

ಆರೋಪಿ ಸೀತಲ್ ಸಿಂಗ್ ದೋಸಾಂಜ್ ಕಳೆದ ವಾರ ತನ್ನ ಸೊಸೆ ಗುರಪ್ರೀತ್ ಕೌರ್ ದೋಸಾಂಜ್‌ರನ್ನು ಗುಂಡಿಟ್ಟು ಹತ್ಯೆಗೈದಿರುವುದು ತಿಳಿದುಬಂದಿದೆ.

ಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮನೀಶ್ ಛೇಡಾ ಹತ್ಯೆಯುಎಸ್‌ನಲ್ಲಿ ಭಾರತೀಯ ವಿದ್ಯಾರ್ಥಿ ಮನೀಶ್ ಛೇಡಾ ಹತ್ಯೆ

ಮಗನಿಗೆ ಸೊಸೆ ವಿಚ್ಛೇದನ ಕೊಡುತ್ತಾಳೆಂಬ ಕಾರಣಕ್ಕೆ ಸೀತಲ್ ಸಿಂಗ್ ಈ ಕೃತ್ಯ ಎಸಗಿರಬಹುದು ಎಂಬುದು ಕ್ಯಾಲಿಫೋರ್ನಿಯಾ ಪೊಲೀಸರ ಅನುಮಾನ. ಕಳೆದ ಶುಕ್ರವಾರದಂದು ಈ ಘಟನೆ ನಡೆದಿದೆ.

ಫೋನ್ ಕರೆಯಿಂದ ಸುಳಿವು

ಗುರಪ್ರೀತ್ ಸಿಂಗ್ ಹತ್ಯೆಯಾಗಿದ್ದು ಸ್ಯಾನ್ ಜೋಸ್ ನಗರದ ವಾಲ್ಮಾರ್ಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ. ಕಳೆದ ಶುಕ್ರವಾರದಂದು ಆ ಘಟನೆ ಸಂಭವಿಸಿತ್ತು. ಆರೋಪಿ ಯಾರೆಂದು ಸುಳಿವು ನೀಡುವಂಥ ಅಂಶ ಘಟನಾ ಸ್ಥಳದಲ್ಲಿ ಪೊಲೀಸರಿಗೆ ಸಿಗಲಿಲ್ಲ. ಹತ್ಯೆಯಾದ ಗುರಪ್ರೀತ್ ಕೌರ್ ದೋಸಾಂಜ್‌ಳ ಫೋನ್ ಕರೆಯನ್ನು ತೆಗೆಸಿದಾಗ ಪೊಲೀಸರಿಗೆ ಸುಳಿವು ಸಿಗುತ್ತದೆ.

ಕೊಲೆಯಾಗುವ ಮುನ್ನ ಗುರಪ್ರೀತ್ ತನ್ನ ಸಂಬಂಧಿಯೊಬ್ಬರೊಂದಿಗೆ ಫೋನ್‌ನಲ್ಲಿ ಮಾತನಾಡಿರುತ್ತಾಳೆ. ಇನ್ನಷ್ಟು ವಿಚಾರಣೆ ನಡೆಸಿದಾಗ ಗುರಪ್ರೀತ್ ಅಂದು ತನ್ನ ಮಾವನ ಬಗ್ಗೆ ಭಯಗೊಂಡಿದ ವಿಚಾರ ಪೊಲೀಸರಿಗೆ ಗೊತ್ತಾಗುತ್ತದೆ.

ಕ್ಯಾಲಿಪೋರ್ನಿಯಾದಲ್ಲಿ ಭಾರತೀಯ ಕುಟುಂಬ ಅಪಹರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನಕ್ಯಾಲಿಪೋರ್ನಿಯಾದಲ್ಲಿ ಭಾರತೀಯ ಕುಟುಂಬ ಅಪಹರಿಸಿದ್ದ ವ್ಯಕ್ತಿ ಆತ್ಮಹತ್ಯೆಗೆ ಯತ್ನ

ತನ್ನ ಮಾವ ಸೀತಲ್ ಸಿಂಗ್ ತನಗಾಗಿ ಹುಡುಕುತ್ತಿರುವುದು, 200 ಕಿಮೀಗೂ ಹೆಚ್ಚು ದೂರದಿಂದ ತನ್ನನ್ನು ಹುಡುಕಿಕೊಂಡು ತಾನು ಕೆಲಸ ಮಾಡುವ ಸ್ಥಳಕ್ಕೆ ಬಂದಿರುವುದು ಇವೆಲ್ಲವನ್ನೂ ಗುರಪ್ರೀತ್ ತನ್ನ ಸಂಬಂಧಿಗೆ ಫೋನ್‌ನಲ್ಲಿ ಹೇಳಿರುತ್ತಾಳೆ. ಕೆಲಸದಿಂದ ಬಿಡುವು ಪಡೆದು ಹೊರಗೆ ಬಂದಿರುವ ತನ್ನನ್ನು ಕಂಡು ಮಾವ ಬರುತ್ತಿದ್ದಾರೆ, ತನಗೆ ಭಯವಾಗುತ್ತಿದೆ ಎಂದು ಈಕೆ ಫೋನ್‌ನಲ್ಲಿ ಹೇಳಿದ್ದೇ ಕೊನೆಯ ಮಾತು.

Indian American Man Arrested For Allegedly Killing His Daughter-in-law in California

ಅದಾಗಿ ಐದು ಗಂಟೆಯ ನಂತರ ವಾಲ್ಮಾರ್ಟ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಗುರಪ್ರೀತ್ ಕೌರ್‌ಳ ಶವ ಪತ್ತೆಯಾಗುತ್ತದೆ. ಎರಡು ಗುಂಡಿನ ಗಾಯಗಳು ಆಕೆಯ ಮೈಮೇಲಿರುತ್ತವೆ.

ಪತಿಗೆ ಡಿವೋರ್ಸ್ ಕೊಡಲಿದ್ದಳಾ ಗುರಪ್ರೀತ್?

ಗುರಪ್ರೀತ್ ಜೊತೆ ಫೋನ್‌ನಲ್ಲಿ ಕೊನೆಯ ಬಾರಿ ಮಾತನಾಡಿದ್ದ ಸಂಬಂಧಿಯನ್ನು ಪೊಲೀಸರು ವಿಚಾರಿಸಿದಾಗ ಕೆಲ ಮಹತ್ವದ ಸಂಗತಿಗಳು ತಿಳಿಯುತ್ತವೆ.

ಗುರಪ್ರೀತ್ ಕೌರ್ ದೋಸಾಂಜ್ ತನ್ನ ಪತಿಗೆ ವಿಚ್ಛೇದನ ಕೊಡುವ ಪ್ರಕ್ರಿಯೆಯಲ್ಲಿ ಇರುತ್ತಾಳೆ ಎಂಬ ವಿಚಾರವನ್ನು ಇವರು ತಿಳಿಸುತ್ತಾರೆ. ಇದೇ ಕಾರಣಕ್ಕೆ ಸೀತಲ್ ಸಿಂಗ್ ದೋಸಾಂಜ್ ಈ ಹತ್ಯೆ ಮಾಡಿರಬಹುದು ಎಂಬ ಅನುಮಾನ ಪೊಲೀಸರಿಗೆ ಬರುತ್ತದೆ.

ಸೀತಲ್ ಸಿಂಗ್ ತನ್ನ ಮಗನ ಜೊತೆ ಫ್ರೆಸ್ನೋ ನಗರದಲ್ಲಿಇರುತ್ತಾನೆ. ಪೊಲೀಸರು ಮರುದಿನ ಅಲ್ಲಿಗೆ ಹೋಗಿ ಆತನನ್ನು ಬಂಧಿಸುತ್ತಾರೆ. ಆ ಮನೆಯಲ್ಲಿ ಪಾಯಿಂಟ್ 22 ಕ್ಯಾಲಿಬರ್‌ನ ಬೆರೆಟ್ಟಾ ಪಿಸ್ತೂಲ್ ಸಿಗುತ್ತದೆ.

ವಾಲ್ಮಾರ್ಟ್‌ನ ಪಾರ್ಕಿಂಗ್ ಪ್ರದೇಶದ ಬಳಿಯ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪತ್ತೆದಾರಿಗಳು ಪರಿಶೀಲಿಸಿದ್ದಾರೆ. ಅದರಲ್ಲಿ ಸೀತಲ್‌ನ ಟ್ರಕ್ ಈ ಜಾಗಕ್ಕೆ ಬಂದಿರುವುದು ಮತ್ತು ಆತನ ಸೊಸೆ ಇರುವ ಜಾಗಕ್ಕೆ ಟ್ರಕ್ ಅನ್ನು ಡ್ರೈವ್ ಮಾಡಿಕೊಂಡು ಹೋಗಿರುವುದು, ಬಳಿಕ ಅಲ್ಲಿಂದ ಟ್ರಕ್ ಹೊರಹೋಗಿರುವುದು ಇವೆಲ್ಲವೂ ಗೊತ್ತಾಗಿದೆ. ಸೀತಲ್‌ನ ಫೋನ್ ಲೊಕೇಶನ್ ಆಧಾರದ ಮೇಲೆ ಆತ ಫ್ರೆಸ್ನೋಗೆ ಅಂದೇ ವಾಪಸ್ ಹೋಗಿರುವ ವಿಚಾರವೂ ಗೊತ್ತಾಗಿದೆ.

ಇದೇ ವೇಳೆ, ಆರೋಪಿ ಸೀತಲ್ ಸಿಂಗ್ ದೋಸಾಂಜ್‌ನನ್ನು ಸ್ಯಾನ್ ಜೋಸ್ ನಗರದ ಮುಖ್ಯ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಅಲ್ಲಿ ಜಾಮೀನುರಹಿತ ಬಂಧನದಲ್ಲಿರಿಸಲಾಗಿದೆ. ನವೆಂಬರ್ 14ಕ್ಕೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.

ಅಮೆರಿಕದಲ್ಲಿ ಅಪರಾಧ ಘಟನೆಗಳು

ಕಳೆದ ಕೆಲ ದಿನಗಳಿಂದ ಅಮೆರಿಕದಲ್ಲಿ ಭಾರತೀಯರ ಕೊಲೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಸ್ಯಾನ್ ಜೋಸ್‌ನಲ್ಲಿ ಸಂಭವಿಸಿದ ಈ ಕೊಲೆ ಕೌಟುಂಬಿಕ ಕಾರಣಕ್ಕಾಗಿ ಆಗಿದ್ದು. ಆದರೆ, ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರನ್ನು ಅಪಹರಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಇನ್ನೊಂದು ಘಟನೆಯಲ್ಲಿ ಭಾರತೀಯ ಮೂಲದ ಒಬ್ಬ ವಿದ್ಯಾರ್ಥಿಯನ್ನು ಕೊಲ್ಲಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
San Jose police have arrested Sital Singh Dosanjh for allegedly killing his daughter-in-law Gurpreet Kaur Dosanjh in a parking lot. He is kept in jail without bail till Nov 14th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X