ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಭಯ ಹುಟ್ಟಿಸುತ್ತಿರುವ ಬ್ಲ್ಯಾಕ್ ಫಂಗಸ್ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ನವದೆಹಲಿ, ಮೇ 17: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ 2ನೇ ಅಲೆಯಿಂದ ಭಾರತಕ್ಕೆ ಭಾರತವೇ ತತ್ತರಿಸಿ ಹೋಗಿದೆ. ದಿನದಿಂದ ದಿನಕ್ಕೆ ದೇಶದಲ್ಲಿ ಕೊವಿಡ್-19 ಸೋಂಕಿನ ಭೀತಿ ಹೆಚ್ಚಾಗುತ್ತಿದ್ದು, ವೈದ್ಯಕೀಯ ಸೌಲಭ್ಯಗಳ ಅಭಾವ ಸೃಷ್ಟಿ ಆಗುತ್ತಿದೆ.
ಕೊರೊನಾವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಹಾಸಿಗೆ, ವೈದ್ಯಕೀಯ ಆಮ್ಲಜನಕ, ಔಷಧಿ ಸಿಗುತ್ತಿಲ್ಲ. ಅಂತಿಮವಾಗಿ ಅಂತ್ಯಸಂಸ್ಕಾರಕ್ಕೂ ಜನ ಪರಿತಪಿಸುವಂತಾಗಿದೆ. ಇದರ ಮಧ್ಯೆ ಭಾರತದಲ್ಲಿ ಮತ್ತು ಭಾರತೀಯರಲ್ಲಿ ಭೀತಿ ಹುಟ್ಟಿಸಿರುವ ಮತ್ತೊಂದು ಅಪಾಯಕಾರಿ ರೋಗವೇ ಬ್ಲ್ಯಾಕ್ ಫಂಗಸ್ ಅಥವಾ ಕಪ್ಪು ಶಿಲೀಂಧ್ರ.

ಕೋವಿಡ್ ನಂತರದ ಸೋಂಕನ್ನು ಬ್ಲ್ಯಾಕ್‌ ಫಂಗಸ್ ಎಂದು ತಪ್ಪಾಗಿ ಕರೆಯಲಾಗುತ್ತಿದೆ: ತಜ್ಞರುಕೋವಿಡ್ ನಂತರದ ಸೋಂಕನ್ನು ಬ್ಲ್ಯಾಕ್‌ ಫಂಗಸ್ ಎಂದು ತಪ್ಪಾಗಿ ಕರೆಯಲಾಗುತ್ತಿದೆ: ತಜ್ಞರು

ಗುಜರಾತಿನಲ್ಲಿ ಈಗಾಗಲೇ 100 ಮಂದಿಗೆ ಇದೇ ಬ್ಲ್ಯಾಕ್ ಫಂಗಸ್ ರೋಗ ತಗುಲಿರುವುದು ವೈದ್ಯಕೀಯ ತಪಪಾಸಣೆಯಲ್ಲಿ ದೃಢಪಟ್ಟಿದೆ. ಸೂರತ್ 40 ಮಂದಿ ಇದೇ ಮಹಾಮಾರಿಯಿಂದ ಪ್ರಾಣ ಬಿಟ್ಟಿದ್ದರೆ, ಮಹಾರಾಷ್ಟ್ರದಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ 52 ಜನರು ಬಲಿಯಾಗಿದ್ದಾರೆ.

India: What Is The Black Fungus And How To Found This Virus

ಕೊರೊನಾವೈರಸ್ ರೋಗದ ನಡುವೆ ಬ್ಲ್ಯಾಕ್ ಫಂಗಸ್ ಆತಂಕ ಸೃಷ್ಟಿಗೆ ಕಾರಣವೇನು. ಬ್ಲ್ಯಾಕ್ ಫಂಗಸ್ ರೋಗ ಎಂದರೇನು, ಬ್ಲ್ಯಾಕ್ ಫಂಗಸ್ ಅಂಟಿಕೊಳ್ಳುವುದು ಹೇಗೆ, ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣಗಳೇನು. ಈ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎನ್ನುವುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಬ್ಲ್ಯಾಕ್ ಫಂಗಸ್ ರೋಗ ಎಂದರೇನು?

ಬ್ಲ್ಯಾಕ್ ಫಂಗಸ್ ರೋಗ ಎಂದರೇನು?

ಶಿಲೀಂಧ್ರಗಳ ಒಂದು ಗುಂಪಿನ ಅಚ್ಚುಗಳಿಂದ ಅಂಟಿಕೊಳ್ಳುವ ರೋಗವನ್ನೇ ಬ್ಲ್ಯಾಕ್ ಫಂಗಸ್ ಎಂದು ಕರೆಯಲಾಗುತ್ತದೆ. ಈ ಅಚ್ಚುಗಳು ಪರಿಸರದಲ್ಲೇ ಇರಲಿವೆ. ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ಅಥವಾ ದೇಹದ ಅನಾರೋಗ್ಯದ ವಿರುದ್ಧ ಹೋರಾಡುವುದಕ್ಕಾಗಿ ದೇಹವು ಸಹಿಸಿಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣದ ಔಷಧಿಗಳನ್ನು ತೆಗೆದುಕೊಳ್ಳುವವರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ರೋಗವು ಮೂಗು, ಶ್ವಾಸಕೋಶ ಅಥವಾ ಸೈನಸ್, ಕಣ್ಣುಗಳು ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬ್ಲ್ಯಾಕ್ ಫಂಗಸ್ ರೋಗದಿಂದ ಯಾರಿಗೆ ಅಪಾಯ?

ಬ್ಲ್ಯಾಕ್ ಫಂಗಸ್ ರೋಗದಿಂದ ಯಾರಿಗೆ ಅಪಾಯ?

ಬ್ಲ್ಯಾಕ್ ಫಂಗಸ್ ಮಹಾಮಾರಿಯಿಂದ ಯಾವ ವರ್ಗಕ್ಕೆ ಹೆಚ್ಚು ಅಪಾಯವಿದೆ ಎನ್ನುವ ಬಗ್ಗೆ ತಜ್ಞವೈದ್ಯರು ಎಚ್ಚರಿಕೆ ನೀಡಿದ್ದಾರೆ. ಯಾವ ವರ್ಗದವರು ಅಥವಾ ಯಾವ ರೀತಿ ಆರೋಗ್ಯ ತೊಂದರೆ ಹೊಂದಿರುವವರು ಈ ಬ್ಲ್ಯಾಕ್ ಫಂಗಸ್ ಭೀತಿ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕೊರೊನಾವೈರಸ್ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಿಗೆ ಬ್ಲ್ಯಾಕ್ ಫಂಗಸ್ ರೋಗ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ. ಇದರ ಜೊತೆ ಸಕ್ಕರೆ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದೆ ಎಂದು ಸಾಂಕ್ರಾಮಿಕ ರೋಗ ಶಾಸ್ತ್ರರು ಎಚ್ಚರಿಸಿದ್ದಾರೆ.

ಕೊರೊನಾವೈರಸ್ ಮತ್ತು ಬ್ಲ್ಯಾಕ್ ಫಂಗಸ್ ನಡುವಿನ ನಂಟು

ಕೊರೊನಾವೈರಸ್ ಮತ್ತು ಬ್ಲ್ಯಾಕ್ ಫಂಗಸ್ ನಡುವಿನ ನಂಟು

ಕೊವಿಡ್-19 ಸೋಂಕಿಗೂ ಬ್ಲ್ಯಾಕ್ ಫಂಗಸ್ ರೋಗಕ್ಕೂ ಯಾವ ರೀತಿ ನಂಟಿದೆ ಎನ್ನುವುದಕ್ಕೆ ಸಂಬಂಧಿಸಿದಂತೆ ತಜ್ಞರು ಸ್ಪಷ್ಟವಾಗಿ ಹೇಳಿಲ್ಲ. ಆದರೆ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ನೀಡುವ ಸ್ಟೀರಾಯ್ಡ್ ಔಷಧಿಯಿಂದಲೇ ಬ್ಲ್ಯಾಕ್ ಫಂಗಸ್ ಅಂಟಿಕೊಳ್ಳುವ ಅಪಾಯ ಹೆಚ್ಚಾಗಿದೆ ಎಂದು ಬಿಬಿಸಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸ್ಟೀರಾಯ್ಡ್ ಔಷಧಿಯು ಕೊವಿಡ್-19 ಸೋಂಕಿತರ ಶ್ವಾಸಕೋಶಕ್ಕೆ ಸೋಂಕು ಹರಡದಂತೆ ತಡೆಯುವ ಶಕ್ತಿಯನ್ನು ಹೊಂದಿದೆ. ಇದರ ಜೊತೆಗೆ ದೇಹದಲ್ಲಿ ಇರುವ ರೋಗ ನಿರೋಧಕ ಶಕ್ತಿಯ ಜೊತೆಗೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹೆಚ್ಚುವಂತೆ ಮಾಡುತ್ತದೆ. ಇದು ಡಯಾಬಿಟಿಸ್ ರೋಗಿಗಳು ಹಾಗೂ ಡಯಾಬಿಟಿಸ್ ಇಲ್ಲದ ರೋಗಿಗಳಲ್ಲಿ ಹೆಚ್ಚಿನ ಭೀತಿ ಹುಟ್ಟುವಂತೆ ಮಾಡಿದೆ.

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣ ಹೇಗಿರುತ್ತೆ?

ಬ್ಲ್ಯಾಕ್ ಫಂಗಸ್ ರೋಗದ ಲಕ್ಷಣ ಹೇಗಿರುತ್ತೆ?

* ಕಣ್ಣು ಮತ್ತು ಮೂಗಿನ ಸುತ್ತ ಕೆಂಪಾಗುವಿಕೆ ಮತ್ತು ನೋವು
* ಜ್ವರ
* ತಲೆನೋವು
* ಕೆಮ್ಮು
* ಉಸಿರಾಟದ ಸಮಸ್ಯೆ
* ರಕ್ತಸಿಕ್ತ ವಾಂತಿ
* ಮಾನಸಿಕ ಸ್ಥಿತಿ ಬದಲು

English summary
India: Here Read What Is The Black Fungus And How To Found This Virus; What Is The Link Between Coronavirus And Black Fungus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X