ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಹವಾ: ಉತ್ತರದಲ್ಲಿ ಜೋರು, ದಕ್ಷಿಣ ಭಾರತದಲ್ಲಿ ಚೂರೇ ಚೂರು!

|
Google Oneindia Kannada News

ನವದೆಹಲಿ, ಮಾರ್ಚ್ 29: ಭಾರತದ ಉತ್ತರ ಮತ್ತು ಪೂರ್ವ ಭಾಗದ ರಾಜ್ಯಗಳಲ್ಲಿ ಎನ್‌ಡಿಎ ಸರ್ಕಾರದ ಸಂಸದರು ಪ್ರಬಲ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಎಂಬುದನ್ನು ಇಂಡಿಯಾ ಟುಡೆ ನಡೆಸಿದ ಚುನಾವಣೆಗೂ ಮುನ್ನ ಆಡಳಿತ ವಿರೋಧಿ 'ಮೂಡ್' ಕುರಿತಾದ ಸಮೀಕ್ಷೆ ಬಹಿರಂಗಪಡಿಸಿದೆ.

ಆದರೆ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಈ ಪ್ರದೇಶಗಳಲ್ಲಿ ಸಂಸದರನ್ನು ಚುನಾವಣಾ ರಂಗದಲ್ಲಿ ಉಳಿದುಕೊಳ್ಳಲು ಆಮ್ಲಜನಕ ಒದಗಿಸಲಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಂಡಿಯಾ ಟುಡೆಯ ಪೊಲಿಟಿಕಲ್ ಸ್ಟಾಕ್ ಎಕ್ಸ್‌ಚೇಂಜ್‌ಗಾಗಿ (ಪಿಎಸ್‌ಇ) ಆಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆ ದೇಶದ ಜನರ ಒಟ್ಟಾರೆ ಮೂಡ್ ಹೇಗಿದೆ ಮತ್ತು ಮೋದಿ ಅವರ ಜನಪ್ರಿಯತೆ ಯಾವ ರೀತಿ ಇದೆ ಎಂಬುದನ್ನು ತಿಳಿಸಿದೆ.

ಆದರೆ, ದಕ್ಷಿಣ ಭಾರತದಲ್ಲಿ ಮೋದಿ ಹವಾ ಸಾಕಷ್ಟು ತಗ್ಗಿದೆ. ಇಲ್ಲಿ ಎನ್‌ಡಿಎ ಪರವಾದ ಅಲೆ ಇಲ್ಲ. ಮಿಗಿಲಾಗಿ ಆಡಳಿತ ವಿರೋಧಿ ಭಾವನೆಗಳು ಸ್ವತಃ ನರೇಂದ್ರ ಮೋದಿ ವಿರುದ್ಧವೇ ಅಧಿಕ ಪ್ರಮಾಣದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.

300+ ಕ್ಷೇತ್ರಗಳಲ್ಲಿ NDA ಗೆಲುವು ನಿಶ್ಚಿತ: ಮೋದಿ ನೀಡಿದ 5 ಕಾರಣಗಳು300+ ಕ್ಷೇತ್ರಗಳಲ್ಲಿ NDA ಗೆಲುವು ನಿಶ್ಚಿತ: ಮೋದಿ ನೀಡಿದ 5 ಕಾರಣಗಳು

ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ಎನ್‌ಡಿಎ ಸಂಸದರ ವಿರುದ್ಧ ಮತದಾರರಲ್ಲಿ ತೀವ್ರ ಅಸಮಾಧಾನವಿದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸು ಯದ್ವಾತದ್ವಾ ಏರಿಕೆಯಾಗಿದೆ.

540 ಲೋಕಸಭಾ ಕ್ಷೇತ್ರಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದ್ದು, 2,25,166 ಮಂದಿ ಇದರಲ್ಲಿ ಭಾಗವಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತದಾರರು ಗರಂ

ಉತ್ತರ ಪ್ರದೇಶದಲ್ಲಿ ಮತದಾರರು ಗರಂ

ಹಿಂದಿ ಭಾಷಿಕರಿರುವ ಪ್ರದೇಶವಾದ ಉತ್ತರ ಪ್ರದೇಶದಲ್ಲಿ 2014ರ ಲೋಕಸಭೆ ಚುನಾವಣೆಯಲ್ಲಿ 80 ಸೀಟುಗಳ ಪೈಕಿ 71ರಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಈಗ ಇಲ್ಲಿ ಶೇ 62ರಷ್ಟು ಮಂದಿ ಮತದಾರರು ಹಾಲಿ ಸಂಸದರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ- ಮಧ್ಯಪ್ರದೇಶ

ಮಹಾರಾಷ್ಟ್ರ- ಮಧ್ಯಪ್ರದೇಶ

23 ಬಿಜೆಪಿ ಮತ್ತು 18 ಶಿವಸೇನಾ ಸಂಸದರಿರುವ 48 ಕ್ಷೇತ್ರಗಳ ಮಹಾರಾಷ್ಟ್ರದಲ್ಲಿ ಶೇ 55ರಷ್ಟು ಮಂದಿಗೆ ತಮ್ಮ ಸಂಸದರ ಮೇಲೆ ಒಳ್ಳೆಯ ಅಭಿಪ್ರಾಯವಿಲ್ಲ. ಎಲ್ಲ 26 ಕ್ಷೇತ್ರಗಳಲ್ಲಿಯೂ ಬಿಜೆಪಿ ಸಂಸದರೇ ಇರುವ ಗುಜರಾತ್‌ನಲ್ಲಿ ಶೇ 52ರಷ್ಟು ಮತದಾರರಿಗೆ ತಮ್ಮ ಸಂಸದರ ಬಗ್ಗೆ ಅತೃಪ್ತಿ ಇದೆ.

ಮಧ್ಯಪ್ರದೇಶದಲ್ಲಿ 29 ಲೋಕಸಭಾ ಸೀಟುಗಳಿದ್ದು, ಅವುಗಳ ಪೈಕಿ 24ರಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಆದರೆ, ಇಲ್ಲಿಯೂ ಶೇ 52ರಷ್ಟು ಮಂದಿ ಸಂಸದರ ಬಗ್ಗೆ ಅಸಮಾಧಾನ ಹೊಂದಿದ್ದಾರೆ.

ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ ಸಿವೋಟರ್-ಐಎಎನ್‌ಎಸ್ ಸಮೀಕ್ಷೆ: ಎನ್‌ಡಿಎ ಮೈತ್ರಿಕೂಟಕ್ಕೇ ಜಯಭೇರಿ

ಮೋದಿ ಹವಾ ಜೋರು

ಮೋದಿ ಹವಾ ಜೋರು

ಉತ್ತರ ಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸಂಸದರ ವಿರೋಧಿ ಧೋರಣೆ ಇದ್ದರೂ, ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸು ಜೋರಾಗಿಯೇ ಇದೆ. ಶೇ 63ರಷ್ಟು ಮಂದಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ಮಹಾರಾಷ್ಟ್ರದಲ್ಲಿ 58 ಮಂದಿ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ.

ಬಿಹಾರದಲ್ಲಿ ಸಂಸದರ ವಿರೋಧಿ ಅಲೆ

ಬಿಹಾರದಲ್ಲಿ ಸಂಸದರ ವಿರೋಧಿ ಅಲೆ

ಬಿಹಾರದಲ್ಲಿ ಎನ್‌ಡಿಎ ಸಂಸದರ ವಿರೋಧಿ ಅಲೆ ಶೇ 66ರಷ್ಟಿದೆ. ಇಲ್ಲಿನ 40 ಸೀಟುಗಳಲ್ಲಿ 22ರಲ್ಲಿ ಬಿಜೆಪಿ ಗೆದ್ದಿದ್ದರೆ, ಅದರ ಮಿತ್ರಪಕ್ಷ ಎಲ್‌ಜಿಪಿ ಆರು ಕ್ಷೇತ್ರಗಳಲ್ಲಿ ಸಂಸದರನ್ನು ಹೊಂದಿದೆ. ಈಗ ಎನ್‌ಡಿಎ ಭಾಗವಾಗಿರುವ ಜೆಡಿಯು ಎರಡು ಕ್ಷೇತ್ರಗಳಲ್ಲಿ ಪ್ರತಿನಿಧಿಗಳನ್ನು ಹೊಂದಿದ್ದಾರೆ. ಇಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸು ಶೇ 58ರಷ್ಟಿದೆ.

Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48 Times Now-VMR Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

ಕೇರಳ - ತಮಿಳುನಾಡಿನಲ್ಲಿ ವಿರೋಧಿ ಅಲೆ

ಕೇರಳ - ತಮಿಳುನಾಡಿನಲ್ಲಿ ವಿರೋಧಿ ಅಲೆ

ಆದರೆ, ದಕ್ಷಿಣ ಭಾರತಕ್ಕೆ ಬಂದಾಗ ಎನ್‌ಡಿಎ ಮತ್ತು ಮೋದಿ ಅವರ ವೈಯಕ್ತಿಕ ವರ್ಚಸಡ್ಸು ಎರಡೂ ಸಾಕಷ್ಟು ಕುಗ್ಗಿದೆ. ಅದರಲ್ಲಿಯೂ ಕೇರಳ ಮತ್ತು ತಮಿಳುನಾಡಿನಲ್ಲಿ ಅತ್ಯಂತ ಕಡಿಮೆ ಜನಪ್ರಿಯತೆ ಹೊಂದಿದ್ದಾರೆ.

ಕೇರಳದಲ್ಲಿ ಶೇ 72ರಷ್ಟು ಮಂದಿ ಮೋದಿ ವಿರುದ್ಧ ಅಸಮಾಧಾನ ತೋರಿಸಿದ್ದಾರೆ. ತಮಿಳುನಾಡಿನಲ್ಲಿ ಈ ಪ್ರಮಾಣ ಶೇ 68ರಷ್ಟಿದೆ.

20 ಸೀಟುಗಳಿರುವ ಕೇರಳದಲ್ಲಿ 2014ರ ಚುನಾವಣೆಯಲ್ಲಿ ಬಿಜೆಪಿ ಖಾತೆ ತೆರೆಯಲು ವಿಫಲವಾಗಿತ್ತು. ಇಲ್ಲಿ ಕಾಂಗ್ರೆಸ್ ಎಂಟು, ಸಿಪಿಎಂ ಐದು, ಸಿಪಿಐ ಒಂದು ಮತ್ತು ಐಯುಎಂಎಲ್ ಎರಡು ಸೀಟುಗಳನ್ನು ಗೆದ್ದಿದ್ದವು. ಇಲ್ಲಿ ಶೇ 53ರಷ್ಟು ಮತದಾರರು ತಮ್ಮ ಸಂಸದರ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ್ದಾರೆ. ಶೇ 47ರಷ್ಟು ಮಂದಿಗೆ ಅಸಮಾಧಾನವಿದೆ.

ತಮಿಳುನಾಡಿನ 39 ಸೀಟುಗಳಲ್ಲಿ ಒಂದರಲ್ಲಿ ಬಿಜೆಪಿ ಜಯಿಸಿತ್ತು. 37 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಜಯಭೇರಿ ಭಾರಿಸಿತ್ತು. ಹಾಲಿ ಸಂಸದರ ಬಗ್ಗೆ ಇಲ್ಲಿನ ಶೇ 76ರಷ್ಟು ಮಂದಿ ಸಂತುಷ್ಟರಾಗಿಲ್ಲ.

ರಾಜ್ಯದಲ್ಲಿ ಕಂಡ ಬೆಳ್ಳಿರೇಖೆ

ರಾಜ್ಯದಲ್ಲಿ ಕಂಡ ಬೆಳ್ಳಿರೇಖೆ

ದಕ್ಷಿಣದಲ್ಲಿ ಎನ್‌ಡಿಎ ಮತ್ತು ಮೋದಿ ಅವರಿಗೆ ಕಾರ್ಮೋಡದಂಚಿನ ಬೆಳ್ಳಿ ಗೆರೆಯಂತೆ ಗೋಚರಿಸಿರುವುದು ಕರ್ನಾಟಕ ಮಾತ್ರ. ಇಲ್ಲಿನ 28 ಕ್ಷೇತ್ರಗಳ ಪೈಕಿ 17ರಲ್ಲಿ ಬಿಜೆಪಿ ಸಂಸದರಿದ್ದಾರೆ. ಸಂಸದರ ಬಗ್ಗೆ ಶೇ 55ರಷ್ಟು ಮತದಾರರಿಗೆ ಸಮಾಧಾನವಿದೆ. ಶೇ 62ರಷ್ಟು ಮಂದಿ ಮೋದಿ ಅವರಿಗೆ ಜೈ ಎಂದಿದ್ದಾರೆ.

ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2 ನ್ಯೂಸ್ ನೇಷನ್ ಪಂಜಾಬ್ ಸಮೀಕ್ಷೆ: ಮೋದಿ ಮೊದಲ ಆಯ್ಕೆ, ರಾಹುಲ್ ನಂ.2

ತೆಲುಗು ರಾಜ್ಯಗಳಲ್ಲಿ ಸಮಬಲ

ತೆಲುಗು ರಾಜ್ಯಗಳಲ್ಲಿ ಸಮಬಲ

ಆಂಧ್ರಪ್ರದೇಶದಲ್ಲಿ ಟಿಡಿಪಿ 15 ಸೀಟುಗಳನ್ನು ಹೊಂದಿದ್ದರೆ, ಬಿಜೆಪಿ ಎರಡರಲ್ಲಿ ಗೆದ್ದಿತ್ತು. ಇಲ್ಲಿನ ಸಂಸದರ ಬಗ್ಗೆ ಶೇ 61ರಷ್ಟು ಮಂದಿಗೆ ಸಂತೋಷವಿದೆ. ಆದರೆ, ಮೋದಿ ಅವರ ವೈಯಕ್ತಿಕ ವರ್ಚಸ್ಸು ಶೇ 50-50 ಇದೆ.

ತೆಲಂಗಾಣದಲ್ಲಿ ಶೇ 66ರಷ್ಟು ಮತದಾರರಿಗೆ ಸಂಸದರ ಬಗ್ಗೆ ಉತ್ತಮ ಅಭಿಪ್ರಾಯವಿದೆ. ಆದರೆ, ಪ್ರಧಾನಿ ಮೋದಿ ಅವರ ಕಾರ್ಯವೈಖರಿ ಬಗ್ಗೆ ಶೇ 51ರಷ್ಟು ಜನರಿಗೆ ಅಸಮಾಧಾನವಿದೆ.

English summary
Lok Sabha elections 2019: Axis my India conducted Anti-incumbency mood poll for India Today's Political Stock Exchange (PSE). Here is the report of the survey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X