ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಟುಡೇ MOTN ಸಮೀಕ್ಷೆ: ಸದ್ಯ ಲೋಕಸಭೆ ಚುನಾವಣೆ ನಡೆದರೆ ಬಿಜೆಪಿಗೆ ಎಷ್ಟು ಸ್ಥಾನ?

|
Google Oneindia Kannada News

ನವದೆಹಲಿ, ಜನವರಿ 20: ಸದ್ಯ ದೇಶದಲ್ಲಿ ಲೋಕಸಭೆ ಚುನಾವಣೆ ನಡೆದರೆ ಭಾರತೀಯ ಜನತಾ ಪಾರ್ಟಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು 296 ಸ್ಥಾನಗಳನ್ನು ಗೆಲ್ಲಲಿದೆ. ಬಿಜೆಪಿಯು ವೈಯಕ್ತಿಕವಾಗಿ 271 ಸ್ಥಾನಗಳನ್ನು ಗಳಿಸಬಹುದಿತ್ತು ಎಂದು ಇಂಡಿಯಾ ಟುಡೇನ ನೇಷನ್ ಪೋಲ್‌ನ ಮೂಡ್ ಸೂಚಿಸಿದೆ.

ಇಂಡಿಯಾ ಟುಡೆಯ MOTN ಸಮೀಕ್ಷೆಯಲ್ಲಿ, ಪಂಜಾಬ್ ಹೊರತುಪಡಿಸಿ ಎಲ್ಲಾ ಚುನಾವಣೆಗೆ ಒಳಪಟ್ಟ ನಾಲ್ಕು ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉನ್ನತ ಕಾರ್ಯಕ್ಷಮತೆಯ ರೇಟಿಂಗ್‌ಗಳನ್ನು ಪಡೆದಿದ್ದಾರೆ.

ಚುನಾವಣೆಗೆ ಒಳಪಟ್ಟ ನಾಲ್ಕು ರಾಜ್ಯಗಳಾದ ಉತ್ತರಾಖಂಡ, ಉತ್ತರಪ್ರದೇಶ, ಗೋವಾ ಮತ್ತು ಮಣಿಪುರದಲ್ಲಿ ಪ್ರಧಾನಿ ಮೋದಿಯವರ ಸಾಧನೆ ಶೇಕಡಾ 50 ಮತ್ತು ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿವೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಸೂಚಿಸುತ್ತದೆ.

India Today MOTN Poll: Bharatiya Janata Party-led NDA to win 296 seats if Lok Sabha election is held Now

ಇಂಡಿಯಾ ಟುಡೆಯ ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಪ್ರತಿಬಿಂಬಿತವಾಗಿರುವ ಸಂಖ್ಯೆಗಳು ಸಂಸತ್ತಿನ ಕ್ಷೇತ್ರಗಳಿಗೆ ಸಂಬಂಧಿಸಿವೆ ಮತ್ತು ಸಮೀಕ್ಷೆಯ ಫಲಿತಾಂಶವು ಐದು ಚುನಾವಣೆಗೆ ಒಳಪಟ್ಟಿರುವ ರಾಜ್ಯಗಳಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳ ಫಲಿತಾಂಶದ ಬಗ್ಗೆ ಯಾವುದೇ ಸುಳಿವು ನೀಡುವುದಿಲ್ಲ.

ಯಾವ ರಾಜ್ಯದಲ್ಲಿ ಎಷ್ಟು ಮತ?
ದೇಶದಲ್ಲಿ ಅತಿಹೆಚ್ಚು ಲೋಕಸಭಾ ಕ್ಷೇತ್ರ ಹೊಂದಿರುವ ಉತ್ತರಪ್ರದೇಶದಲ್ಲಿ ಪ್ರಧಾನಿ ಮೋದಿಯವರ ಸಾಧನೆಯು ಇಂಡಿಯಾ ಟುಡೇ ಮೂಡ್ ಆಫ್ ದಿ ನೇಷನ್ ರಿಪೋರ್ಟ್ ಕಾರ್ಡ್‌ನಲ್ಲಿ ಉತ್ತಮ ವಿಭಾಗದಲ್ಲಿ ಶೇಕಡಾ 75ರಷ್ಟು, ಸರಾಸರಿ ವಿಭಾಗದಲ್ಲಿ ಒಂಭತ್ತು ಶೇಕಡಾ ಮತ್ತು ಕಳಪೆ ವಿಭಾಗದಲ್ಲಿ ಶೇಕಡಾ 16ರಷ್ಟು ಮತಗಳನ್ನು ಪಡೆದಿದ್ದಾರೆ.

ಇನ್ನು ಉತ್ತರಾಖಂಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯು ಉತ್ತಮ ವಿಭಾಗದಲ್ಲಿ ಶೇ.59, ಸರಾಸರಿ ವಿಭಾಗದಲ್ಲಿ ಶೇ.16 ಮತ್ತು ಕಳಪೆ ವಿಭಾಗದಲ್ಲಿ ಶೇ.20 ಮತ ಗಳಿಸಿದೆ ಎಂದು ಇಂಡಿಯಾ ಟುಡನ MOTN ಫಲಿತಾಂಶ ತೋರಿಸಿದೆ.

India Today MOTN Poll: Bharatiya Janata Party-led NDA to win 296 seats if Lok Sabha election is held Now

ಕರಾವಳಿ ರಾಜ್ಯ ಗೋವಾದಲ್ಲಿ ಶೇ.67ರಷ್ಟು ಪಾಲು ಪ್ರಧಾನಿ ಮೋದಿಯವರ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದರೆ, ಶೇ.13ರಷ್ಟು ಸರಾಸರಿ ವರ್ಗದಲ್ಲಿ ಮತ್ತು ಶೇ.20ರಷ್ಟು ಕಳಪೆ ಮತ ನೀಡಿದ್ದಾರೆ. ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ 73 ಪ್ರತಿಶತ ಜನರು ಪ್ರಧಾನಿ ಮೋದಿಯವರ ಕಾರ್ಯವೈಖರಿಯು ಉತ್ತಮವಾಗಿದೆ ಎಂದು ಭಾವಿಸುತ್ತಾರೆ, ಎಂಟು ಶೇಕಡಾ ಜನರು ಸರಾಸರಿ ಎಂದು ಭಾವಿಸುತ್ತಾರೆ ಮತ್ತು ಶೇಕಡಾ 18ರಷ್ಟು ಜನರು ಕಳಪೆ ಎಂದು ಭಾವಿಸಿದ್ದಾರೆ.

ಈ ರಾಜ್ಯಗಳಲ್ಲಿ ಪ್ರಧಾನಿ ಮೋದಿಯವರ ರಿಪೋರ್ಟ್ ಕಾರ್ಡ್ ಸಕಾರಾತ್ಮಕ ಅಂಕಿ- ಅಂಶಗಳಲ್ಲಿದ್ದರೆ, ಪಂಜಾಬ್‌ನಲ್ಲಿ ಕೇವಲ 37 ಪ್ರತಿಶತ ಜನರು ಮಾತ್ರ ಕಾರ್ಯಕ್ಷಮತೆ ಉತ್ತಮವಾಗಿದೆ ಎಂದು ಹೇಳಿದ್ದಾರೆ ಮತ್ತು ಶೇಕಡಾ 44ರಷ್ಟು ಜನರು ಮೋದಿಯವರ ಕಾರ್ಯಕ್ಷಮತೆ ಕಳಪೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

MOTN ಎಂದರೇನು?
ಮೂಡ್ ಆಫ್ ದಿ ನೇಷನ್ ಎಂಬುದು ಇಂಡಿಯಾ ಟುಡೇ ಗ್ರೂಪ್ ನಡೆಸಿದ ಎರಡು- ವಾರ್ಷಿಕ ರಾಷ್ಟ್ರವ್ಯಾಪಿ ಸಮೀಕ್ಷೆಯಾಗಿದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯ ಫಲಿತಾಂಶಗಳನ್ನು ಸಾಮಾನ್ಯವಾಗಿ ಪ್ರತಿ ಜನವರಿ ಮತ್ತು ಆಗಸ್ಟ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮೂಡ್ ಆಫ್ ದಿ ನೇಷನ್ ಸಮೀಕ್ಷೆಯು ಹೆಚ್ಚು ಮುಖ್ಯವಾದ ವಿಷಯಗಳ ಬಗ್ಗೆ ಸಾರ್ವಜನಿಕ ಅಭಿಪ್ರಾಯದ ಅತ್ಯಂತ ನಿಖರವಾದ ಪ್ರತಿಬಿಂಬವಾಗಿದೆ.

Recommended Video

Congress ನಲ್ಲಿ ಮತ್ತೆ ಬಿರುಕು | Oneindia Kannada

ಒಂದು ದಶಕಕ್ಕೂ ಹೆಚ್ಚು ಕಾಲ, ಈ ಸಮೀಕ್ಷೆಯು ರಾಜಕೀಯ, ಅರ್ಥಶಾಸ್ತ್ರ, ಸಮಾಜ, ಕ್ರೀಡೆ, ಸಿನಿಮಾ ಮತ್ತು ವಿದೇಶಾಂಗ ವ್ಯವಹಾರಗಳ ಮೇಲೆ ಬದಲಾಗುತ್ತಿರುವ ರಾಷ್ಟ್ರೀಯ ನಿರೂಪಣೆಗಳನ್ನು ವಿವರಿಸುತ್ತಿದೆ.

English summary
The Bharatiya Janata Party-led NDA alliance will win 296 seats if the Lok Sabha elections are held in the country today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X