ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈವಾನ್-ಭಾರತ ಭಾಯಿ ಭಾಯಿ, ಚೀನಿ ಗ್ಯಾಂಗ್‌ಗೆ ಬಿಗ್ ಶಾಕ್

|
Google Oneindia Kannada News

ಗಡಿಯಲ್ಲಿ ಪದೇಪದೆ ಭಾರತಕ್ಕೆ ಕಾಟ ಕೊಡುತ್ತಿರುವ ಚೀನಾಗೆ ಪಾಠ ಕಲಿಸಲು ನರೇಂದ್ರ ಮೋದಿ ಸರ್ಕಾರ ಮಾಸ್ಟರ್ ಪ್ಲ್ಯಾನ್ ಮಾಡಿದೆ. ಈಗಾಗಲೇ ಚೀನಾ ಶತ್ರುಗಳ ಜೊತೆ ಸ್ನೇಹ ಬೆಳೆಸಿರುವ ಭಾರತ, ತೈವಾನ್‌ಗೂ ಬಿಗ್ ಆಫರ್ ಕೊಟ್ಟಿದೆ. ತೈವಾನ್ ಜೊತೆಗೆ ಬಹುದೊಡ್ಡ ವ್ಯಾಪಾರ ಒಪ್ಪಂದಕ್ಕಾಗಿ ಚಿಂತನೆ ನಡೆದಿದೆ. ಸದ್ಯಕ್ಕೆ ಭಾರತ ಹಾಗೂ ತೈವಾನ್ ಸಂಬಂಧ ಚೆನ್ನಾಗಿಯೇ ಇದೆ.

ಆದರೆ ಭಾರತ ಈವರೆಗೂ ತೈವಾನ್‌ಗೆ ಅಧಿಕೃತ ದೇಶದ ಸ್ಥಾನಮಾನ ನೀಡಿಲ್ಲ. ಇದಕ್ಕೆ ಕಾರಣ ಚೀನಿ ಸರ್ಕಾರ, ತೈವಾನ್‌ಗೆ ಯಾವುದೇ ದೇಶ ಸ್ಥಾನಮಾನ ಕೊಟ್ಟರೂ ಚೀನಾ ಕೆಂಡವಾಗುತ್ತಿತ್ತು. ಇಷ್ಟುದಿನ ಭಾರತ ಕೂಡ ಇದೇ ಕಾರಣಕ್ಕೆ ಸುಮ್ಮನಿತ್ತು. ಆದರೆ ಈಗ ಚೀನಾದ ಉಪಟಳ ಮಿತಿಮೀರಿದ್ದು, ಚೀನಾಗೆ ಶಾಕ್ ನೀಡಲು ಭಾರತ ಮುಂದಾಗಿದೆ. ಮೊದಲಿಗೆ ವ್ಯಾಪಾರ ಒಪ್ಪಂದ ಮಾಡಿಕೊಂಡು ನಂತರದ ದಿನಗಳಲ್ಲಿ ತೈವಾನ್‌ಗೆ ಭಾರತ ಅಧಿಕೃತ ದೇಶದ ಸ್ಥಾನಮಾನ ನೀಡುವ ಸಾಧ್ಯತೆ ದಟ್ಟವಾಗಿದೆ.

ಭಾರತದಲ್ಲಿ ಪಟಾಕಿ ಹಚ್ಚಿದ್ರೆ, ಚೀನಾದಲ್ಲಿ ಈ ಸಲ ಬೆಂಕಿ ಬೀಳುತ್ತೆ! ಭಾರತದಲ್ಲಿ ಪಟಾಕಿ ಹಚ್ಚಿದ್ರೆ, ಚೀನಾದಲ್ಲಿ ಈ ಸಲ ಬೆಂಕಿ ಬೀಳುತ್ತೆ!

ಹಾಂಕಾಂಗ್ ಮೇಲೆ ಚೀನಾ ಹೇರುತ್ತಿರುವ ಒತ್ತಡದಂತೆಯೇ, ತೈವಾನ್ ತನ್ನ ವಶಕ್ಕೆ ಪಡೆಯಲು ಹಠ ಸಾಧಿಸುತ್ತಿದೆ. ಅದು ನನ್ನದೇ ಭೂಭಾಗ, ಹೀಗಾಗಿ ತೈವಾನ್ ಚೀನಾಗೆ ಸೇರಿದ್ದು ಎನ್ನುತ್ತಿದೆ ಚೀನಾ. ಹೀಗೆ ತನ್ನ ಮೇಲೆ ಎರಗುತ್ತಿರುವ ಚೀನಾಗೆ ತೈವಾನ್ ಸರಿಯಾಗಿ ತಿರುಗೇಟು ನೀಡುತ್ತಾ ಬಂದಿದೆ. ಈಗಾಗಲೇ ತೈವಾನ್ ಪರ ಅಮೆರಿಕ ನಿಂತಿದ್ದು, ಭಾರತವೂ ಹತ್ತಿರವಾಗುತ್ತಿರುವುದು ಚೀನಾಗೆ ಶಾಕ್ ನೀಡಿದೆ.

ವರ್ಷದಿಂದ ವರ್ಷಕ್ಕೆ ವ್ಯಾಪಾರ ವೃದ್ಧಿ

ವರ್ಷದಿಂದ ವರ್ಷಕ್ಕೆ ವ್ಯಾಪಾರ ವೃದ್ಧಿ

ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿದೆ. 2019ರಲ್ಲಿ ಭಾರತ ಹಾಗೂ ತೈವಾನ್ ನಡುವಿನ ವ್ಯಾಪಾರ 7.2 ಶತಕೋಟಿ ಡಾಲರ್‌ಗೆ ತಲುಪಿತ್ತು. ಈ ಮೂಲಕ ದಿಢೀರ್ ಶೇ. 18ರಷ್ಟು ವ್ಯಾಪಾರ ವೃದ್ಧಿ ಕಂಡಿತ್ತು. ಇದು ಸ್ಯಾಂಪಲ್ ಮಾತ್ರ, ಈಗ ಭಾರತ ತೈವಾನ್ ಜೊತೆಗೆ ಬಹುದೊಡ್ಡ ಮೊತ್ತದ ಒಪ್ಪಂದಕ್ಕೆ ಮುಂದಾಗಿದೆ..

ಕೆಲ ದಿನಗಳ ಹಿಂದಷ್ಟೇ ತೈವಾನ್‌ ಮೂಲದ ಕಂಪನಿಗಳಿಗೆ ಭಾರತದಿಂದ ದೊಡ್ಡ ಗಿಫ್ಟ್ ಸಿಕ್ಕಿತ್ತು. ಫಾಕ್ಸ್‌ಕಾನ್‌ ಕಂಪನಿಗೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿತ್ತು, ಈ ಮೂಲಕ ಭಾರತದ ಸ್ಮಾರ್ಟ್‌ಫೋನ್ ತಯಾರಿಕಾ ವಲಯಕ್ಕೆ 143 ಬಿಲಿಯನ್ ಡಾಲರ್ ಬಂಡವಾಳ ಹರಿಸಲು ಸಹಾಯವಾಗಿದೆ. ಈ ಒಪ್ಪಂದ ನಡೆದು ಕೆಲವು ದಿನಗಳು ಕಳೆಯುವ ಒಳಗಾಗಿ ಭಾರತ ತೈವಾನ್‌ಗೆ ಮತ್ತೊಂದು ಬಿಗ್ ಆಫರ್ ಕೊಡಲು ಮುಂದಾಗಿದೆ.

ಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿಕೊರೊನಾ ಕಂಟಕ, ಕಂಡವರ ಚಿತೆ ಮೇಲೆ ಚೀನಾ ಅಭಿವೃದ್ಧಿ

ತೈವಾನ್ ಜೊತೆಗೆ ಭಾರತಕ್ಕೂ ಲಾಭ

ತೈವಾನ್ ಜೊತೆಗೆ ಭಾರತಕ್ಕೂ ಲಾಭ

ಭಾರತದಲ್ಲಿ ಚೀನಿ ಕಂಪನಿಗಳ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಚೀನಿ ಗ್ಯಾಂಗ್ ಹಿಡಿತ ಸಾಧಿಸಿದೆ. ಮೊಬೈಲ್ ತಯಾರಿಕಾ ಕ್ಷೇತ್ರದ ಪಾಡಂತೂ ಕೇಳಲೇಬಾರದು. ಅಷ್ಟರಮಟ್ಟಿಗೆ ಚೀನಾದ ಕಂಪನಿಗಳು ಭಾರತದಲ್ಲಿ ಮಾರುಕಟ್ಟೆ ನಿಯಂತ್ರಿಸುತ್ತಿವೆ. ಹೀಗೆ ತೈವಾನ್ ಕೂಡ ಎಲೆಕ್ಟ್ರಾನಿಕ್ಸ್ ಉದ್ಯಮದಲ್ಲಿ ಭಾರಿ ಮುಂಚೂಣಿಯಲ್ಲಿದೆ. ಹೀಗಾಗಿ ಅಲ್ಲಿಂದ ಬಂಡವಾಳ ಭಾರತಕ್ಕೆ ಹರಿದುಬಂದರೆ ಚೀನಾಗೆ ತಿರುಗೇಟು ಕೊಡುವ ಜೊತೆಗೆ, ಭಾರತದಲ್ಲಿ ಉದ್ಯಮಗಳ ಬೆಳವಣಿಗೆಗೂ ಸಹಕಾರಿಯಾಗುತ್ತದೆ. ಅಲ್ಲದೆ ತೈವಾನ್‌ ನನ್ನ ಜಾಗ ಎನ್ನುತ್ತಿರುವ ಚೀನಾಗೆ ಮುಖಭಂಗವಾಗಲಿದೆ.

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಮಿಲಿಟರಿ ಪಂಚ್ ಕೊಟ್ಟಿತ್ತು ತೈವಾನ್..!

ಚೀನಾ ಹಾಗೂ ತೈವಾನ್ ಸಂಘರ್ಷ ಕೆಲ ತಿಂಗಳಿಂದ ಉಗ್ರ ಸ್ವರೂಪ ಪಡೆಯುತ್ತಿದೆ. ಚೀನಾ ಪದೇ ಪದೆ ತೈವಾನ್ ವಿಚಾರ ಕೆದಕುವಾಗಲೇ, ಜುಲೈನಲ್ಲಿ ತೈವಾನ್ ಮಿಲಿಟರಿ ದಿಟ್ಟತನ ಪ್ರದರ್ಶಿಸಿತ್ತು. ಚೀನಾ ಕಡೆಗೆ ಮುಖ ಮಾಡಿರುವ ತೈಚುಂಗ್‌ನ ದ್ವೀಪವೊಂದರ ಕಡಲ ತೀರದ ಬಳಿ ತೈವಾನ್‌ ಸೇನೆ ಸಮರಾಭ್ಯಾಸ ನಡೆಸಿತ್ತು. ಸಮರಾಭ್ಯಾಸದ ವೇಳೆ ತೈವಾನ್‌ನ ಯುದ್ಧ ವಿಮಾನಗಳು, ಹೆಲಿಕಾಪ್ಟರ್ಸ್ ಸಮುದ್ರಕ್ಕೆ ಕ್ಷಿಪಣಿ ಹಾಗೂ ಬಾಂಬ್‌ಗಳನ್ನು ಉಡಾಯಿಸುವ ಮೂಲಕ ಚೀನಾಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದವು. ಇದು ತೈವಾನ್ ಸೇನೆಯ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.

ಚೀನಾ ಎದುರು ಹಿನ್ನಡೆ, ಏಷ್ಯಾದ 4ನೇ ಶಕ್ತಿಶಾಲಿ ದೇಶ ಭಾರತ: ವರದಿಚೀನಾ ಎದುರು ಹಿನ್ನಡೆ, ಏಷ್ಯಾದ 4ನೇ ಶಕ್ತಿಶಾಲಿ ದೇಶ ಭಾರತ: ವರದಿ

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ಕಮ್ಯುನಿಸ್ಟರ ಪಕ್ಕದಲ್ಲೇ ಪ್ರಜಾಪ್ರಭುತ್ವ..!

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲಿ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ.

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಚೀನಾ, ತೈವಾನ್ ಮಧ್ಯೆ ನಿರಂತರ ಘರ್ಷಣೆ

ಆರಂಭದಲ್ಲಿ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನ ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನ. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ನಂತರ ಚೀನಾ ಮತ್ತು ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು.

ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!ತಿನ್ನಲು ಅನ್ನ ಅಹಾರವಿಲ್ಲ, ಆದರೂ ಚೀನಾಗೆ ಯುದ್ಧ ಬೇಕು..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಬದಲಾವಣೆ ತಂದಿದ್ದೇ ‘ಮಿಸ್ಟರ್ ಡೆಮಾಕ್ರಸಿ’..!

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ನ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಸಾಮ್ರಾಜ್ಯಶಾಹಿ ಚೀನಾ ಕೈಕೆಳಗೆ ನರಳಿ ಬದುಕಬೇಕಾಗಿತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಸಂಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು.

1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದು ಬೀಗಿದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು. ಬಳಿಕ ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್' ಲೀ ಸಾವಿನ ಬಗ್ಗೆ ಅಹಿತಕರ ವರದಿ ಪ್ರಕಟಿಸಿತ್ತು. ಈಗ ಮತ್ತೆ ಚೀನಾ ಕ್ಯಾತೆ ತೆಗೆದಿರೋದು ಅಮೆರಿಕ ಸೇರಿದಂತೆ ಚೀನಾದ ಶತ್ರು ರಾಷ್ಟ್ರಗಳನ್ನ ಕೆರಳಿಸಿದೆ.

English summary
Indian government to formally started talks on a trade deal with Taiwan. This will give shock to china & this deal can help Indian economy to recover from pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X