ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ವೀಲ್‌ಚೇರ್ ಆಹಾರ ವಿತರಣಾ ವ್ಯಕ್ತಿ: ಹೃದಯಸ್ಪರ್ಶಿ ಕಥೆ ಕೇಳಿ

|
Google Oneindia Kannada News

ಒಂದು ಕ್ಲಿಕ್‌ನಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಮಾಹಿತಿಯೊಂದಿಗೆ ಇಂಟರ್ನೆಟ್ ನಮ್ಮ ಜೀವನವನ್ನು ಹೆಚ್ಚು ಸುಲಭಗೊಳಿಸಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಕೆಲ ಕಾರ್ಯಗಳು ಸುಲಭಗೊಳ್ಳಲು ಹಲವಾರು ಜನರ ಶ್ರಮವಿರುತ್ತದೆ ಎನ್ನುವುದನ್ನ ನಾವು ಮರೆಯಬಾರದು. ಎಷ್ಟೋ ಜನರ ಸ್ಪೂರ್ತಿದಾಯಕ ಕಥೆಗಳು ಇದರಲ್ಲಿ ಅಡಗಿವೆ. ಈ ಕಥೆಗಳು ನಮ್ಮ ಕನಸುಗಳನ್ನು ನನಸಾಗಿಸಲು ಶ್ರಮಿಸುವಂತೆ ಪ್ರೇರೇಪಿಸುತ್ತವೆ. ಇಂದು ಅಂತಹ ರೋಮಾಂಚನಕಾರಿ ಕಥೆಯನ್ನು ನಿಮಗೆ ಹೇಳಲು ಹೊರಟಿದ್ದೇವೆ.

ಚೆನ್ನೈನ 37 ವರ್ಷದ ವ್ಯಕ್ತಿ ಗಣೇಶ್ ಮುರುಗನ್. ಇವರು ವೀಲ್‌ಚೇರ್ ನಲ್ಲಿ ಜನರಿಗೆ ಆಹಾರವನ್ನು ತಲುಪಿಸುತ್ತಾರೆ. ಸುಮಾರು ಆರು ವರ್ಷಗಳ ಹಿಂದೆ, ಅವರು ಟ್ರಕ್‌ಗೆ ಡಿಕ್ಕಿ ಹೊಡೆದ ನಂತರ ಬೆನ್ನಿಗೆ ತೀವ್ರ ಗಾಯವಾಯಿತು. ಇದರಿಂದಾಗಿ ಅವರು ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಈ ದುರ್ಘಟನೆಯಿಂದ ಅವರು ನಡೆಯಲು ಸಾಧ್ಯವಾಗುತ್ತಿಲ್ಲ. ಇದರಿಂದ ವಿಚಲಿತರಾಗದ ಗಣೇಶ ಅವರು ತಮ್ಮ ಕೆಲಸಕ್ಕಾಗಿ ಮೋಟಾರ್ ಚಾಲಿತ ವೀಲ್‌ಚೇರ್ ಅನ್ನು ಬಳಸಿಕೊಳ್ಳುವ ಮೂಲಕ ಸ್ವಾವಲಂಬಿಯಾಗಿ ದುಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಆನಂದ್ ಸಿಂಗ್, ಕಂಪ್ಲಿ ಗಣೇಶ್ ಹೊಡೆದಾಟ ಪ್ರಕರಣ ಇತ್ಯರ್ಥ! ಆನಂದ್ ಸಿಂಗ್, ಕಂಪ್ಲಿ ಗಣೇಶ್ ಹೊಡೆದಾಟ ಪ್ರಕರಣ ಇತ್ಯರ್ಥ!

ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಟ್ವಿಟರ್ ಹ್ಯಾಂಡಲ್ '@ipskabra' ನಲ್ಲಿ ಕಥೆಯನ್ನು ಹಂಚಿಕೊಂಡಿದ್ದಾರೆ.

Indias first wheelchair food delivery man: Hear the heartwarming story

ಐಐಟಿ ಮದ್ರಾಸ್‌ನ ಸ್ಟಾರ್ಟ್‌ಅಪ್‌ನಿಂದ ಮೋಟಾರ್ ಚಾಲಿತ 2-ಇನ್-1 ವೀಲ್‌ಚೇರ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ದೀಪಾಂಶು ಕಾಬ್ರಾ ಬಹಿರಂಗಪಡಿಸಿದ್ದಾರೆ. ಮೋಟಾರ್ ಚಾಲಿತ ವೀಲ್‌ಚೇರ್ ಪುಶ್ ಬಟನ್ ಅನ್ನು ಹೊಂದಿದೆ. ಇದು ಗಣೇಶ್‌ಗೆ ಎತ್ತರದ ಕಟ್ಟಡಗಳು ಮತ್ತು ಸವಾರಿ ಕಷ್ಟಕರವಾಗಿರುವ ಇತರ ಸ್ಥಳಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ.

ವೀಲ್‌ಚೇರ್ ಚಾರ್ಜ್ ಮಾಡಲು ನಾಲ್ಕು ಗಂಟೆ ತೆಗೆದುಕೊಳ್ಳುತ್ತದೆ ಮತ್ತು 25 ಕಿಲೋಮೀಟರ್‌ಗಳವರೆಗೆ ಓಡಬಹುದು ಎಂದು ದೀಪಾಂಶು ಕಾಬ್ರಾ ಹಂಚಿಕೊಂಡಿದ್ದಾರೆ. ಮುರುಗನ್ ಅವರನ್ನು ಶ್ಲಾಘಿಸುತ್ತಾ, "ಗಣೇಶ್ ಮುರುಗನ್ ಕಷ್ಟಗಳೊಂದಿಗೆ ಹೋರಾಡುವ ಸೋಲುವ ಎಲ್ಲರಿಗೂ ಸ್ಫೂರ್ತಿ" ಎಂದು ಬರೆದಿದ್ದಾರೆ.

ವಿತರಣಾ ಜನರ ಬಗ್ಗೆ ನಾವು ಅನೇಕ ಪ್ರಭಾವಶಾಲಿ ಕಥೆಗಳನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಗಣೇಶ್ ಮುರುಗನ್ ಕಥೆಯೂ ನಮ್ಮ ಹೃದಯವನ್ನು ಕದಲಿಸಿದೆ ಎಂದು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಬರೆದಿದ್ದಾರೆ.

English summary
A 37-year-old man Ganesh Murugan is India's first wheelchair food delivery man in chennai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X