ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯುವ ನೀರಿನ ಝುಳು ಝುಳು ನಾದವುಳ್ಳ ಸ್ಟ್ರೀಂ ರೆಸ್ಟೋರೆಂಟ್‌ ಓಪನ್

|
Google Oneindia Kannada News

ಬೆಂಗಳೂರು ಅಕ್ಟೋಬರ್‌ 4: ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ - ಸ್ಟೋನಿ ಬ್ರೂಕ್‌ ಅಕ್ಟೋಬರ್‌ 5 ರಂದು ಗ್ರಾಹಕರಿಗೆ ಪ್ರಾರಂಭವಾಗಿದೆ. ಜಗತ್ತಿನಲ್ಲಿಯೇ ಮೊದಲ ಬಾರಿಗೆ "ಸ್ಟ್ರೀಂ ಫ್ಯಾಶನ್‌ ಶೋʼ ಮೂಲಕ ದೇಶದ ಮೊದಲ ಸ್ಟ್ರೀಂ ರೆಸ್ಟೋರೆಂಟ್‌ - ಸ್ಟೋನಿ ಬ್ರೂಕ್‌ ಗೆ ಚಾಲನೆ ನೀಡಲಾಗಿದೆ.

ಜಗಮಗಿಸುತ್ತಿರುವ ಲೈಟ್‌ ಗಳು, ಹರಿಯುವ ಝುಳು ಝುಳ ನೀರು, ತಣ್ಣನೆಯ ನೀರಿನ ಮೇಲೆ ನಾರಿಯರ ರಾಂಪ್‌ ವಾಕ್‌. ಈ ದೃಶ್ಯಗಳು ಕಂಡುಬಂದಿದ್ದು ದೇಶದ ಮೊದಲ ಸ್ಟ್ರೀಂ ರೆಸ್ಟೋರೆಂಟ್‌ ಸ್ಟೋನೀ ಬ್ರೂಕ್‌ ನಲ್ಲಿ.

ಸ್ಟೋನಿ ಬ್ರೂಕ್‌ನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ರುಚಿ ಭೋಜನ ಸವಿಯಿರಿಸ್ಟೋನಿ ಬ್ರೂಕ್‌ನಲ್ಲಿ ಹರಿಯುವ ನೀರಿನ ಮಧ್ಯೆ ಕುಳಿತು ರುಚಿ ಭೋಜನ ಸವಿಯಿರಿ

ಬೆಂಗಳೂರು ನಗರದ ಜನರಿಗೆ ಹೊಸದನ್ನು ನೀಡಬೇಕು ಎನ್ನುವ ಹುಮ್ಮಸ್ಸಿನಲ್ಲಿ ಪ್ರಾರಂಭವಾಗಿರುವ ಸ್ಟೋನಿ ಬ್ರೂಕ್‌ ಎಲ್ಲರ ಗಮನ ಸೆಳೆಯುತ್ತಿದೆ. ಇದಕ್ಕೆ ಮೆರಗು ನೀಡಿದ್ದು ನಾರಿಯರ ರಾಂಪ್‌ ವಾಕ್‌. ಜಗತ್ತಿನಲ್ಲಿಯೇ ಮೊದಲ ಬಾರಿಗೆ ನೀರಿನ ರಾಂಪ್‌ ಮೇಲೆ ಹೆಜ್ಜೆ ಇಟ್ಟ ನಾರಿಯರು ಎಲ್ಲರಲ್ಲೂ ಪುಳಕ ಮೂಡಿಸಿದರು.

ನೀರಿನ ಹೀಲಿಂಗ್‌ ಪವರ್‌ ಹಾಗೂ ನೀರನ್ನು ಪುನರ್‌ ಬಳಕೆ ಮಾಡಬೇಕು ಎನ್ನುವ ಮೂಲ ಉದ್ದೇಶವನ್ನು ಹೊಂದಿರುವ ಈ ರೆಸ್ಟೋರೆಂಟ್‌ ನಲ್ಲಿ ಅನೇಕ ವಿಶೇಷತೆಗಳನ್ನು ಅಳವಡಿಸಲಾಗಿದೆ.

ಭಾರತದ 17 ನಗರಗಳಲ್ಲಿ ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್ಭಾರತದ 17 ನಗರಗಳಲ್ಲಿ ಗ್ರೇಟ್ ಇಂಡಿಯನ್ ರೆಸ್ಟೋರೆಂಟ್ ಫೆಸ್ಟಿವಲ್

ಫಿಲಿಫೈನ್ಸ್‌ ದೇಶದ ವಾಟರ್‌ ಫಾಲ್‌ ರೆಸ್ಟೋರೆಂಟ್‌ ನಿಂದ ಪ್ರಭಾವಿತರಾದ ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ವಿ ನಗರದ ಜನತೆಗೆ ಹೊಸತಾದ ಅನುಭವ ನೀಡುವ ಉದ್ದೇಶದಿಂದ ಈ ಹರಿಯುವ ನೀರಿನ ರೆಸ್ಟೋರೆಂಟನ್ನು ಪ್ರಾರಂಭಿಸಿದ್ದೇವೆ. ಈ ರೆಸ್ಟೋರೆಂಟ್‌ ನಲ್ಲಿ ಯಾವುದೇ ಅಬ್ಬರದ ಸಂಗೀತವನ್ನು ಹಾಕಲಾಗುವುದಿಲ್ಲ. ಹರಿಯುವ ನೀರಿನ ಝುಳು ಝುಳು ನಾದವೇ ಇಲ್ಲಿಯ ಸಂಗೀತವಾಗಿರಲಿದೆ ಎನ್ನುತ್ತಾರೆ ರೆಸ್ಟೊರೆಂಟ್‌ ನ ಮಾಲೀಕರಾದ ವಿನಯ್‌ ವಿ.

ಸ್ಟ್ರೀಂ ರೆಸ್ಟೋರೆಂಟ್‌ ವಿಶೇಷತೆಗಳು

ಸ್ಟ್ರೀಂ ರೆಸ್ಟೋರೆಂಟ್‌ ವಿಶೇಷತೆಗಳು

ಕಿವಿಗೆ ತಂಪೆನಿಸುವ ಝುಳು ಝುಳು ನೀರಿನ ಶಬ್ದ ಕೇಳುತ್ತಾ. ಹರಿಯುತ್ತಿರುವ ಹಿತವಾದ ನೀರಿನಲ್ಲಿ ಪಾದಗಳನ್ನು ಆಡಿಸುತ್ತಾ, ಸವಿಯಾದ ಪದಾರ್ಥಗಳನ್ನು ಸೇವಿಸುವ ಅವಕಾಶ ಬಹಳಷ್ಟು ಜನರಿಗೆ ಸುಲಭವಾಗಿ ಲಭ್ಯವಾಗುವುದಿಲ್ಲ. ಬೆಂಗಳೂರು ನಗರದ ಒಳಗೆ ಇಂತಹ ಸುಂದರ ಅನುಭೂತಿಯನ್ನ ಪಡೆಯುವ ಅವಕಾಶವನ್ನು ವಿರೌಡ್ ವೆಂಚರ್ಸ್‌ ನ ಮಾಲೀಕರಾದ ವಿನಯ್‌ ವಿ ಕಲ್ಪಿಸಿಕೊಟ್ಟಿದ್ದಾರೆ.

ಹೌದು, ಹರಿಯುತ್ತಿರುವ ನೀರಿನ ಮಧ್ಯೆ ಕುಳಿತು ಭೋಜನ ಸವಿಯುವ ಅವಕಾಶವನ್ನು ನೀಡುವ ನೂತನ ಹಾಗೂ ದೇಶದಲ್ಲೇ ಮೊದಲ ಸ್ಟ್ರೀಂ ರೆಸ್ಟೊರೆಂಟ್‌ - ಸ್ಟೋನಿ ಬ್ರೂಕ್‌ ಅಕ್ಟೋಬರ್‌ 5 ರಂದು ಗ್ರಾಹಕರಿಗೆ ಪ್ರಾರಂಭವಾಗಲಿದೆ.

ಪುನರ್ಬಳಕೆ ನೀರನ್ನು ಬಳಸಿದ ರೆಸ್ಟೋರೆಂಟ್

ಪುನರ್ಬಳಕೆ ನೀರನ್ನು ಬಳಸಿದ ರೆಸ್ಟೋರೆಂಟ್

ಹತ್ತು ಸಾವಿರ ಲೀಟರ್‌‌ ಪುನರ್ಬಳಕೆ ನೀರನ್ನು ಬಳಸಿ ಈ ರೆಸ್ಟೋರೆಂಟ್‌ ನಲ್ಲಿ ನೀರು ಹರಿಯುವ ಪ್ರದೇಶವನ್ನು ನಿರ್ಮಿಸಲಾಗಿದೆ. ಸುತ್ತಲೂ ಹಸಿರು ಹಾಗೂ ಗಿಡ ಮರಗಳಿಂದ ಕಂಗೊಳಿಸುತ್ತಿರುವ ಈ ರೆಸ್ಟೋರೆಂಟ್‌ ನಲ್ಲಿ ಒಟ್ಟಿಗೆ 250 ಜನರು ಹರಿಯುವ ನೀರಿನಲ್ಲಿ ಕುಳಿತು ಭೋಜನ ಸವಿಯಬಹುದಾಗಿದೆ.

ಫಿಶ್ ಪೆಡಿಕ್ಯೂರ್‌

ಫಿಶ್ ಪೆಡಿಕ್ಯೂರ್‌

ಈ ರೆಸ್ಟೋರೆಂಟ್‌ ನ ಮತ್ತೊಂದು ವಿಶೇಷತೆ ಫಿಶ್ ಪೆಡಿಕ್ಯೂರ್‌. ಇಂತಹ ಅನುಭವ ನೀಡಲಿರುವ ದೇಶದಲ್ಲೇ ಮೊದಲ ರೆಸ್ಟೋರೆಂಟ್‌ ಇದಾಗಿರಲಿದೆ. ರೆಸ್ಟೋರೆಂಟ್‌ ಗೆ ಬರುವ ಗ್ರಾಹಕರು ತಮ್ಮ ಪಾದರಕ್ಷೆಗಳನ್ನು ಬಿಟ್ಟು ಮೊದಲು ಈ ಫಿಶ್ ಪೆಡಿಕ್ಯೂರ್‌ ನಲ್ಲಿ ಕಾಲ ಕಳೆಯಬಹುದು. ನಂತರ ಅವರವರ ಅಗತ್ಯತೆಯ ತಕ್ಕಂತೆ ಸೀಟೀಂಗನ್ನು ನೀಡಲಾಗುವುದು.

ಐದು ರೀತಿಯ ಸೀಟಿಂಗ್‌ ಏರಿಯಾ

ಐದು ರೀತಿಯ ಸೀಟಿಂಗ್‌ ಏರಿಯಾ

ಕೇವಲ ಹರಿಯುವ ನೀರು ಅಷ್ಟೇ ಅಲ್ಲದೆ ಒಟ್ಟಾರೆಯಾಗಿ ಐದು ರೀತಿಯ ಸೀಟಿಂಗ್‌ ಏರಿಯಾವನ್ನು ಸ್ಟೋನೀ ಬ್ರೂಕ್‌ ನಲ್ಲಿ ನಿರ್ಮಿಸಲಾಗಿದೆ. ಸ್ಟ್ರೀಂ ವಾಟ್‌, ಅಂಡರ್‌ ಗ್ರೌಂಡ್‌, ಅರ್ಥ, ರೂಫ್‌ ಟಾಪ್‌ ಹಾಗೂ ಕಾರುಗಳಲ್ಲಿ ಸೀಟಿಂಗ್‌ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ, ಬಳಸಿದ ಕಾರು ಹಾಗೂ ಇನ್ನಿತರೆ ವಾಹನಗಳಲ್ಲಿ ಖಾಸಗಿಯಾದ ಡೈನಿಂಗ್‌ ಏರಿಯಾವನ್ನು ರಚಿಸಲಾಗಿದೆ.

ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಹಾಗೂ ಪೇಪರ್ ಸ್ಟ್ರಾ

ಪರಿಸರ ಸ್ನೇಹಿ ಬಿದರಿನ ಮಗ್ಗುಗಳು ಹಾಗೂ ಪೇಪರ್ ಸ್ಟ್ರಾ

ಪರಿಸರ ಸ್ನೇಹಿಯಾಗಿರುವ ರೆಸ್ಟೋರೆಂಟ್‌ ಇದಾಗಿರಬೇಕು ಎನ್ನುವುದು ನಮ್ಮ ಪ್ರಮುಖ ಉದ್ದೇಶವಾಗಿತ್ತು. ಈ ಹಿನ್ನಲೆಯಲ್ಲಿ ರೆಸ್ಟೋರೆಂಟ್‌ ನಲ್ಲಿ ನೀರು ಕುಡಿಯಲು ವಿನೂತನವಾಗಿ ಬಿದರಿನ ಮಗ್‌ ಗಳು ಹಾಗೂ ಪೇಪರ್‌ ಸ್ಟ್ರಾಗಳನ್ನು ನೀಡಲಾಗುವುದು. ಅಲ್ಲದೆ, ದುಬಾಯಿ ಯಿಂದ ತರಿಸಲಾಗಿರುವ ವಿಶಿಷ್ಟ ಪ್ಲೇಟ್ ಹಾಗೂ ಕಟ್ಲರಿಗಳನ್ನ ಇಲ್ಲಿ ಬಳಸಲಾಗುತ್ತಿದೆ.

ವೈನ್‌ ಗಳ ಭಂಡಾರ

ವೈನ್‌ ಗಳ ಭಂಡಾರ

ಇಟಾಲಿಯನ್‌ ವೈನ್‌ ಗಳ ಭಂಡಾರವೇ ಇಲ್ಲಿದೆ. ದೇಶ - ವಿದೇಶದ ಪ್ರಮುಖ ವೈನ್‌ ಗಳನ್ನು ಇಲ್ಲಿ ಸವಿಯಬಹುದಾಗಿದೆ. ಕೇವಲ ವೈನ್‌ ಮಾತ್ರ ಇಲ್ಲಿ ದೊರೆಯಲಿದೆ.

ಐದು ದೇಶಗಳ ಖಾದ್ಯಗಳು: ಸ್ಟೋನಿ ಬ್ರೂಕ್‌ ನಲ್ಲಿ ಚೈನೀಸ್‌, ಥಾಯಿ, ಜಪಾನೀಸ್‌, ಇಂಡೋನೇಷಿಯನ್‌ ಹಾಗೂ ಇಟಲಿಯ ಪ್ರಮುಖ ಖಾದ್ಯಗಳು ದೊರೆಯಲಿವೆ. ಇದರ ಜೊತೆಯಲ್ಲಿಯೇ ಭಾರತ ದೇಶದ ಎಲ್ಲಾ ಥರಹದ ಥರೇವಾರಿ ಖಾದ್ಯಗಳನ್ನು ಇಲ್ಲಿ ಸವಿಯಬಹುದಾಗಿದೆ. ವೈನ್‌ ಜೊತೆಯಲ್ಲಿ ಸವಿಯಬಹುದಾದ ಖಾದ್ಯಗಳ ಪಟ್ಟಿಯೇ ಇಲ್ಲಿರಲಿದೆ.

ಕಾಪರ್‌ - ವುಡ್‌ ಫೈರ್‌ ಪಿಜ್ಜಾ

ಕಾಪರ್‌ - ವುಡ್‌ ಫೈರ್‌ ಪಿಜ್ಜಾ

ತಾಮ್ರದ ಉಪಯೋಗ ಎಲ್ಲರಿಗೂ ತಿಳಿದೇ ಇದೆ. ತಾಮ್ರದ ಒಳ್ಳೆಯ ಗುಣವನ್ನು ತನ್ನ ಗ್ರಾಹಕರಿಗೆ ನೀಡುವ ದೃಷ್ಟಿಯಿಂದ ಹಾಗೂ ಬೆಂಕಿಯ ಶಾಖವನ್ನು ಸರಿಯಾದ ಉಪಯೋಗ ಮಾಡುವ ದೃಷ್ಟಿಯಿಂದ ತಾಮ್ರದ ಕೋಟಿಂಗ್‌ ಇರುವ ದೊಡ್ಡ ಒವನ್ನು ನಿರ್ಮಿಸಲಾಗಿದೆ. ಈ ಓವನ್‌ ನ್ನು ವುಡ್‌ ಫೈರ್‌ ನಿಂದ ಬಿಸಿಗೊಳಿಸಲಾಗುವುದು. ಈ ಕಾಪರ್‌ - ವುಡ್‌ ಫೈರ್‌ ಪಿಜ್ಜಾ ಸವಿಯನ್ನು ಸವಿದವನೇ ಬಲ್ಲ.

English summary
India’s first Stream Restaurant Stonny Brook inaugurated in a high note. To mark the occasion for the first time in the world “Stream Fashion Show” was organised. Tourism Minister C T Ravi has visited “Stonny Brook” and appreciated the new efforts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X