• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶತಾಬ್ದಿಗೆ ಸೆಡ್ಡು ಹೊಡೆಯಲು ಹಳಿಗಿಳಿದ ಇಂಜಿನ್ ರಹಿತ 'ಟ್ರೈನ್ 18'

|

ಚೆನ್ನೈ, ಅಕ್ಟೋಬರ್ 30: ಇಂಟರ್ ಸಿಟಿ ಪ್ರಯಾಣಿಕರ ನೆಚ್ಚಿನ ರೈಲು ಶತಾಬ್ದಿ ಎಕ್ಸ್ ಪ್ರೆಸ್ ಗೆ ಸೆಡ್ಡು ಹೊಡೆಯಲು ಟ್ರೈನ್ 18 ಹಳಿಗಿಳಿದಿದೆ.

ಚೆನ್ನೈನ ಇಂಟರ್ಗಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ನಿರ್ಮಿತ ಟ್ರೈನ್ 18 ರೈಲು ಭಾರತದ ಪ್ರಪ್ರಥಮ ಇಂಜಿನ್ ರಹಿತ ಸೆಮಿ ಹೈಸ್ಪೀಡ್ ಟ್ರೈನ್ ಎನಿಸಿಕೊಂಡಿದೆ.

ಏನಿದು ಹೈಡ್ರೋಜನ್ ಟ್ರೈನ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

30 ವರ್ಷ ಹಳೆಯ ಶತಾಬ್ದಿ ತೆಗೆದುಕೊಳ್ಳುವ ಪ್ರಯಾಣದ ಅವಧಿಯನ್ನು ಶೇ 15ರಷ್ಟು ಟ್ರೈನ್ 18 ಕಡಿಮೆ ಮಾಡಲಿದೆ. ಈಗಿರುವ ರೈಲುಗಳಿಗೆ ಅಂದರೆ ಸಾಂಪ್ರದಾಯಿಕ ರೈಲುಗಳಿಗಿಂತ ಶೇಕಡಾ 50ರಷ್ಟು ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಸ್ಮಾರ್ಟ್ ಬ್ರೇಕಿಂಗ್ ಸಿಸ್ಟಮ್ ಇದ್ದು, ಇದನ್ನು ಹಂಗೇರಿ ದೇಶದಿಂದ ಆಮದು ಮಾಡಿಕೊಳ್ಳಲಾಗಿದೆ.

ಮೇಕ್ ಇನ್ ಇಂಡಿಯಾ ಕೂಸಾಗಿರುವ ಈ ರೈಲಿನಲ್ಲಿ ಏನೇನುಂಟು?

16 ಬೋಗಿಗಳ ಈ ರೈಲುಗಳ ವೆಚ್ಚ ಪ್ರತಿ ರೇಕ್ ಗೆ 100 ಕೋಟಿ ರೂ.ಗಳಾಗಿದೆ. ಇದರಲ್ಲಿ ಶೇ.80ರಷ್ಟು ಭಾಗಗಳು ಭಾರತದಲ್ಲೇ ನಿರ್ಮಿಸಲಾಗಿದೆ. ರೈಲಿನ ಗರಿಷ್ಠ ವೇಗ ಗಂಟೆಗೆ 160 ಕಿ.ಮೀ. ಆಗಿದೆ. ಪ್ರತ್ಯೇಕ ಇಂಜಿನ್ ಹೊಂದಿರದ ದೂರಪ್ರಯಾಣದ ಮೊದಲ ರೈಲು ಇದಾಗಿದೆ. ಉತ್ಪಾದನಾ ಘಟಕದ ಆವರಣದಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೊಹಾನಿ ಅವರು ರೈಲಿಗೆ ಹಸಿರು ನಿಶಾನೆ ತೋರಿಸಿದರು.

ಪ್ರತ್ಯೇಕ ಇಂಜಿನ್ ಹೊಂದಿರದದ್ 'ಟ್ರೈನ್ 18'

ಪ್ರತ್ಯೇಕ ಇಂಜಿನ್ ಹೊಂದಿರದದ್ 'ಟ್ರೈನ್ 18'

ಸಂಪೂರ್ಣ ಹವಾನಿಯಂತ್ರಿತವಾಗಿರುವ ರೈಲು, ಸೂಕ್ತ ಮೂಲಭೂತ ಸೌಲಭ್ಯ ದೊರೆತರೆ ಅತ್ಯಂತ ವೇಗದ ರೈಲಾಗಲಿದೆ. 2019-20ರ ವೇಳೆಗೆ ಇನ್ನೂ ಐದು ರೈಲುಗಳನ್ನು ಇದೇ ಘಟಕದಲ್ಲಿ ಉತ್ಪಾದಿಸಲಾಗುವುದು ಎಂದು. ಐ.ಸಿ.ಎಫ್. ಕೇವಲ 18 ತಿಂಗಳಲ್ಲಿ ಉತ್ಪಾದನೆ ಪೂರ್ಣಗೊಳಿಸಿರುವುದು ನಮಗೆ ಹೆಮ್ಮೆ ತಂದಿದೆ ಎಂದು ಐಸಿಎಫ್ ಮುಖ್ಯಸ್ಥ ಅಶ್ವನಿ ಲೊಹಾನಿ ಹೇಳಿದ್ದಾರೆ.

ಪ್ರಯಾಣದ ಸಮಯವನ್ನು ಶೇ.15ರಷ್ಟು ಇಳಿಕೆ

ಪ್ರಯಾಣದ ಸಮಯವನ್ನು ಶೇ.15ರಷ್ಟು ಇಳಿಕೆ

30 ವರ್ಷಗಳ ಹಳೆಯ ಶತಾಬ್ದಿ ರೈಲುಗಳಿಗೆ ಹೋಲಿಸಿದರೆ, ಈ ರೈಲು ಪ್ರಯಾಣದ ಸಮಯವನ್ನು ಶೇ.15ರಷ್ಟು ಇಳಿಕೆ ಮಾಡಲಿದೆ. ಟ್ರೈನ್ - 18 ಎರಡು ಚಾಲನೆ ಮೂತಿ ಹೊಂದಿರುವ ಬೋಗಿಗಳನ್ನು ಹೊಂದಿರಲಿದೆ. ಚಾಲಕನ ಕ್ಯಾಬಿನ್ ಚೂಪು ಮೂತಿಯದ್ದಾಗಿರಲಿದೆ.

ರೈಲ್ವೆ ಇಲಾಖೆ ಮುಂದಿನ ಹಂತದಲ್ಲಿ ಟ್ರೈನ್ - 20 ಕಡೆ ಗಮನ ಹರಿಸಲಿದೆ. ಇದು ಮುಂದಿನ ಪೀಳಿಗೆಯ ರೈಲಾಗಿದ್ದು, ರಾಜಧಾನಿ ಎಕ್ಸ್ ಪ್ರೆಸ್ ಗಳ ಜಾಗದಲ್ಲಿ ಕಾರ್ಯ ನಿರ್ವಹಿಸಲಿವೆ. ಇವು 2020ರ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆ ಇದೆ.

360 ಡಿಗ್ರಿ ತಿರುಗುವ ಸೀಟುಗಳು

360 ಡಿಗ್ರಿ ತಿರುಗುವ ಸೀಟುಗಳು

ಪ್ರತಿ ಬೋಗಿಯಲ್ಲೂ 6 ಸಿಸಿಟಿವಿ ಕ್ಯಾಮೆರಾ ಇರುತ್ತವೆ. ಡ್ರೈವರ್ ಬೋಗಿಯಿಂದ ಆಚೆಗೆ ಒಂದು ಸಿಸಿಟಿವಿ ಇದ್ದು, ಪ್ರಯಾಣಿಕರನ್ನು ಅದರ ಮೂಲಕ ನಿಗಾ ಮಾಡಬಹುದು. 360 ಡಿಗ್ರಿ ತಿರುಗುವ ಸೀಟುಗಳನ್ನು ಸ್ಪೇನ್ ನಿಂದ ಆಮದು ಮಾಡಿಕೊಳ್ಳಲಾಗಿದೆ. ಚಾಲಕರಿಗೆ ಟಾಕ್ ಬ್ಯಾಕ್ ವ್ಯವಸ್ಥೆಯಿದೆ. ಪ್ರತಿ ಕೋಚ್ ನಲ್ಲಿ ತುರ್ತು ಸ್ವಿಚ್ ಇದೆ. ಅಂಗವಿಕಲರಿಗಾಗಿ 2 ಶೌಚಾಲಯ ಮತ್ತು ಮಕ್ಕಳ ನಿಗಾಕ್ಕೆ ಪ್ರತ್ಯೇಕ ಸ್ಥಳವಿದೆ. ಆಹಾರ ವಸ್ತುಗಳನ್ನು ಇಡಲು ವಿಶೇಷ ವ್ಯವಸ್ಥೆ ಇರುತ್ತದೆ.

 ಯಂತ್ರಗಳ ಸಹಾಯದಿಂದ ಚಲಿಸುವ ರೈಲು

ಯಂತ್ರಗಳ ಸಹಾಯದಿಂದ ಚಲಿಸುವ ರೈಲು

16 ಏಸಿ ಬೋಗಿಗಳು, 2 ಎಕ್ಸ್ ಕ್ಯುಟಿವ್ ಬೋಗಿಗಳಿವೆ. ಡೈವಿಂಗ್ ಬೋಗಿಯಲ್ಲಿ 44 ಸೀಟುಗಳಿದ್ದರೆ, ಟ್ರೇಲರ್ ಬೋಗಿಯಲ್ಲಿ 78 ಸೀಟುಗಳಿವೆ. ಎಕ್ಸ್ ಕ್ಯುಟಿವ್ ಛೇರ್ ಕಾರ್ ನಲ್ಲಿ 52 ಸೀಟುಗಳಿವೆ. ರೈಲಿನ ಗರಿಷ್ಠ ವೇಗ ಗಂಟೆಗೆ 220 ಕಿ.ಮೀ. ಪರೀಕ್ಷಾರ್ಥವಾಗಿ 160 ಕಿ.ಮೀ. ಪ್ರಯತ್ನಿಸಲಾಗುತ್ತದೆ. ಶತಾಬ್ದಿ ಅಥವಾ ರಾಜಧಾನಿ ಎಕ್ಸ್ ಪ್ರೆಸ್ ಗಿಂತ ಇದರ ವೇಗ ಶೇಕಡಾ 10ರಿಂದ 15ರಷ್ಟು ಹೆಚ್ಚು. ಅಂದಹಾಗೆ ಈ ರೈಲು ಲೋಕೋಮೋಟಿವ್ ಅಲ್ಲ ಎಂಬುದು ಗಮನಿಸಬೇಕಾದ ಅಂಶ. ಯಂತ್ರಗಳ ಸಹಾಯದಿಂದ ಚಲಿಸುತ್ತದೆ.

ಇಂಟರ್ ಸಿಟಿ ಎಕ್ಸ್ ಪ್ರೆಸ್ ಗಳು ಬದಲಾಗಲಿವೆ

ಇಂಟರ್ ಸಿಟಿ ಎಕ್ಸ್ ಪ್ರೆಸ್ ಗಳು ಬದಲಾಗಲಿವೆ

ದೆಹಲಿ-ಭೋಪಾಲ್, ಚೆನ್ನೈ-ಬೆಂಗಳೂರು, ಮುಂಬೈ-ಅಹಮದಾಬಾದ್ ಮಧ್ಯೆ ಟೈನ್ 18 ರೈಲು ಸಂಚರಿಸಲಿದೆ. 1988ರಿಂದ ಇಲ್ಲಿ ತನಕ ಇಂಟರ್ ಸಿಟಿಗಳ ಜೀವಾಳವಾಗಿರುವ ಶತಾಬ್ದಿ ಎಕ್ಸ್ ಪ್ರೆಸ್ ಕನಿಷ್ಟ 20 ಮಾರ್ಗಗಳಲ್ಲಿ ಸಂಚರಿಸುತ್ತಿದ್ದು, ಅನೇಕ ನಗರಗಳ ನಡುವಿನ ಕೊಂಡಿಯಾಗಿದೆ. ಈಗ ಟ್ರೈನ್ 18 ಹಾಗೂ ನಂತರ ಟ್ರೈನ್ 20 ಇದೆಲ್ಲವನ್ನು ಸಾಧಿಸಲಿದೆ.

English summary
India’s first engine-less semi-high speed train, ‘Train 18’, was rolled out on Monday by the Integral Coach Factory (ICF) in Chennai and will eventually replace the Shatabdi Express for inter-city travel.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more