ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಷ್ಟಂತ ಅಲೆದಾಡುವುದು?, ಬೇಸತ್ತು ಉದ್ಯೋಗ ಹುಡುಕುವುದನ್ನೇ ನಿಲ್ಲಿಸಿದ 900 ದಶಲಕ್ಷ ಭಾರತೀಯರು!

|
Google Oneindia Kannada News

ವಧು, ವರನಿಗಾಗಿ ಹುಡುಕಾಡಿ ಬೇಸತ್ತು ಹೋಗುವ ಅದೆಷ್ಟೋ ಸುದ್ದಿಯನ್ನು ನಾವು ಕೇಳಿದ್ದೇವೆ, ಹಾಗೆಯೇ ನೋಡಿದ್ದೇವೆ. ಆದರೆ ಭಾರತದಲ್ಲಿ ಉದ್ಯೋಗವನ್ನು ಹುಡುಕಾಡಿಯೇ ಜನರು ಬೇಸತ್ತು ಹೋಗಿದ್ದಾರಂತೆ. ಹೌದು ಉದ್ಯೋಗಕ್ಕಾಗಿ ಅಲೆದಾಡಿ, ಇಮೇಲ್‌ ಕಳುಹಿಸಿ, ಇಮೇಲ್‌ಗಾಗಿ ಕಾದು ಸಾಕಾದವರು ಈಗ ಉದ್ಯೋಗವನ್ನು ಹುಡುಕುವುದನ್ನೇ ನಿಲ್ಲಿಸಿದ್ದಾರಂತೆ.

ಭಾರತದಲ್ಲಿ ಉದ್ಯೋಗ ಸೃಷ್ಟಿ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ. ಅಧಿಕಾರಕ್ಕೆ ಏರುವ ಮುನ್ನ ಉದ್ಯೋಗ ಸೃಷ್ಟಿಯ ಭರವಸೆಯನ್ನು ನೀಡಿದ ಸರ್ಕಾರವು ಭರವಸೆ ನೀಡಿದ ಕಾಲು ಭಾಗದಷ್ಟು ಕೂಡಾ ಉದ್ಯೋಗವನ್ನು ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಈ ನಡುವೆ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಅಲೆದಾಡಿ ಸಾಕಾದ ಅದೇಷ್ಟೋ ಯುವಕರು, ಅದರಲ್ಲೂ ಮುಖ್ಯವಾಗಿ ಮಹಿಳೆಯರು ಉದ್ಯೋಗವನ್ನು ಈಗ ಹುಡುಕುತ್ತಿಲ್ಲ ಎಂದು ಸಂಶೋಧನಾ ಸಂಸ್ಥೆಯ ವರದಿಯು ಹೇಳಿದೆ.

ಮೇಘಾಲಯ ಸಿಎಂಗೆ 'ಅರ್ಹ ನಿರುದ್ಯೋಗಿ ಯುವಕರ ಭಯೋತ್ಪಾದಕ ಗುಂಪು' ಬೆದರಿಕೆ ಮೇಲ್ಮೇಘಾಲಯ ಸಿಎಂಗೆ 'ಅರ್ಹ ನಿರುದ್ಯೋಗಿ ಯುವಕರ ಭಯೋತ್ಪಾದಕ ಗುಂಪು' ಬೆದರಿಕೆ ಮೇಲ್

ಮುಂಬೈನ ಖಾಸಗಿ ಸಂಶೋಧನಾ ಸಂಸ್ಥೆಯಾದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈವೇಟ್‌ನ ಹೊಸ ಅಂಕಿಅಂಶಗಳ ಪ್ರಕಾರ, ಯುವಕರು ತಾವು ಪಡೆದ ಶಿಕ್ಷಣಕ್ಕೆ ತಕ್ಕುದಾದ ಉದ್ಯೋಗ ದೊರೆಯದ ಕಾರಣ ಹತಾಶರಾಗಿದ್ದಾರೆ. ತಮಗೆ ಕಲಿಕೆಗೆ ತಕ್ಕುದಾದ ಉದ್ಯೋಗವನ್ನು ಹುಡುಕಲು ಸಾಧ್ಯವಾಗದೆ ಹತಾಶರಾಗಿರುವ ಲಕ್ಷಾಂತರ ಭಾರತೀಯರು, ವಿಶೇಷವಾಗಿ ಮಹಿಳೆಯರು ಉದ್ಯೋಗ ಹುಡುಕಾಟ ನಿಲ್ಲಿಸಿ ಸುಮ್ಮನಿದ್ದಾರೆ.

 ಬೆಚ್ಚಿಬೀಳಿಸುವ ಅಂಕಿ-ಅಂಶ: ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಕಣ್ಮರೆ

ಬೆಚ್ಚಿಬೀಳಿಸುವ ಅಂಕಿ-ಅಂಶ: ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರು ಕಣ್ಮರೆ

ವಿಶ್ವದ ಅತ್ಯಂತ ವೇಗವಾಗಿ ಬೆಳೆಯುವ ಆರ್ಥಿಕತೆಯಲ್ಲಿ ಭಾರತದ ಆರ್ಥಿಕತೆಯು ಒಂದಾಗಿದೆ. ಅದಕ್ಕಾಗಿ ಯುವ ಕಾರ್ಮಿಕರು ಬಹಳ ಮುಖ್ಯವಾಗಿದ್ದಾರೆ. ಈ ದೇಶ ಆರ್ಥಿಕತೆ ಬೆಳವಣಿಗೆಗೆ ಯುವ ಕಾರ್ಮಿಕರ ಕೊಡುಗೆ ಪ್ರಮುಖವಾಗಿದೆ. ಆದರೆ ಇತ್ತೀಚಿನ ಅಂಕಿ ಅಂಶಗಳು ಇದ್ದಕ್ಕೆ ತದ್ವಿರುದ್ಧವಾಗಿದೆ. ಅಶುಭದ ಮುನ್ಸೂಚನೆ ಎಂದರೂ ತಪ್ಪಾಗಲಾರದು. 2017 ಮತ್ತು 2022 ರ ನಡುವೆ ಕಾರ್ಮಿಕರ ಭಾಗವಹಿಸುವಿಕೆ ದರವು 46 ಪ್ರತಿಶತದಿಂದ 40 ಪ್ರತಿಶತಕ್ಕೆ ಇಳಿದಿದೆ. ಅದರಲ್ಲೂ ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಉದ್ಯೋಗ ಕ್ಷೇತ್ರದಿಂದ ಕಣ್ಮರೆಯಾಗುತ್ತಿದ್ದಾರೆ. ಸುಮಾರು 21 ಮಿಲಿಯನ್ ಜನರು ಉದ್ಯೋಗದಿಂದ ಹೊರಕ್ಕೆ ಉಳಿದಿದ್ದಾರೆ. ಉದ್ಯೋಗ ಪಡೆಯಲು ಅರ್ಹರಾದ ಕೇವಲ 9 ಪ್ರತಿಶತದಷ್ಟು ಜನರು ಉದ್ಯೋಗದಲ್ಲಿದ್ದಾರೆ ಅಥವಾ ಉದ್ಯೋಗವನ್ನು ಹುಡುಕುತ್ತಿದ್ದಾರೆ.

ನಿರುದ್ಯೋಗ; ಮೋದಿಗೆ ಅಂಕಪಟ್ಟಿ ಕಳಿಸಲಿದೆ ಕಾಂಗ್ರೆಸ್!ನಿರುದ್ಯೋಗ; ಮೋದಿಗೆ ಅಂಕಪಟ್ಟಿ ಕಳಿಸಲಿದೆ ಕಾಂಗ್ರೆಸ್!

 ಅಸಮಾನತೆಯನ್ನು ಹೆಚ್ಚಿಸುವ ಬೆಳವಣಿಗೆ ಹಾದಿ

ಅಸಮಾನತೆಯನ್ನು ಹೆಚ್ಚಿಸುವ ಬೆಳವಣಿಗೆ ಹಾದಿ

ಸಿಐಐಇ ಪ್ರಕಾರ 900 ಮಿಲಿಯನ್ ಭಾರತೀಯರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಕಾನೂನುಬದ್ಧವಾಗಿ ಕೆಲಸ ಮಾಡುವ ವಯಸ್ಸಿನವರು ಆಗಿದ್ದಾರೆ. ಅಂದರೆ ಸರಿಸುಮಾರು ಯುಎಸ್ ಹಾಗೂ ರಷ್ಯಾದ ಜನಸಂಖ್ಯೆಯಷ್ಟು ನಮ್ಮಲ್ಲಿ ಉದ್ಯೋಗ ಮಾಡಬಹುದಾದ ಜನಸಂಖ್ಯೆ ಇದೆ. ಆದರೆ ಅವರು ಉದ್ಯೋಗ ಮಾಡಲು ಬಯಸುತ್ತಿಲ್ಲ. "ಜನರು ಉದ್ಯೋಗವನ್ನು ಹುಡುಕಿ ಬೇಸತ್ತು ನಿರುತ್ಸಾಹಕ್ಕೆ ಒಳಗಾಗಿದ್ದಾರೆ. ಯುವ ಕಾರ್ಮಿಕರಿಂದ ಈ ಹಿಂದೆ ಪಡೆಯುತ್ತಿದ್ದ ಲಾಭವನ್ನು ಭಾರತ ಈಗ ಪಡೆಯಲು ಸಾಧ್ಯವಿಲ್ಲ ಎಂಬಂತೆ ಆಗಿದೆ," ಎಂದು ಬೆಂಗಳೂರಿನ ಸೊಸೈಟಿ ಜನರಲ್ ಜಿಎಸ್‌ಸಿ ಪ್ರೈವೇಟ್‌ನ ಅರ್ಥಶಾಸ್ತ್ರಜ್ಞ ಕುನಾಲ್ ಕುಂದು ಹೇಳಿದ್ದಾರೆ. "ಇನ್ನು ಭಾರತವು ಮಧ್ಯಮ ಆದಾಯವನ್ನು ಹೊಂದಿರುವ ಜನರನ್ನು ಅಧಿಕವಾಗಿ ಹೊಂದಿದೆ. ಈ ಬೆಳವಣಿಗೆಯ ಹಾದಿಯು ಅಸಮಾನತೆಯನ್ನು ಮತ್ತಷ್ಟು ಹೆಚ್ಚಳ ಮಾಡುತ್ತದೆ," ಎಂದಿದ್ದಾರೆ.

 ಉದ್ಯೋಗಿ ಸೃಷ್ಟಿ: ಭಾರತಕ್ಕೆ ಹಲವಾರು ಸವಾಲು

ಉದ್ಯೋಗಿ ಸೃಷ್ಟಿ: ಭಾರತಕ್ಕೆ ಹಲವಾರು ಸವಾಲು

ಉದ್ಯೋಗ ಸೃಷ್ಟಿ ವಿಚಾರದಲ್ಲಿ ಭಾರತಕ್ಕೆ ಹಲವಾರು ಸವಾಲುಗಳನ್ನು ಹೊಂದಿದೆ. 15 ರಿಂದ 64 ವರ್ಷ ವಯಸ್ಸಿನ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಜನ ಸಣ್ಣ ಕಾರ್ಮಿಕ ಕೆಲಸಕ್ಕೂ ಕೂಡಾ ಭಾರೀ ಪೈಪೋಟಿಯನ್ನು ನೀಡುತ್ತಿದ್ದಾರೆ. ಉದ್ಯೋಗಕ್ಕಾಗಿ ಭಾರತದಲ್ಲಿ ತೀವ್ರ ಸ್ಪರ್ಧೆ ಇದೆ. ಯಾವುದೇ ಸ್ಥಿರ ಸರ್ಕಾರಿ ಉದ್ಯೋಗ ಬಂದರೂ ಲಕ್ಷಾಂತರ ಮಂದಿ ಅರ್ಜಿ ಹಾಕುತ್ತಿದ್ದಾರೆ. ಉನ್ನತ ಎಂಜಿನಿಯರಿಂಗ್ ಕಾಲೇಜುಗಳಿಗೆ ಪ್ರವೇಶ ಪಡೆಯುವುದು ಒಂದು ಅಪಾಯದ ನಿರ್ಧಾರ ಎಂಬಂತಾಗಿದೆ. ಮೆಕಿನ್ಸೆ ಗ್ಲೋಬಲ್ ಇನ್‌ಸ್ಟಿಟ್ಯೂಟ್‌ನ 2020 ರ ವರದಿಯ ಪ್ರಕಾರ, 2030 ರ ವೇಳೆಗೆ ಭಾರತವು ಕನಿಷ್ಠ 90 ಮಿಲಿಯನ್ ಹೊಸ ಕೃಷಿಯೇತರ ಉದ್ಯೋಗಗಳನ್ನು ಸೃಷ್ಟಿಸಬೇಕಾಗಿದೆ. ಅದಕ್ಕೆ ವಾರ್ಷಿಕ ಶೇ.8ರಿಂದ ಶೇ.8.5ರಷ್ಟು ಜಿಡಿಪಿ ಬೆಳವಣಿಗೆ ಅಗತ್ಯವಿದೆ.

"ಪ್ರತಿ ಪೈಸೆಗೂ ಇತರರ ಮೇಲೆ ಅವಲಂಬನೆ"

"ಪ್ರತಿ ಪೈಸೆಗೂ ನಾನು ಇತರರ ಮೇಲೆ ಅವಲಂಬಿತನಾಗಿದ್ದೇನೆ," ಎಂದು 25 ವರ್ಷದ ಶಿವಾನಿ ಠಾಕೂರ್ ಅವರು ಇತ್ತೀಚೆಗೆ ಹೋಟೆಲ್ ಉದ್ಯೋಗವನ್ನು ತೊರೆದ ಬಳಿಕ ಹೇಳಿಕೊಂಡಿದ್ದಾರೆ. ಇನ್ನು ಭಾರತವು ಯುವಕರಿಗೆಯೇ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾದರೆ ಭಾರತ ಅಭಿವೃದ್ದಿ ಹೊಂದುವುದು ಹೇಗೆ ಎಂದು ಕೂಡಾ ಹಲವಾರು ಯುವಕರು ಪ್ರಶ್ನೆ ಮಾಡಿದ್ದಾರೆ. ರಾಷ್ಟ್ರವು ತನ್ನ ಆರ್ಥಿಕತೆಯನ್ನು ಉದಾರೀಕರಣಗೊಳಿಸುವಲ್ಲಿ ಮಹತ್ತರವಾದ ದಾಪುಗಾಲನ್ನು ಇರಿಸಿದೆ. ಆದರೆ ಉದ್ಯೋಗ ಸೃಷ್ಟಿ ಮಾತ್ರ ಮಾಡುವಲ್ಲಿ ಭಾರತ ಎಡವಿದೆ. ಇನ್ನು ಭಾರತೀಯರು ವಯಸ್ಸಾಗಬಹುದು, ಆದರೆ ಶ್ರೀಮಂತರಾಗುವುದಿಲ್ಲ ಎಂದು ಅರ್ಥಶಾಸ್ತ್ರಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

 ಕೋವಿಡ್‌ನಿಂದಾಗಿ ಉದ್ಯೋಗದ ಕೊರತೆಯೇ?

ಕೋವಿಡ್‌ನಿಂದಾಗಿ ಉದ್ಯೋಗದ ಕೊರತೆಯೇ?

ಉದ್ಯೋಗ ಹಾಗೂ ಉದ್ಯೋಗಕ್ಕೆ ತಕ್ಕುದಾದ ಕಾರ್ಮಿಕರ ಕೊರತೆಯು ಕೋವಿಡ್ ಕಾರಣದಿಂದಾಗಿ ಸೃಷ್ಟಿಯಾದ ಸಮಸ್ಯೆಯೇನಲ್ಲ. ಇದು ಕೋವಿಡ್ ಸಾಂಕ್ರಾಮಿಕಕ್ಕೂ ಮುನ್ನವೇ ಭಾರತದಲ್ಲಿ ತಲೆಎತ್ತಿದೆ. 2016 ರಲ್ಲಿ, ಕಪ್ಪುಹಣವನ್ನು ತೊಡೆದುಹಾಕುವ ಪ್ರಯತ್ನದಲ್ಲಿ ಸರ್ಕಾರವು ನೋಟು ಅಮಾನ್ಯೀಕರಣ ಮಾಡಿದ ಬಳಿಕ ದೇಶದಲ್ಲಿ ಆರ್ಥಿಕತೆಯು ಭಾರಿ ಬಿಕ್ಕಟ್ಟಿಗೆ ಸಿಲುಕಿದೆ. ಅದೇ ಸಮಯದಲ್ಲಿ ರಾಷ್ಟ್ರವ್ಯಾಪಿ ಜಿಎಸ್‌ಟಿಯು ಆರ್ಥಿಕತೆಗೆ ಮತ್ತೊಂದು ಸವಾಲನ್ನು ಒಡ್ಡಿದೆ. ಈ ಸಂದರ್ಭದಲ್ಲೇ ಉದ್ಯೋಗಿಗಳ ಭಾಗವಹಿಸುವಿಕೆ ಕುಸಿತ ಕಂಡು ಬಂದಿದೆ. ಇನ್ನು ಭಾರತದಲ್ಲಿ ನಿರುದ್ಯೋಗಿಗಳು ಎಂದರೆ ಸಾಮಾನ್ಯವಾಗಿ ವಿದ್ಯಾರ್ಥಿಗಳು ಅಥವಾ ಗೃಹಿಣಿಯರು ಎಂಬಂತೆ ಆಗಿದೆ. ಈ ಪೈಕಿ ಹಲವಾರು ಮಮದಿ ಬಾಡಿಗೆ ಆದಾಯ, ಹಿರಿಯರ ಪಿಂಚಣಿ ಅಥವಾ ಸರ್ಕಾರದ ಇತರೆ ಪಿಂಚಣಿ ವ್ಯವಸ್ಥೆಯಿಂದ ಬದುಕುಳಿಯುತ್ತಿದ್ದಾರೆ.

 ಪದವಿ ಪಡೆದ ವ್ಯಕ್ತಿ ಈಗ ಮೆಹಂದಿ ಕಲಾವಿದ

ಪದವಿ ಪಡೆದ ವ್ಯಕ್ತಿ ಈಗ ಮೆಹಂದಿ ಕಲಾವಿದ

ಕಾಲೇಜಿನಿಂದ ಪದವಿ ಪಡೆದ ನಂತರ ಓರ್ವ ವ್ಯಕ್ತಿ ಉದ್ಯೋಗ ದೊರೆಯದ ಕಾರಣ ಶಿವಾನಿ ಠಾಕೂರ್ ಎಂಬವರು ಮೆಹಂದಿ ಕಲಾವಿದೆ ಆಗಿದ್ದರು. ಆಗ್ರಾ ನಗರದ ಪಂಚತಾರಾ ಹೋಟೆಲ್‌ನಲ್ಲಿ ಅತಿಥಿಗಳ ಕೈಗೆ ಗೋರಂಟಿ ಹಚ್ಚುವ ಮೂಲಕ ಸುಮಾರು 20,000 ರೂಪಾಯಿಗಳ ಮಾಸಿಕ ಆದಾಯವನ್ನು ಗಳಿಸುತ್ತಿದ್ದರು. ಆದರೆ ಮನೆಗೆ ತಡವಾಗಿ ಬರುವ ಕಾರಣದಿಂದಾಗಿ ಪೋಷಕರು ಈ ಕೆಲಸವನ್ನು ಬಿಡುವಂತೆ ಹೇಳಿದ್ದಾರೆ. ಈಗ ಆಕೆಗೆ ಮದುವೆ ಮಾಡಿಸಲು ಪೋಷಕರು ಮುಂದಾಗಿದ್ದಾರೆ. ಆರ್ಥಿಕ ಸ್ವಾವಲಂಬನೆಯ ಜೀವನವು ದೂರ ಸರಿಯುತ್ತಿದೆ ಎಂದು ಶಿವಾನಿ ಠಾಕೂರ್ ನೊಂದು ನುಡಿದಿದ್ದಾರೆ. ನನ್ನ ಕಣ್ಣೆದುರೇ ನನ್ನ ಭವಿಷ್ಯ ಹಾಳಾಗುತ್ತಿದೆ. ನನ್ನ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದೆ. ಆದರೆ ನನ್ನ ಶಿಕ್ಷಣಕ್ಕೆ ತಕ್ಕುದಾಗ ಉದ್ಯೋಗ ಸಿಗದೆ ನಾನು ಇಕ್ಕಟ್ಟಿನಲ್ಲಿ ಸಿಲುಕಿದ್ದೇನೆ ಎಂದಿದ್ದಾರೆ.

English summary
More than half of the India's 900 Million Workforce, Specially Women don’t want a job, according to the CMIE Report. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X