ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಾಳಿ ಡ್ರೋಣ್ ಗಳ ಸೇರ್ಪಡೆಗೆ ಮುಂದಾದ ಭಾರತೀಯ ವಾಯು ಸೇನೆ

|
Google Oneindia Kannada News

ಭಾರತೀಯ ವಾಯುಸೇನೆಯು ತನ್ನ ಮಾನವರಹಿತ ಯುದ್ಧ ಸಾಮರ್ಥ್ಯವನ್ನು ಹಿಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಹದಿನೈದಕ್ಕೂ ಹೆಚ್ಚು HAROP ದಾಳಿ ಡ್ರೋಣ್ ಗಳನ್ನು ಸೇರಿಸಿಕೊಳ್ಳಲು ಮುಂದಾಗಿದೆ. ಈ ಡ್ರೋಣ್ ಗಳು ಎದುರಾಳಿಗಳ ಸೇನಾ ಗುರಿಗಳನ್ನು ಸಂಪೂರ್ಣ ನಾಶ ಮಾಡುವ ಸಾಮರ್ಥ್ಯ ಹೊಂದಿವೆ.

ಎಲೆಕ್ಟ್ರೋ ಆಪ್ಟಿಕಲ್ ಸೆನ್ಸಾರ್ಸ್ ಇರುವ ಈ ಡ್ರೋಣ್ ಗಳು ಭಾರತದ ವಾಯು ಸೇನೆ ಬಳಿ ಇವೆ. ಎದುರಾಳಿಗಳ ಸರ್ವೇಲನ್ಸ್ ನೆಲೆಗಳು ಹಾಗೂ ರಾಡಾರ್ ಕೇಂದ್ರಗಳನ್ನು ಗುರಿ ಮಾಡಿಕೊಂಡು ದಾಳಿ ಮಾಡಬಹುದಾದ ಸಾಮರ್ಥ್ಯ ಹೊಂದಿವೆ. ಡ್ರೋಣ್ ಗಳನ್ನು ಸ್ಫೋಟಿಸುವುದಕ್ಕೆ ಮುಂಚಿತವಾಗಿಯೇ ತಮ್ಮ ಕೆಲಸಗಳನ್ನು ಮುಗಿಸಬಲ್ಲವು.

ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?ರಫೇಲ್ ವಿಮಾನ ಖರೀದಿ ಪರವಾಗಿ ವಾಯುಸೇನೆ ಮುಖ್ಯಸ್ಥರು ಹೇಳಿದ್ದೇನು?

ಮುಂಬರುವ ದಿನಗಳಲ್ಲಿ ವಾಯು ಸೇನೆಯನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ದಾಳಿ ಡ್ರೋಣ್ ಗಳನ್ನು ಹೊಂದುವ ಬಗ್ಗೆ ರಕ್ಷಣಾ ಸಚಿವಾಲಯದ ಎದುರು ಪ್ರಸ್ತಾವ ಇರಿಸಲಾಗುವುದು. ಉನ್ನತ ಮಟ್ಟದ ಸಭೆಯೊಂದು ನಡೆಯಲಿದ್ದು, ಅಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಎಎನ್ ಐ ಸುದ್ದಿ ಸಂಸ್ಥೆ ಹೇಳಿದೆ.

ಇಸ್ರೇಲ್ ಜತೆಗೆ ರಕ್ಷಣಾ ಒಪ್ಪಂದ

ಇಸ್ರೇಲ್ ಜತೆಗೆ ರಕ್ಷಣಾ ಒಪ್ಪಂದ

ಒಂದು ಸಲ ಇದಕ್ಕೆ ಒಪ್ಪಿಗೆ ಸಿಕ್ಕರೆ ಭಾರತಕ್ಕೆ ಎಲ್ಲ ರೀತಿಯ ಡ್ರೋಣ್ ಸರಬರಾಜು ಮಾಡುವ ಇಸ್ರೇಲ್ ಜತೆಗೆ ಮಾಡಿಕೊಂಡಿರುವ ಒಪ್ಪಂದಗಳನ್ನು ಪರಿಶೀಲನೆ ನಡೆಸಲಾಗುವುದು ಎನ್ನಲಾಗಿದೆ. ಅಂದಹಾಗೆ ಭಾರತೀಯ ವಾಯು ಸೇನೆಗೆ ಸರ್ವೇಲೆನ್ಸ್ ಮಷೀನ್, ದ ಸರ್ಚರ್ ಹಾಗೂ ದ ಹೆರಾನ್ ಗಳನ್ನು ಸಹ ಒದಗಿಸಿರುವುದು ಇಸ್ರೇಲ್.

ನೂರಕ್ಕೂ ಹೆಚ್ಚು ಇಂಥ ವಾಹನಗಳಿವೆ

ನೂರಕ್ಕೂ ಹೆಚ್ಚು ಇಂಥ ವಾಹನಗಳಿವೆ

ಭಾರತವು 'ಚೀತಾ ಯೋಜನೆ' ಬಗ್ಗೆ ಕೂಡ ಇಸ್ರೇಲಿಗಳ ಜತೆ ಚರ್ಚೆ ನಡೆಸುತ್ತಿದೆ. ಇದರಡಿಯಲ್ಲಿ ಈ ಮೂರು ಸೇವೆಗಳು ಉನ್ನತ ಗುಣಮಟ್ಟದ ದಾಳಿ ಡ್ರೋಣ್ ಗಳಾಗುತ್ತವೆ. ಅವುಗಳ ಸರ್ವೇಲನ್ಸ್ ಸಾಮರ್ಥ್ಯ ಕೂಡ ವಿಸ್ತರಣೆ ಆಗುತ್ತದೆ. ಭೂ, ವಾಯು ಹಾಗೂ ನೌಕಾ ಸೇನೆಯಲ್ಲಿ ನೂರಕ್ಕೂ ಹೆಚ್ಚು ಮಾನವರಹಿತವಾದ ಇಂಥ ವಾಹನಗಳಿವೆ. ಕಳೆದ ಕೆಲ ವರ್ಷಗಳಿಂದ ಕಂತು ಕಂತಿನಲ್ಲಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.

ದೇಶೀಯವಾಗಿಯೂ ಡ್ರೋಣ್ ಅಭಿವೃದ್ಧಿ

ದೇಶೀಯವಾಗಿಯೂ ಡ್ರೋಣ್ ಅಭಿವೃದ್ಧಿ

ಇದರ ಜತೆಗೆ ದೇಶೀಯವಾಗಿ ಕೂಡ ದಾಳಿ ಡ್ರೋಣ್ ಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯುತ್ತಿದೆ. ಯೋಜನೆ ಸಂಪೂರ್ಣ ಆದ ಮೇಲೆ ಅವುಗಳನ್ನು ಪಾಕಿಸ್ತಾನ ಹಾಗೂ ಚೀನಾದ ಗಡಿಗಳಲ್ಲಿ ನಿಯೋಜನೆ ಮಾಡಲಾಗುತ್ತದೆ. ಅಮೆರಿಕವು ಈಗಾಗಲೇ ಇಂಥ ಡ್ರೋಣ್ ಗಳನ್ನು ಬಳಕೆ ಮಾಡುತ್ತಿದೆ.

ಅಮೆರಿಕ ಈಗಾಗಲೇ ಡ್ರೋಣ್ ಬಳಸುತ್ತಿದೆ

ಅಮೆರಿಕ ಈಗಾಗಲೇ ಡ್ರೋಣ್ ಬಳಸುತ್ತಿದೆ

ಅಫ್ಘಾನಿಸ್ತಾನ, ಇರಾಕ್ ಹಾಗೂ ಪಾಕಿಸ್ತಾನದಲ್ಲಿ ಉಗ್ರ ನಾಯಕರ ಬೇಟೆಗೆ ಇದೇ ರೀತಿಯ ಮಾನವ ರಹಿತ ಡ್ರೋಣ್ ಗಳನ್ನು ಬಳಸಲಾಗುತ್ತಿದೆ. ಎಲ್ಲಿ ವಿರೋಧಿ ಪಡೆಯು ಬಲಿಷ್ಠವಾದ ವಾಯು ಸೇನೆಯನ್ನು ಹೊಂದಿರುತ್ತದೋ ಅಂಥ ಕಡೆ ಡ್ರೋಣ್ ಕಾರ್ಯ ವೈಖರಿ ನಿಧಾನ ಆಗುತ್ತದೆ.

English summary
In a bid to enhance its unmanned warfare capability, the Indian Air Force is planning to acquire around 15 more HAROP attack drones which can crash into high-value enemy military targets to destroy them completely.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X