ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್‌ ಆರಂಭ: ಇಲ್ಲಿದೆ ಮಾಹಿತಿ

|
Google Oneindia Kannada News

ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್‌ "ಸಮುದ್ರಯಾನ" ಆರಂಭ ಮಾಡಲಾಗಿದೆ. ಸಮುದ್ರದ ಆಳ ಹಾಗೂ ಸಮುದ್ರದ ಬಗ್ಗೆ ಸಂಸೋಧನೆ ಮಾಡುವ ಭಾರತದ ಈ "ಸಮುದ್ರಯಾನ" ಮಿಷನ್‌ನಲ್ಲಿ ಆರು ರಾಷ್ಟ್ರಗಳು ಕೈ ಜೋಡಿಸಿದೆ.

ಶುಕ್ರವಾರ ಈ ಮಿಷನ್‌ ಆರಂಭಗೊಂಡಿದ್ದು, ಈ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, "ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ದೊಡ್ಡ ಪ್ರಗತಿಯನ್ನು ಸಾಧಿಸಿದೆ. ಒಂದು ಕಡೆಯಲ್ಲಿ ಭಾರತೀಯರು ಗಗನಯಾನಕ್ಕಾಗಿ ಆಕಾಶಕ್ಕೆ ಹೋಗುವಾದ, ಇನ್ನೊಂದೆಡೆ ಭಾರತೀಯರು ಸಮುದ್ರಯಾನಕ್ಕಾಗಿ ಒಳ ಸಮುದ್ರಕ್ಕೆ ಧುಮುಕುತ್ತಿದ್ದಾರೆ," ಎಂದು ತಿಳಿಸಿದ್ದಾರೆ.

ಸೇಡು ಬಿಟ್ಟು ಸ್ನೇಹದತ್ತ ಚಿತ್ತ..! ಚೀನಾ-ಅಮೆರಿಕ ನಡುವೆ ಮಹತ್ವದ ಮಾತುಕತೆಸೇಡು ಬಿಟ್ಟು ಸ್ನೇಹದತ್ತ ಚಿತ್ತ..! ಚೀನಾ-ಅಮೆರಿಕ ನಡುವೆ ಮಹತ್ವದ ಮಾತುಕತೆ

ಈ ಬಗ್ಗೆ ಟ್ವೀಟ್‌ ಮಾಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್‌, "ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್‌ "ಸಮುದ್ರಯಾನ" ಅನ್ನು ಚೆನ್ನೈನಲ್ಲಿ ಆರಂಭ ಮಾಡಲಾಗಿದೆ. ಯುಎಸ್‌ಎ, ರಷ್ಯಾ, ಜಪಾನ್‌, ಫ್ರಾನ್ಸ್‌, ಚೀನಾದೊಂದಿಗೆ ಆಳ ಸಮುದ್ರ ವಾಹನ ಸಂಚಾರದಲ್ಲಿ ಭಾರತ ಸೇರಲಿದೆ. ಕುಡಿಯುವ ನೀರು, ಶುದ್ಧ ಶಕ್ತಿ ಮತ್ತು ನೀಲಿ ಆರ್ಥಿಕತೆಗಾಗಿ ಸಾಗರ ಸಂಪನ್ಮೂಲಗಳನ್ನು ಅನ್ವೇಷಿಸಲು ಹೊಸ ಅಧ್ಯಾಯ ತೆರೆಯುತ್ತಿದೆ," ಎಂದು ಹೇಳಿದ್ದಾರೆ. ಈ ಭಾರತದ ಮೊದಲ ಮಾನವಸಹಿತ ಸಾಗರ ಮಿಷನ್‌ "ಸಮುದ್ರಯಾನ" ದ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ ಇಲ್ಲಿದೆ ಮುಂದೆ ಓದಿ.

 India launches its first manned ocean mission ‘Samudrayan’, All you need to know

"ಸಮುದ್ರಯಾನ" ಮಿಷನ್‌ ಬಗ್ಗೆ ನೀವು ತಿಳಿಯಲೇ ಬೇಕಾದ ಮಾಹಿತಿ

* ಈ "ಸಮುದ್ರಯಾನ" ಮಿಷನ್‌ ಅನ್ನು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಕೈಗೊಂಡಿದ್ದು, ಈ ಯೋಜನೆಯು 6,000 ಕೋಟಿ ಆಳ ಸಮುದ್ರ ಮಿಷನ್‌ನ ಒಂದು ಭಾಗವಾಗಿದೆ.

* ಈ ಯೋಜನೆಯ ಭಾಗವಾಗಿ ಆಳ ಸಮುದ್ರದ ವಾಹನವಾದ ಮತ್ಸ್ಯ 6000 ಅನ್ನು ವಿನ್ಯಾಸ ಮಾಡಲಾಗಿದೆ. ಈ ವಾಹನವು 2.1-ಮೀಟರ್ ವ್ಯಾಸದ ಸುತ್ತುವರಿದ ಜಾಗವನ್ನು ಹೊಂದಿದೆ. ಟೈಟಾನಿಯಂ ಮಿಶ್ರಲೋಹ ಬಳಸಿ ಈ ವಾಹನವನ್ನು ನಿರ್ಮಾಣ ಮಾಡಲಾಗಿದೆ. ಮೂರು ಜನರನ್ನು ಸಾಗಿಸಲು ಸಾಧ್ಯವಾಗುವ ವಿನ್ಯಾಸ ಈ ಆಳ ಸಮುದ್ರದ ವಾಹನವಾದ ಮತ್ಸ್ಯ 6000 ರದ್ದು ಆಗಿದೆ.

ಮಾನವನ ವಿನಾಶಕ್ಕೆ ಮುನ್ನುಡಿ..! ಮಹಾಮಳೆಗೆ ಹಿಮದ ಹೊದಿಕೆ ಚಿಂದಿ ಚಿತ್ರಾನ್ನ..!ಮಾನವನ ವಿನಾಶಕ್ಕೆ ಮುನ್ನುಡಿ..! ಮಹಾಮಳೆಗೆ ಹಿಮದ ಹೊದಿಕೆ ಚಿಂದಿ ಚಿತ್ರಾನ್ನ..!

* ಇದು ಸುಮಾರು 12 ಗಂಟೆಗಳ ಕಾಲದ ಸಹಿಷ್ಣುತೆಯನ್ನು ಹೊಂದಿರುವ ವಾಹನವಾಗಿದೆ. ತುರ್ತು ಸಂದರ್ಭದಲ್ಲಿ 96 ಗಂಟೆಗಳ ಕಾಲ ಇರಬಹುದಾದ ವಾಹನವಾಗಿದೆ.

* ಮತ್ಸ್ಯ 6000 ಎಂಬ ಆಳ ಸಮುದ್ರದ ವಾಹನವು 1000 ಮತ್ತು 5500 ಮೀಟರ್ ಆಳದಲ್ಲಿ ಕೆಲಸ ಮಾಡಬಹುದು

* ಪಾಲಿಮೆಟಾಲಿಕ್ ಮ್ಯಾಂಗನೀಸ್, ಗ್ಯಾಸ್‌ ಹೈಡ್ರೇಟ್‌ಗಳು, ಹೈಡ್ರೋ-ಥರ್ಮಲ್ ಸಲ್ಫೈಡ್‌ಗಳು ಮತ್ತು ಕೋಬಾಲ್ಟ್ ಕ್ರಸ್ಟ್‌ಗಳಂತಹ ನಿರ್ಜೀವ ಸಂಪನ್ಮೂಲಗಳ ಪರಿಶೋಧನೆಗೆ ಈ ಆಳ ಸಮುದ್ರ ಸಂಶೋಧನೆಯು ಸಹಕಾರಿ ಆಗಲಿದೆ.

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಪ್ರಕಾರ, ಮತ್ಸ್ಯ 6000 ಅರ್ಹತಾ ಪ್ರಯೋಗಕ್ಕಾಗಿ ಡಿಸೆಂಬರ್‌ 2024 ರ ಒಳಗಾಗಿ ತಯಾರಾಗಲಿದೆ. ಆಳವಿಲ್ಲದ ಸಮುದ್ರ (500 ಮೀಟರ್‌) ಹಂತವನ್ನು 2022 ಅಥವಾ 2023 ರ ಅಂತ್ಯದ ವೇಳೆಗೆ ನಿರ್ಮಾಣ ಆಗುವ ನಿರೀಕ್ಷೆ ಇದೆ. ನಾವು ಈ ಬಗ್ಗೆ ಕಾರ್ಯ ವೈಖರಿಯನ್ನು ಕ್ಷಿಪ್ರಗೊಳಿಸುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

* ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿ (ಎನ್‌ಐಒಟಿ) ಸುಮಾರು 500 ಮೀಟರ್‌ಗಳ ಕಾರ್ಯಾಚರಣೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸ್ಥಳೀಯ ಉದ್ಯಮಿಗಳ ಜೊತೆಯಾಗಿ ಸೌಮ್ಯವಾದ ಉಕ್ಕಿನಿಂದ ಮಾಡಿದ "ಸಿಬ್ಬಂದಿ ವಲಯ" ಅನ್ನು ಅಭಿವೃದ್ದಿ ಮಾಡಿದೆ. ಸಾಗರ ಸಂಧೋಶನಾ ನೌಕೆ ಸಾಗರ ನಿಧಿಯನ್ನು ಬಳಸಿಕೊಂಡು ಈ ತಿಂಗಳ ಸಮುದ್ರ ಪ್ರಯೋಗದ ಸಮುಯದಲ್ಲಿ ಮಾನವ-ಶ್ರೇಣಿಯ ಕಾರ್ಯಾಚರಣೆಗಾಗಿ ಅಂತರಾರಾಷ್ಟ್ರೀಯ ವರ್ಗೀಕರಣ ಮತ್ತು ಪ್ರಮಾಣೀಕರಣ ಏಜೆನ್ಸಿಯ ಪ್ರಕಾರ ಅದರ ಬಳಕೆಯನ್ನು ಬಂಗಾಳಕೊಲ್ಲಿಯಲ್ಲಿ ಪರೀಕ್ಷೆ ಮಾಡಲಾಗಿದೆ.

* ಆಳವಾದ ಸಮುದ್ರದ ವಾಹನವನ್ನು 6-ಡಿಗ್ರಿಯೊಂದಿಗೆ 6000-ಮೀಟರ್ ಆಳದಲ್ಲಿ 4 ಗಂಟೆಗಳ ಕಾಲ ಬ್ಯಾಟರಿ ಚಾಲಿತ ಪ್ರೊಪಲ್ಷನ್ ಸಿಸ್ಟಮ್ ಅನ್ನು ಬಳಸಿಕೊಂಡು ಆಳವಾದ ಸಮುದ್ರದ ತಳದಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಹೇಳಿಕೆಯು ತಿಳಿಸಿದೆ. "ಮುಖ್ಯವಾಗಿ ಈ ವಾಹನವು ಮಾನವರು, ಸಾಧನಗಳು ಇತ್ಯಾದಿಗಳನ್ನು ಆಳ ಸಮುದ್ರದಲ್ಲಿ ಸಂಶೋಧನೆ ನಡೆಸಲು ಸಾಗಿಸುವ ವೇದಿಕೆ ಆಗಿದೆ," ಎಂದು ಅಧಿಕಾರಿ ಹೇಳಿದರು.

* ಈ ಕಾರ್ಯಕ್ರಮವು ವೆಲ್ಡಿಂಗ್‌ ಸೌಲಭ್ಯ ಹಾಗೂ ಆಳವಾದ ಸಾಗರ ಸಿಮ್ಯುಲೇಟರ್‌ನಂತಹ ಮೂಲಸೌಕರ್ಯ ಸೌಲಭ್ಯವನ್ನು ಹೊಂದಿದೆ.

* 5 ವರ್ಷಗಳವರೆಗೆ 4,077 ಕೋಟಿಗಳ ಒಟ್ಟು ಬಜೆಟ್‌ನಲ್ಲಿ ಅನುಷ್ಠಾನ ಮಾಡಲು ಆಳವಾದ ಸಾಗರ ಮಿಷನ್‌ ಅನ್ನು ಮಾಡಲು ಕೇಂದ್ರ ಭೂ ವಿಜ್ಞಾನ ಸಚಿವಾಲಯವು ಸರ್ಕಾರ ಅನುಮೋದಿಸಿದೆ.

(ಒನ್‌ಇಂಡಿಯಾ ಸುದ್ದಿ)

English summary
India launches its first manned ocean mission ‘Samudrayan’, All you need to know.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X