ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ಸೆಡ್ಡು ಹೊಡೆಯಲು ರಚನೆ ಆಯಿತಾ ಅಮೆರಿಕಾದ ಐಪಿಇಎಫ್?

|
Google Oneindia Kannada News

ಟೋಕಿಯೋ, ಮೇ 24: ಜಪಾನ್‌ನ ಟೋಕಿಯೋದಲ್ಲಿ ನಡೆದ ಇಂಡೋ-ಫೆಸಿಫಿಕ್ ಆರ್ಥಿಕ ಚೌಕಟ್ಟು ಅಭಿವೃದ್ಧಿಗೆ ಭಾರತವು ಸೇರ್ಪಡೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಟೋಕಿಯೊದಲ್ಲಿ ವ್ಯಾಪಾರ ಪಾಲುದಾರಿಕೆಯ ಪ್ರಾರಂಭದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಟೋಕಿಯೊದಲ್ಲಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಜೋ ಬೈಡೆನ್ IPEF ಅನ್ನು ಪ್ರಾರಂಭಿಸಿದರು. ಆರಂಭಿಕ ಹಂತದಲ್ಲೇ 12ಕ್ಕೂ ಹೆಚ್ಚು ರಾಷ್ಟ್ರಗಳು ಇದರ ಪಾಲುದಾರರಾಗಿ ಸೇರಿಕೊಂಡವು. ಈ ಪಟ್ಟಿಯಲ್ಲಿ ಭಾರತವೂ ಸಹ ಸೇರಿದೆ. ಏಷ್ಯಾದ ರಾಷ್ಟ್ರಗಳ ಸಹಭಾಗಿತ್ವವು ಈ ಪ್ರದೇಶದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಚೀನಾದ ಆರ್ಥಿಕ ಪ್ರಾಬಲ್ಯವನ್ನು ಎದುರಿಸುವ ಗುರಿಯನ್ನು ಹೊಂದಿದೆ.

ತೈವಾನ್ ತಂಟೆಗೆ ಬಂದರೆ ಹುಷಾರ್: ಚೀನಾಗೆ ಬೈಡನ್ ಎಚ್ಚರಿಕೆ ತೈವಾನ್ ತಂಟೆಗೆ ಬಂದರೆ ಹುಷಾರ್: ಚೀನಾಗೆ ಬೈಡನ್ ಎಚ್ಚರಿಕೆ

ಆಸ್ಟ್ರೇಲಿಯಾ, ಬ್ರೂನಿ, ಭಾರತ, ಇಂಡೋನೇಷ್ಯಾ, ಜಪಾನ್, ರಿಪಬ್ಲಿಕ್ ಆಫ್ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ ಸೇರಿದಂತೆ ಒಟ್ಟು 13 ರಾಷ್ಟ್ರಗಳು ಈ ಪಟ್ಟಿಗೆ ಸೇರಿವೆ. ಆ ಮೂಲಕ ಜಗತ್ತಿನ ಶೇ.40ರಷ್ಟು ಜಿಡಿಪಿಯನ್ನು ಹೊಂದಿರುವ ರಾಷ್ಟ್ರಗಳು ಒಂದು ಸೂರಿನಡಿ ಸೇರಿಕೊಂಡಿವೆ.

ಐಪಿಇಎಫ್ ಚಾಲನೆಯ ನೇತೃತ್ವ ವಹಿಸಿದ ಯುಎಸ್

ಐಪಿಇಎಫ್ ಚಾಲನೆಯ ನೇತೃತ್ವ ವಹಿಸಿದ ಯುಎಸ್

"ಐಪಿಇಎಫ್ ಎನ್ನುವುದು ಈ ಪ್ರದೇಶದಲ್ಲಿ ಯುನೈಟೆಡ್ ಸ್ಟೇಟ್ಸ್ ಹೊಂದಿರುವ ಅತ್ಯಂತ ಮಹತ್ವದ ಅಂತಾರಾಷ್ಟ್ರೀಯ ಆರ್ಥಿಕ ಕಾರ್ಯಕ್ರಮವಾಗಿದೆ. ಅದರ ಚಾಲನೆಯಿಂದ ಯುಎಸ್ ಆರ್ಥಿಕ ನಾಯಕತ್ವವನ್ನು ಮರುಸ್ಥಾಪಿಸುವಲ್ಲಿ ಮತ್ತು ಇಂಡೋ-ಪೆಸಿಫಿಕ್ ದೇಶಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಮುಖ ತಿರುವು ನೀಡುತ್ತದೆ. ಈ ನಿರ್ಣಾಯಕ ವಿಷಯಗಳಿಗೆ ಚೀನಾದ ವಿಧಾನಕ್ಕೆ ಪರ್ಯಾಯವಾಗಿದೆ," ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕ್ವಾಡ್ ನಾಯಕರ ಶೃಂಗಸಭೆಯ ಒಂದು ದಿನ ಮುಂಚಿತವಾಗಿ IPEF ಪಾಲುದಾರಿಕೆಯನ್ನು ಘೋಷಿಸಲಾಯಿತು.

ಐಪಿಇಎಫ್ ಕುರಿತು ಮಾತನಾಡಿದ ಪ್ರಧಾನಿ ಮೋದಿ

ಐಪಿಇಎಫ್ ಕುರಿತು ಮಾತನಾಡಿದ ಪ್ರಧಾನಿ ಮೋದಿ

"ಐಪಿಇಎಫ್ ಇಂಡೋ-ಪೆಸಿಫಿಕ್ ಪ್ರದೇಶವನ್ನು ಜಾಗತಿಕ ಬೆಳವಣಿಗೆಯ ಎಂಜಿನ್ ಆಗಿ ಪರಿವರ್ತಿಸುವ ನಮ್ಮ ಸಾಮೂಹಿಕ ಬಯಕೆಯನ್ನು ಪ್ರತಿಬಿಂಬಿಸುತ್ತದೆ," ಎಂದು ವ್ಯಾಪಾರ ಪಾಲುದಾರಿಕೆಯ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಹೇಳಿದರು. ಇಂಡೋ-ಪೆಸಿಫಿಕ್ ಪ್ರದೇಶದ ಆರ್ಥಿಕ ಸವಾಲುಗಳನ್ನು ನಿಭಾಯಿಸಲು ಸಾಮಾನ್ಯ ಮತ್ತು ಸೃಜನಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ಕರೆ ನೀಡಿದರು.

"ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಸ್ಥಿತಿಸ್ಥಾಪಕತ್ವ, ಸುಸ್ಥಿರತೆ, ಒಳಗೊಳ್ಳುವಿಕೆ, ಆರ್ಥಿಕ ಬೆಳವಣಿಗೆ, ನ್ಯಾಯಸಮ್ಮತತೆ ಮತ್ತು ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಭಾಗವಹಿಸುವ ದೇಶಗಳ ನಡುವೆ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು IPEF ಪ್ರಯತ್ನಿಸುತ್ತದೆ" ಎಂದು ಪ್ರಧಾನ ಮಂತ್ರಿ ಕಚೇರಿ ಹೊರಡಿಸಿದ ಪತ್ರಿಕಾ ಪ್ರಕಟಣೆ ತಿಳಿಸಲಾಗಿದೆ.

ವಿಶ್ವಾಸ, ಪಾರದರ್ಶಕತೆ ಸಮಯೋಚಿತತೆ ಕುರಿತು ಮೋದಿ ಉಲ್ಲೇಖ

ವಿಶ್ವಾಸ, ಪಾರದರ್ಶಕತೆ ಸಮಯೋಚಿತತೆ ಕುರಿತು ಮೋದಿ ಉಲ್ಲೇಖ

ಎಲ್ಲರನ್ನೂ ಒಳಗೊಳ್ಳುವ ಮತ್ತು ಹೊಂದಿಕೊಳ್ಳುವ ಐ.ಪಿ.ಇ.ಎಫ್‌.ಗಾಗಿ ಎಲ್ಲಾ ಇಂಡೋ-ಪೆಸಿಫಿಕ್‌ ರಾಷ್ಟ್ರಗಳೊಂದಿಗೆ ಕೆಲಸ ಮಾಡುವ ಭಾರತದ ಬದ್ಧತೆಯನ್ನು ಅವರು ವ್ಯಕ್ತಪಡಿಸಿದರು. ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳ ಅಡಿಪಾಯವು 3ಟಿ ಗಳಾಗಿರಬೇಕು - ವಿಶ್ವಾಸ, ಪಾರದರ್ಶಕತೆ ಮತ್ತು ಸಮಯೋಚಿತತೆ ಎಂದು ಅವರು ಒತ್ತಿ ಹೇಳಿದರು.

ಭಾರತವು ಮುಕ್ತ ಮತ್ತು ಅಂತರ್ಗತ ಇಂಡೋ-ಪೆಸಿಫಿಕ್‌ ಪ್ರದೇಶಕ್ಕೆ ಬದ್ಧವಾಗಿದೆ. ಪಾಲುದಾರರ ಜೊತೆಗಿನ ಆರ್ಥಿಕ ಸಂಬಂಧವು ನಿರಂತರ ಬೆಳವಣಿಗೆ, ಶಾಂತಿ ಮತ್ತು ಸಮೃದ್ಧಿಗೆ ನಿರ್ಣಾಯಕವಾಗಿದೆ ಎಂದು ನಂಬಿದೆ. ಭಾರತವು ಐ.ಪಿ.ಇ.ಎಫ್‌ ಅಡಿಯಲ್ಲಿಪಾಲುದಾರ ರಾಷ್ಟ್ರಗಳೊಂದಿಗೆ ಸಹಯೋಗ ಹೊಂದಲು ಉತ್ಸುಕವಾಗಿದೆ. ಪ್ರಾದೇಶಿಕ ಆರ್ಥಿಕ ಸಂಪರ್ಕ, ಏಕೀಕರಣ ಮತ್ತು ಈ ವಲಯದಲ್ಲಿವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿಕೆಲಸ ಮಾಡಲು ಬದ್ಧವಾಗಿದೆ ಎಂದರು.

ಇಂದಿನ ಉಡಾವಣೆಯೊಂದಿಗೆ, ಪಾಲುದಾರ ರಾಷ್ಟ್ರಗಳು ಆರ್ಥಿಕ ಸಹಕಾರವನ್ನು ಬಲಪಡಿಸುವ ಮತ್ತು ಹಂಚಿಕೆಯ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸುವ ಚರ್ಚೆಗಳನ್ನು ಪ್ರಾರಂಭಿಸುತ್ತವೆ.

ಐಪಿಇಎಫ್ ಎನ್ನುವುದು ಚೀನಾಗೆ ಪರ್ಯಾಯವೇ?

ಐಪಿಇಎಫ್ ಎನ್ನುವುದು ಚೀನಾಗೆ ಪರ್ಯಾಯವೇ?

ಚೀನಾಗೆ ಪರ್ಯಾಯವಾಗಿ ಐಪಿಇಎಫ್ ವ್ಯವಹಾರಗಳನ್ನು ಒದಗಿಸುತ್ತದೆ ಎಂದು ಯುಎಸ್ ವಾಣಿಜ್ಯ ಕಾರ್ಯದರ್ಶಿ ಗಿನಾ ರೈಮೊಂಡೋ ಹೇಳಿದರು. ವಿಶೇಷವಾಗಿ ವ್ಯಾಪಾರಿ ರಂಗದಲ್ಲಿ ಚೀನಾಗೆ ಪರ್ಯಾಯ ಮಾರ್ಗವನ್ನು ಹುಡುಕುವುದಕ್ಕೆ ಪ್ರಾರಂಭಿಸುತ್ತಿವೆ. ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನಲ್ಲಿರುವ ದೇಶಗಳು ಯುಎಸ್ ವ್ಯವಹಾರಗಳಿಗೆ ಹೆಚ್ಚು ವಿಶ್ವಾಸಾರ್ಹ ಪಾಲುದಾರರಾಗುತ್ತವೆ," ಎಂದು ಹೇಳಿದ್ದಾರೆ.

"ಅಂದಹಾಗೆ, ಇಂದು, ನಿಮಗೆ ತಿಳಿದಿದೆ, ಆಪಲ್ ಚೀನಾದ ಹೊರಗೆ ಉತ್ಪಾದನೆಯನ್ನು ಹೆಚ್ಚಿಸಲು ನೋಡುತ್ತಿದೆ ಎಂದು ವರದಿ ಮಾಡುವುದನ್ನು ನೀವು ನೋಡುತ್ತೀರಿ. ಅನೇಕ ಕಂಪನಿಗಳು ಮತ್ತು ಅನೇಕ ಯುಎಸ್ ಕಂಪನಿಗಳು ಚೀನಾದಿಂದ ದೂರವಿರಲು ನೋಡುತ್ತಿವೆ. ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ ನಿಜವಾಗಿ ಅಂತರ ಕಾಯ್ದುಕೊಳ್ಳಲು ಬಯಸುತ್ತಿವೆ.

ಈ ರಾಷ್ಟ್ರಗಳು ಐಪಿಇಎಫ್ ಅನುಸಾರ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದಲ್ಲಿ ಅಂಥ ರಾಷ್ಟ್ರಗಳು ಇಂಡೋ-ಪೆಸಿಫಿಕ್ ಫ್ರೇಮ್‌ವರ್ಕ್‌ನಲ್ಲಿ ಅಮೆರಿಕನ್ ಕಂಪನಿಗಳಿಂದ ಆ ವ್ಯವಹಾರದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಏಕೆಂದರೆ ಅವರು ಐಪಿಇಎಫ್ ಅಡಿಯಲ್ಲಿ ನಾವು ಯೋಜಿಸುವ ಉನ್ನತ-ಗುಣಮಟ್ಟದ ಒಪ್ಪಂದಕ್ಕೆ ಸಹಿ ಹಾಕಿರುತ್ತಾರೆ," ಎನ್ನಲಾಗಿದೆ.

ಯುಎಸ್-ಭಾರತದ ಜಂಟಿ ಹೇಳಿಕೆಯ ಅಂಶಗಳು

ಯುಎಸ್-ಭಾರತದ ಜಂಟಿ ಹೇಳಿಕೆಯ ಅಂಶಗಳು

13 ಪಾಲುದಾರ ರಾಷ್ಟ್ರಗಳು ಸೋಮವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, "ಈ ಚೌಕಟ್ಟು ನಮ್ಮ ಆರ್ಥಿಕತೆಗಳಿಗೆ ಸ್ಥಿತಿಸ್ಥಾಪಕತ್ವ, ಸುಸ್ಥಿರತೆ, ಒಳಗೊಳ್ಳುವಿಕೆ, ಆರ್ಥಿಕ ಬೆಳವಣಿಗೆ, ನ್ಯಾಯಸಮ್ಮತತೆ ಮತ್ತು ಸ್ಪರ್ಧಾತ್ಮಕತೆಯನ್ನು ಮುನ್ನಡೆಸುವ ಉದ್ದೇಶವನ್ನು ಹೊಂದಿದೆ. ಈ ಉಪಕ್ರಮದ ಮೂಲಕ, ನಾವು ಪ್ರದೇಶದೊಳಗೆ ಸಮೃದ್ಧಿ, ಅಭಿವೃದ್ಧಿ ಮತ್ತು ಶಾಂತಿ, ಸಹಕಾರ, ಸ್ಥಿರತೆಗೆ ಕೊಡುಗೆ ನೀಡುವ ಗುರಿಯನ್ನು ಹೊಂದಿದ್ದೇವೆ," ಎಂದು ಉಲ್ಲೇಖಿಸಲಾಗಿದೆ.

"ಫ್ರೇಮ್‌ವರ್ಕ್ ಪಾಲುದಾರರು ಈ ಗುರಿಗಳನ್ನು ಸಾಧಿಸಲು ಆರ್ಥಿಕ ಸಹಕಾರವನ್ನು ಬಲಪಡಿಸುವ ವಿವಿಧ ವಿಧಾನಗಳ ಕುರಿತು ಚರ್ಚೆಗಳಲ್ಲಿ ತೊಡಗುತ್ತಾರೆ. ಇತರ ಆಸಕ್ತಿ ಹೊಂದಿರುವ ಇಂಡೋ-ಪೆಸಿಫಿಕ್ ಪಾಲುದಾರರನ್ನು ನಮ್ಮೊಂದಿಗೆ ಸೇರಲು ನಾವು ಆಹ್ವಾನಿಸುತ್ತೇವೆ," ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

English summary
India is Joins US-Led Indo-Pacific Economic Framework Aimed at Countering China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X