ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಚೇರಿಗೆ ತೆರಳಲು ಸಿದ್ಧ, WFH ಆಸಕ್ತಿ ಕಡಿಮೆ: ಹೊಚ್ಚ ಹೊಸ ಅಧ್ಯಯನ

|
Google Oneindia Kannada News

ಬೆಂಗಳೂರು, ಮಾರ್ಚ್ 18: ಕೊರೊನಾ ಸಾಂಕ್ರಾಮಿಕದ ಕಾರಣದಿಂದ ಭಾರತೀಯ ಕಾರ್ಮಿಕ ಮಾರುಕಟ್ಟೆ ಅಸ್ತವ್ಯಸ್ತಗೊಂಡಿದ್ದು, ಎಲ್ಲೆಡೆ ದೂರದ ಪ್ರದೇಶದ ಕೆಲಸ ಮತ್ತು ಎಲ್ಲಿಂದಲಾದರೂ ಕೆಲಸ ಮಾಡುವ ಪದ್ಧತಿ ಜಾರಿಯಲ್ಲಿದೆ. ಇದರಿಂದ ಬೃಹತ್‌ ನಗರದ ಉನ್ನತ ಹುದ್ದೆಯ ಉದ್ಯೋಗಿಗಳು ತಮ್ಮ ಸಣ್ಣಪುಟ್ಟ ನಗರಗಳಿಗೆ ಸ್ಥಳಾಂತರಗೊಂಡಿದ್ದಾರೆ.

WFH ಸಾಧಕ ಬಾಧಕಗಳು, ಪ್ರಚೋದಕಗಳು, ವ್ಯಾಪಾರ-ವಹಿವಾಟುಗಳು ಮತ್ತು ಉದ್ಯೋಗದಾತರ ದೃಷ್ಟಿಕೋನಗಳ ಕುರಿತು ಇಂಡೀಡ್‌ ಸಂಸ್ಥೆ ಅಧ್ಯಯನ ನಡೆಸಿದೆ. ಭಾರತದ 12 ನಗರಗಳಲ್ಲಿ ನೌಕರರು ಮತ್ತು ಉದ್ಯೋಗದಾತರ ಸಮೀಕ್ಷೆ ನಡೆಸಲಾಗಿದ್ದು, 'ಭಾರತದ ಉದ್ಯೋಗ ಮಾರುಕಟ್ಟೆ: ಸಾಂಕ್ರಾಮಿಕ ಮತ್ತು ವೈಟ್-ಕಾಲರ್ ವಲಸೆ' ವರದಿ ಬಿಡುಗಡೆಗೊಳಿಸಿದೆ. ಜೊತೆಗೆ, ಆರ್ಥಿಕ ಚೇತರಿಕೆ ವೇಗವಾಗುತ್ತಿದ್ದಂತೆ 'ರಿವರ್ಸ್‌ ವಲಸೆ' (ನಗರಗಳಿಂದ ಮತ್ತೆ ಹಳ್ಳಿಗಳಿಗೆ ಹಿಂದಿರುಗುವಿಕೆ) ಪ್ರವೃತ್ತಿ ಕುರಿತು ವರದಿ ಗಮನ ಹರಿಸಿದೆ. ವರದಿಯ ಪ್ರಮುಖ ಆವಿಷ್ಕಾರಗಳು ಈ ಕೆಳಗಿನನಂತಿವೆ.

ಕೋವಿಡ್-19: WFH ಮಾಡುವಾಗ ಪಾಲಿಸಬೇಕಾದ ''ಸಪ್ತಸೂತ್ರ''ಕೋವಿಡ್-19: WFH ಮಾಡುವಾಗ ಪಾಲಿಸಬೇಕಾದ ''ಸಪ್ತಸೂತ್ರ''

ಈ ಸಮೀಕ್ಷೆಗಾಗಿ ವ್ಯಾಲ್ಯೂವಾಕ್ಸ್, 1200 ಉದ್ಯೋಗಿಗಳು ಮತ್ತು 600 ಉದ್ಯೋಗದಾತರನ್ನು ಪ್ರಶ್ನಿಸಿದೆ. 2020 ರ ಡಿಸೆಂಬರ್ ಮತ್ತು 2021 ರ ಜನವರಿ ನಡುವೆ ಈ ಸಮೀಕ್ಷೆಯನ್ನು ನಡೆಸಲಾಯಿತು.

 ರಿವರ್ಸ್‌ ವಲಸೆ ಅಲ್ಪಾವಧಿ ಪ್ರವೃತ್ತಿ

ರಿವರ್ಸ್‌ ವಲಸೆ ಅಲ್ಪಾವಧಿ ಪ್ರವೃತ್ತಿ

ಸಾಂಕ್ರಾಮಿಕ ನಂತರದ ದೂರದ ಸ್ಥಳದಿಂದ ಕೆಲಸ ಮಾಡುವುದನ್ನು ಬೆಂಬಲಿಸಲು ಇತರ ದೇಶಗಳಿಗೆ ಹೋಲಿಸಿದರೆ ಭಾರತೀಯ ಕಂಪನಿಗಳು ಕಡಿಮೆ ಅಸಕ್ತಿ ತೋರುತ್ತಿವೆ. 59% ಉದ್ಯೋಗದಾತರು ಸಮಾಜದ ಹೊಸ ಸಾಮಾನ್ಯ ಪರಿಸ್ಥಿತಿಯಲ್ಲಿ ದೂರದ ಪ್ರದೇಶಗಳಿಂದ ಕೆಲಸ ಮಾಡುವುದಕ್ಕೆ ಅನುಮತಿ ಕಲ್ಪಿಸಿವೆ. ಆದರೆ, 10 ರಲ್ಲಿ 7 ಉದ್ಯೋಗದಾತರು ಸಾಂಕ್ರಾಮಿಕ ರೋಗಕ್ಕೆ ಪರಿಹಾರ ದೊರೆತ ನಂತರ ಈ ಪ್ರವೃತ್ತಿ ಮುಂದುವರಿಸುವುದಿಲ್ಲ ಎಂದಿದ್ದಾರೆ.

4 ರಲ್ಲಿ 3 ಉದ್ಯೋಗದಾತರು ಮನೆಯಿಂದ ಹೊರಗೆ ಕೆಲಸ ಮಾಡುವುದರಿಂದ ನೌಕರರ ಉತ್ಪಾದನೆಯಲ್ಲಿ ಯಾವುದೇ ಕುಸಿತ ಕಂಡುಬಂದಿಲ್ಲ ಎಂದಿದ್ದರೆ, 67% ದೊಡ್ಡ ಮತ್ತು 70% ಮಧ್ಯಮ ಗಾತ್ರದ ಭಾರತೀಯ ಸಂಸ್ಥೆಗಳು, (60% ದೊಡ್ಡ ಮತ್ತು 34% ಮಧ್ಯಮ ಗಾತ್ರ) ಸಾಂಕ್ರಾಮಿಕ-ನಂತರದ ಪರಿಸ್ಥಿತಿಯಲ್ಲಿ ಇದೇ ಪದ್ಧತಿ ಮುಂದುವರಿಸುವ ವಾದದ ಪರ ಅಭಿಪ್ರಾಯ ಹೊಂದಿಲ್ಲ.

 ಸ್ಟಾರ್ಟ್ಅಪ್‌ ಕತೆ ಏನು?

ಸ್ಟಾರ್ಟ್ಅಪ್‌ ಕತೆ ಏನು?

ಡಿಜಿಟಲ್ ತಂತ್ರಜ್ಞಾನವನ್ನೇ ಅವಲಂಬಿಸಿರುವ ಸ್ಟಾರ್ಟ್ಅಪ್‌ಗಳು ಸಹ ಸಾಂಕ್ರಾಮಿಕ ರೋಗ ಇಳಿಮುಖವಾದ ನಂತರ, ದೂರದ ಕೆಲಸವನ್ನು ಮುಂದುವರಿಸಲು ಇಷ್ಟಪಡುವುದಿಲ್ಲ. 90% ಕಂಪನಿಗಳು ಸಾಂಕ್ರಾಮಿಕ ನಂತರ ಕಚೇರಿಕ ಕೆಲಸದ ಮಾದರಿಗೆ ಹಿಂದಿರುಗುವುದಾಗಿ ಸೂಚಿಸಿದೆ.

46% ಉದ್ಯೋಗಿಗಳು ರಿವರ್ಸ್ ವಲಸೆ ತಾತ್ಕಾಲಿಕ ಎಂದು ಹೇಳಿದ್ದು, 50% ಉದ್ಯೋಗಿಗಳು ಕಂಪನಿಯ ಬೇಡಿಕೆಗೆ ತಕ್ಕಂತೆ ನಗರಗಳಿಗೆ ಹಿಂತಿರುಗಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ. 29% ಜನರು ಡಬ್ಲ್ಯುಎಫ್‌ಹೆಚ್ ಆಯ್ಕೆಗಳ ಲಭ್ಯತೆ ಮತ್ತು 24% ಜನರು ಸಾಂಕ್ರಾಮಿಕವನ್ನು ನಿಯಂತ್ರಣಕ್ಕೆ ತಂದಲ್ಲಿ ನಗರಗಳಿಗೆ ಮರಳುವುದಾಗಿ ತಿಳಿಸಿದ್ದಾರೆ. ಆದರೆ, ಕೇವಲ 9% ಜನರು ತಮ್ಮ ಸ್ಥಳೀಯ ಸ್ಥಳಗಳಲ್ಲಿ ಶಾಶ್ವತವಾಗಿ ಉಳಿಯಲು ಬಯಸಿದ್ದಾರೆ.

2 ರಲ್ಲಿ 1 ಉದ್ಯೋಗಿಗಳು ತಮ್ಮ ಕೆಲಸದ ಕಂಪನಿಯ ಬೇಡಿಕೆಯಿದ್ದರೆ ಮತ್ತೆ ಮೆಟ್ರೊಗೆ ಸ್ಥಳಾಂತರಗೊಳ್ಳಲು ಸಿದ್ಧರಿದ್ದಾರೆ ಮತ್ತು ಕೇವಲ 32% ಜನರು ಮಾತ್ರ ತಮ್ಮ ಸ್ಥಳೀಯ ಸ್ಥಳದಲ್ಲಿ, ಕಡಿಮೆ ವೇತನದಲ್ಲಿಯೂ ಪ್ರತ್ಯೇಕ ಉದ್ಯೋಗ ಹುಡುಕಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಇದರಲ್ಲಿ 88% ಹಿರಿಯ ಮಟ್ಟದ ಉದ್ಯೋಗಿಗಳು ವೇತನ ಕಡಿತಕ್ಕೆ ಸಿದ್ಧರಿಲ್ಲ.

 ಇಂಡೀಡ್ ಇಂಡಿಯಾ ನಿರ್ದೇಶಕ ಶಶಿಕುಮಾರ್

ಇಂಡೀಡ್ ಇಂಡಿಯಾ ನಿರ್ದೇಶಕ ಶಶಿಕುಮಾರ್

ಇಂಡೀಡ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶಶಿಕುಮಾರ್, "ಇಂಡೀಡ್‌ನಲ್ಲಿನ ಕೆಲಸದ ಅವಕಾಶಗಳು ಭಾರತದ ಕಾರ್ಮಿಕ ಮಾರುಕಟ್ಟೆ ಚಟುವಟಿಕೆಯ ನೈಜ ಸಮಯದ ಸೂಚಕವಾಗಿದೆ. ಕಳೆದ ವರ್ಷ ಇದೇ ಅವಧಿಯಿಂದ ಮಾರ್ಚ್ 2021 ರಲ್ಲಿ "ರಿಮೋಟ್" ಮತ್ತು "ಡಬ್ಲ್ಯುಎಫ್‌ಹೆಚ್" ಉದ್ಯೋಗ ಹುಡುಕಾಟಗಳು 437% ರಷ್ಟು ಹೆಚ್ಚಳವಾಗಿತ್ತು. ಹೊಸ ಪರಿಸ್ಥಿತಿಗೆ ತಕ್ಕಂತೆ ಇಂಡೀಡ್‌, ಕೆಲಸದ ಮಾದರಿಗಳನ್ನು ಮರುರೂಪಿಸಿಸಿ, ನಮ್ಯತೆ ಮತ್ತು ಉತ್ಪಾದಕತೆಯ ಹೊಸ ಪರಿಕಲ್ಪನೆಗಳಿಗೆ ಹೊಂದಿಕೊಳ್ಳಲು ಕಾರ್ಮಿಕರನ್ನು ಪ್ರೋತ್ಸಾಹಿಸುತ್ತಿದೆ. ಈಗ ಸಮಾಜ ಚೇತರಿಕೆಯತ್ತ ಸಾಗುತ್ತಿರುವಾಗ, ಈ ಕೆಲಸದ ಪ್ರವೃತ್ತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ" ಎಂದಿದ್ದಾರೆ.

 ಮಹಿಳೆಯರು ನಗರಕ್ಕೆ ಹಿಂದಿರುಗಲು ಸಿದ್ಧ

ಮಹಿಳೆಯರು ನಗರಕ್ಕೆ ಹಿಂದಿರುಗಲು ಸಿದ್ಧ

69% ಮಹಿಳಾ ಉದ್ಯೋಗಿಗಳು ಅಂದರೆ, ಪುರುಷರ ಉದ್ಯೋಗಿಗಳು (29%)ಗಳಿಂದ ದುಪ್ಪಟ್ಟು ಸಂಖ್ಯೆಯಲ್ಲಿದ್ದು, ಪ್ರಸ್ತುತ ಪರಿಸ್ಥಿತಿಯಲ್ಲಿ ಕ್ವಾರಂಟೈನ್‌ ಜೀವನ ಶೈಲಿ, ಅಥವಾ ಕೆಲಸದ ಅವಧಿ ವಿಸ್ತರಿಸುವ ಮೂಲಕ ಉದ್ಯೋಗಿಗಳ ವೆಚ್ಚ ಕಡಿತಗೊಳಿಸಲು ಮುಂದಾಗಿರುವ ಉದ್ಯೋಗದಾತರೊಂದಿಗೆ ಕೆಲಸ ಮಾಡುವ ಬದಲು ಬದಲಾಗಿ ತಮ್ಮ ಸ್ಥಳೀಯ ಊರುಗಳಿಗೆ ಮರಳಲು ಬಯಸುತ್ತಿದ್ದಾರೆ.

ಆದರೂ, ಮಹಿಳೆಯರು (60%) ಪುರುಷರಿಗಿಂತ (42%) ತಮ್ಮ ಸ್ವಂತ ಊರುಗಳಿಂದ ಕೆಲಸ ಮುಂದುವರಿಸಲು ವೇತನ ಕಡಿತವನ್ನು ಸ್ವೀಕರಿಸುವ ಹೆಚ್ಚು ಇಷ್ಟಪಟ್ಟಿಲ್ಲ. 59% ಮಹಿಳೆಯರು, 29% ಕ್ಕಿಂತ ಹೆಚ್ಚು ಪುರುಷರು, ತಮ್ಮ ಸ್ಥಳೀಯ ಸ್ಥಳದಲ್ಲಿ ಉದ್ಯೋಗವನ್ನು ಹುಡುಕುವುದು ಕಷ್ಟ ಎಂದು ನಂಬುತ್ತಾರೆ. 60% ಮಹಿಳಾ ಉದ್ಯೋಗಿಗಳು ಉದ್ಯೋಗವು ಬೇಡಿಕೆಯಿದ್ದರೆ ತಮ್ಮ ಸ್ಥಳೀಯ ಸ್ಥಳದಿಂದ ನಗರಗಳಿಗೆ ಹಿಂತಿರುಗಲು ಸಿದ್ಧರಿರುವುದಾಗಿ ಹೇಳುತ್ತಾರೆ.

 ಊರುಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ

ಊರುಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ

ಮಿಲೆನಿಯಲ್‌ಗಳಿಗೆ ಹೋಲಿಸಿದರೆ (38%) ವಯಸ್ಕ ಉದ್ಯೋಗಸ್ಥರು (56%) ತಮ್ಮ ಊರುಗಳಿಗೆ ಸ್ಥಳಾಂತರಗೊಳ್ಳಲು ಸಿದ್ಧರಿಲ್ಲ. ಸಾಂಕ್ರಾಮಿಕವು ಯುವಕರಿಗಿಂತ ವಯಸ್ಕರಿಗೆ ಹೆಚ್ಚು ಹೊಡೆತ ನೀಡಿದೆ. ಮತ್ತು ಮಿಲೇನಿಯಲ್ಸ್ (25%) ಗೆ ಹೋಲಿಸಿದರೆ ವಯಸ್ಕರಿಗೆ (44%) ಸುಮಾರು ಎರಡು ಪಟ್ಟು ಹೆಚ್ಚು ತಮ್ಮ ಸ್ಥಳೀಯ ಸ್ಥಳದಲ್ಲಿ ಉದ್ಯೋಗ ಹುಡುಕುವುದು ಕಷ್ಟವಾಗುತ್ತದೆ. ಅಲ್ಲದೆ, 61% ವಯಸ್ಕರು ತಮ್ಮ ಊರುಗಳಿಂದ ಕೆಲಸ ಮಾಡಲು ವೇತನ ಕಡಿತ ತೆಗೆದುಕೊಳ್ಳಲು ಸಿದ್ಧರಿಲ್ಲ.

ಮಿಲೆನಿಯಲ್‌ಗಳಿಗೆ ಹೋಲಿಸಿದರೆ (44%) ಅದರ ಅರ್ಧದಷ್ಟು ವಯಸ್ಕರು (22%) ತಮ್ಮ ಕೆಲಸದ ಬೇಡಿಕೆಯಿದ್ದರೆ ಸ್ವಂತ ಊರುಗಳಿಗೆ ನಗರಗಳಿಗೆ ಮರಳಲು ಸಿದ್ಧರಿಲ್ಲ ಎಂದು ಸರ್ವೆ ತಿಳಿಸಿದೆ.

 ಮನೆಯಿಂದ ಕೆಲಸ 2/3 ಹಂತದ ನಗರಗಳ ಅಭಿವೃದ್ಧಿಗೆ ಕಾರಣ

ಮನೆಯಿಂದ ಕೆಲಸ 2/3 ಹಂತದ ನಗರಗಳ ಅಭಿವೃದ್ಧಿಗೆ ಕಾರಣ

ಸಣ್ಣ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸುವುದರಿಂದ 30% ಉದ್ಯೋಗಿಗಳು ರಿವರ್ಸ್‌ ವಲಸೆಯನ್ನು ಪರಿಗಣಿಸಬಹುದು. ಬೃಹತ್‌ ಹಾಗೂ ಮಧ್ಯಮ ಉದ್ಯಮಗಳು-ಜಾಗತಿಕ ಮತ್ತು ಮಧ್ಯಮ ಎರಡೂ-50%-80% ಅಂತರದ ಗಣನಾರ್ಹ ಸಂಖ್ಯೆಗಳಲ್ಲಿ 2/3 ಹಂತದ ನಗರಗಳಿಗೆ ಉದ್ಯಮಗಳನ್ನು ವಿಸ್ತರಿಸಲು ಮತ್ತು ಕಾರ್ಯಾಚರಣೆ ಆರಂಭಿಸಲು ಇಚ್ಛೆ ವ್ಯಕ್ತಪಡಿಸಿವೆ. ಹೆಚ್ಚುವರಿಯಾಗಿ, 50% ಉದ್ಯೋಗಿಗಳು ಇದರಿಂದ ಅವರ ಊರುಗಳು ಶೀಘ್ರದಲ್ಲಿ (21%) ಹಾಗೂ ದೀರ್ಘಕಾಲದಲ್ಲಿ (29%) ಅಭಿವೃದ್ಧಿಯಾಗುತ್ತವೆ ಎಂಬ ವಿಶ್ವಾಸ ಹೊಂದಿದ್ದಾರೆ.

ಭವಿಷ್ಯದಲ್ಲಿ ಮಹಾನಗರಗಳ ವ್ಯಾಪಾರ ಅಭಿವೃದ್ಧಿಯ ಪ್ರಮುಖ ಕ್ಷೇತ್ರಗಳಾಗಿರುವ ಉದ್ಯೋಗದಾತರು ಇಂಟರ್ನೆಟ್ ಸೇವೆಗಳು (30%), ಆ್ಯಪ್‌ ಆಧಾರಿತ ವ್ಯವಹಾರಗಳು (30%) ಮತ್ತು ಚಿಲ್ಲರೆ ವ್ಯಾಪಾರ, ಆರೋಗ್ಯ ಮತ್ತು ಮನರಂಜನಾ ಕೇಂದ್ರಗಳಿಗೆ (27%) ಆದ್ಯತೆ ನೀಡಲಿದ್ದಾರೆ. ಆದರೆ ಶಾಲೆಗಳು ಮತ್ತು ಕಾಲೇಜುಗಳ ತೆರೆಯುವಿಕೆಯ ವಿಳಂಬದಿಂದ ನಗರಗಳಲ್ಲಿ ಪ್ರಸ್ತುತ ಪ್ರತಿಭೆಗಳ ಕೊರತೆ ಎದುರಾಗಲಿದ್ದು, 14% ರಷ್ಟು ಪ್ರತಿಭೆಗಳ ಕೊರತೆ ಕಂಡುಬರಲಿದೆ. ಮುಂಬರುವ ದಿನಗಳಲ್ಲಿ ಮಹಾನಗರಗಳಲ್ಲಿ ಪ್ರತಿಭೆಗಳ ಕೊರತೆ ಎದುರಾಗಲಿದೆ ಎಂದು ಅರ್ಧಕ್ಕಿಂತ ಹೆಚ್ಚು ಉದ್ಯೋಗದಾತರು (55%) ಅಭಿಪ್ರಾಯಪಟ್ಟಿದ್ದಾರೆ.

English summary
India Employees wants to go back to office: Indeed study.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X