ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಮೊದಲ ಲಾಕ್‌ಡೌನ್: ಅಂದು ಮತ್ತು ಇಂದಿನ ಕೊರೊನಾ ಸ್ಥಿತಿ

|
Google Oneindia Kannada News

ನವದೆಹಲಿ, ಮಾರ್ಚ್ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಭಾರತದಲ್ಲಿ ಹೊಸ ಭಯವನ್ನು ಹುಟ್ಟಿಸುತ್ತಿದೆ. ಇದೇ ಮಾರ್ಚ್ 25, 2020ರಂದು ಕೊವಿಡ್-19 ಸೋಂಕು ಹರಡುವಿಕೆ ಭೀತಿಯಲ್ಲಿ ಇಡೀ ಭಾರತ್ ಲಾಕ್ ಡೌನ್ ಘೋಷಿಸಲಾಗಿತ್ತು.

ಭಾರತ್ ಲಾಕ್ ಡೌನ್ ಘೋಷಣೆ ಮಾಡಿ ಗುರುವಾರಕ್ಕೆ ಸರಿಯಾಗಿ ಒಂದು ವರ್ಷ ಪೂರೈಸಿದೆ. 2020ರಲ್ಲಿ ಇದೇ ಮಾರ್ಚ್ 25ನೇ ದಿನ ದೇಶದಲ್ಲಿ ಕೊರೊನಾವೈರಸ್ ಅಂಕಿ-ಸಂಖ್ಯೆ ಹೇಗಿತ್ತು. ಇಂದಿನ ಮಟ್ಟಿಗೆ ಕೊರೊನಾವೈರಸ್ ಪರಿಸ್ಥಿತಿ ಹೇಗಿದೆ.

ಭಾರತೀಯರನ್ನು 14 ಗಂಟೆ ಮನೆಯಲ್ಲೇ ಕೂಡಿ ಹಾಕಿದ ಕೊರೊನಾ!ಭಾರತೀಯರನ್ನು 14 ಗಂಟೆ ಮನೆಯಲ್ಲೇ ಕೂಡಿ ಹಾಕಿದ ಕೊರೊನಾ!

ವಿಶ್ವದಲ್ಲೇ ಅತಿಹೆಚ್ಚು ಕೊರೊನಾವೈರಸ್ ಸೋಂಕಿತ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 3ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದರ ಜೊತೆಗೆ ಅತಿಹೆಚ್ಚು ಲಸಿಕೆ ಉತ್ಪಾದನೆ ಮತ್ತು ವಿತರಣೆಯಲ್ಲಿ ಭಾರತವೇ ಅಗ್ರಸ್ಥಾನದಲ್ಲಿದೆ. ಭಾರತ ಲಾಕ್ ಡೌನ್ ನಂತರ ದೇಶದಲ್ಲಿ ಬೆಳವಣಿಗೆ ಮತ್ತು ಕೊರೊನಾವೈರಸ್ ಪರಿಸ್ಥಿತಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಭಾರತಕ್ಕೆ ಲಗ್ಗೆ ಇಟ್ಟ ಕೊರೊನಾವೈರಸ್ ಮಹಾಮಾರಿ

ಭಾರತಕ್ಕೆ ಲಗ್ಗೆ ಇಟ್ಟ ಕೊರೊನಾವೈರಸ್ ಮಹಾಮಾರಿ

2019ನೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾವೈರಸ್ ಸೋಂಕು ಕ್ರಮೇಣ ವಿಶ್ವಕ್ಕೆ ವ್ಯಾಪಿಸಿತು. ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತದಲ್ಲೂ ಮಹಾಮಾರಿ ಹರಡುವಿಕೆ ವೇಗ ಹೆಚ್ಚಾಯಿತು. ಎರಡು ಮೂರು ತಿಂಗಳಿನಲ್ಲೇ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತ ಪ್ರಕರಣಗಳು ವರದಿಯಾದವು. ಚೀನಾದ ಮಾದರಿಯಲ್ಲೇ ಭಾರತದಲ್ಲೂ ಲಾಕ್ ಡೌನ್ ಜಾರಿಗೊಳಿಸಲಾಗಿತು.

ಕಳೆದ ವರ್ಷ ಮಾರ್ಚ್ 25ರಂದು ಮೊದಲ ಲಾಕ್ ಡೌನ್

ಕಳೆದ ವರ್ಷ ಮಾರ್ಚ್ 25ರಂದು ಮೊದಲ ಲಾಕ್ ಡೌನ್

ಭಾರತದಲ್ಲಿ ಮೊದಲ ಬಾರಿಗೆ ಮಾರ್ಚ್ 22ರಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೂ 'ಜನತಾ ಕರ್ಫ್ಯೂ' ಜಾರಿಗೊಳಿಸಲಾಗಿತ್ತು. ಜನತಾ ಕರ್ಫ್ಯೂ ಯಶಸ್ವಿಯಾದ ಎರಡು ದಿನಗಳ ನಂತರ ದೇಶಾದ್ಯಂತ ಮೊದಲ ಹಂತದ ಲಾಕ್ ಡೌನ್ ಘೋಷಿಸಲಾಯಿತು. ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಮಾರ್ಚ್ 25, 2020ರಂದು ಮೊದಲ ಬಾರಿಗೆ ಲಾಕ್ ಡೌನ್ ಜಾರಿಗೊಳಿಸಲಾಯಿತು. ತದನಂತರದಲ್ಲಿ ಅದನ್ನು ಮೂರು ಬಾರಿ ವಿಸ್ತರಿಸಲಾಯಿತು. ಕೊನೆಯದಾಗಿ ಮೇ 18ರಂದು ಆರಂಭವಾದ ಭಾರತ ಲಾಕ್ ಡೌನ್ ಮೇ 31ಕ್ಕೆ ಅಂತ್ಯವಾಯಿತು. ಜೂನ್ 1ರಿಂದ ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಯಿತು.

Video: ಸಾಮಾಜಿಕ ಜಾಲತಾಣದಲ್ಲಿ ಜನತಾ ಕರ್ಫ್ಯೂ ನೆನಪು!Video: ಸಾಮಾಜಿಕ ಜಾಲತಾಣದಲ್ಲಿ ಜನತಾ ಕರ್ಫ್ಯೂ ನೆನಪು!

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಆದ್ಯತೆ

ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆಗೆ ಆದ್ಯತೆ

ದೇಶದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವುದಕ್ಕಾಗಿ ಲಸಿಕೆ ವಿತರಣೆ ವೇಗ ಹೆಚ್ಚಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕಳೆದ ಜನವರಿ 16ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೊದಲು ಕೊರೊನಾವೈರಸ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಅಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ವಿತರಿಸಲು ಆರಂಭಿಸಲಾಗಿತ್ತು. ಫೆಬ್ರವರಿ 2ರಿಂದ ಎರಡನೇ ಡೋಸ್ ಲಸಿಕೆಯ ವಿತರಣೆ ಕಾರ್ಯಾರಂಭ ಮಾಡಲಾಗಿತ್ತು. 2021ರ ಜುಲೈ ಅಂತ್ಯದ ವೇಳೆಗೆ 30 ಕೋಟಿ ಫಲಾನುಭವಿಗಳಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಏಪ್ರಿಲ್ 1ರಿಂದ ದೇಶದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಅಭಿಯಾನ ಆರಂಭವಾಗಲಿದೆ.

ದೇಶದಲ್ಲಿ ಈವರೆಗೂ 5 ಕೋಟಿಗೂ ಅಧಿಕ ಮಂದಿಗೆ ಲಸಿಕೆ

ದೇಶದಲ್ಲಿ ಈವರೆಗೂ 5 ಕೋಟಿಗೂ ಅಧಿಕ ಮಂದಿಗೆ ಲಸಿಕೆ

ದೇಶದಲ್ಲಿ ಈವರೆಗೂ 5,31,45,709 ಮಂದಿ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ನೀಡಲಾಗಿದೆ. ಭಾರತದಲ್ಲಿ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಸಂಶೋಧಿಸಿದ ಮತ್ತು ಪುಣೆಯ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಉತ್ಪಾದಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ಸಂಸ್ಥೆಯ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ.

ಫೆಬ್ರವರಿಯಲ್ಲಿ ಹೆಚ್ಚಿದ ಕೊರೊನಾವೈರಸ್ ಹರಡುವಿಕೆ ವೇಗ

ಫೆಬ್ರವರಿಯಲ್ಲಿ ಹೆಚ್ಚಿದ ಕೊರೊನಾವೈರಸ್ ಹರಡುವಿಕೆ ವೇಗ

ಭಾರತದಲ್ಲಿ ಕೊರೊನಾವೈರಸ್ ಸೋಂಕು ಹರಡುವಿಕೆ ವೇಗ ಸಪ್ಟೆಂಬರ್ ತಿಂಗಳಿನಲ್ಲಿ ಕೊಂಚ ನಿಯಂತ್ರಣಕ್ಕೆ ಬಂದಿತ್ತು. ಸಪ್ಟೆಂಬರ್ ತಿಂಗಳಿನಿಂದ 2021ರ ಫೆಬ್ರವರಿವರೆಗೂ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿತ್ತು. ಫೆಬ್ರವರಿ ತಿಂಗಳಿನಲ್ಲಿ 9000 ಆಸುಪಾಸಿನಲ್ಲಿದ್ದ ಸೋಂಕಿತ ಪ್ರಕರಣಗಳ ಸಂಖ್ಯೆ ದಿಢೀರನೇ 50 ಸಾವಿರದ ಗಡಿ ದಾಟಿದೆ. ಇದೀಗ ದೇಶದಲ್ಲಿ ಪ್ರತಿನಿತ್ಯ 50 ಸಾವಿರಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ.

ದೇಶದಲ್ಲಿ ಒಂದೇ ದಿನ 53 ಸಾವಿರ ಮಂದಿಗೆ ಕೊರೊನಾ

ದೇಶದಲ್ಲಿ ಒಂದೇ ದಿನ 53 ಸಾವಿರ ಮಂದಿಗೆ ಕೊರೊನಾ

ಭಾರತದಲ್ಲಿ ಒಂದೇ ದಿನ 53476 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ ಐದು ತಿಂಗಳ ನಂತರದ ಮೊದಲ ಬಾರಿಗೆ ಸೋಂಕಿತ ಪ್ರಕರಣಗಳ ಸಂಖ್ಯೆ 50,000 ಗಡಿ ದಾಟಿದ್ದು, ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,17,87,534ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 26,490 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 1,12,31,650 ಸೋಂಕಿತರು ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 251 ಮಂದಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ಈವರೆಗೂ ಮಹಾಮಾರಿಗೆ ಬಲಿಯಾದವರ ಸಂಖ್ಯೆ 1,60,692ಕ್ಕೆ ಏರಿಕೆಯಾಗಿದೆ.

ಕೊರೊನಾ ಹಾಟ್ ಸ್ಪಾಟ್ ಆದ ಮಹಾರಾಷ್ಟ್ರದ ಮುಂಬೈ

ಕೊರೊನಾ ಹಾಟ್ ಸ್ಪಾಟ್ ಆದ ಮಹಾರಾಷ್ಟ್ರದ ಮುಂಬೈ

ಭಾರತದಲ್ಲಿ 50 ಸಾವಿರ ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದರೆ ಈ ಪೈಕಿ 30 ಸಾವಿರಕ್ಕೂ ಅಧಿಕ ಪ್ರಕರಣಗಳು ಮಹಾರಾಷ್ಟ್ರವೊಂದರಲ್ಲೇ ಪತ್ತೆಯಾಗುತ್ತಿವೆ. ಮಹಾರಾಷ್ಟ್ರದ ಮುಂಬೈ ನಗರವು ಮತ್ತೊಮ್ಮೆ ಕೊರೊನಾ ಹಾಟ್ ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿದೆ. ಕಳೆದ 24 ಗಂಟೆಗಳಲ್ಲೇ ಮಹಾರಾಷ್ಟ್ರದಲ್ಲಿ 31855 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ನಿಟ್ಟಿನಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಹೊಸ ನಿಯಮ ಮತ್ತು ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಕೊವಿಡ್-19 ಸೋಂಕು ತಪಾಸಣೆಗೆ ಆದ್ಯತೆ

ಕೊವಿಡ್-19 ಸೋಂಕು ತಪಾಸಣೆಗೆ ಆದ್ಯತೆ

ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ ಹೆಚ್ಚುತ್ತಿರುವ ಹಿನ್ನೆಲೆ ತಪಾಸಣೆ ವೇಗವನ್ನು ಹೆಚ್ಚಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ 10,65,021 ಜನರಿಗೆ ಕೊವಿಡ್-19 ತಪಾಸಣೆ ಮಾಡಲಾಗಿದೆ. ದೇಶದಲ್ಲಿ ಈವರೆಗೂ 23,75,03,882 ಜನರಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಾಹಿತಿ ನೀಡಿದೆ.

English summary
India Coronavirus Lockdown Anniversary: March 25, 2020: The day India Went Into Nationwide Lockdown To Tackle Coronavirus. India Covid-19 Lockdown One Year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X