ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಸ್ತವ ಗಡಿ ನಿಯಂತ್ರಣ ರೇಖೆ: ಇಲ್ಲಿ ಗುಂಡು ಹಾರಿದ್ದು 45 ವರ್ಷದಲ್ಲಿ ಇದೇ ಮೊದಲು

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ಭಾರತ ಮತ್ತು ಚೀನಾ ಗಡಿ ಸಂಘರ್ಷ ಮತ್ತಷ್ಟು ತೀವ್ರವಾಗುತ್ತಿದೆ. ಸೋಮವಾರ ಪೂರ್ವ ಲಡಾಖ್ ಭಾಗದಲ್ಲಿ ತನ್ನ ಉಪಟಳ ಮುಂದುವರಿಸಿರುವ ಚೀನಾ ಸೇನೆ, ಸೋಮವಾರ ಭಾರತೀಯ ಸೇನೆಯತ್ತ ಎಚ್ಚರಿಕೆ ನೀಡುವ ಸಲುವಾಗಿ ಗುಂಡುಹಾರಿಸಿದೆ. ಚೀನೀ ಪಡೆಗಳು ಆಗಾಗ ಕ್ಯಾತೆ ತೆಗೆಯುತ್ತಿದ್ದರೂ, ವಿವಿಧ ರೀತಿಯ ಚಕಮಕಿಗಳು ಉಭಯ ದೇಶಗಳ ಸೈನಿಕರ ನಡುವೆ ನಡೆಯುತ್ತಿದ್ದರೂ ವಾಸ್ತವ ಗಡಿ ನಿಯಂತ್ರಣ ರೇಖೆಯ (ಎಲ್‌ಎಸಿ) ಬಳಿ ಕಳೆದ 45 ವರ್ಷಗಳಲ್ಲಿ ಗುಂಡು ಹಾರಿಸಿರುವುದು ಇದೇ ಮೊದಲ ಸಲ.

Recommended Video

ಮತ್ತೆ China ಗಡಿಯಲ್ಲಿ ದೊಣ್ಣೆ ಹಿಡಿದು ನಿಂತ ಚೀನಾ ಸೈನಿಕರು | Oneindia Kannada

ಅಂದಹಾಗೆ ಎಲ್‌ಎಸಿಯಲ್ಲಿ ಕೊನೆಯ ಬಾರಿ ಗುಂಡಿನ ಸದ್ದು ಕೇಳಿಸಿದ್ದು 1975ರಲ್ಲಿ. ಆಗಲೂ ಚೀನೀ ಸೈನಿಕರೇ ಕಿರಿಕ್ ಮಾಡಿದ್ದರು. ಆಗ ಕೇಂದ್ರಾಡಳಿತ ಪ್ರದೇಶವಾಗಿದ್ದ ಅರುಣಾಚಲ ಪ್ರದೇಶದ ಟುಲುಂಗ್ ಲಾದಲ್ಲಿ ಅಸ್ಸಾಂ ರೈಫಲ್ಸ್ ಮೇಲೆ ದಾಳಿ ಮಾಡಿದ್ದ ಚೀನಾ ನಾಲ್ವರು ಯೋಧರನ್ನು ಹತ್ಯೆ ಮಾಡಿತ್ತು.

ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕರು ಚೀನಾ ಗಡಿಯೊಳಗೆ ಪತ್ತೆನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ ಯುವಕರು ಚೀನಾ ಗಡಿಯೊಳಗೆ ಪತ್ತೆ

ಪ್ಯಾಂಗೊಂಗ್ ತ್ಸೊ ಸರೋವರದ ದಕ್ಷಿಣ ತೀರದಲ್ಲಿ ಭಾರತದ ಪ್ರಾಬಲ್ಯವುಳ್ಳ ಪ್ರದೇಶದಲ್ಲಿ ಚೀನೀ ಪಡೆಗಳು ಅತಿಕ್ರಮಣ ನಡೆಸಲು ಸೋಮವಾರ ಸಂಜೆ ಪ್ರಯತ್ನಿಸಿದಾಗ ಈ ಗುಂಡಿನ ಸದ್ದು ಕೇಳಿದೆ. ಭಾರತಯ ಸೈನಿಕರು ಎಲ್‌ಎಸಿ ದಾಟಿ ಬಂದು ಎಚ್ಚರಿಕೆಯ ಗುಂಡನ್ನು ಹಾರಿಸಿದ್ದಾರೆ ಎಂದು ಚೀನಾ ಸೇನೆಯು ಸೋಮವಾರ ಮಧ್ಯರಾತ್ರಿ ಆರೋಪ ಮಾಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಈ ಆರೋಪವನ್ನು ಮಂಗಳವಾರ ಬೆಳಿಗ್ಗೆ ಭಾರತೀಯ ಸೇನೆ ನಿರಾಕರಿಸಿತ್ತು. ಮುಂದೆ ಓದಿ.

ರೈಫಲ್ಸ್, ರಾಡು ತಂದ ಚೀನೀ ಸೈನಿಕರು

ರೈಫಲ್ಸ್, ರಾಡು ತಂದ ಚೀನೀ ಸೈನಿಕರು

ಎಲ್‌ಎಸಿ ಸಮೀಪ ಇರುವ ಭಾರತದ ಮುಂಚೂಣಿ ನೆಲೆಯನ್ನು ವಶಪಡಿಸಿಕೊಳ್ಳುವ ಪ್ರಯತ್ನವನ್ನು ಚೀನಾ ನಡೆಸಿರುವುದು ಸ್ಪಷ್ಟವಾಗಿದೆ. ಚೀನೀ ಸೈನಿಕರು ರೈಫಲ್‌ಗಳು, ಭರ್ಜಿ, ಕಬ್ಬಿಣದ ರಾಡುಗಳು ಹಾಗೂ ಕತ್ತಿಗಳನ್ನು ತಲೆಯ ಮೇಲೆ ಹೊತ್ತು ತರುತ್ತಿರುವ ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಸೇನೆಯೊಂದಿಗವೆ ಘರ್ಷಣೆಗೆ ಸಿದ್ಧರಾಗಿಯೇ ಬಂದಿರುವುದನ್ನು ಇದು ಸೂಚಿಸುತ್ತದೆ.

ಪ್ರತಿಕ್ರಿಯಿಸದ ಭಾರತ

ಪ್ರತಿಕ್ರಿಯಿಸದ ಭಾರತ

ಪಿಎಲ್‌ಎ ಪಡೆಯು ತನ್ನದೇ ಪಡೆಗಳನ್ನು ಬೆದರಿಸಿದಂತೆ ಮಾಡುವ ಪ್ರಯತ್ನಕ್ಕಾಗಿ ಗಾಳಿಯಲ್ಲಿ ಕೆಲವು ಸುತ್ತು ಗುಂಡುಗಳನ್ನು ಹಾರಿಸಿದೆ. ಆದರೆ ಚೀನಾದ ಸೇನೆ ಮಾಡಿದ ಪ್ರಚೋದನೆಗೆ ಭಾರತೀಯ ಸೇನೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಲಡಾಖ್ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ: ಸಚಿವ ಜೈ ಶಂಕರ್ಲಡಾಖ್ ಪ್ರಸ್ತುತ ಸ್ಥಿತಿ ತುಂಬಾ ಗಂಭೀರವಾಗಿದೆ: ಸಚಿವ ಜೈ ಶಂಕರ್

ಆಯುಧಗಳನ್ನು ತಂದಿರುವ ಚೀನಾ

ಆಯುಧಗಳನ್ನು ತಂದಿರುವ ಚೀನಾ

ಚೀನೀ ಪಡೆಗಳು ಹೊತ್ತು ತಂದಿರುವುದು ಈಟಿಯಂತೆ ಕೆಲಸ ಮಾಡಬಲ್ಲ 'ದಾಹ್' ಎಂಬ ಕಚ್ಚಾ ಆಯುಧದಂತೆ ಕಾಣಿಸುತ್ತದೆ ಎನ್ನಲಾಗಿದೆ. ಮೂರು ವಿಭಿನ್ನ ತಂಡಗಳಲ್ಲಿದ್ದ ಚೀನೀ ಸೈನಿಕರು ಒಂದಿಲ್ಲೊಂದು ಬಗೆಯ ಆಯುಧಗಳನ್ನು ಹೊಂದಿದ್ದರು. ಕೈಯಲ್ಲಿದ್ದ ದೊಣ್ಣೆಗಳನ್ನು ತಿರುಗಿಸುವ ಮೂಲಕ ಭಾರತೀಯ ಸೈನಿಕರನ್ನು ಕೆರಳಿಸುವ ಪ್ರಯತ್ನವನ್ನೂ ಮಾಡಿದ್ದರು.

40 ಸೈನಿಕರ ಗುಂಪು

40 ಸೈನಿಕರ ಗುಂಪು

ರೆಜಾಂಗ್ ಲಾ-ರೆಚಿನ್ ಲಾ ಸಾಲಿನುದ್ದದ ಮೂರು ಎತ್ತರ ಪ್ರದೇಶಗಳಿಂದ ಭಾರತೀಯ ಸೇನೆಯನ್ನು ಹಿಮ್ಮೆಟ್ಟಿರುವುದು ಚೀನಾ ಉದ್ದೇಶವಾಗಿದೆ. ಇವು ಭಾರತಕ್ಕೆ ಸೇರಿದ್ದಾದರೂ ಚೀನಾ ತನ್ನದು ಎಂದು ಪ್ರತಿಪಾದಿಸುತ್ತಿದೆ. ಚೀನೀ ಪಡೆಗಳಿಗೆ ಭಾರತೀಯ ಸೈನಿಕರು ಎಚ್ಚರಿಕೆ ನೀಡಿದ್ದರು. ಆದರೆ ಒಂದು ಭಾಗದಲ್ಲಿ ಸುಮಾರು 40 ಸೈನಿಕರ ಚೀನೀ ಗುಂಪು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಲು ನೋಡಿತು.

ಚೀನಾ ಪ್ರಚೋದನೆ ತಂತ್ರ

ಚೀನಾ ಪ್ರಚೋದನೆ ತಂತ್ರ

ಸುಮಾರು 50 ಕಿ.ಮೀ. ವ್ಯಾಪ್ತಿಯಲ್ಲಿ ಈ ಎತ್ತರದ ಪ್ರದೇಶ ಹರಡಿದ್ದು, ಇಲ್ಲಿ ಭಾರತ ಪ್ರಾಬಲ್ಯ ಹೊಂದಿದೆ. ಭಾರತವನ್ನು ಹಿಮ್ಮೆಟ್ಟಿಸಲು ಚೀನಾ ಯತ್ನಿಸುತ್ತಿದೆ. ಇಲ್ಲಿನ ಸ್ಥಿತಿ ಬಹಳ ಸೂಕ್ಷ್ಮವಾಗಿದೆ. ಇಲ್ಲಿ ಪಡೆಗಳು ಮುಖಾಮುಖಿಯಾಗಿಲ್ಲ. ಆದರೆ ಇಲ್ಲಿ ಸ್ಥಿತಿಯನ್ನು ಉದ್ವಿಗ್ನಗೊಳಿಸುವ ಸಲುವಾಗಿ ಚೀನಾ ಪದೇ ಪದೇ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ.

English summary
India-China Standoff: First time army open fires in Ladakh's LAC in 45 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X