ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಲಸಿಕೆ: ಮಹತ್ವದ ಹೋರಾಟದಲ್ಲಿ ಭಾರತದ ಮುಂದಾಳತ್ವ, ಶ್ರೀಮಂತ ದೇಶಗಳ ವಿರೋಧ

|
Google Oneindia Kannada News

ನವದೆಹಲಿ, ಡಿಸೆಂಬರ್ 10: ಕೊರೊನಾ ವೈರಸ್ ಲಸಿಕೆಯ ಬಳಕೆಗೆ ಅನುಮತಿ ಪಡೆದುಕೊಳ್ಳುವ ಪೈಪೋಟಿ ಭಾರತದಲ್ಲಿಯೂ ಶುರುವಾಗಿದೆ. ಅತ್ಯಧಿಕ ಅಪಾಯ ಎದುರಿಸುತ್ತಿರುವ ಸುಮಾರು 30 ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲು ಯೋಜನೆ ರೂಪಿಸಲಾಗಿದೆ.

ಈ ಬೆಳವಣಿಗೆಗಳ ನಡುವೆ ಇತರೆ ಅಭುವೃದ್ಧಿಶೀಲ ಮತ್ತು ಕಡಿಮೆ ಆದಾಯದ ದೇಶಗಳ ಬೆಂಬಲ ಹೊಂದಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ, ಕೋವಿಡ್ 19 ಔಷಧಗಳು, ಲಸಿಕೆಗಳು, ರೋಗಪತ್ತೆ ಮತ್ತು ತಂತ್ರಜ್ಞಾನಗಳಿಗಾಗಿ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಪೇಟೆಂಟ್‌ಗಳಿಂದ ತಾತ್ಕಾಲಿಕ ವಿನಾಯಿತಿ ನೀಡುವುದನ್ನು ಬಯಸಿವೆ. 1995ರಲ್ಲಿ ಮಾಡಿಕೊಳ್ಳಲಾದ ಬಹುರಾಷ್ಟ್ರೀಯ ಟಿಆರ್‌ಐಪಿಎಸ್ (ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರಿ ಸಂಬಂಧ ಅಂಶಗಳು) ಒಪ್ಪಂದದ ವಿವಿಧ ನಿಯಮಗಳ ಅಡಿಯಲ್ಲಿ ಈ ಮನ್ನಾಕ್ಕೆ ಬೇಡಿಕೆ ಇರಿಸಲಾಗಿದೆ.

ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳದ ಅದ್ಭುತ ದ್ವೀಪಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳದ ಅದ್ಭುತ ದ್ವೀಪ

ಭಾರತ ಮತ್ತು ದಕ್ಷಿಣ ಆಫ್ರಿಕಾಗಳು ಅಕ್ಟೋಬರ್ 2ರಂದು ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯೂಟಿಒ) ಮುಂದೆ ಈ ಪ್ರಸ್ತಾವವನ್ನು ಮಂಡಿಸಿವೆ. ಡಬ್ಲ್ಯೂಟಿಒದ ಪ್ರಧಾನ ಮಂಡಳಿಯ ಅಂತಿಮ ನಿರ್ಧಾರಕ್ಕೂ ಮುನ್ನ ಇದು ಗುರುವಾರ ಮತ್ತೆ ಚರ್ಚೆಗೆ ಬಂದಿದೆ.

ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಬಳಕೆ ಯಾವಾಗ?ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಬಳಕೆ ಯಾವಾಗ?

ವೈದ್ಯಕೀಯ ಸಾಧನಗಳು, ಔಷಧಗಳನ್ನು ತಯಾರಿಸುವ ದೇಶಗಳಿಂದ ತಾತ್ಕಾಲಿಕ ಅವಧಿಯವರೆಗೆ, ಅಂದರೆ ಕೋವಿಡ್‌ನಿಂದ ಜಗತ್ತು ಮುಕ್ತವಾಗುವವರೆಗೆ ಕೆಲವು ವಿನಾಯಿತಿಗಳನ್ನು ನೀಡುವಂತೆ ಕೋರಲಾಗಿದೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ದೇಶಗಳು ಈ ಹೋರಾಟದಲ್ಲಿ ಮುಂದುವರಿಯಲು ಅನುಕೂಲವಾಗುವಂತೆ ಕಡಿಮೆ ದರದಲ್ಲಿ ಔಷಧ ಮತ್ತು ಉಪಕರಣಗಳು ಲಭಿಸುತ್ತವೆ. ಮುಂದೆ ಓದಿ.

ಹಿಂದುಳಿದ ದೇಶಗಳಿಗೆ ಅನುಕೂಲ

ಹಿಂದುಳಿದ ದೇಶಗಳಿಗೆ ಅನುಕೂಲ

ಬೌದ್ಧಿಕ ಆಸ್ತಿ ಹಕ್ಕುಗಳು, ರೋಗಿಗಳು, ವ್ಯಾಪಾರ ಗೋಪ್ಯತೆಗಳು ಮತ್ತು ಕೋವಿಡ್-19 ಹಿನ್ನೆಲೆಯಲ್ಲಿ ವಿಸ್ತೃತ ಹಿತಾಸಕ್ತಿಗಾಗಿ ಹಕ್ಕುಸ್ವಾಮ್ಯಗಳಿಗೆ ಸಂಬಂಧಿಸಿದಂತೆ ಟಿಆರ್‌ಐಪಿಎಸ್ ಒಪ್ಪಂದದ ಕೆಲವು ವಿಭಾಗಗಳನ್ನು ಅಳವಡಿಸುವುದರಿಂದ ಈ ಪ್ರಸ್ತಾವದಲ್ಲಿ ವಿನಾಯಿತಿ ಕೋರಲಾಗಿದೆ. ಈ ಮೂಲಕ ದೇಶಗಳು ಕಡಿಮೆ ದರದಲ್ಲಿ ಔಷಧ, ಲಸಿಕೆಗಳು, ವೈದ್ಯಕೀಯ ಸಲಕರಣೆಗಳು ಮತ್ತು ತಂತ್ರಜ್ಞಾನಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಟಿಆರ್‌ಪಿಐಎಸ್ ಒಪ್ಪಂದ

ಟಿಆರ್‌ಪಿಐಎಸ್ ಒಪ್ಪಂದ

ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಈ ಪ್ರಸ್ತಾವವನ್ನು ಟಿಆರ್‌ಐಪಿಎಸ್ ಮಂಡಳಿ ಮುಂದೆ ಮಂಡಿಸಿದ್ದು, ಡಬ್ಲ್ಯೂಟಿಒದ ಪ್ರಧಾನ ಮಂಡಳಿಯ ಮುಂದೆ ಈ ಪ್ರಸ್ತಾವವನ್ನು ಶಿಫಾರಸು ಮಾಡುವಂತೆ ಮನವಿ ಮಾಡಿದೆ. ಟಿಆರ್‌ಪಿಐಎಸ್ ಒಪ್ಪಂದವನ್ನು 1995ರಲ್ಲಿ ಬೌದ್ಧಿಕ ಆಸ್ತಿಯ ಕುರಿತು ಹಾಗೂ ಬೌದ್ಧಿಕ ಆಸ್ತಿಯ (ಐಪಿಆರ್) ಎಲ್ಲ ಮಾದರಿಗಳನ್ನು ರಕ್ಷಿಸುವ ಹಾಗೂ ಜಾರಿಗೊಳಿಸುವ ಮಾನದಂಡಗಳನ್ನು ನೋಡಿಕೊಳ್ಳಲು ಮಾಡಲಾಗಿತ್ತು. ಒಪ್ಪಂದವು ಮುಖ್ಯವಾಗಿ ಕಡಿಮೆ ಆದಾಯವಿರುವ ದೇಶಗಳು ಹಾಗೂ ಅಭಿವೃದ್ಧಿಶೀಲ ಜಗತ್ತಿನಲ್ಲಿ ಕಡಿಮೆ ದರದಲ್ಲಿ ಔಷಧಗಳು ದೊರಕುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಜೆನ್ನೋವಾ ಕೊರೊನಾ ಲಸಿಕೆ ಮಾನವನ ಮೇಲೆ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿಜೆನ್ನೋವಾ ಕೊರೊನಾ ಲಸಿಕೆ ಮಾನವನ ಮೇಲೆ ಪ್ರಯೋಗಕ್ಕೆ ಷರತ್ತುಬದ್ಧ ಅನುಮತಿ

ಕಡಿಮೆ ದರಕ್ಕೆ ಔಷಧ ಸಿಗುತ್ತಿಲ್ಲ

ಕಡಿಮೆ ದರಕ್ಕೆ ಔಷಧ ಸಿಗುತ್ತಿಲ್ಲ

ಜಗತ್ತಿನ ಬಹುಪಾಲು ಜನಸಂಖ್ಯೆಯು ಕೊರೊನಾ ವೈರಸ್ ವಿರುದ್ಧ ಪ್ರತಿರಕ್ಷಣಾ ಸಾಮರ್ಥ್ಯ ಪಡೆಯುವವರೆಗೂ ಮತ್ತು ವ್ಯಾಪಕ ಲಸಿಕೆ ನೀಡುವಿಕೆ ಸಾಧ್ಯವಾಗುವವರೆಗೂ ಈ ವಿನಾಯಿತಿ ಜಾರಿಯಲ್ಲಿ ಇರಬೇಕು ಎಂದು ಪ್ರಸ್ತಾವದಲ್ಲಿ ಕೋರಲಾಗಿದೆ. ಕಡಿಮೆದರದಲ್ಲಿ ಸೂಕ್ತ ಸಮಯಕ್ಕೆ ಲಸಿಕೆ ಸಿಗುವಂತೆ ಐಪಿಆರ್‌ನಲ್ಲಿ ಅವಕಾಶವಾಗುತ್ತಿಲ್ಲ. ಜತೆಗೆ ಔಷಧಗಳು ಹಾಗೂ ಲಸಿಕೆಗಳ ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಲಾಗಿದೆ.

ಕೋವಿಡ್ ವಿರುದ್ಧದ ಹೋರಾಟ

ಕೋವಿಡ್ ವಿರುದ್ಧದ ಹೋರಾಟ

ಟಿಆರ್‌ಐಪಿಎಸ್ ಮಂಡಳಿಯಲ್ಲಿ ಅಕ್ಟೋಬರ್ 16ರಂದು ನಡೆದ ಸಭೆಯಲ್ಲಿ ಭಾರತವು, ಕೋವಿಡ್ ವಿರುದ್ಧದ ಹೋರಾಟಕ್ಕೆ ಬೇಕಾದ ಯಾವುದೇ ಆರೋಗ್ಯ ಉತ್ಪನ್ನಗಳನ್ನು ಉತ್ಪಾದಿಸಲು ಶಕ್ತವಾಗದ ಹಾಗೂ ಕಡಿಮೆ ಸಾಮರ್ಥ್ಯದ ದೇಶಗಳಿಗೆ ಜಂಟಿ ಪ್ರಸ್ತಾವ ಬಹಳ ಮುಖ್ಯವಾಗಿದೆ ಎಂದು ತಿಳಿಸಿದೆ. ಕೋವಿಡ್ ಪಿಡುಗಿನ ವಿರುದ್ಧ ಹೋರಾಟಕ್ಕೆ ಅಗತ್ಯವಾದ ವೈದ್ಯಕೀಯ ಉತ್ಪನ್ನಗಳು ಮತ್ತು ಸಲಕರಣೆಗಳನ್ನು ಪೂರೈಕೆ ಮಾಡುವಲ್ಲಿ ಭಾರತದ ಕೊಡುಗೆಯನ್ನು ಮುಂದಿರಿಸಿದ್ದು, ಪೂರೈಕೆಗೆ ಅಡ್ಡಿಪಡಿಸುವ ಕೆಲವು ದೇಶಗಳ ಪ್ರಯತ್ನವನ್ನು ಎದುರಿಸಿರುವುದಾಗಿ ತಿಳಿಸಿದೆ.

ಐಪಿಆರ್ ದೊಡ್ಡ ಅಡ್ಡಿ

ಐಪಿಆರ್ ದೊಡ್ಡ ಅಡ್ಡಿ

ಚಿಕಿತ್ಸೆ ಮತ್ತು ಲಸಿಕೆಗಳ ಲಭ್ಯತೆಗೆ ಐಪಿಆರ್ ಗೋಡೆಯಾಗಿದೆ ಎಂದು ಪ್ರಸ್ತಾವದಲ್ಲಿ ಹೇಳಲಾಗಿದ್ದು, ಇದಕ್ಕೆ ಕೋವಿಡ್ ಉತ್ಪನ್ನಗಳ ಐಪಿಆರ್ ಉಲ್ಲಂಘನೆಗಾಗಿ ಖಾಸಗಿ ಕಂಪೆನಿಗಳು ಕಾನೂನು ಮೊಕದ್ದಮೆ ದಾಖಲಿಸಿರುವುದು ಮತ್ತು ಅಗತ್ಯ ಸಾಧನಗಳ ಉತ್ಪಾದನೆಯನ್ನು ಸೀಮಿತಗೊಳಿಸುವ ಐಪಿಆರ್ ನಿರ್ಬಂಧಗಳನ್ನು ಉದಾಹರಣೆಯಾಗಿ ನೀಡಲಾಗಿದೆ.

ಯಾರು ಪರ? ಯಾರು ವಿರೋಧ?

ಯಾರು ಪರ? ಯಾರು ವಿರೋಧ?

ಭಾರತ, ದಕ್ಷಿಣ ಆಫ್ರಿಕಾ, ಕೀನ್ಯಾ ಮತ್ತು ಎಸ್ವಾಟಿನಿ ಈ ಪ್ರಸ್ತಾವವನ್ನು ಮುಂದಿರಿಸಿವೆ. ಅರ್ಜೆಂಟೈನಾ, ಬಾಂಗ್ಲಾದೇಶ, ಪಾಕಿಸ್ತಾನ, ಶ್ರೀಲಂಕಾ, ಟ್ಯುನೇಷಿಯಾ, ವೆನೆಜುವೆಲಾ, ಈಜಿಪ್ಟ್, ಇಂಡೋನೇಷ್ಯಾ, ಮಾಲಿ, ಮಾರಿಷಸ್, ಮೊಜಾಂಬಿಕ್ ಮತ್ತು ನಿಕಾರಾಗುವಾ ಇದಕ್ಕೆ ಸಂಪೂರ್ಣ ಬೆಂಬಲ ನೀಡಿವೆ. ಚೀನಾ, ಚಿಲಿ, ಚಾಡ್, ಕೊಲಂಬಿಯಾ, ಕೋಸ್ಟರಿಕಾ, ಈಕ್ವೆಡಾರ್, ಎಲ್ ಸಲ್ವಾಡೊರ್, ಜಮೈಕಾ, ಆಫ್ರಿಕಾ, ಕೆರೇಬಿಯನ್ ಮತ್ತು ಪೆಸಿಫಿಕ್ ದೇಶಗಳು ಸಂಧಾನ ಗುಂಪುಗಳಾಗಿವೆ. ನೈಜೀರಿಯಾ, ಫಿಲಿಪ್ಪೀನ್ಸ್, ಸೆನೆಗಲ್, ಟರ್ಕಿ ಮತ್ತು ಥಾಯ್ಲೆಂಡ್ ಈ ಪ್ರಸ್ತಾವವನ್ನು ಸ್ವಾಗತಿಸಿದ್ದು, ಮುಂದಿನ ಚರ್ಚೆಯನ್ನು ಬೆಂಬಲಿಸಿವೆ.

ಆದರೆ ಅಮೆರಿಕ, ಬ್ರೆಜಿಲ್, ಐರೋಪ್ಯ ಒಕ್ಕೂಟ, ಜಪಾನ್, ನಾರ್ವೆ, ಸ್ವಿಟ್ಜರ್ಲೆಂಡ್, ಯುನೈಟೆಡ್ ಕಿಂಗ್‌ಡಮ್ ಮತ್ತು ಆಸ್ಟ್ರೇಲಿಯಾದಂತಹ ಶ್ರೀಮಂತ ದೇಶಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಸ್ತಾವವನ್ನು ಬೆಂಬಲಿಸಿದೆ. 300ಕ್ಕೂ ಅಧಿಕ ನಾಗರಿಕ ಸಮಾಜ ಸಂಘಟನೆಗಳು ಕೂಡ ತಮ್ಮ ಬೆಂಬಲ ಸೂಚಿಸಿವೆ.

Recommended Video

ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.15 ಕೆಜಿ ಚಿನ್ನ ವಶಕ್ಕೆ ಪಡೆದ ಕಸ್ಟಮ್ ಅಧಿಕಾರಿಗಳು | Oneindia Kannada

English summary
India and South Africa jointly made proposal on TRIPS waiver at WTO to free Covid-19 drugs and vaccines from IPR and patents for low income countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X