ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಅಡುಗೆಮನೆಗೆ ಸೀಮಿತ ಅಲ್ಲ ಎಂದು ತೋರಿಸಿಕೊಟ್ಟ ನಾರಿಯರಿವರು

|
Google Oneindia Kannada News

ಈ ವರ್ಷ ನಮಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವ. ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕು ೭೫ ವರ್ಷಗಳಾಗಿವೆ. ಭಾರತ ಸ್ವಾತಂತ್ರ್ಯ ಪಡೆಯಲು ನಾಲಾಯಕ್ ಎಂದು ಅಂದು ಬ್ರಿಟನ್ ನಾಯಕರು ಬಹಿರಂಗವಾಗಿ ಹೇಳಿದ್ದರು. ಅವರು ಹೇಳಿದ್ದು ನಿಜವಾಯಿತಾ?

ಭಾರತ ವಿಶ್ವದ ಸೂಪರ್ ಪವರ್ ರಾಷ್ಟ್ರವಾಗದಿದ್ದರೂ ಜಾಗತಿಕ ಶಕ್ತಿಯಾಗುವ ಮಟ್ಟಕ್ಕೆ ಬೆಳೆದಿದೆ. ಭಾರತೀಯರು ವಿಶ್ವದ ಹಲವು ದೇಶಗಳಲ್ಲಿ ಅಧಿಕಾರ ಪಡೆಯುವ ಹಂತಕ್ಕೆ ಹೋಗಿದ್ದಾರೆ. ಅಸಂಖ್ಯಾತ ಭಾರತೀಯರು ವಿಶ್ವಾದ್ಯಂತ ಉದ್ಯಮಪತಿಗಳಾಗಿ ಗಮನ ಸೆಳೆದಿದ್ದಾರೆ. ನಾಸಾದಂಥ ಸಂಸ್ಥೆಯಲ್ಲೂ ಭಾರತೀಯರು ಮುಂಚೂಣಿಯಲ್ಲಿದ್ದಾರೆ.

ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕನ್ನಡಿಗರಿವರುಬ್ರಿಟಿಷರ ವಿರುದ್ಧ ಹೋರಾಡಿದ ಪ್ರಮುಖ ಕನ್ನಡಿಗರಿವರು

ಒಂದು ಕಾಲದಲ್ಲಿ ಬ್ರಿಟಿಷರು ಭಾರತದಲ್ಲಿ ಮಹಿಳೆಯರು ಆಡಳಿತ ನಡೆಸಲು ಅನರ್ಹ ಎನ್ನುತ್ತಿದ್ದರು. ಈಗ ಭಾರತದಲ್ಲಿ ಮಹಿಳೆಯರು ದೇಶದ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿ ಹೀಗೆ ಎಲ್ಲ ಸ್ತರದಲ್ಲೂ ಆಡಳಿತ ಗಿಟ್ಟಿಸುತ್ತಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಭಾರತೀಯ ಮಹಿಳೆಯರು ಅಧಿಕಾರ ಪಡೆಯದಿದ್ದರೂ ಸೀಮಿತ ಅವಕಾಶದಲ್ಲೇ ಗಮನ ಸೆಳೆದಿರುವುದು ನಿಜ.

ವೃತ್ತಿಪರ ಎನಿಸುವ ಉದ್ಯಮ ವಲಯದಲ್ಲಿ ಭಾರತೀಯ ಮಹಿಳೆಯರು ನಾಯಕತ್ವದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಿರುವುದುಂಟು. ಗೃಹ ವ್ಯವಹಾರವನ್ನು ಮಾತ್ರವಲ್ಲ ಸಂಸ್ಥೆಯ ವ್ಯವಹಾರವನ್ನೂ ಯಶಸ್ವಿಯಾಗಿ ನಿಭಾಯಿಸಬಲ್ಲೆವೆಂದು ಮಹಿಳೆಯರು ನಿರೂಪಿಸಿಕೊಟ್ಟಿದ್ದಾರೆ. ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಇಂಥ ಕೆಲ ಯಶಸ್ವಿ ಮಹಿಳಾ ಉದ್ಯಮಿಗಳ ಬಗ್ಗೆ ಹೇಳುವುದು ಬಹಳ ಪ್ರಸ್ತುತ ಮತ್ತು ಸಮಯೋಚಿತ.

ಕಿರಣ್ ಮಜುಮ್ದಾರ್ ಶಾ

ಕಿರಣ್ ಮಜುಮ್ದಾರ್ ಶಾ

ಭಾರತದ ಮಹಿಳಾ ಉದ್ಯಮಿ ಎಂದು ಹೇಳಿದಾಕ್ಷಣ ಮೊದಲು ನಮ್ಮ ಮನಪಟಲದಲ್ಲಿ ಮೂಡುವ ಹೆಸರು ಕಿರಣ್ ಮಜುಮ್ದಾರ್ ಶಾ. ಬೆಂಗಳೂರಿನಲ್ಲಿ ಮುಖ್ಯಕಚೇರಿ ಹೊಂದಿರುವ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಇವರು.

1978ರಲ್ಲಿ ಹೊಸೂರು ರಸ್ತೆಯಲ್ಲಿ ಒಂದು ಸಣ್ಣ ಗ್ಯಾರೇಜ್ ಅನ್ನು ಬಾಡಿಗೆಗೆ ಪಡೆದು ಅಲ್ಲಿ ಬಯೋಕಾನ್ ಪ್ರಾರಂಭಿಸಿ ಕಿರಣ್ ಮಜುಂದಾರ್ ಶಾ ಈಗ ವಿಶ್ವದ ಅತ್ಯಂತ ದೊಡ್ಡ ಬಿಟಿ ಕಂಪನಿಯಾಗಿ ಬೆಳೆಸಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಒಬ್ಬರೆನಿಸಿದ್ದಾರೆ. ಅವರ ಆಸ್ತಿ ಮೌಲ್ಯ ಅಂದಾಜು 29 ಸಾವಿರ ಕೋಟಿ ರೂ ಎನ್ನಲಾಗಿದೆ.

69 ವರ್ಷದ ಇವರದ್ದು ಉದ್ಯಮಶೀಲತೆ ಮಾತ್ರವಲ್ಲ, ನಾಡಿನ ಜಾಗೃತ ಪ್ರಜೆಯೂ ಹೌದು. ನಾಡಿನ ಆಗು ಹೋಗುಗಳ ಬಗ್ಗೆ ಇವರು ಸೋಷಿಯಲ್ ಮೀಡಿಯಾದಲ್ಲಿ ಸ್ಪಂದಿಸುತ್ತಿರುತ್ತಾರೆ. ರಾಜ್ಯ ಸರಕಾರದ ಕ್ರಮಗಳ ಬಗ್ಗೆ ಪರವೋ ವಿರೋಧವೋ ತಮ್ಮ ಅನಿಸಿಕೆಗಳನ್ನು ನೇರವಾಗಿ ಹಂಚಿಕೊಳ್ಳುತ್ತಾರೆ.

ದೇಶದ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ; ಅಲ್ಪಾಯುವಾದರೂ ಹೆಗ್ಗಳಿಕೆ ಆಲದಮರದಷ್ಟುದೇಶದ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ; ಅಲ್ಪಾಯುವಾದರೂ ಹೆಗ್ಗಳಿಕೆ ಆಲದಮರದಷ್ಟು

ಫಾಲ್ಗುಣಿ ನಾಯರ್

ಫಾಲ್ಗುಣಿ ನಾಯರ್

ನೀವು ಮಹಿಳೆಯಾಗಿದ್ದರೆ ನೈಕಾ ಕಂಪನಿಯ ಹೆಸರು ಬಹುಶಃ ಕೇಳಿರುತ್ತೀರಿ. ಸೌಂದರ್ಯವರ್ಧಕ ಸಾಧನಗಳನ್ನು ಮಾರಾಟ ಮಾಡುವ ಬ್ರ್ಯಾಂಡ್ ಕಂಪನಿ ಇದು. 59 ವರ್ಷದ ಫಾಲ್ಗುಣಿ ನಾಯರ್ ಈ ಕಂಪನಿಯ ಸಿಇಒ.

ಫಾಲ್ಗುಣಿ ನಾಯರ್ ತಮ್ಮ ವ್ಯವಹಾರ ಚಾತುರ್ಯ ಮತ್ತು ತಂತ್ರಗಾರಿಕೆಯಿಂದ ನೈಕಾ ಕಂಪನಿಯನ್ನು ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಫಾಲ್ಗುಣಿ ನಾಯರ್ ಎರಡನೇ ಸ್ಥಾನದಲ್ಲಿದ್ದಾರೆ. ಇವರ ಬಳಿ ಇರುವ ಒಟ್ಟು ಆಸ್ತಿ ಮೌಲ್ಯ 57 ಸಾವಿರ ಕೋಟಿ ರೂ ಎಂದು ಅಂದಾಜಿಸಲಾಗಿದೆ.

ಇಳಾ ಭಟ್

ಇಳಾ ಭಟ್

ಗುಜರಾತ್ ರಾಜ್ಯದ ಇವರು ಬಹು ಆಯಾಮಗಳಿರುವ ವ್ಯಕ್ತಿ. ವಕೀಲರೂ ಹೌದು, ಸಂಘಟಕರೂ ಹೌದು, ಪ್ರೇರಕರೂ ಹೌದು. ಮಹಿಳೆಯರು ಸ್ವಾವಲಂಬಿಗಳಾಗಿಸುವ ಕ್ರಾಂತಿಕಾರಿಯೂ ಹೌದು. ೮೮ ವರ್ಷದ ಇಳಾ ಭಟ್ ಸ್ವಯಂ ಉದ್ಯೋಗಿ ಮಹಿಳಾ ಸಂಸ್ಥೆ (SEWA) ಸ್ಥಾಪಿಸಿದ್ದಾರೆ. ಇದು ಜವಳಿ ಕ್ಷೇತ್ರದಲ್ಲಿ ಸ್ವಂತ ಉದ್ಯೋಗ ಮಾಡುವ ಮಹಿಳೆಯರ ಟ್ರೇಡ್ ಯೂನಿಯಲ್ ಆಗಿದೆ. ಈ ಸಂಸ್ಥೆಯು ತೀರಾ ತಳಮಟ್ಟದಿಂದ ಮಹಿಳೆಯರನ್ನು ಮೇಲೆತ್ತಿ ಉದ್ಯಮಶೀಲರನ್ನಾಗಿ ಮಾಡಲು ನೆರವಾಗುತ್ತದೆ. ಅದೇನು ಸಾಮಾನ್ಯ ಕೆಲಸವಲ್ಲ. ಲಕ್ಷಾಂತರ ಮಹಿಳೆಯರು ಈ ಸಂಸ್ಥೆಯಿಂದ ಉದ್ಧಾರವಾಗಿದ್ದಾರೆ.

ಒಂದು ಅಂದಾಜು ಪ್ರಕಾರ ಸೇವಾದಲ್ಲಿ 20 ಲಕ್ಷದಷ್ಟು ಮಹಿಳೆಯರು ಸದಸ್ಯೆಯಾಗಿದ್ದಾರೆ. ವಿಶ್ವದ ಅಸಂಘಟಿತ ಕಾರ್ಮಿಕರ ಅತ್ಯಂತ ದೊಡ್ಡ ಸಂಘಟನೆ ಎಂಬ ಹಿರಿಮೆ ಸೇವಾದ್ದು. ಪ್ರಖರ ಗಾಂಧಿವಾದಿಯೂ ಆಗಿರುವ ಇಳಾ ಭಟ್ ಅವರಿಗೆ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿ, ಗೌರವಗಳು ಸಿಕ್ಕಿವೆ.

ವಾಣಿ ಕೋಲಾ

ವಾಣಿ ಕೋಲಾ

ಕಲಾರಿ ಕ್ಯಾಪಿಟಲ್ ಎಂಬ ಹೂಡಿಕೆ ಸಂಸ್ಥೆಯ ಸ್ಥಾಪಕಿ ವಾಣಿ ಕೋಲಾ ಹೆಸರು ಸಾಮಾನ್ಯ ಜನರಿಗೆ ಗೊತ್ತಿಲ್ಲದಿದ್ದರೂ ಭಾರತದ ಉದ್ಯಮ ವಲಯದಲ್ಲಿ ಚಿರಪರಿಚಿತ ಹೆಸರು. ಹೈದರಾಬಾದ್‌ನ ವಾಣಿ ಕೋಲಾ ಅಮೆರಿಕದಲ್ಲಿ 22 ವರ್ಷ ಇದ್ದು 2006ರಲ್ಲಿ ಭಾರತದಲ್ಲಿ ಕಾರ್ಯನಿರತರಾಗಿದ್ದಾರೆ. 2014ರಲ್ಲಿ ಫಾರ್ಚೂನ್ ಇಂಡಿಯಾ ಪ್ರಕಟಿಸಿದ ಅತ್ಯಂತ ಪ್ರಭಾವಿ ಮಹಿಳಾ ಉದ್ಯಮಿಗಳ ಪಟ್ಟಿಯಲ್ಲಿ ವಾಣಿ ಹೆಸರು ಇತ್ತು.

ವಾಣಿ ಕೋಲಾ ಕೇವಲ ಕಲಾರಿ ಕ್ಯಾಪಿಟಲ್ ಮಾತ್ರವಲ್ಲ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿ ಯಶಸ್ವಿಯಾದ ಮಹಿಳೆ. ಕಲಾರಿ ಕ್ಯಾಪಿಟಲ್ ಮೂಲಕ ಹಲವು ಸ್ಟಾರ್ಟಪ್ ಮತ್ತು ಸಣ್ಣಪುಟ್ಟ ಕಂಪನಿಗಳಿಗೆ ಬಂಡವಾಳ ವ್ಯವಸ್ಥೆ ಮಾಡಿದ್ದಾರೆ. ಡ್ರೀಮ್ ಇಲವೆನ್, ಸ್ನ್ಯಾಪ್ ಡೀಲ್, ಮೈಂತ್ರಾ, ಅರ್ಬನ್ ಲ್ಯಾಡರ್ ಮೊದಲಾದ ಸಂಸ್ಥೆಗಳಿಗೆ ಬಂಡವಾಳ ಕೊಟ್ಟಿದ್ದಾರೆ.

ಶಾಹನಾಜ್ ಹುಸೇನ್

ಶಾಹನಾಜ್ ಹುಸೇನ್

ಉತ್ತರಪ್ರದೇಶದ ಶಾಹನಾಜ್ ಹುಸೇನ್ ಬಹಳ ಅಚ್ಚರಿ ಹುಟ್ಟಿಸಿರುವ ಮಹಿಳಾ ಉದ್ಯಮಿ. ಯಾವುದೇ ವಾಣಿಜ್ಯ ಜಾಹೀರಾತು ಇಲ್ಲದೇ ಒಂದು ಬ್ರ್ಯಾಂಡ್ ಅನ್ನು ಕಟ್ಟಿ ಉನ್ನತ ಹಂತಕ್ಕೆ ಕೊಂಡೊಯ್ದ ಕೀರ್ತಿ ಇವರದ್ದು. ಶಾಹನಾಜ್ ಹುಸೇನ್ ಗ್ರೂಪ್ ಎಂಬ ಸಂಸ್ಥೆಯ ಸ್ಥಾಪಕಿ ಮತ್ತು ಮುಖ್ಯಸ್ಥೆ ಇವರು.

ಆಯುರ್ವೇದದ ಆಧಾರದ ತಯಾರಾದ ಸೌಂದರ್ಯ ಸಾಧಕ ಉತ್ಪನ್ನಗಳ ವ್ಯವಹಾರದಲ್ಲಿ ಬಹಳ ಯಶಸ್ವಿಯಾಗಿದ್ದಾರೆ. ಕುತೂಹಲವೆಂದರೆ, ಯಾವುದೇ ಜಾಹೀರಾತು ಇಲ್ಲದೇ ಒಂದು ಬ್ರ್ಯಾಂಡನ್ನು ಹೇಗೆ ಬೆಳೆಸಿದರೆಂದು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಸಂಸ್ಥೆಯ ಪಠ್ಯಕ್ರಮದಲ್ಲಿ ಒಂದು ಪಾಠವನ್ನೇ ಇಡಲಾಗಿದೆ.

1996ರಲ್ಲಿ ವಿಶ್ವದ ಅತ್ಯಂತ ಶ್ರೇಷ್ಠ ಮಹಿಳಾ ಉದ್ಯಮಿ ಎಂಬ ಪ್ರಶಸ್ತಿಯೂ ಅವರಿಗೆ ಸಿಕ್ಕಿದೆ. ಬ್ರಿಟನ್‌ನ ಸಂಸತ್ತಿನಲ್ಲಿ ಭಾಷಣ ಮಾಡಿದ್ದಾರೆ. ವಿಶ್ವದ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಇವರು ಉಪನ್ಯಾಸ ನೀಡಿದ್ದಾರೆ. ಕ್ಯಾನಸ್ ಚಲನಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ನಡೆದಿದ್ದಾರೆ.

ಉಪಾಸನ ಟಾಕು

ಉಪಾಸನ ಟಾಕು

ಭಾರತದ ಮೊದಲ ಹಣಕಾಸು ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದೆನಿಸಿದ ಮೋಬಿಕ್ವಿಕ್‌ನ ಸಹ ಸಂಸ್ಥಾಪಕಿ ಉಪಾಸನ ಟಾಕು. ಅಮೆರಿಕದಲ್ಲಿ ಒಳ್ಳೆಯ ಉದ್ಯೋಗ ಹೊಂದಿದ್ದ ಅವರು 2009ರಲ್ಲಿ ಅದನ್ನು ಬಿಟ್ಟು ಭಾರತಕ್ಕೆ ಬಂದಿದ್ದರು. ಕೆಲ ವರ್ಷಗಳ ಕಾಲ ಆದಾಯ ರಹಿತ ಉದ್ಯಮದಲ್ಲಿ ತೊಡಗಿಸಿಕೊಂಡ ಬಳಿಕ ಮೋಬಿಕ್ವಿಕ್ ಸಂಸ್ಥೆ ಸ್ಥಾಪಿಸಿದ್ದಾರೆ.

ಹರ್ಯಾಣ ಮೂಲದ ಉಪಾಸನಾ ಈ ಮುಂಚೆ ಅಮೆರಿಕದಲ್ಲಿ ಪೇಪಾಲ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಆ ಕೆಲಸದ ಅನುಭವ ಅವರಿಗೆ ಮೋಬಿಕ್ವಿಕ್ ಬೆಳೆಸಲು ಅನುಕೂಲವಾಯಿತು. ಮೋಬಿಕ್ವಿಕ್ ಎಂಬುದು ಒಂದು ಪಾವತಿ ವ್ಯವಸ್ಥೆಯಾಗಿದೆ.

(ಒನ್ಇಂಡಿಯಾ ಸುದ್ದಿ)

Recommended Video

ಚಾಮರಾಜಪೇಟೆ ಈದ್ಗಾ ಕುರಿತು ಮುಸ್ಲಿಂ ನಾಯಕರ ಜೊತೆ ಶಾಂತಿ‌ ಸಭೆ | Oneindia Kannada

English summary
Indian Women have proved that they are not only best in household management, but also good in business world. Here is introduction to few best Indian women entrepreneurs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X