ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಆಚರಿಸುತ್ತಿರುವ ಸ್ವಾತಂತ್ರ್ಯ ಮಹೋತ್ಸವ 75 ಅಥವಾ 76?

|
Google Oneindia Kannada News

ನವದೆಹಲಿ, ಆಗಸ್ಟ್ 15: ಭಾರತದಲ್ಲಿ ಸ್ವಾತಂತ್ರ್ಯ ಹಬ್ಬ. ಅಮೃತ ಮಹೋತ್ಸವದ ಉಗ್ಘಾರದ ಮಧ್ಯೆ ಬಾನಂಗಳದಲ್ಲಿ ಕೇಸರಿ, ಬಿಸಿ, ಹಸಿರು ಬಣ್ಣಗಳ ಚಿತ್ತಾರ ಮೂಡಿದೆ. ಬಾವುಟಗಳಿಗೆ ಜೊತೆಯಾಗಿ ಬಾನಿಗೆ ಜಿಗಿದ ಬಲೂನುಗಳು ಬಣ್ಣದ ಚಿತ್ತಾರ ಮೂಡಿಸಿವೆ.

ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮದ ಜೊತೆಗೆ ಕೆಲವು ಗೊಂದಲಗಳು ಇಂದಿಗೂ ಗೊಂದಲವಾಗಿಯೇ ಉಳಿದು ಬಿಟ್ಟಿವೆ. ಅಸಲಿದೆ ಇದು 75ನೇ ಸ್ವಾತಂತ್ರ್ಯ ದಿನಾಚರಣೆಯೋ ಅಥವಾ 76ನೇ ದಿನಾಚರಣೆಯೋ ಎಂಬುದು ಹಲವರಿಗೆ ಪ್ರಶ್ನೆಯಾಗಿ ಕಾಡುತ್ತಿದೆ.

ಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠಗೋವಾ ಯಾಕೆ ಆಗಸ್ಟ್ 15ಕ್ಕೆ ಸ್ವಾತಂತ್ರ್ಯೋತ್ಸವ ಆಚರಿಸಲ್ಲ? ಇತಿಹಾಸ ಪಾಠ

ಬ್ರಿಟೀಷರ ಕಪಿಮುಷ್ಟಿಯಿಂದ ಬಚಾವ್ ಆದ ಭಾರತಕ್ಕೆ ಆಗಸ್ಟ್ 15ರ 1947ರಂದು ಸ್ವಾತಂತ್ರ್ಯ ಸಿಕ್ಕಿತು. ಇದು ಸಾಮಾನ್ಯವಾಗಿ ಗೊತ್ತಿರುವ ಸಂಗತಿ. ಅಲ್ಲಿಂದ ಇಲ್ಲಿಯವರೆಗೂ ಎಷ್ಟು ವರ್ಷವಾಗಿದೆ?, ಈ ವರ್ಷ ಆಚರಿಸುತ್ತಿರುವುದು ಎಷ್ಟನೇ ದಿನಾಚರಣೆ? 76 ಅಥವಾ 75? ಈ ಗೊಂದಲಕ್ಕೆ ಉತ್ತರ ಕಂಡುಕೊಳ್ಳುವುದು ಹೇಗೆ ಎಂಬುದನ್ನು ವರದಿಯಲ್ಲಿ ಓದಿ ತಿಳಿಯಿರಿ.

1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ

1947 ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ

ಭಾರತದಲ್ಲಿ ವ್ಯಾಪಾರಕ್ಕೆ ಅಂತಾ ಬಂದಿದ್ದ ಬ್ರಿಟೀಷರು ಸುಮಾರು 200 ವರ್ಷಗಳ ಕಾಲ ದೇಶದಲ್ಲಿ ತಮ್ಮದೇ ಆಳ್ವಿಕೆ ನಡೆಸಿದರು. ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್, ಮಹಾತ್ಮ ಗಾಂಧಿ ಆದಿಯಾಗಿ ಸಾವಿರ ಸಾವಿರ ಹೋರಾಟಗಾರರ ಪರಿಶ್ರಮ ಭಾರತೀಯರಿಗೆ ಸ್ವಾತಂತ್ರ್ಯದ ಫಲವನ್ನು ಕೊಟ್ಟಿತು. 1947ರ ಆಗಸ್ಟ್ 15ರಂದು ಬ್ರಿಟೀಷರು ಭಾರತವನ್ನು ಬಿಟ್ಟು ಹೋದರು. ಭಾರತವು ಸ್ವಾತಂತ್ರ್ಯ ಭಾರತವಾಗಿ ಹೊರಹೊಮ್ಮಿತು.

ಸ್ವಾತಂತ್ರ್ಯ ಅಮೃತ ಮಹೋತ್ಸವ 75 ಇಲ್ಲಾ 76?

ಸ್ವಾತಂತ್ರ್ಯ ಅಮೃತ ಮಹೋತ್ಸವ 75 ಇಲ್ಲಾ 76?

ಭಾರತವು 2022ರಲ್ಲಿ ಆಚರಿಸುತ್ತಿರುವ ಸ್ವಾತಂತ್ರ್ಯ ಮಹೋತ್ಸವ 75ನೇಯದ್ದಾ ಅಥವಾ 76ನೇಯದ್ದಾ ಎಂಬುದು ಜನರಿಗೆ ಗೊಂದವನ್ನು ಹುಟ್ಟು ಹಾಕುತ್ತಿದೆ. ಅಸಲಿಗೆ ದೇಶವು ಆಗಸ್ಟ್ 15, 1948ರಂದು ಮೊದಲ ವರ್ಷದ ಸ್ವಾತಂತ್ರ್ಯ ಹಬ್ಬವನ್ನು ಆಚರಿಸಿತು. ಅಲ್ಲಿಗೆ ಆಗಸ್ಟ್ 15, 1957 ರಂದು 10 ವರ್ಷಗಳಾಯಿತು. 1967 ರಲ್ಲಿ 20 ವರ್ಷ ಮತ್ತು 1977ಕ್ಕೆ 30 ವರ್ಷಗಳಾಯಿತು. 1987ರಲ್ಲಿ 40 ವರ್ಷವಾದರೆ, 1997ರಲ್ಲಿ 50 ವರ್ಷಗಳು ಪೂರ್ಣವಾಯಿತು. 2007ರಲ್ಲಿ 60 ವರ್ಷಗಳಾದರೆ, 2017ರಲ್ಲಿ 70ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಮಾಡಲಾಯಿತು. ಅಲ್ಲಿಂದ 2022ರ ಈ ಆಗಸ್ಟ್ 15ಕ್ಕೆ ಬ್ರಿಟೀಷ್ ಆಳ್ವಿಕೆಯಿಂದ ಭಾರತವು ಸ್ವಾತಂತ್ರ್ಯಗೊಂಡು 75 ವರ್ಷಗಳು ಪೂರ್ಣವಾಗುತ್ತವೆ.

76ನೇ ವರ್ಷದ ದಿನಾಚರಣೆ ಎಂಬ ಗೊಂದಲ ಏಕೆ

76ನೇ ವರ್ಷದ ದಿನಾಚರಣೆ ಎಂಬ ಗೊಂದಲ ಏಕೆ

2022ರ ಆಗಸ್ಟ್ 15ರಂದು ಭಾರತವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯು 76ನೇ ವರ್ಷದ್ದು ಎಂದು ಕೆಲವರು ವಾದ ಮಂಡಿಸುತ್ತಿದ್ದಾರೆ. ಅಂಥವರ ಲೆಕ್ಕದ ಪ್ರಕಾರ ಇದು 76ನೇ ವರ್ಷದ ಸ್ವಾತಂತ್ರ್ಯೋತ್ಸವ. ಏಕೆಂದರೆ 1947ರಲ್ಲೇ ಭಾರತವು ಮೊದಲ ವರ್ಷದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದೆ. ಅಲ್ಲಿಗೆ 1948ರಲ್ಲಿ ಎರಡನೇ ವರ್ಷದ ಸಂಭ್ರಮವನ್ನು ಆಚರಿಸಲಾಗಿತ್ತು. ಆ ಲೆಕ್ಕದಂತೆ 2022ರಲ್ಲಿ ಆಚರಿಸುತ್ತಿರುವುದು 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಆಗುತ್ತದೆ.

ಅಮೃತ ಮಹೋತ್ಸವ ಘೋಷಿಸಿದ ಪ್ರಧಾನಿ ಮೋದಿ

ಅಮೃತ ಮಹೋತ್ಸವ ಘೋಷಿಸಿದ ಪ್ರಧಾನಿ ಮೋದಿ

ಭಾರತವು 75ನೇ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸುತ್ತಿರುವ ಸಂಭ್ರಮದಲ್ಲಿ 2021ರ ಮಾರ್ಚ್ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಆಜಾದಿ ಕಾ ಅಮೃತ್ ಮಹೋತ್ಸವವನ್ನು ಪ್ರಾರಂಭಿಸಿದ್ದರು. ಅಲ್ಲಿಂದ ನಮ್ಮ 75ನೇ ಸ್ವಾತಂತ್ರ್ಯ ಮಹೋತ್ಸವಕ್ಕೆ 75 ವಾರಗಳ ಎಣಿಕೆ ಪ್ರಾರಂಭವಾಗುತ್ತದೆ ಎಂದು ಅವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು.

ಈ ರಾಷ್ಟ್ರಗಳಲ್ಲೂ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ

ಈ ರಾಷ್ಟ್ರಗಳಲ್ಲೂ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆ

ಆಗಸ್ಟ್ 15ರಂದು ಭಾರತ ಮಾತ್ರ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಸಂಭ್ರಮಿಸುವುದಿಲ್ಲ. ಇದರ ಜೊತೆಗೆ ಜಗತ್ತಿನ ನಾಲ್ಕು ರಾಷ್ಟ್ರಗಳು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿವೆ. ಬಹ್ರೇನ್, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ ಮತ್ತು ಲಿಚ್ಟೆನ್‌ಸ್ಟೈನ್ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.

English summary
India is celebrating Independence Day on August 15. But there is a lot of confusion about whether it is the 75th or the 76th. Here we explained in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X