ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಕ್ ಫ್ರಂ ಹೋಂನಿಂದ ಯಾರ‍್ಯಾರು ಅಡುಗೆ, ಬಟ್ಟೆ ಒಗೆಯೋಕೆ ಕಲಿತ್ರಿ?

|
Google Oneindia Kannada News

ಕೊರೊನಾ ಮೊದಲನೇ ಅಲೆಯಿಂದ ಆರಂಭವಾದ ಮನೆಯಿಂದ ಕೆಲಸ ಮಾಡುವ ಪದ್ದತಿ (WFH) ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಕೆಲವೊಂದು ಕಂಪೆನಿಗಳು ತಮ್ಮ ಸಿಬ್ಬಂದಿಗಳನ್ನು ಮತ್ತೆ ಕಚೇರಿಗೆ ಕರೆಸಿಕೊಂಡ ವೇಗದಲ್ಲೇ ಮತ್ತೆ ಮನೆಯಿಂದ ಕೆಲಸ ಮಾಡಿ ಎಂದು ವಾಪಸ್ ಕಳುಹಿಸುತ್ತಿದೆ.

ಈ ವರ್ಕ್ ಫ್ರಂ ಹೋಂ ಎನ್ನುವುದು ಪ್ರಮುಖವಾಗಿ ಭಾರತೀಯರಿಗೆ ಒಂದು ಹೊಸ ಅನುಭವ ನೀಡುವಂತಹ ಕೆಲಸದ ಪದ್ದತಿ. ಮದುವೆ ಇದರ ಅರ್ಥವೇನು ಎಂದು ಕೇಳಿದಾಗ ಕೆಲವರು ಹೇಳುವುದುಂಟು, ಮಧು ಎಂದರೆ ಜೇನು, ನಂತರ ವ್ಯಾ.. ಅದೇ ರೀತಿ, ಈ ಕೆಲಸದ ಪದ್ದತಿಯ ಆರಂಭದ ದಿನಗಳಲ್ಲಿ ಖುಷಿಖುಷಿಯಿಂದ ಇದ್ದ ಗಂಡು ಹೈಕ್ಳು ಈಗ, ಈ ಕೊರೊನಾ ಕಾಟ ಯಾವಾಗಪ್ಪಾ ಮುಗಿಯುತ್ತೆ ಎನ್ನುವ ಹಂತಕ್ಕೆ ಬಂದು ಕೂತಿರಬಹುದು.

ಲಸಿಕೆ ಹಾಕದಿರುವವರು ಐಸಿಯು ದಾಖಲಾಗುವ ಸಾಧ್ಯತೆ ಹೆಚ್ಚು: ಕರ್ನಾಟಕ ವಾರ್‌ ರೂಂ ಮುಖ್ಯಸ್ಥಲಸಿಕೆ ಹಾಕದಿರುವವರು ಐಸಿಯು ದಾಖಲಾಗುವ ಸಾಧ್ಯತೆ ಹೆಚ್ಚು: ಕರ್ನಾಟಕ ವಾರ್‌ ರೂಂ ಮುಖ್ಯಸ್ಥ

WFHನಿಂದ ಒಂದು ಕಡೆ ಕೆಲಸದ ಒತ್ತಡವೂ ಜಾಸ್ತಿ, ಇನ್ನೊಂದು ಕಡೆ ಮನೆಯ ಒತ್ತಡವೂ ಜಾಸ್ತಿ. ಈ ಎರಡು ಟಾಸ್ಕ್ ಗಳನ್ನು ಮುಗಿಸಿ ರಾತ್ರಿ ಹಾಸಿಗೆಗೆ ಹೋಗುವಷ್ಟರಲ್ಲಿ ಎಷ್ಟೋ ಗಂಡಸರು ಹೈರಾಣವಾಗಿ ಹೋಗಿರುತ್ತಾರೆ.

ವರ್ಕ್ ಫ್ರಂ ಹೋಂನಿಂದ ಕಲಿತ extra activities ಏನು ಎಂದು ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳು ಕೇಳಿದಾಗ, ಅಡುಗೆ ಮಾಡೋಕೆ ಕಲಿತೆ, ಬಟ್ಟೆ ಒಗೆಯೋಕೆ ಕಲಿತೆ, ಮನೆ ಒರೆಸುವುದು ಕಲಿತೆ ಎಂದು ಯಾವ ಪುರುಷ ಉದ್ಯೋಗಿಗಳೂ ಎದೆತಟ್ಟಿ ಹೇಳುವಂತಹ ಪರಿಸ್ಥಿತಿಯಲ್ಲಿ ಇಲ್ಲ. ಇದನ್ನು ಎಚ್ಆರ್ ಟೀಂನವರೂ ಬಲ್ಲರು, ಯಾಕೆಂದರೆ, ಅವರೂ ಮನೆಯಲ್ಲಿ ಅದನ್ನು ಮಾಡುತ್ತಿರಬಹುದು.

 ಹೆಂಡತಿಯರು ತಮ್ಮತಮ್ಮ ಮನೆಯವರಿಗೆ ಅಡುಗೆ ಮಾಡುವುದನ್ನೂ ಕಲಿಸಿದ್ದಾರೆ

ಹೆಂಡತಿಯರು ತಮ್ಮತಮ್ಮ ಮನೆಯವರಿಗೆ ಅಡುಗೆ ಮಾಡುವುದನ್ನೂ ಕಲಿಸಿದ್ದಾರೆ

ವರ್ಕ್ ಫ್ರಂ ಹೋಂನಿಂದ ಲೈಫ್ ಜಿಂಗಾಲಾಲ ಆಗಿರುವುದು ಹೌಸ್ ವೈಫ್ ಗಳಿಗೆ ಎನ್ನುವ ಸ್ಟಡಿ ರಿಪೋರ್ಟ್ ಅನ್ನು ಇತ್ತೀಚೆಗೆ ಅಧ್ಯಯನ ಸಂಸ್ಥೆಯೊಂದು ಬಿಡುಗಡೆ ಮಾಡಿತ್ತು. ಹೆಂಗಸರು ಅಂದರೆ ಅವರನ್ನು ಜೀವನೋತ್ಸಾಹದ ಚಿಲುವೆ ಎಂದು ಕರೆಯುವುದುಂಟು. ಅದೇ ಉತ್ಸಾಹದಲ್ಲಿ ಹೆಂಡತಿಯರು ತಮ್ಮತಮ್ಮ ಮನೆಯವರಿಗೆ ಅಡುಗೆ ಮಾಡುವುದನ್ನೂ ಕಲಿಸಿದ್ದಾರೆ, ಜೊತೆಗೆ, ಮನೆಗೆಲಸದ ಟ್ರೈನಿಂಗ್ ಅನ್ನೂ ಕೊಟ್ಟಿದ್ದಾರಂತೆ. ಹಾಗಾಗಿ, ಹೊಸಹೊಸ ಕೋಡಿಂಗ್ ಕಲಿಯುವುದರಲ್ಲಿ ಹೆಚ್ಚಿನ ಸಾಧನೆಯನ್ನು ಮಾಡಲು ಗಂಡಸರಿಗೆ ಸಾಧ್ಯವಾಗದೇ ಇರಬಹುದು. (ಎಲ್ಲರಿಗೂ ಅನ್ವಯವಾಗುವುದಿಲ್ಲ ಎನ್ನುವುದು ಡಬಲ್ ಕೋಟ್ ನಲ್ಲಿರಲಿ)

 ಬಿಸಿಲು ಜೋರಾಗಿದೆ ಟೆರೆಸಿಗೆ ಹೋಗಿ ಬಟ್ಟೆ ಒಣಗಾಕಿ

ಬಿಸಿಲು ಜೋರಾಗಿದೆ ಟೆರೆಸಿಗೆ ಹೋಗಿ ಬಟ್ಟೆ ಒಣಗಾಕಿ

ರೀ.. ವಾಷಿಂಗ್ ಮೆಶಿನಿಗೆ ಬಟ್ಟೆ ಹಾಕ್ರೀ.. ಬಿಸಿಲು ಜೋರಾಗಿದೆ ಟ್ಯಾರಿಸಿಗೆ ಹೋಗೆ ಬಟ್ಟೆ ಒಣಗಾಕಿ..ಅದೆಷ್ಟು ಹೊತ್ತು ಕಂಪ್ಯೂಟರ್ ಮುಂದೆ ಕೂತಿರ್ತೀರಾ ಬನ್ನಿ ಈರುಳ್ಳಿ ಹಚ್ಚಿಕೊಡಿ.. ಈ ರೀತಿಯ ಹಿನ್ನಲೆ ಸಂಗೀತಗಳು ಒಂದು ಕಡೆಯಾದರೆ, ಇನ್ನೊಂದು ಕಡೆ ಬಾಸ್ ಹ್ಯಾಂಗ್ ಔಟ್ ಮೀಟಿಂಗ್ ಅಟೆಂಡ್ ಮಾಡುವ ಹೊಟ್ಟೆಪಾಡಿನ ಕೆಲಸ. ಮೀಟಿಂಗ್ ಮಧ್ಯೆನೇ.. ಮಗು ಅಷ್ಟು ಅಳ್ತಾ ಇದೆ.. ಹಾಲು ಬಿಸಿಮಾಡಿ ಕೊಡ್ರಿ ಎನ್ನುವ ಮತ್ತೊಂದು ಬ್ಯಾಕ್ ಗ್ರೌಂಡ್ ಮ್ಯೂಸಿಕಿನ ಅನುಭವವೂ ತುಂಬಾ ಜನರಿಗೆ ಇದ್ದರೂ ಇರಬಹುದು.

 ಓಮಿಕ್ರಾನ್ ಹಾವಳಿಯಿಂದಾಗಿ ವರ್ಕ್ ಫ್ರಂ ಹೋಂ

ಓಮಿಕ್ರಾನ್ ಹಾವಳಿಯಿಂದಾಗಿ ವರ್ಕ್ ಫ್ರಂ ಹೋಂ

ಓಮಿಕ್ರಾನ್ ಹಾವಳಿಯಿಂದಾಗಿ ವರ್ಕ್ ಫ್ರಂ ಹೋಂ ಕನಿಷ್ಠ ಪಕ್ಷ ಎರಡ್ಮೂರು ತಿಂಗಳಾದರೂ ಮುಂದುವರಿಯಬಹುದು. ಹಾಗಾಗಿ, ಗಂಡಸರು ಡಬಲ್ ಟಾಸ್ಕ್ ದುಡಿಮೆಯಿಂದ ಹೊರಬರಲು ಇನ್ನೂ ಸಮಯ ಬೇಕಾಗಬಹುದು. ಮನೆಗೆಲಸ ಮತ್ತು ಆಫೀಸ್ ಕೆಲಸ ಎರಡೂ ಜೊತೆಜೊತೆಯಾಗಿ ಮಾಡಬೇಕಾದವರು ಇನ್ನಷ್ಟು ಹೊಸಹೊಸ ವಿದ್ಯೆಯನ್ನು ಕಲಿಯಲು/ಪ್ರಯೋಗಿಸಲು ಕೊರೊನಾ ಕಾರಣೀಭೂತವಾಗಿದೆ. ಇದಕ್ಕಾಗಿ, ಕೊರೊನಾಗೆ ಥ್ಯಾಂಕ್ಸ್ ಹೇಳಬೇಕೋ, ಜರಿಯ ಬೇಕೋ ಅದು ಅವರವರ ವಿವೇಚನೆಗೆ ಬಿಟ್ಟ ವಿಚಾರ.

 ತೂಕದಲ್ಲೂ ಏರಿಕೆಯಾಗುತ್ತಿದೆ ಎನ್ನುತ್ತದೆ ವರದಿಯೊಂದು

ತೂಕದಲ್ಲೂ ಏರಿಕೆಯಾಗುತ್ತಿದೆ ಎನ್ನುತ್ತದೆ ವರದಿಯೊಂದು

ಆಫೀಸಿಗೆ ಹೋಗಿ ಬರುವ ಸಮಯ ಉಳಿಯುತ್ತಿರುವುದರಿಂದ ನಿದ್ದೆಯೂ ಹೆಚ್ಚಾಗುತ್ತಿದೆ, ಇದರಿಂದ ತೂಕದಲ್ಲೂ ಏರಿಕೆಯಾಗುತ್ತಿದೆ ಎನ್ನುತ್ತದೆ ವರದಿಯೊಂದು. ಹಾಗಾಗಿ, ಕಚೇರಿಯ ಕೆಲಸದ ಜೊತೆಗೆ ಮನೆಗೆಲಸ ಮಾಡಿದರೆ ತೂಕವೂ ಇಳಿಸಿಕೊಳ್ಳಬಹುದು. ಜೊತೆಗೆ, ಹೊಸ ವಿದ್ಯೆಯನ್ನು ಕಲಿತರೆ ನಷ್ಟವೇನೂ ಇಲ್ಲ, ಮನೆಯಾಕೆಗೂ ಸಹಾಯ ಮಾಡಿದಂತಾಗುತ್ತದೆ ಎನ್ನುವ ಗಂಡಸರು ಇರುವ ಮನೆಯೇ ಮಂತ್ರಾಲಯ.

English summary
Increase In Omicron Cases, WFH Continues: How The Situation At Home Know More
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X