ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಟಿ ರಿಟರ್ನ್ಸ್ ವೆಬ್‌ತಾಣ ಕಿರಿಕಿರಿ, ಇನ್ಫೋಸಿಸ್ ಸಿಇಒಗೆ ಸಮನ್ಸ್

|
Google Oneindia Kannada News

ನವದೆಹಲಿ, ಆಗಸ್ಟ್ 23: ಕೋವಿಡ್ 19 ಸಾಂಕ್ರಾಮಿಕದ ದೆಸೆಯಿಂದ ವೈಯಕ್ತಿಕ ಆದಾಯ ತೆರಿಗೆ ಹಾಗೂ ಸಂಸ್ಥೆಗಳ ಐಟಿ ರಿಟರ್ನ್ಸ್ ಸಲ್ಲಿಸುವ ಕೊನೆಯ ಗಡುವನ್ನು ಕೇಂದ್ರ ಸರ್ಕಾರ ಅನೇಕ ಬಾರಿ ವಿಸ್ತರಿಸಿದೆ. ಜೊತೆಗೆ ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣವನ್ನು ಇಂದಿನಿಂದ ಪರಿಚಯಿಸಿದೆ. ಆದರೆ, ಜೂನ್ ತಿಂಗಳಲ್ಲಿ ಆರಂಭವಾದ ಹೊಸ ವೆಬ್‌ತಾಣ ಇನ್ನೂ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಪದೇ ಪದೇ ದೂರು ಕೇಳಿ ಬಂದಿದ್ದು, ಹೊಸ ತಾಣ ವಿನ್ಯಾಸಗೊಳಿಸಿದ ಇನ್ಫೋಸಿಸ್ ಸಂಸ್ಥೆ ವಿರುದ್ಧ ವಿತ್ತ ಸಚಿವಾಲಯ ತಿರುಗಿ ಬಿದ್ದಿದೆ. ಇನ್ಫೋಸಿಸ್ ಎಂಡಿ ಹಾಗೂ ಸಿಇಒ ಸಲೀಲ್ ಪರೇಖ್ ಅವರಿಗೆ ಈ ಕುರಿತಂತೆ ಸಮನ್ಸ್ ಜಾರಿ ಮಾಡಲಾಗಿದೆ.

ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ(http://incometax.gov.in) ವನ್ನು ಇಲಾಖೆಯಿಂದ ಪರಿಚಯಿಸಲಾಗಿದೆ. ಇದರ ಜೊತೆಗೆ ಯಾವುದೇ ತೆರಿಗೆದಾರರಿಗಾಗುವ ಅನಾನುಕೂಲತೆಯನ್ನು ತಪ್ಪಿಸಲು ಮುಂಗಡ ತೆರಿಗೆ ಕಂತು ಪಾವತಿ ದಿನಾಂಕದ ನಂತರ ಹೊಸ ಆದಾಯ ತೆರಿಗೆ ಪಾವತಿ ವಿಧಾನವನ್ನು 2021ರ ಜೂನ್ 18 ರಂದು ಹೊಸ ತೆರಿಗೆ ಪಾವತಿ ವ್ಯವಸ್ಥೆಯನ್ನು ಸಿಬಿಡಿಟಿ ಪ್ರಾರಂಭಿಸಿದೆ.

ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ, ಏನಿದೆ ವಿಶೇಷ?ಆದಾಯ ತೆರಿಗೆ ಪಾವತಿಗೆ ಹೊಸ ವೆಬ್‌ತಾಣ, ಏನಿದೆ ವಿಶೇಷ?

ತೆರಿಗೆದಾರರಿಗೆ ತ್ವರಿತ ಮರುಪಾವತಿ ನೀಡಲು ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ತಕ್ಷಣದ ಪ್ರಕ್ರಿಯೆಯೊಂದಿಗೆ ಸಂಯೋಜಿಸಲ್ಪಟ್ಟ ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್ ಹಾಗೂ ವೆಬ್ ತಾಣದ ವಿನ್ಯಾಸ ಹಾಗೂ ತಾಂತ್ರಿಕ ನಿರ್ವಹಣೆ ಹೊಣೆಯನ್ನು ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆಗೆ ನೀಡಲಾಗಿದೆ.

ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್

ಹೊಸ ತೆರಿಗೆದಾರ ಸ್ನೇಹಿ ಪೋರ್ಟಲ್

ಐಟಿಆರ್ ಗೊಂದಲಗಳಿಗೆ ತಕ್ಷಣವೇ ಪರಿಹಾರ, ರೀಫಂಡ್, ತೆರಿಗೆದಾರರ ಎಲ್ಲಾ ಸಂವಹನಗಳು ಮತ್ತು ಅಪ್ಲೋಡ್‌ಗಳು ಅಥವಾ ಬಾಕಿ ಇರುವ ಕ್ರಿಯೆಗಳನ್ನು ಒಂದೇ ಡ್ಯಾಶ್‌ಬೋರ್ಡ್‌ನಲ್ಲಿ ಪ್ರದರ್ಶಿಸಲಾಗುತ್ತದೆ.

ಆದಾಯ ತೆರಿಗೆ ನಮೂನೆಗಳನ್ನು ಭರ್ತಿ ಮಾಡುವ ಕಾರ್ಯಗಳು, ತೆರಿಗೆ ವೃತ್ತಿಪರರ ಸೇರ್ಪಡೆ, ನೋಟಿಸ್ ಗಳಿಗೆ ಸ್ಪಂದನೆಯ ಸಲ್ಲಿಕೆಯಲ್ಲಿ ಮುಖಾಮುಖಿರಹಿತ ಪರಿಶೀಲನೆ ಅಥವಾ ಮೇಲ್ಮನವಿ ಲಭ್ಯವಿರುತ್ತದೆ ಎಂದು ಹೇಳಲಾಗಿತ್ತು. ಆದರೆ, ಐಟಿ ರಿಟರ್ನ್ಸ್ ಸಲ್ಲಿಕೆಯೇ ಸಾಧ್ಯವಾಗದೆ ಅನೇಕರು ಕಿರಿಕಿರಿ ಅನುಭವಸಿದ್ದಾರೆ ಹಾಗೂ ಇ ರಸೀತಿ ಸಿಗದೆ ಇನ್ನೂ ಹಲವರು ವ್ಯವಸ್ಥೆ ಲೋಪದ ಬಗ್ಗೆ ದನಿಯೆತ್ತಿದ್ದಾರೆ.

ಇನ್ಫೋಸಿಸ್ ಜೊತೆ ಸಭೆ

ಇನ್ಫೋಸಿಸ್ ಜೊತೆ ಸಭೆ

ಹೊಸದಾಗಿ ಆರಂಭಿಸಿರುವ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಮಸ್ಯೆಗಳು/ತಾಂತ್ರಿಕ ಅಡಚಣೆ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ವಿತ್ತ ಸಚಿವಾಲಯದ ಅಧಿಕಾರಿಗಳು ಜೂನ್ ತಿಂಗಳಲ್ಲೇ ಇನ್ಫೋಸಿಸ್ ತಂಡದ ಜೊತೆ ಒಂದು ಸುತ್ತಿನ ಸಭೆ ನಡೆಸಿದ್ದರು.

ಐಸಿಎಐನ ಸದಸ್ಯ, ಲೆಕ್ಕ ಪರಿಶೋಧಕರು, ಸಲಹೆಗಾರರು ಮತ್ತು ತೆರಿಗೆ ಪಾವತಿದಾರರು ಸೇರಿ ಎಲ್ಲ ಪಾಲುದಾರರು ಈ ಸಂವಾದಾತ್ಮಕ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಂತ್ರಿಕ ದೋಷಗಳನ್ನು ಸರಿಪಡಿಸಿ ಮತ್ತು ತೆರಿಗೆ ಪಾವತಿದಾರರು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕರೆದಿದ್ದ ಸಭೆ ಬಳಿಕವೂ ವೆಬ್ ತಾಣ ಸಮರ್ಪಕವಾಗಿ ಕಾರ್ಯನಿರ್ವಹಿಸುವಲ್ಲಿ ವಿಫಲವಾಗಿದೆ.

ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರು ಸಂದಾಯ

ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರು ಸಂದಾಯ

2019ರಲ್ಲಿ ಆದಾಯ ತೆರಿಗೆ ಇಲಾಖೆಯ ಐಟಿ ರಿಟರ್ನ್ಸ್ ವೆಬ್ ತಾಣ ನವೀಕರಣ ಯೋಜನೆಯನ್ನು ಇನ್ಫೋಸಿಸ್ ಸಂಸ್ಥೆಗೆ ವಹಿಸಲಾಗಿತ್ತು. ಈ ಹಿಂದಿನ 63 ದಿನಗಳ ಐಟಿ ಮರುಪಾವತಿ ಪ್ರಕ್ರಿಯೆ ಅವಧಿಯನ್ನು ಕಡಿಮೆಗೊಳಿಸಲು ಸೂಕ್ತ ವ್ಯವಸ್ಥೆ ಒದಗಿಸುವ ಭರವಸೆಯನ್ನು ಇನ್ಫೋಸಿಸ್ ನೀಡಿತ್ತು. ಜೂನ್ 2021ರ ಎಣಿಕೆಯಂತೆ ಕೇಂದ್ರ ಸರ್ಕಾರದಿಂದ ಇನ್ಫೋಸಿಸ್ ಸಂಸ್ಥೆ 164.5 ಕೋಟಿ ರು ಸಂದಾಯವಾಗಿದೆ.

ಜಿಎಸ್‌ಟಿ ಪೋರ್ಟಲ್ ನಿರ್ವಹಣೆ ಹೊಣೆ

ಜಿಎಸ್‌ಟಿ ಪೋರ್ಟಲ್ ನಿರ್ವಹಣೆ ಹೊಣೆ

ಈ ಹಿಂದೆ ಜಿಎಸ್‌ಟಿ ಪೋರ್ಟಲ್ ನಿರ್ವಹಣೆ ಹೊಣೆ ಹೊತ್ತು ಸರಿಯಾದ ಸೇವೆ ಒದಗಿಸುವಲ್ಲಿ ಇನ್ಫೋಸಿಸ್ ವಿಫಲವಾಗಿತ್ತು. ಕಡಿಮೆ ಮೊತ್ತದ ಬಿಡ್ ಮಾಡುವ ಮೂಲಕ ಸರ್ಕಾರಿ ಟೆಂಡರ್ ತನ್ನದಾಗಿಸಿಕೊಂಡು ಕಳಪೆ ಸೇವೆ ಒದಗಿಸುತ್ತಿದೆ ಎಂದು ಮಾಹಿತಿ ಮತ್ತು ಪ್ರಸರಣ ಇಲಾಖೆ ಹಿರಿಯ ಸಲಹೆಗಾರ ಕಂಚನ್ ಗುಪ್ತ ಕಿಡಿಕಾರಿದ್ದಾರೆ. ಡೇಟಾ ಎಂಟ್ರಿಯನ್ನು ಕಡಿಮೆ ಮಾಡಲು ತೆರಿಗೆ ಪಾವತಿದಾರರು ಯಾವುದೇ ತೆರಿಗೆ ಜ್ಞಾನವಿಲ್ಲದೆ, ಪೂರ್ವ ಭರ್ತಿಯೊಂದಿಗೆ ಐಟಿಆರ್ ಅನ್ನು ಭರ್ತಿ ಮಾಡಲು ಸಹಾಯ ಮಾಡಲು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಸಂವಾದಾತ್ಮಕ ಪ್ರಶ್ನೆಗಳೊಂದಿಗೆ ಉಚಿತವಾಗಿ ಲಭ್ಯವಿದೆ ಎಂದು ಹೇಳಲಾಗಿತ್ತು ಆದರೆ, ಆಫ್‌ಲೈನ್‌ನಲ್ಲೂ ಯಾವುದೇ ನೆರವು ದೊರಕುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ.

ತಾಂತ್ರಿಕ ಸಮಸ್ಯೆ ಎದುರಾಗಿದೆ

ತಾಂತ್ರಿಕ ಸಮಸ್ಯೆ ಎದುರಾಗಿದೆ

ಖಾತೆದಾರರ ಪ್ರೊಫೈಲ್, ಡ್ಯಾಶ್ ಬೋರ್ಡ್,ಐಟಿಆರ್ 1, 2 ಹಾಗೂ 4 ಸಲ್ಲಿಕೆ, ವಿಡಿಯೋ ಕಾನ್ಫರೆನ್ಸ್ ಮನವಿ, ಡಿಜಿಟಲ್ ಸಹಿ ಪ್ರಮಾಣ ಪತ್ರ, ಹಳೆ ಐಟಿ ರಿಟರ್ನ್ಸ್ ದಾಖಲೆ ವೀಕ್ಷಣೆ, ಇ-ಪ್ಯಾನ್ ಸೇವೆ, ಆಧಾರ್-ಪ್ಯಾನ್ ಜೋಡಣೆ, ಅಧಿಕೃತ ಪ್ರತಿನಿಧಿ ಸೇರ್ಪಡೆಗೊಳಿಸುವುದು ಮುಂತಾದ ಪ್ರಕ್ರಿಯೆಗಳು ಸಮರ್ಪಕವಾಗಿ ಒದಗಿಸುವಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಇತ್ತೀಚೆಗೆ ಲೋಕಸಭೆಯಲ್ಲಿ ವಿತ್ತ ಖಾತೆ ರಾಜ್ಯ ಸಚಿವ ಪಂಕಜ್ ಚೌಧುರಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
As the new I-T portal continues to remain unavailable for two consecutive days, the Finance Ministry has summoned Infosys MD and CEO Salil Parekh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X