ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ರಾಜ್ಯದಲ್ಲಿ Just PUC ಪಾಸಾದವರಿಗೆ ಸಂಪುಟ ಸಚಿವ ಸ್ಥಾನ!

|
Google Oneindia Kannada News

ಪಾಟ್ನಾ, ಆಗಸ್ಟ್ 18: ಬಿಹಾರದಲ್ಲಿ ನೂತನ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಜೋಡಿ, ಹೊಸ ಸಂಪುಟವನ್ನು ವಿಸ್ತರಿಸಿದ್ದು ಆಗಿದೆ. ಈಗ ಅದೇ ಸಂಪುಟ ಸಚಿವರ ಕುರಿತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿಯೊಂದನ್ನು ನೀಡಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಸಂಪುಟದಲ್ಲಿ ಸ್ಥಾನ ಪಡೆದಿರುವ 31 ಸಚಿವರ ಪೈಕಿ ಶೇ.70ರಷ್ಟು ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂಬುದು ಬೆಳಕಿಗೆ ಬಂದಿದೆ. ಈ ಪಟ್ಟಿಯಿಂದ ನಿತೀಶ್ ಕುಮಾರ್ ಹಾಗೂ ಡಿಸಿಎಂ ತೇಜಸ್ವಿ ಯಾದವ್ ಕೂಡ ಹೊರತಾಗಿಲ್ಲ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಬಿಹಾರ ಸಂಪುಟ ವಿಸ್ತರಣೆ: ಆರ್‌ಜೆಡಿಗೆ 16, ಜೆಡಿಯುಗೆ 11 ಸಚಿವ ಸ್ಥಾನಬಿಹಾರ ಸಂಪುಟ ವಿಸ್ತರಣೆ: ಆರ್‌ಜೆಡಿಗೆ 16, ಜೆಡಿಯುಗೆ 11 ಸಚಿವ ಸ್ಥಾನ

ದೇಶದಲ್ಲಿ ಚುನಾವಣಾ ಹಕ್ಕುಗಳ ಸಂಸ್ಥೆ ಆಗಿರುವ ಎಡಿಆರ್ ವರದಿಯ ಪ್ರಕಾರ, ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಶೇಕಡಾ 70ಕ್ಕೂ ಹೆಚ್ಚು ಸಚಿವರು ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಘೋಷಿಸಿಕೊಂಡಿದ್ದಾರೆ. ಸಿಎಂ ನಿತೀಶ್ ಕುಮಾರ್ ಮತ್ತು ಅವರ ಉಪ ತೇಜಸ್ವಿ ಯಾದವ್ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ. ಈ ಕುರಿತು ವಿಶೇಷ ವರದಿಗಾಗಿ ಮುಂದೆ ಓದಿ.

2020ರ ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆ

2020ರ ಚುನಾವಣಾ ಅಫಿಡವಿಟ್‌ಗಳ ವಿಶ್ಲೇಷಣೆ

ಕಳೆದ 2020ರ ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ 33 ಸಚಿವರಲ್ಲಿ 32 ಮಂದಿ ಸ್ವಯಂ ಪ್ರಮಾಣವಚನ ಸ್ವೀಕರಿಸಿದ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಈ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಅಂತಿಮ ವರದಿಯನ್ನು ಪ್ರಕಟಿಸಿದೆ.

ಬಿಹಾರದ 23 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್

ಬಿಹಾರದ 23 ಸಚಿವರ ವಿರುದ್ಧ ಕ್ರಿಮಿನಲ್ ಕೇಸ್

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ನೀಡಿರುವ ವರದಿಯ ಪ್ರಕಾರ, ಬಿಹಾರದಲ್ಲಿ ಪ್ರಮಾಣವಚನ ಸ್ವೀಕರಿಸಿದ ಶೇ.72ರಷ್ಟು ಅಂದರೆ 23 ಸಚಿವರು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ. ಈ ಪೈಕಿ ಶೇ.53ರಷ್ಟು ಅಂದರೆ 17 ಸಚಿವರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿದ್ದಾರೆ ಎಂದು ತಿಳಿಸಿದೆ.

ಈ ರಾಜ್ಯದಲ್ಲಿ ಶೇ.84ರಷ್ಟು ಸಚಿವರು ಕೋಟ್ಯಧಿಪತಿಗಳು!

ಈ ರಾಜ್ಯದಲ್ಲಿ ಶೇ.84ರಷ್ಟು ಸಚಿವರು ಕೋಟ್ಯಧಿಪತಿಗಳು!

ಬಿಹಾರದಲ್ಲಿ ಹೊಸ ಸಂಪುಟವನ್ನು ಸೇರಿದ ಶೇ.84ರಷ್ಟು ಸಚಿವರು ಕೋಟ್ಯಧಿಪತಿಗಳಾಗಿದ್ದಾರೆ. ಅಂದರೆ ಒಟ್ಟು 32 ಸಚಿವರಲ್ಲಿ 27 ಸಚಿವರು ಕೋಟ್ಯಧಿಪತಿ ಆಗಿದ್ದಾರೆ. ಅದೇ ರೀತಿ ಒಟ್ಟು 32 ಸಚಿವರ ಸರಾಸರಿ ಆಸ್ತಿ 5.82 ಮೌಲ್ಯ 5.82 ಕೋಟಿ ರೂಪಾಯಿ ಆಗಿದೆ.

ಮಧುಬನಿ ವಿಧಾನಸಭಾ ಕ್ಷೇತ್ರದ ಸಮೀರ್ ಕುಮಾರ್ ಮಹಾಸೇತ್ ರೂ. 24.45 ಕೋಟಿ ಆಸ್ತಿ ಹೊಂದಿದ್ದು, ಅತಿಹೆಚ್ಚು ಘೋಷಿತ ಆಸ್ತಿ ಹೊಂದಿರುವ ಸಚಿವರು ಎನಿಸಿಕೊಂಡಿದ್ದಾರೆ. ಆದರೆ 17.66 ಲಕ್ಷ ಮೌಲ್ಯದ ಆಸ್ತಿ ಘೋಷಿಸಿರುವ ಚೆನಾರಿ (ಎಸ್‌ಸಿ) ಕ್ಷೇತ್ರದ ಮುರಾರಿ ಪ್ರಸಾದ್ ಗೌತಮ್ ಅತ್ಯಂತ ಕಡಿಮೆ ಘೋಷಿತ ಒಟ್ಟು ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ.

ಪಿಯುಸಿ ಪಾಸಾದ 8 ಮಂದಿ ಮಿನಿಸ್ಟರ್

ಪಿಯುಸಿ ಪಾಸಾದ 8 ಮಂದಿ ಮಿನಿಸ್ಟರ್

ಬಿಹಾರದಲ್ಲಿ ಜಸ್ಟ್ ಪಿಯುಸಿ ಪಾಸ್ ಆಗಿರುವ ಎಂಟು ಮಂದಿ ಸಂಪುಟದಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಶೇ.25ರಷ್ಟು ಸಚಿವರ ಶೈಕ್ಷಣಿಕ ಅರ್ಹತೆ 8 ರಿಂದ 12ನೇ ತರಗತಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ 24 ಸಚಿವರು ಪದವೀಧರರಾಗಿದ್ದು, ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ಇದರ ಜೊತೆಗೆ ವಯಸ್ಸಿನ ಅಂಕಿ-ಅಂಶ ನೋಡುವುದಾದರೆ, ಒಟ್ಟು 17 ಸಚಿವರು ತಮ್ಮ ವಯಸ್ಸು 30-50 ವರ್ಷ ಎಂದು ಘೋಷಿಸಿದ್ದರೆ. 15 ಮಂದಿ ತಮ್ಮ ವಯಸ್ಸು 51-75 ವರ್ಷ ಎಂದು ಘೋಷಿಸಿದ್ದಾರೆ. ಮಂತ್ರಿಮಂಡಲದಲ್ಲಿ ಮೂವರು ಮಹಿಳೆಯರಿದ್ದಾರೆ.

ಬಿಹಾರದಲ್ಲಿ ನೂತನ ಸಂಪುಟದಲ್ಲಿ ಸಚಿವರ ಲೆಕ್ಕಾಚಾರ

ಬಿಹಾರದಲ್ಲಿ ನೂತನ ಸಂಪುಟದಲ್ಲಿ ಸಚಿವರ ಲೆಕ್ಕಾಚಾರ

ಬಿಹಾರದ ಹೊಸ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನ 11 ಮಂದಿ, ಆರ್‌ಜೆಡಿಯ 16 ಮಂದಿ ಕಾಂಗ್ರೆಸ್‌ನಿಂದ ಇಬ್ಬರು ಮತ್ತು ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಎಚ್‌ಎಎಂನಿಂದ ಒಬ್ಬರು ಹಾಗೂ ಸ್ವಾತಂತ್ರ್ಯ ಅಭ್ಯರ್ಥಿಯೊಬ್ಬರು ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

English summary
Including Bihar CM Nitish kumar and Tejashwi yadav Total 70 per cent of ministers facing criminal cases. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X