ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನ ಜಾತಿ ಲೆಕ್ಕಾಚಾರದಲ್ಲಿ ಜಾಟ್ ಸಿಖ್ಖರ ಬೆಂಬಲ ಕಳೆದುಕೊಳ್ಳುವ ಸಾಧ್ಯತೆ

|
Google Oneindia Kannada News

ಪಂಜಾಬ್‌ನಲ್ಲಿ 2022 ರ ವಿಧಾನಸಭೆ ಚುನಾವಣೆಗೆ ಕೆಲವೇ ವಾರಗಳು ಇದೆ. ಈ ನಡುವೆ ಕಾಂಗ್ರೆಸ್‌ ಜಾತಿ ಲೆಕ್ಕಾಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ತನ್ನ ನಾಯಕನಾಗಿ ಪರಿಶಿಷ್ಟ ಜಾತಿಯ ಚರಂಜಿತ್ ಸಿಂಗ್ ಚನ್ನಿ ಅವರನ್ನು ಆಯ್ಕೆ ಮಾಡಿದೆ, ಈ ನಿರ್ಧಾರವು ಗಮನಾರ್ಹ ದಲಿತ ಮತದಾರರ ಬೆಂಬಲವನ್ನು ಗಳಿಸಲು ಪಕ್ಷಕ್ಕೆ ಸಹಾಯ ಮಾಡುವ ಪ್ರಯತ್ನವೆಂದು ಪರಿಗಣಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಕಾಂಗ್ರೆಸ್‌ ಜಾಟ್ ಸಿಖ್ ಮತ ಬ್ಯಾಂಕ್ ಅನ್ನು ಕಳೆದುಕೊಳ್ಳಬಹುದು.

ಪಂಜಾಬ್ ಪರಿಶಿಷ್ಟ ಜಾತಿ ಸಮುದಾಯದ ಶೇಕಡ 32ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಇದು ದೇಶದಲ್ಲೇ ಅತಿ ಹೆಚ್ಚಾಗಿದೆ. ಆದರೆ ಜಾಟ್ ಸಿಖ್ ಜನಸಂಖ್ಯೆಯು ಸುಮಾರು ಶೇಕಡ 20ರಷ್ಟು ಆಗಿದೆ. ಆದರೆ 1977 ರಿಂದ, ರಾಜ್ಯವು ಎಂದಿಗೂ ಜಾಟ್ ಸಿಖ್ ಅಲ್ಲದ ಮುಖ್ಯಮಂತ್ರಿಯನ್ನು ನೋಡಿಲ್ಲ. ಅದು ಕಾಂಗ್ರೆಸ್ ಅಥವಾ ಶಿರೋಮಣಿ ಅಕಾಲಿ ದಳವಾಗಿರಬಹುದು. ಇದು ಜಾಟ್‌ ಸಿಖ್‌ ಸಮುದಾಯದ ರಾಜಕೀಯ ಪ್ರಾಬಲ್ಯವನ್ನು ಸೂಚಿಸುತ್ತದೆ. ಗಿಯಾನಿ ಜೈಲ್ ಸಿಂಗ್ 1972-77ರ ನಡುವೆ ಪಂಜಾಬ್‌ನ ಕೊನೆಯ ಸಿಖ್ ಅಲ್ಲದ ಜಾಟ್ ಮುಖ್ಯಮಂತ್ರಿಯಾಗಿದ್ದರು.

 ಪಂಜಾಬ್‌ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಎಎಪಿಗೆ ನೋಟಿಸ್‌ ಪಂಜಾಬ್‌ ಚುನಾವಣೆ: ನೀತಿ ಸಂಹಿತೆ ಉಲ್ಲಂಘಿಸಿದ ಎಎಪಿಗೆ ನೋಟಿಸ್‌

2022 ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ, ಕಾಂಗ್ರೆಸ್‌ನ ರಾಜಕೀಯವು ಪ್ರಧಾನವಾಗಿ ಪರಿಶಿಷ್ಟ ಜಾತಿ ಸಮುದಾಯವನ್ನು ಓಲೈಸುವುದರಲ್ಲಿ ತೊಡಗಿತ್ತು. ಆದರೆ ಈ ಸಂಪೂರ್ಣ ಕಸರತ್ತಿನಲ್ಲಿ, ಪಕ್ಷವು ಜಾಟ್ ಸಿಖ್‌ಗಳ ಮತವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಇದು ಪಕ್ಷದ ಮತ ಬ್ಯಾಂಕಿಗೆ ಧಕ್ಕೆ ಉಂಟು ಮಾಡಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

In Punjab, as Congress bets on Dalits, Party could lose Jat Sikh support

ಬೇರೆಯವರು ಸಿಎಂ ಆದಾಗ ಅಸಮಾಧಾನ ಸಹಜ

ಈ ಮಧ್ಯೆ ಜಾಟ್ ಸಿಖ್ಖರಲ್ಲಿ ಅಸಮಾಧಾನವು ಎದ್ದಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಈ ಸಮುದಾಯದ ಪ್ರಾಬಲ್ಯವು ಕಡಿಮೆ ಆಗಬಹುದು. "ಜಾಟ್ ಸಿಖ್ಖರು ಪಂಜಾಬ್‌ನಲ್ಲಿ ಹೆಚ್ಚಿನ ಕೃಷಿ ಭೂಮಿಯನ್ನು ಹೊಂದಿದ್ದಾರೆ. ಹಸಿರು ಕ್ರಾಂತಿಯ ಹಿನ್ನೆಲೆಯಲ್ಲಿ ಅವರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲಗೊಂಡಿತು. ಅವರು ಆರ್ಥಿಕವಾಗಿ ಬಲಿಷ್ಠರಾಗಿದ್ದರಿಂದ ಅದು ರಾಜಕೀಯದಲ್ಲೂ ಪ್ರತಿಫಲ ನೀಡಿದೆ. ಈಗ ಬೇರೆಯವರು ಆಡಳಿತದ ಚುಕ್ಕಾಣಿ ಹಿಡಿದರೆ ಸಮುದಾಯದಲ್ಲಿ ಅಸಮಾಧಾನ ಉಂಟಾಗುವುದು ಸಹಜ," ಎಂದು ನಾಯಕರುಗಳು ಹೇಳುತ್ತಾರೆ.

ಇನ್ನು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು (ಜಾಟ್‌ ಸಿಖ್‌) ಚನ್ನಿ ನಾಯಕತ್ವವನ್ನು ಬಲವಾಗಿ ಪ್ರತಿಪಾದಿಸುತ್ತಿದ್ದಾರೆ. ಈ ಸಮರ್ಥನೆಯು ಪಕ್ಷದ ಜಾಟ್ ಸಿಖ್ ನಾಯಕರಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದೆ. ತಮ್ಮ ನಿಷ್ಠಾವಂತರಿಗೆ ಹೆಚ್ಚಿನ ಪಕ್ಷದ ಟಿಕೆಟ್‌ಗಳನ್ನು ಪಡೆಯಲು ಸಾಧ್ಯವಾದರೆ, ಖಂಡಿತವಾಗಿಯೂ ಜಾಟ್ ಸಿಖ್ ನಾಯಕರಲ್ಲಿ ಆತಂಕವು ಹೆಚ್ಚಾಗುತ್ತದೆ. ಅದು ಹೆಚ್ಚು ಸ್ಪಷ್ಟವಾಗಿರುತ್ತದೆ ಎಂದು ಪಂಜಾಬ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ ಪ್ರಾಧ್ಯಾಪಕ ಅಶುತೋಷ್ ಕುಮಾರ್ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಕ್ಷವು ಕ್ಯಾಪ್ಟನ್ (ನಿವೃತ್ತ) ಅಮರಿಂದರ್ ಸಿಂಗ್ (ಜಾಟ್ ಸಿಖ್) ರಾಜೀನಾಮೆ ಬಳಿಕ ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡಲಾಯಿತು. ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಸರ್ಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವಾಗ, ಪಕ್ಷದ ಇತ್ತೀಚಿನ ನಡೆಗಳು ಪಕ್ಷದಲ್ಲಿ ಅಸಮಾಧಾನ ಸೃಷ್ಟಿ ಮಾಡಿದೆ. (ಒನ್‌ಇಂಡಿಯಾ ಸುದ್ದಿ)

English summary
In Punjab, as Congress bets on Dalits, Party could lose Jat Sikh support.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X