ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಣಾಳಿಕೆ: ಸಂವಿಧಾನದ 370ನೇ ವಿಧಿ ಹಿಂಪಡೆಯಲು ಮುಂದಾದ ಬಿಜೆಪಿ

|
Google Oneindia Kannada News

ಪ್ರಸ್ತುತ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ, ವಿಶೇಷ ಅಧಿಕಾರಿ ಕಲಂ 35ಎ ಜಾರಿಯಲ್ಲಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವುದನ್ನು ಹಿಂಪಡೆಯುವುದು ಬಿಜೆಪಿಯ ಚುನಾವಣೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಂ 35-ಎ ಸಂವಿಧಾನದಲ್ಲಿ ರಾಷ್ಟ್ರಪತಿಗಳ ಆಳ್ವಿಕೆಯ ನಿಯಮದಂತೆ ಸೇರಿ ಹೋಗಿದೆ. ಈ ಕಲಂ ಅನ್ವಯ ಜಮ್ಮು ಮತ್ತು ಕಾಶ್ಮೀರ ಸರ್ಕಾರ ಅಲ್ಲಿನ ಖಾಯಂ ನಿವಾಸಿಗಳಿಗೆ ಕೆಲವು ಹಕ್ಕು, ವಿಶೇಷ ಸವಲತ್ತುಗಳು ಸಿಗಲಿವೆ.

ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?

ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ವಿಶೇಷ ಹಕ್ಕು, ಸವಲತ್ತುಗಳನ್ನು ಒದಗಿಸುವ ಸಂವಿಧಾನದ ವಿಧಿ 35(ಎ) ತೆಗೆದು ಹಾಕುವಂತೆ ಸಲ್ಲಿಸಿರುವ ಅರ್ಜಿ ವಿಚಾರಣೆಯು ಸುಪ್ರೀಂಕೋರ್ಟಿನಲ್ಲಿ ನಡೆಯುತ್ತಿದೆ.

ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ? ಭಾರತ ಸಂವಿಧಾನದ 370ನೇ ಪರಿಚ್ಛೇದ ಏನು? ಎತ್ತ?

ಜಮ್ಮು-ಕಾಶ್ಮೀರದ ವಿಧಾನಸಭೆಗೆ ವಿಶೇಷ ಅಧಿಕಾರ ನೀಡಿ, ದೇಶದ ಸಂವಿಧಾನ ಹಾಗೂ ಕಾನೂನಿಗೆ ವ್ಯತಿರಿಕ್ತ ಕಾನೂನು ಜಾರಿಗೆ ಅವಕಾಶ ನೀಡಲಾಗಿದೆ. ಈ ವಿಧಿಯು ಸಂವಿಧಾನ ವಿರೋಧಿಯಾಗಿದೆ ಎಂದು ಪಶ್ಚಿಮ ಪಾಕಿಸ್ತಾನ ನಿರಾಶ್ರಿತರ ಕ್ರಿಯಾ ಸಮಿತಿ, ಡಾ ಚಾರು ವಾಲಿ ಖನ್ನ, ಕಾಳಿ ದಾಸ್ ಹಾಗೂ ರಾಧಿಕಾ ಗಿಲ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಈ ವಿಧಿಯು ಸಂವಿಧಾನ ವಿರೋಧಿಯಾಗಿದೆ ಎಂದು ಪಶ್ಚಿಮ ಪಾಕಿಸ್ತಾನ ನಿರಾಶ್ರಿತರ ಕ್ರಿಯಾ ಸಮಿತಿ, ಡಾ ಚಾರು ವಾಲಿ ಖನ್ನ, ಕಾಳಿ ದಾಸ್ ಹಾಗೂ ರಾಧಿಕಾ ಗಿಲ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಬಿಜೆಪಿ ವಾದವೇನು?

ಬಿಜೆಪಿ ವಾದವೇನು?

ಕಳೆದ ಐದು ವರ್ಷಗಳಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಅಗತ್ಯ ಕ್ರಮಗಳನ್ನು ಮೋದಿ ಸರ್ಕಾರ ಕೈಗೊಂಡಿದೆ. ಆದರೆ, ಅಭಿವೃದ್ಧಿ ಮಾರಕವಾದ ಅಡೆತಡೆಗಳನ್ನು ತೊಡೆದು ಹಾಕಲಾಗುವುದು, ಆರ್ಥಿಕ ಸಂಪನ್ಮೂಲ ಒದಗಿಸಿ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜನ ಸಂಘದ ಕಾಲದಿಂದಲೂ ಪಾಲಿಸಿಕೊಂಡು ಬಂದಿರುವ ನಿಲುವನ್ನು ಮತ್ತೊಮ್ಮೆ ಪ್ರಸ್ತುತಪಡಿಸುತ್ತಿದ್ದೇವೆ. ಸಂವಿಧಾನದ 370ನೇ ವಿಧಿ ತೆಗೆದು ಹಾಕಲಾಗುವುದು ಎಂದು ಬಿಜೆಪಿ ಹೇಳಿದೆ.

ಸಂವಿಧಾನದ ವಿಧಿ 35 ಎ ರ ಮೇಲಿನ ಆರೋಪ

ಸಂವಿಧಾನದ ವಿಧಿ 35 ಎ ರ ಮೇಲಿನ ಆರೋಪ

ಕಣಿವೆ ರಾಜ್ಯದಲ್ಲಿನ ಮಹಿಳೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಹೊಂದಿಲ್ಲದ ಪುರುಷನನ್ನು ವಿವಾಹವಾದರೆ ದಂಪತಿಯ ಮಕ್ಕಳಿಗೆ ಶಾಶ್ವತ ನಿವಾಸಿ ಪ್ರಮಾಣ ಪತ್ರ ಸಿಗುವುದಿಲ್ಲ. ಮಹಿಳೆಯ ಹೆಸರಿನಲ್ಲಿ ಆಸ್ತಿ ಇದ್ದರೆ ಅದನ್ನು ಮಕ್ಕಳಿಗೆ ನೀಡಲು ಬರುವುದಿಲ್ಲ. ಕಣಿವೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನೂರಾರು ಜನರು ತಲೆಮಾರುಗಳಿಂದ ವಾಸವಾಗಿದ್ದಾರೆ. ಕಲಂ 35-ಎ ನಿಂದಾಗಿ ಅವರ ಹಕ್ಕುಗಳನ್ನು ಕಸಿದುಕೊಂಡಂತಾಗುತ್ತಿದೆ ಎಂಬುದು ಆರೋಪವಾಗಿದೆ.

ಅನೇಕ ಸೌಲಭ್ಯ ವಿಷಯದಲ್ಲಿ ತಾರತಮ್ಯ

ಅನೇಕ ಸೌಲಭ್ಯ ವಿಷಯದಲ್ಲಿ ತಾರತಮ್ಯ

ವಿವಾಹ, ಆಸ್ತಿ ಖರೀದಿ, ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಿಚಾರದಲ್ಲಿ ತಾರತಮ್ಯವಿದೆ. ಆದ್ದರಿಂದ, ಕಲಂ 35-ಎ ಸಿಂಧುತ್ವ ಪ್ರಶ್ನಿಸಿ, ಕಲಂ 35-ಎ ಅನ್ವಯ ಕಣಿವೆ ರಾಜ್ಯದಲ್ಲಿನ ಕೆಲವು ಜನರಿಗೆ ಆ ಹಕ್ಕುಗಳು ಸಿಗುತ್ತಿಲ್ಲ ಎಂದು ಆರೋಪಿಸಿದ ಸುಪ್ರೀಂಕೋರ್ಟಿನಲ್ಲಿ ಸಾರ್ವಜಿನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಪ್ರಕರಣದ ವಿಚಾರಣೆ ಹಲವು ವರ್ಷಗಳಿಂದ ನಡೆಯುತ್ತಿದೆ.

370ನೇ ಪರಿಚ್ಛೇದವು ತಾತ್ಕಾಲಿಕವಾಗಿ ಜಾರಿಗೆ ಬಂದಿತ್ತು

370ನೇ ಪರಿಚ್ಛೇದವು ತಾತ್ಕಾಲಿಕವಾಗಿ ಜಾರಿಗೆ ಬಂದಿತ್ತು

ಸಂವಿಧಾನದ 21ನೇ ಪರಿಚ್ಛೇದಲ್ಲಿ 370ನೇ ವಿಧಿ(Article) ಬಗ್ಗೆ ಉಲ್ಲೇಖಿಸಲಾಗಿದೆ. ಇದರ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಶಾಸನಸಭೆ ನಿರ್ಣಯದ ಮೂಲಕ ಅಂಗೀಕರಿಸುವವರೆಗೆ ಅಲ್ಲಿನ ಆಡಳಿತಕ್ಕೆ ಅಗತ್ಯವಾದ ಅವಕಾಶಗಳನ್ನು ಒದಗಿಸುವುದು ಇದರ ಉದ್ದೇಶ.

370ನೇ ಪರಿಚ್ಛೇದವು ತಾತ್ಕಾಲಿಕವಾಗಿದ್ದು, ಇದು ಪರಿವರ್ತನೆಯ ಅಧಿಕಾರವೆ ಹೊರತೂ ಶಾಶ್ವತ ಅಧಿಕಾರವಲ್ಲ. ಇದು ಕಾಶ್ಮೀರಕ್ಕೆ ಮಾತ್ರವಲ್ಲ, ಉಳಿದ ಎಲ್ಲಾ ರಾಜ್ಯಗಳಿಗೂ ಅನ್ವಯವಾಗುತ್ತದೆ. ಆದರೆ, 370ನೇ ತಾತ್ಕಾಲಿಕ ಕ್ರಮ ಎಂಬುದನ್ನು ಒಪ್ಪಲು ಅಲ್ಲಿನ ಆಡಳಿತಗಾರರು ಷೇಕ್ ಅಬ್ದುಲ್ಲಾರಿಂದ ಒಮರ್ ಅಬ್ದುಲ್ಲಾ ತನಕ ಮೆಹಬೂಬಾ ಮುಫ್ತಿ ತನಕ ಯಾರೂ ಒಪ್ಪಿಲ್ಲ.

ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ

ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ

ಈ ವಿಧಿಯಡಿ ಜಮ್ಮು ಮತ್ತು ಕಾಶ್ಮೀರ ತನ್ನದೇ ಪ್ರತ್ಯೇಕ ಕಾನೂನುಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಆಸ್ತಿ ಹೊಂದಿರುವವರು ಪ್ರತ್ಯೇಕ ಕಾನೂನು ಪಾಲಿಸಬೇಕು ಹಾಗೂ ಪ್ರತ್ಯೇಕ ನಾಗರಿಕತೆ ಹೊಂದಿರುತ್ತಾರೆ. ಅವರ ಮೂಲಭೂತ ಹಕ್ಕುಗಳೂ ಬೇರೆಯಾಗಿವೆ. ಈ ರಾಜ್ಯದ ಮೇಲೆ ಕೇಂದ್ರ ಸರ್ಕಾರಕ್ಕೆ ಕೇವಲ ರಕ್ಷಣೆ, ಸಂಪರ್ಕ ಹಾಗೂ ವಿದೇಶಾಂಗ ಸಂಬಂಧಗಳ ವಿಷಯದಲ್ಲಿ ಮಾತ್ರ ಅಧಿಕಾರವಿರುತ್ತದೆ. ಆದರೆ, ಜಮ್ಮು ಕಾಶ್ಮೀರ ಸರ್ಕಾರವು ಸಾಕಷ್ಟು ಅಧಿಕಾರ ಹೊಂದಿದ್ದರೂ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ. ಈ ಕುರಿತು ಕೇಂದ್ರ ಸರ್ಕಾರದ ಜೊತೆ ಸಂಪರ್ಕಿಸಲೇಬೇಕು.

English summary
The Bharatiya Janata Party on Monday released its poll manifesto reiterating its demand for abortion of article 370 and article 35-A presently challenged through various public interest litigations (PILs) in the Supreme Court of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X