ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Imran Khan : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್: ಕ್ರಿಕೆಟ್, ರಾಜಕೀಯ ಜೀವನದ ಏರಿಳಿತ

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 10: 1992 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ತನ್ನ ತಂಡಕ್ಕೆ ಕಪ್ ಗೆಲ್ಲಿಸಿಕೊಟ್ಟಿದ್ದ ಕ್ಯಾಪ್ಟನ್ ಇಮ್ರಾನ್‌ ಖಾನ್, ತನ್ನ ರಾಜಕೀಯ ಜೀವನದಲ್ಲಿ ಅದೇ ವರ್ಚಸ್ಸನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದಾರೆ. ತನ್ನ ವಿರೋಧ ಪಕ್ಷದ ಅವಿಶ್ವಾಸ ಮತದ ಏಸೆತಕ್ಕೆ ಇಮ್ರಾನ್‌ ಖಾನ್ ಔಟ್ ಆಗಿದ್ದಾರೆ. ಅದು ಕೂಡಾ ತನ್ನ ಮೊದಲ ಇನ್ನಿಂಗ್ಸ್‌ನ ಮಧ್ಯದಲ್ಲೇ ರಾಜಕೀಯ ಪಂದ್ಯದಿಂದ ಹೊರಹಾಕಲ್ಪಟ್ಟಿದ್ದಾರೆ.

342 ಸದಸ್ಯರ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪರಿಣಾಮಕಾರಿಯಾಗಿ ಬಹುಮತವನ್ನು ಕಳೆದುಕೊಂಡ ಖಾನ್ ಸಂಸತ್ತನ್ನು ವಿಸರ್ಜಿಸಿದರು. ಉಪ ಸ್ಪೀಕರ್ ಅವರು ಇಮ್ರಾನ್ ವಿರುದ್ಧ ಅವಿಶ್ವಾಸ ನಿರ್ಣಯವನ್ನು ತಡೆದ ನಂತರ ಏಪ್ರಿಲ್ 3 ರಂದು ಹೊಸ ಚುನಾವಣೆಗೆ ಇಮ್ರಾನ್ ಕರೆ ನೀಡಿದರು. ಈ ನಡುವೆ ಮುಖ್ಯ ನ್ಯಾಯಮೂರ್ತಿ ಉಮರ್ ಅಟಾ ಬಂಡಿಯಲ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರ ಪೀಠವು ಏಪ್ರಿಲ್ 7 ರಂದು 5-0 ಮಹತ್ವದ ತೀರ್ಪಿನಲ್ಲಿ ಉಪ ಸ್ಪೀಕರ್ ಅವರ ತೀರ್ಪನ್ನು ತಳ್ಳಿಹಾಕಿದೆ.

ವಿಶ್ವಾಸಮತ ಕಳೆದುಕೊಂಡ ಮೊದಲ ಪ್ರಧಾನಿ, ದಾಖಲೆ ಬರೆದ ಇಮ್ರಾನ್ ಖಾನ್ವಿಶ್ವಾಸಮತ ಕಳೆದುಕೊಂಡ ಮೊದಲ ಪ್ರಧಾನಿ, ದಾಖಲೆ ಬರೆದ ಇಮ್ರಾನ್ ಖಾನ್

ಅವಿಶ್ವಾಸ ಮತ ಮಂಡನೆಗಾಗಿ ಏಪ್ರಿಲ್ 9 ರಂದು ಅಧಿವೇಶನವನ್ನು ಆಯೋಜಿಸಲು ಸ್ಪೀಕರ್‌ಗೆ ಸುಪ್ರಿಂ ಕೋರ್ಟ್ ಆದೇಶ ನೀಡಿತು. 2018 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅವರ ಪಕ್ಷದಲ್ಲಿನ ಪಕ್ಷಾಂತರಗಳು, ಮಿತ್ರ ಪಕ್ಷಗಳ ಜೊತೆಗಿನ ಬಿರುಕುಗಳು ಖಾನ್ ರಾಜಕೀಯ ಆಟದಲ್ಲಿ ಸೋಲುವಂತೆ ಮಾಡಿದೆ. ವಿಶ್ವಾಸ ಮತದ ಮೂಲಕ ತಮ್ಮ ಭವಿಷ್ಯವನ್ನು ನಿರ್ಧಾರ ಮಾಡಿಕೊಂಡ ಪಾಕಿಸ್ತಾನದ ಮೊದಲ ಪ್ರಧಾನಿ ಇಮ್ರಾನ್ ಆಗಿದ್ದಾರೆ.

ಸೈನ್ಯದ ಜೊತೆಗಿನ ಉತ್ತಮ ಸಂಬಂಧ ಕಳೆದುಕೊಂಡ ಇಮ್ರಾನ್

ಸೈನ್ಯದ ಜೊತೆಗಿನ ಉತ್ತಮ ಸಂಬಂಧ ಕಳೆದುಕೊಂಡ ಇಮ್ರಾನ್

ಆಕ್ಸ್‌ಫರ್ಡ್-ಶಿಕ್ಷಿತ ಇಮ್ರಾನ್ 2018 ರಲ್ಲಿ 'ಹೊಸ ಪಾಕಿಸ್ತಾನ' ರಚಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದರು. ಆದರೆ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಸರಕುಗಳ ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಮೂಲಭೂತ ಸಮಸ್ಯೆಯನ್ನು ಪರಿಹರಿಸಲು ವಿಫಲರಾದರು. ಕಳೆದ ವರ್ಷ ಐಎಸ್ಐ ಬೇಹುಗಾರಿಕಾ ಸಂಸ್ಥೆ ಮುಖ್ಯಸ್ಥರ ನೇಮಕಾತಿಯನ್ನು ಅನುಮೋದಿಸಲು ನಿರಾಕರಿಸಿದ ನಂತರ ಖಾನ್ ಅವರು ಪ್ರಬಲ ಸೇನೆಯ ಬೆಂಬಲವನ್ನು ಕಳೆದುಕೊಂಡರು. ಅಂತಿಮವಾಗಿ ಅವರು ಒಪ್ಪಿಕೊಂಡರು. ಆದರೆ ಇದು ದಂಗೆ ಪೀಡಿತ ದೇಶವನ್ನು ಅದರ 75 ವರ್ಷಗಳ ಅಸ್ತಿತ್ವದ ಅರ್ಧಕ್ಕಿಂತ ಹೆಚ್ಚು ಕಾಲ ಆಳಿದ ಮತ್ತು ಇದುವರೆಗೆ ಭದ್ರತೆ ಮತ್ತು ವಿದೇಶಾಂಗ ನೀತಿಯ ವಿಷಯಗಳಲ್ಲಿ ಗಣನೀಯ ಅಧಿಕಾರವನ್ನು ಹೊಂದಿರುವ ಸೈನ್ಯದೊಂದಿಗಿನ ಇಮ್ರಾನ್ ಸಂಬಂಧವನ್ನು ಹದಗೆಡಿಸಿತು. ಅವರ 21 ವರ್ಷಗಳ ಕ್ರಿಕೆಟ್ ವೃತ್ತಿಜೀವನವು ಅವರ 26 ವರ್ಷಗಳ ರಾಜಕೀಯ ಪ್ರಯಾಣವನ್ನು ಮರೆಮಾಡಿದೆ.

ಪ್ರಮುಖ ಪಕ್ಷವನ್ನು ಸೋಲಿಸುವಲ್ಲಿ ವಿಫಲವಾದ ಇಮ್ರಾನ್ ಖಾನ್

ಪ್ರಮುಖ ಪಕ್ಷವನ್ನು ಸೋಲಿಸುವಲ್ಲಿ ವಿಫಲವಾದ ಇಮ್ರಾನ್ ಖಾನ್

ಕಳೆದ ಬಾರಿ ಖಾನ್ ವಿಶ್ವಾಸ ಮತವನ್ನು ಕೋರಿದಾಗ, ಆರಾಮವಾಗಿ ಗೆದ್ದಿದ್ದರು. ಖಾನ್ 1996 ರಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಅನ್ನು ಪ್ರಾರಂಭಿಸಿದರು. ಆದರೆ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಪ್ರಾಬಲ್ಯವನ್ನು ಕಡಿಮೆ ಮಾಡಲು ಹೆಣಗಾಡಿದರು. ಸೇನೆಯು ದೇಶವನ್ನು ಆಳದೇ ಇದ್ದಾಗ ದೇಶವನ್ನು ಆಳಿದ ಪ್ರಮುಖ ರಾಜಕೀಯ ಪಕ್ಷಗಳು ಇದಾಗಿದೆ. ವರ್ಷಗಳ ಕಾಲ ಪಿಎಂಎಲ್-ಎನ್ ಹಾಗೂ ಪಿಪಿಪಿ ಪ್ರಾಬಲ್ಯವನ್ನು ಮುರಿಯಲು ಸಾಧ್ಯವಾಗಲಿಲ್ಲ. ಈ ನಡುವೆ ಪಾಕಿಸ್ತಾನದಲ್ಲಿ ರಾಜಕೀಯವು ಅನುವಂಶಿಕವಾಗಿದೆ ಎಂದು ಷರೀಫ್ ಕುಟುಂಬ ಮತ್ತು ಭುಟ್ಟೋ ಕುಟುಂಬದ ನೇತೃತ್ವದ ಪಿಎಂಎಲ್-ಎನ್ ಹಾಗೂ ಪಿಪಿಪಿ ಪಕ್ಷಗಳ ನಾಯಕರನ್ನು ಉಲ್ಲೇಖಿಸಿ ಹೇಳಿದ್ದರು.

2018ರಲ್ಲಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ

2018ರಲ್ಲಿ ಇಮ್ರಾನ್ ಖಾನ್ ಅಧಿಕಾರ ಸ್ವೀಕಾರ

ಇಮ್ರಾನ್ ಖಾನ್ 2002 ರಲ್ಲಿ ಸಂಸತ್ ಸದಸ್ಯರಾದರು. ಅವರು 2013 ರಲ್ಲಿ ಮತ್ತೊಮ್ಮೆ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದರು. ಚುನಾವಣೆಯ ಒಂದು ವರ್ಷದ ನಂತರ, ಮೇ 2014 ರಲ್ಲಿ, ಆಗಿನ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಆಡಳಿತಾರೂಢ ಪಿಎಂಎಲ್-ಎನ್ ಪರವಾಗಿ ಚುನಾವಣೆಗಳಲ್ಲಿ ಅಕ್ರಮ ನಡೆದಿದೆ ಎಂದು ಇಮ್ರಾನ್ ಖಾನ್ ಆರೋಪ ಮಾಡಿದ್ದರು. ಆಗಸ್ಟ್ 2014 ರಲ್ಲಿ, ಖಾನ್ ಅವರು ಲಾಹೋರ್‌ನಿಂದ ಇಸ್ಲಾಮಾಬಾದ್‌ಗೆ ತಮ್ಮ ಬೆಂಬಲಿಗರ ರ್‍ಯಾಲಿಯನ್ನು ನಡೆಸಿದರು. ಷರೀಫ್ ಅವರ ರಾಜೀನಾಮೆ ಮತ್ತು ಚುನಾವಣಾ ವಂಚನೆಯ ತನಿಖೆಗೆ ಒತ್ತಾಯಿಸಿದರು. ಇಮ್ರಾನ್ ಖಾನ್ 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ತಮ್ಮ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದರು. ಈ ಸಮಯದಲ್ಲಿ ಭ್ರಷ್ಟಾಚಾರದ ವಿರುದ್ಧ ಶಿಸ್ತುಕ್ರಮ, ಬಡತನ-ವಿರೋಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು, ಆರೋಗ್ಯ ಮತ್ತು ಶಿಕ್ಷಣವನ್ನು ಸುಧಾರಿಸಲು ಮತ್ತು ಅವರ ದೇಶವನ್ನು ಇಸ್ಲಾಮಿಕ್ ಕಲ್ಯಾಣ ರಾಜ್ಯವಾಗಿ ಪರಿವರ್ತಿಸಲು ಭರವಸೆ ನೀಡಿದ್ದರು. ಅಧಿಕಾರದಲ್ಲಿದ್ದಾಗ, ಖಾನ್ ಪಾಕಿಸ್ತಾನವನ್ನು ಇಸ್ಲಾಮಿಕ್ ಕಲ್ಯಾಣ ರಾಜ್ಯವನ್ನಾಗಿ ಮಾಡುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರು.

ಇಮ್ರಾನ್ ಖಾನ್ ಆಡಳಿತಾವಧಿಯ ವಿವಾದಗಳು

ಇಮ್ರಾನ್ ಖಾನ್ ಆಡಳಿತಾವಧಿಯ ವಿವಾದಗಳು

ಇಮ್ರಾನ್ ಖಾನ್ ಪಾಶ್ಚಿಮಾತ್ಯ ದೇಶಗಳೊಂದಿಗೆ, ವಿಶೇಷವಾಗಿ ಯುಎಸ್ ಜೊತೆ ಬಿಕ್ಕಟ್ಟಿನ ಸಂಬಂಧವನ್ನು ಹೊಂದಿದ್ದರು. ಮಿತ್ರ ರಾಷ್ಟ್ರ ಚೀನಾದೊಂದಿಗೆ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಸಂದರ್ಭದಲ್ಲಿ ಖಾನ್ ರಷ್ಯಾದೊಂದಿಗೆ ನಿಕಟ ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸಿದರು. ಇಮ್ರಾನ್ ಖಾನ್ ಅಧಿಕಾರಾವಧಿಯಲ್ಲಿ, 2019 ರಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಫೆಬ್ರವರಿಯಲ್ಲಿ ಆತ್ಮಾಹುತಿ ದಾಳಿ ನಡೆಸಿ ಭಾರತದ 40 ಸಿಆರ್‌ಪಿಎಫ್ ಸಿಬ್ಬಂದಿಯನ್ನು ಕೊಂದಾಗ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಂಬಂಧಗಳು ಮತ್ತಷ್ಟು ಹದಗೆಟ್ಟವು. ಖೈಬರ್ ಪಖ್ತುಂಕ್ವಾದಲ್ಲಿನ ಬಾಲಾಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳ ಮೇಲೆ ಬಾಂಬ್ ದಾಳಿ ಮಾಡಲು ಭಾರತ ಮುಂದಾಗಬೇಕಾಯಿತು. ಉಭಯ ರಾಷ್ಟ್ರಗಳ ವೈಮಾನಿಕ ಮುಖಾಮುಖಿಯಲ್ಲಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆಹಿಡಿದು ನಂತರ ಬಿಡುಗಡೆ ಮಾಡಿತು. 2019 ರ ಆಗಸ್ಟ್‌ನಲ್ಲಿ ಭಾರತವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಅಧಿಕಾರವನ್ನು ಹಿಂತೆಗೆದುಕೊಳ್ಳುವುದಾಗಿ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದಾಗಿ ಘೋಷಿಸಿದ ನಂತರ ಸಂಬಂಧಗಳು ಹದಗೆಟ್ಟವು. ಕಾಶ್ಮೀರ ವಿವಾದವು ಉಭಯ ದೇಶಗಳ ನಡುವಿನ ದೊಡ್ಡ ಸಮಸ್ಯೆಯಾಗಿ ಉಳಿದಿದೆ ಎಂದ ಖಾನ್ ಅಧಿಕಾರಾವಧಿಯಲ್ಲಿ ವಿಶ್ವಸಂಸ್ಥೆ ಸೇರಿದಂತೆ ಅನೇಕ ವೇದಿಕೆಗಳಲ್ಲಿ ಈ ವಿಷಯವನ್ನು ಪ್ರಸ್ತಾಪ ಮಾಡಿದರು.

ಇಮ್ರಾನ್ ಖಾನ್ ವೈಯಕ್ತಿಕ ಜೀವನ

ಇಮ್ರಾನ್ ಖಾನ್ ವೈಯಕ್ತಿಕ ಜೀವನ

ಇಮ್ರಾನ್ ಖಾನ್ ಮೊದಲ ಮದುವೆಯು ಬ್ರಿಟಿಷ್ ಬಿಲಿಯನೇರ್ ಅವರ ಮಗಳು ಜೆಮಿಮಾ ಗೋಲ್ಡ್‌ಸ್ಮಿತ್‌ ಅವರೊಂದಿಗೆ 1995 ರಲ್ಲಿ ನಡೆಯಿತು. 9 ವರ್ಷಗಳ ಕಾಲ ವೈವಾಹಿಕ ಜೀವನ ನಡೆಸಿದರು. ಖಾನ್‌ಗೆ ಜೆಮಿಮಾ ಗೋಲ್ಡ್‌ಸ್ಮಿತ್‌ರಿಂದ ಇಬ್ಬರು ಗಂಡು ಮಕ್ಕಳಿದ್ದಾರೆ. 2015 ರಲ್ಲಿ ಟಿವಿ ಆಂಕರ್ ರೆಹಮ್ ಖಾನ್ ಅವರೊಂದಿಗಿನ ಅವರ ಎರಡನೇ ಮದುವೆಯು ಹತ್ತು ತಿಂಗಳ ನಂತರ ಕೊನೆಗೊಂಡಿದೆ. 2018 ರಲ್ಲಿ, ಖಾನ್ ಮೂರನೇ ಬಾರಿಗೆ ವಿವಾಹವಾದರು. ಈ ಬಾರಿ ತನ್ನ "ಆಧ್ಯಾತ್ಮಿಕ ಮಾರ್ಗದರ್ಶಿ" ಬುಶ್ರಾ ಮೇನಕಾರನ್ನು ಇಮ್ರಾನ್ ಖಾನ್ ವಿವಾಹವಾದರು. ಇಮ್ರಾನ್ ಖಾನ್ 1952 ರಲ್ಲಿ ಮಿಯಾನ್ವಾಲಿಯಲ್ಲಿ ಇಕ್ರಮುಲ್ಲಾ ಖಾನ್ ನಿಯಾಜಿ ಮತ್ತು ಶೌಕತ್ ಖಾನಮ್ ದಂಪತಿಗೆ ಜನಿಸಿದರು. ಇಮ್ರಾನ್ ತಂದೆ ಶೆರ್ಮಂಖೇಲ್ ಕುಲದ ಪಶ್ತುನ್ ನಿಯಾಜಿ ಬುಡಕಟ್ಟಿನಿಂದ ಬಂದವರು. ಇಮ್ರಾನ್ ಖಾನ್ ಲಾಹೋರ್‌ನ ಐಚಿಸನ್ ಕಾಲೇಜು ಮತ್ತು ಇಂಗ್ಲೆಂಡ್‌ನ ರಾಯಲ್ ಗ್ರಾಮರ್ ಸ್ಕೂಲ್ ವೋರ್ಸೆಸ್ಟರ್‌ನಲ್ಲಿ ವ್ಯಾಸಂಗ ಮಾಡಿದರು. ಇಮ್ರಾನ್ ಖಾನ್ 1971 ಮತ್ತು 1992 ರ ನಡುವೆ ಪಾಕಿಸ್ತಾನಕ್ಕಾಗಿ ಟೆಸ್ಟ್ ಕ್ರಿಕೆಟ್ ಆಡಿದರು. 1992 ರಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದಾಗ ರಾಷ್ಟ್ರೀಯ ತಂಡದ ನಾಯಕರಾಗಿದ್ದರು.

Recommended Video

Dewald Brevisಗೆ Kohli ತಮಾಷೆಯಾಗಿ ಹೇಳಿದ್ದೇನು | Oneindia Kannada

English summary
Imran Khan's rise and fall in Political Journey. Explained Here..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X