ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿತರಿಗೆ ವರ್ಷದೊಳಗೆ ಮತ್ತೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು: ಅಧ್ಯಯನ

|
Google Oneindia Kannada News

ನವದೆಹಲಿ, ಅಕ್ಟೋಬರ್ 28: ಒಮ್ಮೆ ಕೊರೊನಾ ವೈರಸ್‌ಗೆ ತುತ್ತಾದ ವ್ಯಕ್ತಿಯು ಕೆಲವು ತಿಂಗಳು ಅಥವಾ ವರ್ಷದೊಳಗೆ ಪುನಃ ಸೋಂಕಿಗೆ ಒಳಗಾಗುವ ಸಾಧ್ಯತೆ ಬಹಳಷ್ಟಿದೆ ಎಂದು ಇಂಗ್ಲೆಂಡ್ ಮೂಲದ ಅಧ್ಯಯನವೊಂದು ಹೇಳಿದೆ.

ಇಂಪೀರಿಯಲ್ ಕಾಲೇಜ್ ಲಂಡನ್ ನೀಡಿರುವ ಇತ್ತೀಚಿನ ವರದಿ ಪ್ರಕಾರ ಕೋವಿಡ್ 19ರ ವಿರುದ್ಧದ ಆಂಟಿಬಾಡಿಗಳು ಕಾಲಕ್ರಮೇಣ ದುರ್ಬಲವಾಗುತ್ತವೆ. ಇದರ ಅರ್ಥ ಯಾವುದೇ ಮಟ್ಟದ ಪ್ರತಿರಕ್ಷಣಾ ಸಾಮರ್ಥ್ಯವು ಕೆಲವೇ ತಿಂಗಳಲ್ಲಿ ನಾಶಹೊಂದಬಹುದು.

ಭಾರತದಲ್ಲಿ ಕೊವಿಡ್ 19 ಪರೀಕ್ಷೆಗೆ ತಗುಲುವ ವೆಚ್ಚ ಎಷ್ಟು?: ರಾಜ್ಯವಾರು ಮಾಹಿತಿ ಭಾರತದಲ್ಲಿ ಕೊವಿಡ್ 19 ಪರೀಕ್ಷೆಗೆ ತಗುಲುವ ವೆಚ್ಚ ಎಷ್ಟು?: ರಾಜ್ಯವಾರು ಮಾಹಿತಿ

'ಅವಧಿಗೆ ಅನುಗುಣವಾದ ಕೊರೊನಾ ವೈರಸ್ ಪ್ರತಿ ಚಳಿಗಾಲದಲ್ಲಿಯೂ ಹರಡುತ್ತದೆ ಮತ್ತು ಸಾಮಾನ್ಯ ಶೀತಗಳು ವ್ಯಕ್ತಿಯಲ್ಲಿ 6 ರಿಂದ 12 ತಿಂಗಳಲ್ಲಿ ಸೋಂಕಿತ ವ್ಯಕ್ತಿಗೆ ಮತ್ತೆ ತಗುಲುತ್ತದೆ' ಎಂದು ಅಧ್ಯಯನದಲ್ಲಿ ಭಾಗಿಯಾದ ಸಂಶೋಧಕರಲ್ಲಿ ಒಬ್ಬರಾದ ವೈರಾಲಜಿಸ್ಟ್ ಪ್ರೊಫೆಸರ್ ವೆಂಡಿ ಬಾರ್ಕ್ಲೇ ಹೇಳಿದ್ದಾರೆ.

ಆಂಟಿಬಾಡಿಗಳು ದೇಹದ ಪ್ರತಿರಕ್ಷಣಾ ಹೋರಾಟದಲ್ಲಿ ಹಾಗೂ ದೇಹದ ಕೋಶಗಳ ಒಳಗೆ ವೈರಸ್‌ಗಳು ಪ್ರವೇಶಿಸಿದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಮುಂದೆ ಓದಿ.

ಹೆಚ್ಚೆಚ್ಚು ಪರೀಕ್ಷೆಯಿಂದ, ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ ಹೆಚ್ಚೆಚ್ಚು ಪರೀಕ್ಷೆಯಿಂದ, ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಸಾಧ್ಯವಿಲ್ಲ

ಪ್ರತಿಕಾಯಗಳ ಇಳಿಕೆ

ಪ್ರತಿಕಾಯಗಳ ಇಳಿಕೆ

ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಕೋವಿಡ್ 19ರ ಮೊದಲ ಅಲೆಯ ಬಳಿಕ 3,65,000 ಮಂದಿಯ ಆಂಟಿಬಾಡಿ ಮಟ್ಟವನ್ನು ಇಂಪೀರಿಯಲ್ ಕಾಲೇಜ್ ಲಂಡನ್‌ನ ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ಆಂಟಿಬಾಡಿಯ ಸಾಮರ್ಥ್ಯ ಮೊದಲ ಮೂರು ತಿಂಗಳಲ್ಲಿ ಜೂನ್‌ ವೇಳೆಗೆ ಶೇ 6ರಷ್ಟು ಇದ್ದರೆ, ಸೆಪ್ಟೆಂಬರ್ ವೇಳೆಗೆ ಶೇ 4.4ಕ್ಕೆ ಇಳಿದಿದೆ.

ಕೋವಿಡ್ ಇತಿಹಾಸವಿಲ್ಲದವರಲ್ಲೂ ಇಳಿಕೆ

ಕೋವಿಡ್ ಇತಿಹಾಸವಿಲ್ಲದವರಲ್ಲೂ ಇಳಿಕೆ

ಈ ಕುಸಿತವು ಯುವಜನರಿಗೆ ಹೋಲಿಸಿದರೆ 75 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ ಅಧಿಕ. ಇದರ ಜತೆಗೆ, ರೋಗದ ಯಾವುದೇ ಲಕ್ಷಣಗಳಿಲ್ಲದ ಜನರು ಅಥವಾ ಕೋವಿಡ್ 19ರ ಇತಿಹಾಸವನ್ನೇ ಹೊಂದಿರದ ಜನರಲ್ಲಿ ಕೂಡ ಪ್ರತಿಕಾಯಗಳ ಸಾಮರ್ಥ್ಯ ಕುಸಿದಿರುವುದು ಕಂಡುಬಂದಿದೆ. ಪಿಸಿಆರ್ ಮಟ್ಟದ ಪರೀಕ್ಷೆಗೆ ಒಳಗಾಗಿ ಕೋವಿಡ್ ಸೋಂಕು ಖಚಿತವಾದ ರೋಗಿಗಳಲ್ಲಿ ಪ್ರತಿಕಾಯದ ಇಳಿಕೆ ಪ್ರಮಾಣ ಕಡಿಮೆ.

ಕೊರೊನಾ ವೈರಸ್ ಇತಿಹಾಸ ಹೊಂದಿರದ ಜನರಲ್ಲಿ ಕೂಡ ಪ್ರತಿಕಾಯ ಪ್ರಮಾಣ ಶೇ 64ರಷ್ಟು ಕುಸಿತವಾಗಿರುವುದನ್ನು ಅಧ್ಯಯನ ಪತ್ತೆಹಚ್ಚಿದೆ. ಲ್ಯಾಬ್ ಟೆಸ್ಟಿಂಗ್ ಮೂಲಕ ಕೊರೊನಾ ವೈರಸ್ ಸೋಂಕು ಇರುವುದನ್ನು ಕಂಡುಕೊಂಡ ರೋಗಿಗಳಲ್ಲಿ ಶೇ 22.2ರಷ್ಟು ಪ್ರತಿಕಾಯಗಳು ತಗ್ಗಿವೆ.

ಆರೋಗ್ಯ ಸೇವಕರಲ್ಲಿ ಬದಲಾಗದ ಪ್ರಮಾಣ

ಆರೋಗ್ಯ ಸೇವಕರಲ್ಲಿ ಬದಲಾಗದ ಪ್ರಮಾಣ

ಆಸಕ್ತಿಕರ ಸಂಗತಿಯೆಂದರೆ ಆರೋಗ್ಯ ಕಾರ್ಯಕರ್ತರು, ಸೇವಕರಲ್ಲಿನ ಪ್ರತಿಕಾಯಗಳ ಮಟ್ಟದಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ವೈರಸ್‌ಗೆ ಸತತವಾಗಿ ಎದುರಾಗುವುದರಿಂದ ಅವರ ಆಂಟಿಬಾಡಿಗಳು ಪ್ರಬಲಗೊಂಡಿರಬಹುದು ಎಂದು ಊಹಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮ ಪಾಲನೆ ಅಗತ್ಯ

ಮುನ್ನೆಚ್ಚರಿಕೆ ಕ್ರಮ ಪಾಲನೆ ಅಗತ್ಯ

'ಈ ಬೃಹತ್ ಅಧ್ಯಯನವು, ಜನರಲ್ಲಿ ಪತ್ತೆಯಾಗುವ ಪ್ರತಿಕಾಯಗಳ ಪ್ರಮಾಣ ಕಾಲಕ್ರಮೇಣ ಇಳಿಕೆಯಾಗುತ್ತದೆ ಎಂಬುದನ್ನು ತೋರಿಸಿದೆ. ಇಂತಹ ಜನರಲ್ಲಿ ಕೋವಿಡ್ ಸೋಂಕು ಮತ್ತೆ ತಗುಲಿದರೆ ಅವರ ಜೀವಕ್ಕೆ ಅಪಾಯವಾಗುತ್ತದೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ. ಆದರೆ ಪ್ರತಿಯೊಬ್ಬರೂ ತಮಗೆ ಹಾಗೂ ಇತರರಿಗೆ ಅಪಾಯ ಎದುರಾಗುವುದನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತಿ ಅಗತ್ಯ' ಎಂದು ಅಧ್ಯಯನ ತಂಡ ಹೇಳಿದೆ.

Recommended Video

ರೌಡಿಸಂ ಮಾಡಿದ್ರೆ ಚುನಾವಣೆ ಗೆಲ್ತಾರ | Oneindia Kannada

English summary
Imperial College London study report said, a person infected from noval coronavirus has a major chance of getting re infected as antibodies fall rapidly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X