• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಕ್ಷತ್ರಗಳು ಹೇಗೆ ಸಾಯುತ್ತವೆ? ವಿಜ್ಞಾನಿಗಳಿಂದ ರಹಸ್ಯ ಬಯಲು

|

ಸೂರ್ಯನಿಗಿಂತ ಸಾವಿರಾರು ಪಟ್ಟು ದೊಡ್ಡದಾದ ನಕ್ಷತ್ರಗಳು, ಅಂತ್ಯಕಾಲದಲ್ಲಿ ಆಂತರಿಕವಾಗಿ ಎದುರಿಸುವ ಒತ್ತಡದಿಂದಲೇ ಸಾವಿಗೀಡಾಗುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. 'ನ್ಯೂಟ್ರಿನೋಸ್' ಎನ್ನುವ ಚಿಕ್ಕದಾದ ಸಬ್ಟಾಮಿಕ್ ಕಣಗಳಿಂದ ನಕ್ಷತ್ರಗಳ ಸಾವು ಸಂಭವಿಸುತ್ತದೆ ಎಂಬ ವಿಚಾರ ತಿಳಿದುಬಂದಿದೆ.

ಅಂತ್ಯಕಾಲದಲ್ಲಿ ನ್ಯೂಟ್ರಿನೋಸ್ ನಕ್ಷತ್ರದ ಶೇಕಡ 99ರಷ್ಟು ಶಾಕ ಹೊರಗೆ ದಬ್ಬುವ ಕಾರಣ ನಕ್ಷತ್ರ ಸ್ಫೋಟವಾಗಿ, ಸೂಪರ್ ‌ನೋವಾ ಸೃಷ್ಟಿಯಾಗುತ್ತದೆ ಎಂದು ಭಾರತದ ವಿಜ್ಞಾನಿಗಳು ಮಹತ್ತರ ಮಾಹಿತಿ ಹೊರಗೆಡವಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಸೃಷ್ಟಿಸಿದೆ.

ಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆಅವಿಸ್ಮರಣೀಯ 2020: ನೂರಾರು ನಕ್ಷತ್ರ, ಗ್ರಹಗಳ ಸಂಶೋಧನೆ

ಬೃಹತ್ ನಕ್ಷತ್ರ ಸ್ಫೋಟವಾದ ನಂತರ ಸೂಪರ್ ‌ನೋವಾ ಉಂಟಾಗುತ್ತದೆ. ಬಿಳಿ ದೈತ್ಯ ನಕ್ಷತ್ರಗಳು ಸಾಮಾನ್ಯವಾಗಿ ಸ್ಫೋಟಗೊಂಡು, ತಮ್ಮ ಅಂತ್ಯಕಾಲ ಸಮೀಪಿಸಿದಾಗ ಸೂಪರ್ ‌ನೋವಾ ಉಂಟಾಗುತ್ತದೆ. ಇದನ್ನು ನಕ್ಷತ್ರ ತ್ಯಾಜ್ಯ ಎಂದು ಕರೆಯುವ ವಿಜ್ಞಾನಿಗಳು, ಭವಿಷ್ಯದಲ್ಲಿ ನಕ್ಷತ್ರ ತ್ಯಾಜ್ಯದಿಂದಲೇ ಮತ್ತಷ್ಟು ಗ್ರಹ, ನಕ್ಷತ್ರಗಳು ಉದಯಿಸುತ್ತವೆ ಎಂಬುದನ್ನು ಪ್ರತಿಪಾದಿಸುತ್ತಾರೆ. ಆದರೆ ಇಷ್ಟು ದಿನ 'ಸೂಪರ್ ‌ನೋವಾ' ಉಂಟಾಗಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟನೆ ಸಿಕ್ಕಿರಲಿಲ್ಲ.

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!

ಗುವಾಹಟಿಯ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ' ಸಂಶೋಧಕರು ಜರ್ಮನಿ ಮೂಲದ 'ಮ್ಯಾಕ್ಸ್ ಪ್ಲ್ಯಾಂಕ್ ಇನ್‌ಸ್ಟಿಟ್ಯೂಟ್' ಮತ್ತು ಅಮೆರಿಕದ ನಾರ್ತ್‌ವೆಸ್ಟರ್ನ್ ವಿವಿ ಸಂಶೋಧಕರ ಸಹಾಯದೊಂದಿಗೆ ನಕ್ಷತ್ರಗಳ ಸಾವಿನ ಕುರಿತು ಹೊಸ ಅಂಶಗಳನ್ನು ಪ್ರತಿಪಾದಿಸಿದ್ದಾರೆ. ಈ ಸಂಶೋಧನೆ ಇಷ್ಟುದಿನ ಕಗ್ಗಂಟಾಗಿದ್ದ ನಕ್ಷತ್ರಗಳ ಸಾವಿನ ರಹಸ್ಯವನ್ನ ಹೊರಗೆಡವಿದ್ದು, ಭಾರಿ ಸಂಚಲನ ಸೃಷ್ಟಿಸಿದೆ.

ನಕ್ಷತ್ರ ಸ್ಫೋಟ ನೋಡಲು ಸಾಧ್ಯ..!

ನಕ್ಷತ್ರ ಸ್ಫೋಟ ನೋಡಲು ಸಾಧ್ಯ..!

ಮಾನವ ಆಧುನಿಕ ಜಗತ್ತಿಗೆ ಕಾಲಿಟ್ಟು, ಭೂಮಿ ಹಾಗೂ ಬ್ರಹ್ಮಾಂಡದ ಮೇಲೆ ಹಿಡಿತ ಸಾಧಿಸುವ ಯತ್ನದಲ್ಲಿ ಮಗ್ನನಾಗಿದ್ದಾನೆ. ಆದರೆ ಆಧುನಿಕ ಕಾಲಘಟ್ಟದಲ್ಲಿ ನಕ್ಷತ್ರಗಳು ಸ್ಫೋಟಗೊಳ್ಳುವ ಪ್ರಕ್ರಿಯೆಯನ್ನ ವಿಜ್ಞಾನಿಗಳು ನೋಡಲು ಸಾಧ್ಯವಾಗಿಲ್ಲ. ಸದ್ಯದ ಮಟ್ಟಿಗೆ ಒಂದೆಡು ನಕ್ಷತ್ರಗಳು ಸ್ಫೋಟಗೊಳ್ಳುವ ಹಂತದಲ್ಲಿವೆ. ಸದ್ಯದಲ್ಲೇ ಅಂತಹದ್ದೊಂದು ಪ್ರಕ್ರಿಯೆಗೆ ಮಾನವರು ಸಾಕ್ಷಿಯಾಗಲಿದ್ದಾರೆ. ಈ ಹೊತ್ತಲ್ಲಿ ವಿಜ್ಞಾನಿಗಳು ನಕ್ಷತ್ರಗಳ ಸಾವಿನ ರಹಸ್ಯ ಕಂಡುಕೊಂಡಿದ್ದಾರೆ. ಅದರಲ್ಲೂ ಭಾರತದ ಹೆಮ್ಮೆಯ ‘ಐಐಟಿ' ಸಂಸ್ಥೆಯ ಸಂಶೋಧಕರು ನಕ್ಷತ್ರಗಳ ಸಾವಿನ ಬಗ್ಗೆ ಇಂಚಿಂಚು ಮಾಹಿತಿ ಹೊರಗೆಡವಿದ್ದಾರೆ.

 ಬ್ರಹ್ಮಾಂಡ ಅರಿಯಲು ಸಾಧ್ಯ..!

ಬ್ರಹ್ಮಾಂಡ ಅರಿಯಲು ಸಾಧ್ಯ..!

ನಕ್ಷತ್ರಗಳ ಸಾವು ತಿಳಿದರೆ ಬ್ರಹ್ಮಾಂಡ ಅರಿಯಲು ಸಾಧ್ಯ, ಬ್ರಹ್ಮಾಂಡ ಅರಿತುಕೊಂಡರೆ ‘ಬಿಗ್‌ಬ್ಯಾಂಗ್' ಬಗ್ಗೆ ತಿಳಿಯಲು ಸಾಧ್ಯ. ಹೀಗೆ ಇದೆರಡೂ ಅಂಶಗಳು ಗೊತ್ತಾದರೆ ಭೂಮಿ ಮೇಲಿನ ನೂರಾರು ಪ್ರಾಕೃತಿ ಸಮಸ್ಯೆಗೆ ಹಾಗೂ ಒತ್ತಡಗಳಿಗೆ ಪರಿಹಾರ ಸಿಗಲಿದೆ. ಇದೇ ಕಾರಣಕ್ಕೆ ವಿಜ್ಞಾನಿಗಳು ನಕ್ಷತ್ರಗಳ ಹುಟ್ಟು ಹಾಗೂ ಸಾವಿನ ಸುತ್ತಾ ಸಾಕಷ್ಟು ಅಧ್ಯಯನ ನಡೆಸುತ್ತಿದ್ದಾರೆ. ಇದೇ ರೀತಿ ಅಂತಾರಾಷ್ಟ್ರೀಯ ವಿಜ್ಞಾನಿಗಳ ಜೊತೆಗೆ ಭಾರತದ ವಿಜ್ಞಾನಿಗಳು ಸಂಶೋಧನೆ ನಡೆಸುವಾಗ ಬೃಹತ್ ನಕ್ಷತ್ರಗಳ ಸಾವಿನ ರಹಸ್ಯ ಬಯಲಾಗಿದೆ.

ಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರಭೂಮಿಯಲ್ಲಿ ಜೀವ ಉಗಮ ಹೇಗಾಯ್ತು? ಇಲ್ಲಿದೆ ಉತ್ತರ

ನಕ್ಷತ್ರದ ಜನನ ಹೇಗೆ..?

ನಕ್ಷತ್ರದ ಜನನ ಹೇಗೆ..?

ಬ್ರಹ್ಮಾಂಡದ ಉಗಮವಾಗಿ ಸುಮಾರು 1375 ಕೋಟಿ ವರ್ಷವಾಗಿದೆ. 1375 ಕೋಟಿ ವರ್ಷದಲ್ಲಿ ಬಿಲಿಯನ್ ಲೆಕ್ಕದಲ್ಲಿ ಗ್ಯಾಲಕ್ಷಿಗಳು ಜನ್ಮತಾಳಿವೆ. ಪ್ರತಿಯೊಂದು ಗ್ಯಾಲಕ್ಸಿಯಲ್ಲೂ ಮತ್ತೊಂದಿಷ್ಟು ಬಿಲಿಯನ್ ನಕ್ಷತ್ರಗಳು, ಗ್ರಹಗಳು ಕೂಡ ಹರಡಿವೆ. ಈ ಸಮೂಹದಲ್ಲಿ ಸೌರಮಂಡಲವೂ ಒಂದು. ಹೀಗೆ ಬ್ರಹ್ಮಾಂಡದಲ್ಲಿ ನಕ್ಷತ್ರಗಳಿಗೆ ವಿಶೇಷ ಸ್ಥಾನಮಾನವಿದೆ. ನಕ್ಷತ್ರಗಳ ಹುಟ್ಟು ಹಾಗೂ ಬೆಳವಣಿಗೆ ಕೋಟಿ ಕೋಟಿ ವರ್ಷಗಳ ಪ್ರಕ್ರಿಯೆ. ಅದು ದಿಢೀರ್ ಎಂದು ಸಂಭವಿಸುವುದಿಲ್ಲ. ದಟ್ಟ ಧೂಳಿನ ಮೋಡಗಳು ಗುರತ್ವದ ಬಲದಿಂದ ಒಂದುಗೂಡಿ, ನಂತರ ಮೋಡದ ಒಳಗೆ ಗುರತ್ವದ ಬಲದಿಂದ ಶಾಖ ಏರ್ಪಡುತ್ತದೆ.

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಬಿಸಿ ಹೆಚ್ಚಾಗುತ್ತಾ ಸಾಗಿ ಬೈಜಿಕ ಸಮ್ಮಿಲ ಕ್ರಿಯೆ ಆರಂಭವಾಗುತ್ತದೆ. ಇದನ್ನ ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿ ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಅವಲಂಬಿಸಿರುತ್ತದೆ.

ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!ಯುರೇಕಾ..! ಇಲ್ಲಿ ಎಲ್ಲವೂ ಉಲ್ಟಾ, ನಕ್ಷತ್ರಕ್ಕೂ ಮೊದಲೇ ಹುಟ್ಟಿತು ಗ್ರಹ..!

English summary
Researchers at IIT Guwahati, have found important clues to understand the death of massive stars and have also revealed the problems with the existing models
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X