ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಸಲಕ್ಕೂ ಮೋದಿಗೆ ಗಾದಿ ಸಿಕ್ಕರೆ ಮೊದಲ ಅವಧಿಯ ತಪ್ಪುಗಳು ಸರಿ ಹೋಗಬಹುದೇ?

By ಅನಿಲ್ ಆಚಾರ್
|
Google Oneindia Kannada News

Recommended Video

ಮೋದಿ ಮುಂದಿದೆ ಸಾಲು ಸಾಲು ಸವಾಲು..! | Oneindia kannada

ಮತದಾನೋತ್ತರ ಸಮೀಕ್ಷೆಗಳೇ ಫಲಿತಾಂಶ ಅಲ್ಲ. ನಿಮಗೆ ಈಗಾಗಲೇ ಗೊತ್ತಾಗಿರುತ್ತದೆ, ಈಗ ಪ್ರಸ್ತಾವ ಮಾಡುತ್ತಿರುವುದು ಅದೇ ಲೋಕಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಬಗ್ಗೆಯೇ. ಏಕೆಂದರೆ, ಕಳೆದ ನಾಲ್ಕು ಲೋಕಸಭೆ ಚುನಾವಣೆಯಲ್ಲಿ ಎರಡು ಬಾರಿ ಸಮೀಕ್ಷೆಯನ್ನು ಮೀರಿ ಜನರು ತಮ್ಮ ತೀರ್ಪು ನೀಡಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕೇಂದ್ರದಲ್ಲಿ ಸರಕಾರ ರಚನೆ ಬಗ್ಗೆ ಎರಡು ಸಾಧ್ಯತೆ ಏನೆಂದರೆ, ಒಂದೋ ಬಿಜೆಪಿ ಸ್ವತಂತ್ರವಾಗಿ ಸರಕಾರ ರಚನೆ ಮಾಡುವಷ್ಟು ಮತ ಪಡೆಯಬಹುದು. ಇಲ್ಲದಿದ್ದರೆ ಇತರ ಮಿತ್ರ ಪಕ್ಷಗಳ ನೆರವಿನಿಂದ ಬಿಜೆಪಿ ಸರಕಾರ ರಚಿಸಬಹುದು ಎಂಬುದು ಬಹುತೇಕ ಸಮೀಕ್ಷೆಗಳು ಹೇಳುತ್ತಿವೆ. ಮತ್ತೊಂದು ಅವಧಿಗೆ ನರೇಂದ್ರ ಮೋದಿ ಅವರೇ ಪ್ರಧಾನಿ ಆಗುವ ಸಾಧ್ಯತೆ ಹೆಚ್ಚಿದೆ.

ಮೋದಿಗಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆಮೋದಿಗಾಗಿ ರಾಜ್ಯ ಬಿಜೆಪಿ ಕಚೇರಿಯಲ್ಲಿ ವಿಶೇಷ ಪೂಜೆ

ಹಾಗೊಂದು ವೇಳೆ ಎರಡನೇ ಅವಧಿಗೆ ಮೋದಿಗೆ ಅವಕಾಶ ಸಿಕ್ಕರೆ ಅವರ ಸಾಧನೆಯನ್ನು ಅಲ್ಲಗಳೆಯಲು, ಕಡಿಮೆ ಮಾಡಲು ಆಗುವುದಿಲ್ಲ. ಜಿಡಿಪಿ ಒಂದನ್ನು ಬಿಟ್ಟು, ಉಳಿದೆಲ್ಲ ಮಾಪಕಗಳು ದೇಶದ ಹೆಜ್ಜೆಯನ್ನು ಇಳಿಜಾರಿನ ಕಡೆಗೆ ತೋರಿಸುವಾಗಲೂ ಇಂಥದ್ದೊಂದು ಸಾಧನೆ ಮಾಡುವುದು ಸಲೀಸಲ್ಲ.

If Modi become PM for second time, more bold steps to take

ಗ್ರಾಮೀಣ ಆರ್ಥಿಕತೆಗೆ ದೊಡ್ಡ ಹೊಡೆತ
ಸರಕಾರದ ಆರ್ಥಿಕ ಸಾಧನೆ ಹೊರತಾಗಿಯೂ ಜನರ ಆಯ್ಕೆಗೆ ನಾನಾ ಕಾರಣಗಳು ಇರುತ್ತವೆ ಎಂಬುದಕ್ಕೆ ಸಾಕ್ಷ್ಯ ಸಿಕ್ಕಂತಾಗುತ್ತದೆ. ಗ್ರಾಮೀಣ ಆರ್ಥಿಕತೆಯ ಹೊಡೆತ, ಉದ್ಯೋಗ ಸೃಷ್ಟಿಯಲ್ಲಿ ವೈಫಲ್ಯ ಇಂಥ ವಿಚಾರಗಳನ್ನು ವಿಪಕ್ಷಗಳಿಗೆ ಜನರ ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಾಗಿಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಮೇ ಇಪ್ಪತ್ಮೂರನೇ ತಾರೀಕಿನ ಫಲಿತಾಂಶ ಏನೇ ಆಗಿರಬಹುದು. ಮೋದಿ ಅವರ ಆಡಳಿತಾವಧಿಯಲ್ಲಿ ನೀಡಿದ ಆಶ್ವಾಸನೆಗಳು ಈಡೇರಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮೂವತ್ತು ವರ್ಷಗಳ ನಂತರ ಇಷ್ಟು ದೊಡ್ಡ ಮಟ್ಟದ ಬಹುಮತ ಬಂದ ನಂತರ ಎಷ್ಟು ಪ್ರಮಾಣದ ಕೆಲಸ ಮಾಡಬೇಕಿತ್ತೊ ಅಷ್ಟು ಕೆಲಸ ಮಾಡಿಲ್ಲ ಎಂಬುದು ಅಂಗೈ ಗೆರೆಯಷ್ಟೇ ಸ್ಪಷ್ಟ.

ರುದ್ರರಮಣೀಯ ಹಿಮಾಲಯದಲ್ಲಿ ಮೋದಿ ಧ್ಯಾನದ ಮತ್ತೊಂದು ಚಿತ್ರರುದ್ರರಮಣೀಯ ಹಿಮಾಲಯದಲ್ಲಿ ಮೋದಿ ಧ್ಯಾನದ ಮತ್ತೊಂದು ಚಿತ್ರ

ಹಾಗಂತ ಬಿಜೆಪಿ ನೇತೃತ್ವದ ಸರಕಾರ ಪ್ರಯತ್ನವನ್ನೇ ಪಟ್ಟಿಲ್ಲ ಎನ್ನುವುದು ತಪ್ಪಾಗುತ್ತದೆ. ಏಕೆಂದರೆ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿನ ಸವಾಲು, ಕೌಶಲ ಕಡಿಮೆ ಇರುವ ಜನಸಂಖ್ಯೆ, ಸ್ಪರ್ಧಾತ್ಮಕ ಅಲ್ಲದ ರಫ್ತು ಇತರೆ ಸವಾಲುಗಳು ಈ ಸರಕಾರಕ್ಕೆ ಇತ್ತು. ಇವುಗಳಲ್ಲಿ ಹಲವು ಸಮಸ್ಯೆ ಸರಿಪಡಿಸಲು ಯತ್ನಿಸಿದ್ದು, ಅದು ತುಂಬ ದೂರಕ್ಕೂ ಹಾಗೂ ವೇಗಕ್ಕೂ ತಲುಪಿದ್ದು ಗಮನಕ್ಕೆ ಬರಲೇ ಇಲ್ಲ.

ಜಿಎಸ್ ಟಿ ಜಾರಿ ತುಂಬ ಸಂಕೀರ್ಣವಾದುದು
ಜಿಎಸ್ ಟಿ ಜಾರಿಯನ್ನು ಸರಕಾರದ ಸಾಧನೆ ಎನ್ನಬಹುದು. ಆದರೆ ಅದರ ಜಾರಿ ಬಗ್ಗೆ ಆಕ್ಷೇಪಗಳಿವೆ. ಅದರ ಸಂಕೀರ್ಣತೆ ಬಗ್ಗೆ ಆಕ್ರೋಶ ಇದೆ. ಇನ್ನು ಹಲವು ಕಾನೂನು ಪರಿಚಯಿಸಲಾಯಿತು. ದಿವಾಳಿ ಕಾಯ್ದೆ ಅದರಲ್ಲಿ ಮುಖ್ಯವಾದದ್ದು. ಆದರೆ ಅದಿನ್ನೂ ಪರಿಣಾಮಕಾರಿಯಾಗಿಲ್ಲ.

ಮೋದಿ ಅವರು ಮುಂದಿನ ಅವಧಿಗೂ ಪ್ರಧಾನಿ ಆಗುವುದಾದರೆ ಭಾರತದ ಶಿಕ್ಷಣ ವ್ಯವಸ್ಥೆ ಬದಲಾವಣೆಗೆ ಮುಖ್ಯವಾಗಿ ಯತ್ನಿಸಬೇಕು. ಜತೆಗೆ ಕೌಶಲ ಹೆಚ್ಚಿಸಲು ಗಮನ ಹರಿಸಬೇಕು. ಮೊದಲ ಅವಧಿಯಲ್ಲಿ ಭಾರತದ ಆರ್ಥಿಕತೆ ಸಲುವಾಗಿ ಏನು ಮಾಡಿದರೋ ಅದಕ್ಕಿಂತ ಹೆಚ್ಚು ಗಂಭೀರವಾದ, ಪರಿಣಾಮಕಾರಿಯಾದ ಕೆಲಸ ಮಾಡಬೇಕಿದೆ.

English summary
Exit poll: If Modi become PM for second time, more bold steps to take why? At first term his government decision not reached expectation. So, now what will be the expectation?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X