ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲ್ಯಾಕ್, ವೈಟ್, ಯೆಲ್ಲೋ ಫಂಗಸ್... ಬಣ್ಣಗಳ ಬಗ್ಗೆ ಏಮ್ಸ್ ಎಚ್ಚರಿಕೆ

|
Google Oneindia Kannada News

ನವದೆಹಲಿ, ಮೇ 25: ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಅಥವಾ ಚೇತರಿಸಿಕೊಂಡಿರುವ ರೋಗಿಗಳಲ್ಲಿ ಈಚೆಗೆ ಬ್ಲ್ಯಾಕ್ ಫಂಗಸ್ ಸಮಸ್ಯೆ ಕಾಣಿಸಿಕೊಂಡಿದ್ದು, ದೇಶದಲ್ಲಿ ಪ್ರಕರಣಗಳು ಹೆಚ್ಚಾಗುತ್ತಿವೆ. ಬ್ಲ್ಯಾಕ್‌ ಫಂಗಸ್ ನಂತರ ವೈಟ್ ಫಂಗಸ್ ಪ್ರಕರಣದ ಮಾತು ಕೇಳಿಬಂದಿದ್ದು, ಸೋಮವಾರ ಯೆಲ್ಲೋ ಫಂಗಸ್ ಗೋಚರಿಸುವುದಾಗಿಯೂ ವೈದ್ಯರು ತಿಳಿಸಿದ್ದಾರೆ.

ಆದರೆ ಮ್ಯೂಕರ್ ಮೈಕೋಸಿಸ್ ಸಾಮಾನ್ಯ ಶಿಲೀಂಧ್ರ ಸೋಂಕು. ಶಿಲೀಂಧ್ರ ಸೋಂಕನ್ನು ಬಣ್ಣಗಳಿಂದ ಗುರುತಿಸುವ ಬದಲು ಹೆಸರುಗಳಿಂದ ಗುರುತಿಸಿ. ಇದರಿಂದ ಜನರಲ್ಲಿ ಗೊಂದಲ ಆಗುವುದು ತಪ್ಪುತ್ತದೆ ಎಂದು ದೆಹಲಿಯ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ ಎಚ್ಚರಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಹಮ್ಮಿಕೊಂಡಿದ್ದ ಮಾಧ್ಯಮ ಗೋಷ್ಠಿಯಲ್ಲಿ ಅವರು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಆಮ್ಲಜನಕ ಸಿಲಿಂಡರ್‌ನಲ್ಲೇ ಅಡಗಿದೆಯಾ ಬ್ಲ್ಯಾಕ್‌ ಫಂಗಸ್?; ವೈದ್ಯರು ಬಿಚ್ಚಿಟ್ಟ ಆತಂಕಕಾರಿ ಮಾಹಿತಿಆಮ್ಲಜನಕ ಸಿಲಿಂಡರ್‌ನಲ್ಲೇ ಅಡಗಿದೆಯಾ ಬ್ಲ್ಯಾಕ್‌ ಫಂಗಸ್?; ವೈದ್ಯರು ಬಿಚ್ಚಿಟ್ಟ ಆತಂಕಕಾರಿ ಮಾಹಿತಿ

 ಸೋಂಕನ್ನು ಬಣ್ಣಗಳಿಂದ ಗುರುತಿಸಬೇಡಿ

ಸೋಂಕನ್ನು ಬಣ್ಣಗಳಿಂದ ಗುರುತಿಸಬೇಡಿ

ಶಿಲೀಂಧ್ರ ಸೋಂಕನ್ನು ಬಣ್ಣಗಳ ಮೂಲಕ ಗುರುತಿಸುತ್ತಿರುವುದು ಜನರಲ್ಲಿ ಗೊಂದಲ ಉಂಟು ಮಾಡಿದೆ. "ಕಪ್ಪು ಶಿಲೀಂಧ್ರ", "ಬಿಳಿ ಶಿಲೀಂಧ್ರ" ಹೀಗೆ ಬಣ್ಣಗಳೊಂದಿಗೆ ಸೋಂಕನ್ನು ಗುರುತಿಸದಿರುವುದು ಉತ್ತಮ. ಈ ರೀತಿ ಬಳಸುತ್ತಿರುವುದು ಗೊಂದಲಗಳಿಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.

 ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ 3 ರೀತಿಯ ಸೋಂಕಿನ ಸಾಧ್ಯತೆ

ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ 3 ರೀತಿಯ ಸೋಂಕಿನ ಸಾಧ್ಯತೆ

ಕ್ಯಾಂಡಿಡಾ, ಆಸ್ಪರ್‌ಗಿಲೋಸಿಸ್, ಕ್ರಿಪ್ಟೊಕೊಕಸ್, ಹಿಸ್ಟೊಪ್ಲಾಸ್ಮೋಸಿಸ್ ಎಂಬ ಹಲವು ವಿಧದ ಶಿಲೀಂದ್ರ ಸೋಂಕುಗಳಿವೆ. ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಮ್ಯೂಕರ್‌ಮೈಕೋಸಿಸ್, ಕ್ಯಾಂಡಿಡಾ ಹಾಗೂ ಆಸ್ಪರ್‌ಗಿಲೋಸಿಸ್ ಸೋಂಕು ಕಂಡುಬರುತ್ತದೆ ಎಂದು ಮಾಹಿತಿ ನೀಡಿದರು. ಈ ಶಿಲೀಂಧ್ರ ಸೋಂಕುಗಳದ್ದು ಒಂದೊಂದು ಲಕ್ಷಣಗಳಿವೆ ಎಂದು ವಿವರಿಸಿದ ಅವರು, ಮಧುಮೇಹಿಗಳಲ್ಲಿ ಹಾಗೂ ಹೆಚ್ಚಿನ ಸ್ಟೆರಾಯ್ಡ್ ಬಳಕೆ ಮಾಡಿದವರಲ್ಲಿ ಈ ಸಮಸ್ಯೆ ಕಾಣಿಸುತ್ತದೆ ಎಂದು ಪುನರುಚ್ಚರಿಸಿದ್ದಾರೆ.

Yellow Fungus : ಬ್ಲ್ಯಾಕ್‌, ವೈಟ್‌ ಬಳಿಕ ಕಾಣಿಸಿಕೊಂಡಿದೆ ಎಲ್ಲೋ ಫಂಗಸ್‌- ಇಲ್ಲಿದೆ ಬಹುಮುಖ್ಯ ಮಾಹಿತಿYellow Fungus : ಬ್ಲ್ಯಾಕ್‌, ವೈಟ್‌ ಬಳಿಕ ಕಾಣಿಸಿಕೊಂಡಿದೆ ಎಲ್ಲೋ ಫಂಗಸ್‌- ಇಲ್ಲಿದೆ ಬಹುಮುಖ್ಯ ಮಾಹಿತಿ

 ಆಕ್ಸಿಜನ್ ಥೆರಪಿ ಶಿಲೀಂಧ್ರ ಸೋಂಕಿಗೆ ಕಾರಣವಲ್ಲ

ಆಕ್ಸಿಜನ್ ಥೆರಪಿ ಶಿಲೀಂಧ್ರ ಸೋಂಕಿಗೆ ಕಾರಣವಲ್ಲ

ಹಲವರು ಆಮ್ಲಜನಕ ಬೆಂಬಲಿತದಲ್ಲಿದ್ದ ಕೊರೊನಾ ರೋಗಿಗಳಲ್ಲಿಯೇ ಈ ಶಿಲೀಂಧ್ರ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ ಈ ಶಿಲೀಂಧ್ರ ಸೋಂಕಿಗೂ, ಆಮ್ಲಜನಕ ಚಿಕಿತ್ಸೆಗೂ ಯಾವುದೇ ಸಂಬಂಧವಿಲ್ಲ ಎಂದು ಗುಲೇರಿಯಾ ಹೇಳಿದ್ದಾರೆ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರಿಗೂ ಮ್ಯೂಕರ್ ಮೈಕೋಸಿಸ್ ತಗುಲಿದೆ. ಹೀಗಾಗಿ ಆಮ್ಲಜನಕ ಚಿಕಿತ್ಸೆಗೂ ಸೋಂಕಿಗೂ ಸಂಬಂಧವಿರುವ ಯಾವುದೇ ಸಾಕ್ಷ್ಯವಿಲ್ಲ ಎಂದು ತಿಳಿಸದಿ್ದಾರೆ.

 ಆಸ್ಪತ್ರೆಗಳಿಗೆ ಇದು ಸವಾಲಿನ ಕೆಲಸ

ಆಸ್ಪತ್ರೆಗಳಿಗೆ ಇದು ಸವಾಲಿನ ಕೆಲಸ

ಶಿಲೀಂಧ್ರ ನಿವಾರಣಾ ಚಿಕಿತ್ಸೆ ಹಲವು ವಾರಗಳ ಕಾಲ ಹಿಡಿಯುತ್ತದೆ. ಹಾಗಾಗಿ ಆಸ್ಪತ್ರೆಗಳಿಗೆ ಇದು ಸವಾಲಿನ ಕಾರ್ಯವಾಗಿದೆ. ಕೊರೊನಾ ಪಾಸಿಟಿವ್ ರೋಗಿಗಳಲ್ಲಿ ಮ್ಯೂಕರ್ ಮೈಕೋಸಿಸ್ ಹರಡುವ ಸಾಧ್ಯತೆ ಇದ್ದು, ಅವರನ್ನು ಪ್ರತ್ಯೇಕ ಆಸ್ಪತ್ರೆಯ ವಾರ್ಡ್ ಗಳಲ್ಲಿ ಇಡಬೇಕಾಗುತ್ತದೆ. ಕೆಲವೊಮ್ಮೆ ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಹಾಗೂ ಮ್ಯೂಕರ್ ಮೈಕೋಸಿಸ್ ಗೆ ಶಸ್ತ್ರಚಿಕಿತ್ಸೆ ಮಾಡುವುದರಿಂದ ಕೊರೊನಾ ರೋಗಿಗಳ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರಬಹುದು ಎಂದು ಹೇಳಿದ್ದಾರೆ.
ಮಧುಮೇಹ ರೋಗಿಗಳು ಸೂಕ್ತ ಸ್ವಚ್ಛತೆ ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ. ಅಂತಹ ರೋಗಿಗಳಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಕ್ಸಿಜನ್ ಸಾಂದ್ರಕಗಳನ್ನು ಬಳಸುವಂತಹವರು ನಿಯಮಿತವಾಗಿ ಹ್ಯುಮಿಡಿ ಫೈಯರ್ ಗಳನ್ನು ಆಗಾಗ್ಗೆ ಸ್ವಚ್ಛಪಡಿಸಬೇಕು ಎಂದು ಸಲಹೆ ನೀಡಿದ್ದಾರೆ.

English summary
AIIMS director Randeep Guleria said it is better to identify mucormycosis by its name rather than by the colour as colors can create confusion,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X