• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿದ್ದರಾಮಯ್ಯನವರನ್ನು ನಾನು ಎಲ್ಲೂ 'ಕುಡುಕ' ಎಂದಿಲ್ಲ, ನನ್ನ ತಪ್ಪೇನಿದೆ? ಸಿ.ಟಿ.ರವಿ

|
   CT Ravi oneindia exclusive interview

   ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿರೋಧ ಪಕ್ಷಗಳು ಮಾಡುವ, ಬಿಜೆಪಿ ವಿರುದ್ದದ ಟ್ವೀಟ್ ಗಳಿಗೆ, ತಪ್ಪದೇ ತಿರುಗೇಟು ನೀಡುವವರಲ್ಲಿ ಸಚಿವ ಸಿ.ಟಿ.ರವಿ ಕೂಡಾ ಒಬ್ಬರು.

   ಕೆಲವು ದಿನಗಳ ಹಿಂದೆ, ಸಿದ್ದರಾಮಯ್ಯ ಮತ್ತು ಸಿ.ಟಿ.ರವಿ ನಡುವಿನ ಟ್ವೀಟ್ ವಾರ್ ಗೆ ಸಂಬಂಧ ಪಟ್ಟಂತೆ, "ಕೆಲವರು ಸುಮ್ಮನಿರುತ್ತಾರೆ, ಆದರೆ, ನನ್ನದು ನೇರನೇರಾ ಹೇಳುವ ಸ್ವಭಾವ" ಎಂದು ಸಚಿವರು ಹೇಳಿದ್ದಾರೆ.

   50ಸಾವಿರ ಅಂತರದಿಂದ ಗೆಲ್ಲುತ್ತೇನೆ: ಬಿ.ಸಿ.ಪಾಟೀಲ್ ಗೆಲುವಿನ ಲೆಕ್ಕಾಚಾರ ಹೀಗೆ

   'ಒನ್ ಇಂಡಿಯಾ ಕನ್ನಡ'ಕ್ಕೆ ನೀಡಿದ ಸಂದರ್ಶನದಲ್ಲಿ ಕನ್ನಡ, ಸಂಸ್ಕೃತಿ, ಸಕ್ಕರೆ ಮತ್ತು ಪ್ರವಾಸೋದ್ಯಮ ಸಚಿವರಾಗಿರುವ ಸಿ.ಟಿ.ರವಿ ಹಲವು ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ. ಸಂದರ್ಶನದ ಪೂರ್ಣ ವಿಡಿಯೋ

   ಉಪ ಚುನಾವಣೆ: 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್

   'ನಿಮಗೂ ಮತ್ತು ಸಿದ್ದರಾಮಯ್ಯನವರಿಗೂ ಆಗಿ ಬರುವುದಿಲ್ಲವೇ" ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ರವಿ, ನಾವಿಬ್ಬರೂ ಚೆನ್ನಾಗಿದ್ದೇವೆ. ನಮ್ಮ ನಡುವೆ ವೈಯಕ್ತಿಕ ಸಮಸ್ಯೆಗಳೇನೂ ಇಲ್ಲ" ಎಂದಿದ್ದಾರೆ. ಮುಂದುವರಿಯುತ್ತಾ, ಸಂದರ್ಶನದಲ್ಲಿ ಈ ಪ್ರಶ್ನೆಗೆ ಸಚಿವರು ಉತ್ತರಿಸಿದ್ದು ಹೀಗೆ..

   ನನಗೂ ಸಿದ್ದರಾಮಯ್ಯನವರಿಗೂ ಏನೂ ಸಮಸ್ಯೆಯಿಲ್ಲ

   ನನಗೂ ಸಿದ್ದರಾಮಯ್ಯನವರಿಗೂ ಏನೂ ಸಮಸ್ಯೆಯಿಲ್ಲ

   "ನನಗೂ ಸಿದ್ದರಾಮಯ್ಯನವರಿಗೂ ಏನೂ ಸಮಸ್ಯೆಯಿಲ್ಲ. ಇನ್ನೊಬ್ಬರನ್ನು ದ್ವೇಷ ಮಾಡುವ ಸ್ವಭಾವ ನನ್ನದಲ್ಲ. ಜೊತೆಗೆ, ಇದನ್ನು ನನ್ನ ತಂದೆ, ತಾಯಿ ನನಗೆ ಕಲಿಸಿಕೊಟ್ಟಿಲ್ಲ. ನಮ್ಮ ಪಕ್ಷವೂ ಇದನ್ನು ಹೇಳಿಕೊಟ್ಟಿಲ್ಲ. ಆದರೆ, ಪಕ್ಷದ ವಿಚಾರಕ್ಕೆ ಸಂಬಂಧಿಸಿದಂತೆ, ಅವರು ಪ್ರಶ್ನಿಸಿದರೆ ಸುಮ್ಮನಿರುವ ಜಾಯಮಾನ ನನ್ನದಲ್ಲ. ನನ್ನದು ಏನಿದ್ದರೂ ವಿಚಾರಕ್ಕೆ ಸಂಬಂಧಪಟ್ಟ ವಿರೋಧ" ಎಂದು ಸಚಿವ ರವಿ ಹೇಳಿದ್ದಾರೆ.

   ಇತ್ತೀಚೆಗೆ ನನ್ನನ್ನು ಟೀಕಿಸುತ್ತಾ, ವೈಯಕ್ತಿಕ ಮಟ್ಟಕ್ಕೆ ಬಂದರು

   ಇತ್ತೀಚೆಗೆ ನನ್ನನ್ನು ಟೀಕಿಸುತ್ತಾ, ವೈಯಕ್ತಿಕ ಮಟ್ಟಕ್ಕೆ ಬಂದರು

   "ಕೆಲವರು ಸಿದ್ದರಾಮಯ್ಯನವರು ಏನಾದರೂ ಹೇಳಿದರೆ, ರಾಜಿ ಮಾಡಿಕೊಂಡು ಸುಮ್ಮನಿರುತ್ತಾರೆ. ನನ್ನದು ಆ ಸ್ವಭಾವವಲ್ಲ. ಅವರು ಇತ್ತೀಚೆಗೆ ನನ್ನನ್ನು ಟೀಕಿಸುತ್ತಾ, ವೈಯಕ್ತಿಕ ಮಟ್ಟಕ್ಕೆ ಬಂದರು, ಅದಕ್ಕೆ ನಾನು ಉತ್ತರ ಕೊಡದೇ ಇರಲಾದಿತೇ" ಎಂದು ಪ್ರಶ್ನಿಸಿರುವ ಸಿ,ಟಿ.ರವಿ, "ನನ್ನನ್ನು ಕುಡುಕ ಎನ್ನುವ ಅರ್ಥ ಬರುವ ರೀತಿಯಲ್ಲಿ ಮಾತನಾಡಿದರು. ಇದಕ್ಕೆ ನಾನು ಖಾರವಾಗಿ ಪ್ರತಿಕ್ರಿಯಿಸಿದ್ದೇನೆ" ಎಂದು ಸಚಿವರು ಸಂದರ್ಶನದಲ್ಲಿ ಹೇಳಿದರು.

   ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಿ.ಟಿ.ರವಿ ಕುಡಿಯುವುದಿಲ್ಲ ಎನ್ನುವುದು ಗೊತ್ತಿದೆ

   ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಿ.ಟಿ.ರವಿ ಕುಡಿಯುವುದಿಲ್ಲ ಎನ್ನುವುದು ಗೊತ್ತಿದೆ

   "ಚಿಕ್ಕಮಗಳೂರಿಗೆ ಬರಲಿ, ಸಣ್ಣಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸಿ.ಟಿ.ರವಿ ಕುಡಿಯುವುದಿಲ್ಲ ಎನ್ನುವುದು ಗೊತ್ತಿದೆ. ಅದೇ ರೀತಿ, ಮೈಸೂರಿನಲ್ಲಿ ಸಿದ್ದರಾಮಯ್ಯ ಕುಡಿತಾರೋ, ಇಲ್ಲವೋ ಎನ್ನುವುದು ಗೊತ್ತಿರುತ್ತದೆ. ಅವರವರ ಊರಿನವರಿಗೆ, ಅಲ್ಲಿನವರ ಸ್ವಭಾವ ಗೊತ್ತಿರುತ್ತದೆ. ನಾನೆಂದೂ ಸಿದ್ದರಾಮಯ್ಯನವರನ್ನು ಕುಡುಕ ಅಂದಿಲ್ಲ" ಎಂದು ಸಚಿವರು ಹೇಳಿದರು.

   ರಾತ್ರಿ ಹನ್ನೊಂದು ಗಂಟೆಗೆ ಬರ್ತಾರಾ, ಬೆಳಗ್ಗೆ ಐದು ಗಂಟೆಗೆ ಬರ್ತಾರಾ ಬರಲಿ

   ರಾತ್ರಿ ಹನ್ನೊಂದು ಗಂಟೆಗೆ ಬರ್ತಾರಾ, ಬೆಳಗ್ಗೆ ಐದು ಗಂಟೆಗೆ ಬರ್ತಾರಾ ಬರಲಿ

   'ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪರೀಕ್ಷೆ ಮಾಡಬೇಕು ಎಂದು ಹೇಳಿದರು. ಬರಲಿ, ರಾತ್ರಿ ಹನ್ನೊಂದು ಗಂಟೆಗೆ ಬರ್ತಾರಾ, ಬೆಳಗ್ಗೆ ಐದು ಗಂಟೆಗೆ ಬರ್ತಾರಾ ಬರಲಿ. ನಾನು ಹನ್ನೊಂದು ಗಂಟೆಗೆ, ಐದು ಗಂಟೆಗೆ ಏನು ಮಾಡುತ್ತೇನೆ ಎನ್ನುವುದು ನನಗೆ ಗೊತ್ತು. ಈ ಎರಡೂ ಹೊತ್ತಿನಲ್ಲಿ ಆಕ್ಟೀವ್ ಇದ್ದರೆ, ಎಲ್ಲರೂ ಕುಡಿಯೋಕೆ ಶುರು ಮಾಡುವುದು ಒಳ್ಳೆಯದು" ಎಂದು ಸಚಿವ ಸಿ.ಟಿ.ರವಿ ಸಂದರ್ಶನದಲ್ಲಿ ಹೇಳಿದ್ದಾರೆ.

   ಸಿದ್ದರಾಮಯ್ಯ ವರ್ಸಸ್ ಸಿ.ಟಿ.ರವಿ ವಾಗ್ದಾಳಿ

   ಸಿದ್ದರಾಮಯ್ಯ ವರ್ಸಸ್ ಸಿ.ಟಿ.ರವಿ ವಾಗ್ದಾಳಿ

   "ಅಧಿಕಾರ ಇಲ್ಲದಾಗ ಮಾನಸಿಕ ಕಾಯಿಲೆಯಿಂದ ನರಳುವವರು ಕಂಠಪೂರ್ತಿ ಕುಡಿದು ಕಾರು ಅಪಘಾತ ಮಾಡಿ ಅಮಾಯಕರನ್ನು ಸಾಯಿಸುತ್ತಾರೆ. ನಮ್ಮಂತಹವರು ರಾಜಕೀಯದ ಮಧ್ಯೆ ಬಿಡುವು ಮಾಡಿಕೊಂಡು ಇತಿಹಾಸ ಓದಿ, ಸತ್ಯ ತಿಳಿದುಕೊಂಡು ಮಾತಾಡುತ್ತೇವೆ" ಎನ್ನುವ ಟ್ವೀಟ್ ಅನ್ನು ಸಿದ್ದರಾಮಯ್ಯ ಈ ಹಿಂದೆ ಮಾಡಿದ್ದರು. ಅದಕ್ಕೆ, "ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಕೊಲೆ ಮಾಡಿದವರ ಕುರಿತು ನೀವು ಇಷ್ಟೊಂದು ಮಾತನಾಡುತ್ತಿರುವುದು ನೋಡಿದರೆ ಅವರು ನಿಮ್ಮ ಆಪ್ತ ಬಳಗವೇ ಇರಬೇಕು. ಟಿಪ್ಪು ಸುಲ್ತಾನ್ ಮತ್ತು ಔರಂಗಜೇಬ್ ಅಂತ ಮಹಾ ಕ್ರೂರಿಗಳ ಇತಿಹಾಸ ಓದುವ ನಡುವೆ ವಿದೇಶದಲ್ಲಿ ಕುಡಿದು ಸತ್ತವರ ಕುರಿತ ಸತ್ಯವನ್ನು ಸಹ ನೀವು ತಿಳಿದು ಮಾತನಾಡುತ್ತೀರಿ ಎಂದು ನಂಬಿದ್ದೇನೆ" ಎಂದು ಸಚಿವ ರವಿ ತಿರುಗೇಟು ನೀಡಿದರು.

   English summary
   I Never Said Opposition Leader Siddaramaiah Is Drunkard: Minister C T Ravi Statement During His Interview To Oneindia Kannada.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X