• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡ ಧ್ವಜ: ತನ್ನನ್ನು ಟೀಕಿಸಿದವರನ್ನು ಮಾತಿನಲ್ಲಿ ಹುರಿದು ಮುಕ್ಕಿದ ಸಿ.ಟಿ.ರವಿ

|
   CT Ravi oneindia exclusive interview

   "ನನ್ನನ್ನು ಕನ್ನಡ ದ್ರೋಹಿ ಅನ್ನುತ್ತಾರಲ್ಲಾ..ಇಷ್ಟು ದಿನ ಸುಮ್ಮನಿದ್ದವರು, ಈಗ ಕನ್ನಡ ಧ್ವಜ ಹಾರಿಸಬೇಕು ಎನ್ನುವವರನ್ನು ಏನು ಅನ್ನಬೇಕು. ಇವರ ಹೋರಾಟ, ಪ್ರತಿಭಟನೆ, ನನ್ನ ವಿರುದ್ದವೋ, ಅಥವಾ ಬಿಜೆಪಿಯ ವಿರುದ್ದವೋ", ಇದು ಸಿ.ಟಿ.ರವಿ ಹೇಳಿದ ಮಾತು.

   ಸಚಿವ ರವಿಯವರೇ ಹೇಳುವಂತೆ, ಈ ಬಾರಿಯ ರಾಜ್ಯೋತ್ಸವ ಅವರಿಗೆ ವಿಶೇಷ. ಕನ್ನಡ, ಸಂಸ್ಕೃತಿ ಇಲಾಖೆಯ ಸಚಿವರಾಗಿ, ಅವರ ಮೊದಲ ರಾಜ್ಯೋತ್ಸವ. ಕನ್ನಡಕ್ಕೆ ಪ್ರತ್ಯೇಕ ಧ್ವಜದ ಅವಶ್ಯಕತೆಯಿಲ್ಲ ಎನ್ನುವುದು ಬಿಜೆಪಿಯ ಕೆಲವು ಮುಖಂಡರ ನಿಲುವಾಗಿತ್ತು. (ಸಂದರ್ಶನದ ವಿಡಿಯೋ ಲಿಂಕ್)

   ಇದಕ್ಕೆ, ಕನ್ನಡಪರ ಸಂಘಟನೆಯಾದಿಯಾಗಿ ಭಾರೀ ವಿರೋಧವೂ ವ್ಯಕ್ತವಾಗಿತ್ತು. ಬೆಂಗಳೂರಿನಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ರಾಷ್ಟ್ರ ಮತ್ತು ಕನ್ನಡ ಧ್ವಜವನ್ನು ಹಾರಿಸಿದ್ದರು.

   ಸಿದ್ದರಾಮಯ್ಯನವರನ್ನು ನಾನು ಎಲ್ಲೂ 'ಕುಡುಕ' ಎಂದಿಲ್ಲ, ನನ್ನ ತಪ್ಪೇನಿದೆ? ಸಿ.ಟಿ.ರವಿ

   ಉಳಿದಂತೆ, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ರಾಷ್ಟ್ರಧ್ವಜವನ್ನು ಮಾತ್ರ ಹಾರಿಸಲಾಗಿತ್ತು. 'ಒನ್ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಸಚಿವ ಸಿ.ಟಿ.ರವಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಜೊತೆಗೆ, ತಮ್ಮನ್ನು ಟೀಕಿಸಿದವ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾರೆ.

   ಹಳದಿ, ಕೆಂಪು ಬಣ್ಣದ ಧ್ವಜ, ನಮ್ಮ ಸಾಂಸ್ಕೃತಿಕ ಧ್ವಜವಾಗಿತ್ತು

   ಹಳದಿ, ಕೆಂಪು ಬಣ್ಣದ ಧ್ವಜ, ನಮ್ಮ ಸಾಂಸ್ಕೃತಿಕ ಧ್ವಜವಾಗಿತ್ತು

   "ನನ್ನ ಮಾತು ಅತ್ಯಂತ ಸ್ಪಷ್ಟ. ನಾನು ಪ್ರತ್ಯೇಕ ಧ್ವಜ ಬೇಡ ಎಂದು ಹೇಳಿಲ್ಲ. ಹಳದಿ, ಕೆಂಪು ಬಣ್ಣದ ಧ್ವಜ, ನಮ್ಮ ಸಾಂಸ್ಕೃತಿಕ ಧ್ವಜವಾಗಿತ್ತು. ಮುಂದೆಯೂ ಇರುತ್ತದೆ. ಇದೇ ಶಬ್ದವನ್ನು ನಾನು ಬಳಸಿದ್ದೆ. ಧ್ವಜಸಂಹಿತೆಯ ಸಮಯದಲ್ಲಿ ಸಂವಿಧಾನ ತಜ್ಞರು ದೇಶಕ್ಕೆ ಒಂದೇ ಧ್ವಜವನ್ನು ಪ್ರಸ್ತಾವನೆ ಮಾಡಿರುವುದು" ಸಂದರ್ಶನದಲ್ಲಿ ಸಚಿವ ಸಿ.ಟಿ.ರವಿ.

   ದೇಶದ ಏಕೀಕರಣಕ್ಕೇ ಸವಾಲಾಗುತ್ತಿತ್ತು

   ದೇಶದ ಏಕೀಕರಣಕ್ಕೇ ಸವಾಲಾಗುತ್ತಿತ್ತು

   "ದೇಶದಲ್ಲಿ ಹಿಂದೆ 563 ಸಂಸ್ಥಾನಗಳಿದ್ದವು. ಅವತ್ತು ಎಲ್ಲಾ ಸಂಸ್ಥಾನಗಳಿಗೆ ಪ್ರತ್ಯೇಕ ಧ್ವಜ ನೀಡಿದ್ದರೆ, ದೇಶದ ಏಕೀಕರಣಕ್ಕೇ ಸವಾಲಾಗುತ್ತಿತ್ತು. ಆವತ್ತು, ಎಲ್ಲರೂ ತ್ರಿವರ್ಣ ಧ್ವಜದ ಅಡಿಯಲ್ಲಿ ಒಂದಾದರು. ಇದು ನನ್ನ ಮಾತಲ್ಲ, ಡಾ.ಅಂಬೇಡ್ಕರ್ ಅವರ ಮಾತಿದು. ಅದನ್ನು ನಾನು ಪುನರುಚ್ಚಿಸಿದ್ದೇನೆ" ಎಂದು ಸಚಿವ ರವಿ, ಸಂದರ್ಶನದಲ್ಲಿ ಹೇಳಿದ್ದಾರೆ.

   ಅಪಮಾನ ಎಂದರೆ ಏನೆಂದು ತಿಳಿದಿದೆಯಾ ಇವರಿಗೇ

   ಅಪಮಾನ ಎಂದರೆ ಏನೆಂದು ತಿಳಿದಿದೆಯಾ ಇವರಿಗೇ

   "ಇರೋ ಸತ್ಯವನ್ನು ನಾನು ಮಾತನಾಡಿದ್ದೇನೆ. ಕೆಲವರು ನನ್ನನ್ನು ಕನ್ನಡ ವಿರೋಧಿ ಎಂದು ಹೇಳಿದರು. ಧ್ವಜಕ್ಕೆ ಅಪಮಾನ ಮಾಡಿದ್ದೇನೆ ಎಂದು ನನ್ನ ವಿರುದ್ದ ತಿರುಗಿಬಿದ್ದರು. ಅಪಮಾನ ಎಂದರೆ ಏನೆಂದು ತಿಳಿದಿದೆಯಾ ಇವರಿಗೇ.. ಬಳಸೋಣ ಕನ್ನಡ, ಬೆಳೆಸೋಣ ಕನ್ನಡ ಎಂದು ಧ್ವಜ ಹಿಡಿದು ಕುಣಿದವನು ನಾನು" - ಸಿ.ಟಿ.ರವಿ.

   ಸಿದ್ದರಾಮಯ್ಯನವರು ಪ್ರತ್ಯೇಕ ಧ್ವಜದ ಪ್ರಸ್ತಾವನೆ ಮಾಡಿ ಕೇಂದ್ರ ಕ್ಕೆ ಕಳುಹಿಸಿದ್ದು ಯಾವಾಗ

   ಸಿದ್ದರಾಮಯ್ಯನವರು ಪ್ರತ್ಯೇಕ ಧ್ವಜದ ಪ್ರಸ್ತಾವನೆ ಮಾಡಿ ಕೇಂದ್ರ ಕ್ಕೆ ಕಳುಹಿಸಿದ್ದು ಯಾವಾಗ

   "ವಿರೋಧಕ್ಕಾಗಿ ವಿರೋಧ ಮಾಡುವವರದ್ದು ಒಂದು ವರ್ಗ, ಅರ್ಥ ಮಾಡಿಕೊಳ್ಲದೇ ವಿರೋಧ ಮಾಡುವವರದ್ದು ಇನ್ನೊಂದು ವರ್ಗ. ದೇಶಕ್ಕೆ ಸ್ವಾತಂತ್ರ್ಯ ಬಂದು, ಈವರೆಗೆ ಬಹುತೇಕ ಕಾಂಗ್ರೆಸ್ ಸರಕಾರವೇ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯನವರು ಪ್ರತ್ಯೇಕ ಧ್ವಜದ ಪ್ರಸ್ತಾವನೆ ಮಾಡಿ ಕೇಂದ್ರ ಕ್ಕೆ ಕಳುಹಿಸಿದ್ದು ಯಾವಾಗ" ಎಂದು ಸಚಿವ ರವಿ, ಪ್ರಶ್ನಿಸಿದ್ದಾರೆ.

   ತಾಯಿ ಭುವನೇಶ್ವರಿ ನನ್ನ ತಾಯಿ. ಕನ್ನಡ ನನಗೆ ರಕ್ತಗತವಾಗಿದೆ

   ತಾಯಿ ಭುವನೇಶ್ವರಿ ನನ್ನ ತಾಯಿ. ಕನ್ನಡ ನನಗೆ ರಕ್ತಗತವಾಗಿದೆ

   "ಸಿದ್ದರಾಮಯ್ಯನವರದ್ದು ಪ್ರಾಮಾಣಿಕ ಕಾಳಜಿಯಾಗಿರಲಿಲ್ಲ, ಅದೊಂದು ಡ್ರಾಮಾ.. ತಾಯಿ ಭುವನೇಶ್ವರಿ ನನ್ನ ತಾಯಿ. ಕನ್ನಡ ನನಗೆ ರಕ್ತಗತವಾಗಿದೆ. ಆಗ ವಿರೋಧಿಸಿದೇ ಇರುವವರು, ಈಗ ವಿರೋಧಿಸುತ್ತಾರೆ ಅಂದರೆ, ಅವರೆಲ್ಲಾ ಆಷಾಢಭೂತಿಗಳು ತಾನೇ. ಕನ್ನಡದ ಬಗ್ಗೆ ಮಾತನಾಡುವವರ ಮಕ್ಕಳು, ಹೋಗುತ್ತಿರುವುದು ಕಾನ್ವೆಂಟಿಗೆ, ಅವರೆಲ್ಲಾ ಬ್ರಿಟಿಷರಿಗೆ ಹುಟ್ಟಿದವರಲ್ಲಾ, ನಮ್ಮವರೇ..

   English summary
   I Never Said Separate Kannada Flag Not Required, Minister C T Ravi Interview To Oneindia.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
   X