ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲ್ಕು ದಿನಕ್ಕೆ ಒಂದಾನೆ ಸಾವು, ಭಾರತದಲ್ಲೇ ಹೀಗಾದ್ರೆ ಹೇಗೆ?

|
Google Oneindia Kannada News

ನವದೆಹಲಿ, ಜೂನ್.04: ಬಾಯಿ ತುಂಬಾ ಸುಟ್ಟ ಗಾಯ, ಪ್ರಾಣ ಹೋಗುವಷ್ಟು ನೋವು-ಸಂಕಟದ ನಡುವೆಯೂ ಆಕೆ ಯಾವೊಬ್ಬ ಮನುಷ್ಯರಿಗೂ ಹಾನಿ ಮಾಡಲಿಲ್ಲ. ತನ್ನ ನೋವಿನ ಕೋಪವನ್ನು ಗಿಡ-ಮರಗಳ ಮೇಲೂ ತೋರಿಸಲಿಲ್ಲ. ಯಾರೊಬ್ಬರಿಗೂ ಕೇಡು ಮಾಡಿದವಳಲ್ಲ ಆಕೆ.

Recommended Video

ಪೂಜೆಯಿಂದ ಪಲ್ಟನ್‌ಗೆ ಹೋಗೋ ದಾರೀಲಿ ನವಿಲು ಫುಲ್ ಗ್ರೂಪ್ ಡಾನ್ಸ್ | Peacock Dancing On Highway

ಪಾಪಿಗಳು ಇರಿಸಿದ್ದ ಪೈನಾಪಲ್ ಹಣ್ಣು ಪ್ರಾಣಕ್ಕೆ ಕುತ್ತು ತರುತ್ತದೆ ಎಂದು ಆಕೆ ಕನಸಿನಲ್ಲೂ ಎನಿಸಿರಲಿಲ್ಲ. ತಾನು ತಿಂದ ಪೈನಾಪಲ್ ನಲ್ಲಿ ತುಂಬಿದ್ದ ಪಟಾಕಿ ಸ್ಫೋಟಗೊಳ್ಳುತ್ತಿದ್ದಂತೆ ಸಾವಿನ ಸುಳಿವು ಅರಿತ ಆಕೆ ಮೌನವಾಗಿ ನೀರಿನ ನಡುವೆ ಬಂದು ನಿಂತು ಬಿಟ್ಟಳು.

 ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ ಪಟಾಕಿ ತುಂಬಿದ ಅನಾನಸ್ ತಿನ್ನಿಸಿದ ಪಾಪಿ ಜನರು:ನೀರಿನಲ್ಲೇ ನಿಂತು ಪ್ರಾಣ ಬಿಟ್ಟ ಗರ್ಭವತಿ ಆನೆ

ಇದು ಪುಟ್ಟ ಮರಿಯಾನೆಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದ ತಾಯಿ ಆನೆಯ ಮನಕಲುಕುವ ಸಾವಿನ ಕಥನ. ಮೇ.27ರಂದು ಪಟಾಕಿ ತುಂಬಿದ ಪೈನಾಪಲ್ ಸೇವಿಸಿದ ತುಂಬು ಗರ್ಭಿಣಿಯಾನೆ ಸಾವಿನ ಮನೆ ಸೇರಿತ್ತು. ಸಾವಿನ ನೋವು ತಾಳದೇ ಗರ್ಭಿಣಿ ಆನೆ ವೆಲ್ಲಿಯಾರ್ ನದಿಯಲ್ಲಿ ಮೌನವಾಗಿ ನಿಂತು ಬಿಟ್ಟಿತ್ತು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆ ಬಗ್ಗೆ ಪ್ರತಿಯೊಬ್ಬ ಭಾರತೀಯರು ಮರುಕ ವ್ಯಕ್ತಪಡಿಸುತ್ತಿದ್ದಾರೆ.

ಇಂಟರ್ ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಅಂಕಿ-ಅಂಶಗಳ ಪ್ರಕಾರ ಏಷ್ಯಾದಲ್ಲಿ 41,410 ರಿಂದ 52,345 ಕಾಡಾನೆಗಳಿವೆ. ಈ ಪೈಕಿ ಭಾರತದಲ್ಲೇ ಶೇಕಡಾ.60ರಷ್ಟು ಕಾಡಾನೆಗಳಿವೆ. ಆನೆಗಳ ತವರೂರು ಎನಿಸಿರುವ ಭಾರತದಲ್ಲಿಯೇ ಇದೀಗ ಮನುಷ್ಯನ ಕ್ರೌರ್ಯಕ್ಕೆ ಕಾಡಾನೆಗಳು ಬಲಿಯಾಗುತ್ತಿವೆ. ಏಕೆಂದರೆ ಪ್ರತಿವರ್ಷ ದೇಶದಲ್ಲಿ ಕನಿಷ್ಠ 80 ಕಾಡಾನೆಗಳು ಪ್ರಾಣ ಬಿಡುತ್ತಿವೆ. ಈ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ.

ಕೇರಳದಲ್ಲೇ ಎರಡನೇ ಕಾಡಾನೆ ಸಾವಿನ ಪ್ರಕರಣ

ಕೇರಳದಲ್ಲೇ ಎರಡನೇ ಕಾಡಾನೆ ಸಾವಿನ ಪ್ರಕರಣ

ಆಹಾರವನ್ನು ಅರಸಿ ಗ್ರಾಮದತ್ತ ವಲಸೆ ಬಂದ ಗರ್ಭಿಣಿ ಕಾಡಾನೆಗೆ ಪೈನಾಪಲ್ ಹಣ್ಣಿನಲ್ಲಿ ಪಟಾಕಿ ತುಂಬಿಟ್ಟು ಕೊಂದ ಘಟನೆ ನಡೆದು ಒಂದು ತಿಂಗಳು ಕಳೆದಿಲ್ಲ. ಅದೇ ರೀತಿಯಲ್ಲಿ ಮತ್ತೊಂದು ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿತ್ತು. ಕಳೆದ ಏಪ್ರಿಲ್ ತಿಂಗಳಿನಲ್ಲಿ ಪಥಂಪುರಂ ಅರಣ್ಯ ವಲಯದ ಪುನಾಲುರ್ ನಲ್ಲಿ ಗರ್ಭಿಣಿ ಹೆಣ್ಣಾನೆಗೆ ಪಟಾಕಿ ತುಂಬಿದ ಹಣ್ಣನ್ನು ನೀಡಲಾಗಿತ್ತು. ಪಟಾಕಿಯು ಬಾಯಲ್ಲೇ ಸ್ಫೋಟಗೊಂಡಿದ್ದರಿಂದ ಹೆಣ್ಣಾನೆಯ ಬಾಯಿಯಲ್ಲಿ ಸುಟ್ಟ ಗಾಯಗಳಾಗಿದ್ದು, ನಾಲಗೆಯು ಛಿದ್ರಗೊಂಡಿತ್ತು. ಚಿಕಿತ್ಸೆ ನೀಡಲಾಯಿತಾದರೂ ಆನೆಯನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದಲ್ಲಿ ಪ್ರತಿವರ್ಷ 80 ಕಾಡಾನೆಗಳು ಬಲಿ

ದೇಶದಲ್ಲಿ ಪ್ರತಿವರ್ಷ 80 ಕಾಡಾನೆಗಳು ಬಲಿ

ಮನುಷ್ಯರು ಹಾಗೂ ಕಾಡುಪ್ರಾಣಿಗಳ ನಡುವಿನ ಸಂಘರ್ಷವು ಹೆಚ್ಚಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಕಾಡಾನೆಗಳ ಸಾವಿನ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಭಾರತದಲ್ಲಿ ಪ್ರತಿವರ್ಷ ಕನಿಷ್ಠ 80 ಕಾಡಾನೆಗಳು ಸಾವಿನ ಮನೆ ಸೇರುತ್ತವೆ ಎಂದು ಅರಣ್ಯ ಇಲಾಖೆ ಅಂಕಿ-ಅಂಶಗಳು ಹೇಳುತ್ತಿವೆ. ಕಳೆದ ಎಂಟು ವರ್ಷದಲ್ಲಿ 655 ಕಾಡಾನೆಗಳು ಹೀಗೆ ಪ್ರಾಣ ಬಿಟ್ಟಿವೆ ಎಂದು ತಿಳಿದು ಬಂದಿದೆ.

ನಾಲ್ಕಾರು ಮಾರ್ಗಗಳಲ್ಲಿ ಕಾಡಾನೆಗಳು ಬಲಿ

ನಾಲ್ಕಾರು ಮಾರ್ಗಗಳಲ್ಲಿ ಕಾಡಾನೆಗಳು ಬಲಿ

ಸಾವಿಗೆ ಮಾರ್ಗಗಳು ನೂರಾರು. ಕಾಡಾನೆಗಳ ವಿಚಾರದಲ್ಲೂ ಈ ಮಾತು ಸುಳ್ಳಾಗುವುದಿಲ್ಲ. ಕಳೆದ ಎಂಟು ವರ್ಷದಲ್ಲಿ ಬಲಿಯಾದ 655 ಕಾಡಾನೆಗಳು ಒಂದೇ ರೀತಿಯಲ್ಲಿ ಪ್ರಾಣ ಬಿಟ್ಟಿಲ್ಲ. ಬದಲಿಗೆ ವಿದ್ಯುತ್ ಶಾಕ್, ರೈಲು ಅಪಘಾತ, ಬೇಟೆಗಾರರ ಕೈಗೆ ಸಿಕ್ಕು ಹಾಗೂ ವಿಷವನ್ನು ಉಂಡು ಕಾಡಾನೆಗಳು ಪ್ರಾಣ ಬಿಟ್ಟಿರುವುದೇ ಹೆಚ್ಚು ಎಂದು ಹೇಳಲಾಗುತ್ತಿದೆ.

ಐದೇ ವರ್ಷದಲ್ಲಿ 3,000 ಕಾಡಾನೆಗಳ ಸಂಖ್ಯೆ ಕುಸಿತ

ಐದೇ ವರ್ಷದಲ್ಲಿ 3,000 ಕಾಡಾನೆಗಳ ಸಂಖ್ಯೆ ಕುಸಿತ

2017ರಲ್ಲಿ ನಡೆಸಿದ ಕಾಡಾನೆಗಳ ಜನಗಣತಿಯ ಪ್ರಕಾರ ಭಾರತದ 23 ರಾಜ್ಯಗಳಲ್ಲಿ 27,312 ಕಾಡಾನೆಗಳಿವೆ. ಕಳೆದ 2012ರಲ್ಲಿ ನಡೆಸಿದ ಕಾಡಾನೆಗಳ ಗಣತಿಯ ಅಂಕಿ-ಅಂಶಗಳನ್ನು ಅವಲೋಕಿಸಿದಾಗ ಶೇ.10ರಷ್ಟು ಕಾಡಾನೆಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಐದು ವರ್ಷಗಳಲ್ಲಿ 3,000 ಕಾಡಾನೆಗಳು ಸಾವನ್ನಪ್ಪಿವೆ. 2012ರ ಗಣತಿಯಲ್ಲಿ 29,391 ರಿಂದ 30,711 ಕಾಡಾನೆಗಳಿದ್ದವು. ಅದಕ್ಕೂ ಮೊದಲು ನಡೆಸಿದ 2007ರ ಗಣತಿಯಲ್ಲಿ 27,657 ರಿಂದ 27,682 ಕಾಡಾನೆಗಳು ಇರುವ ಬಗ್ಗೆ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ.

ಒಂದು ತಿಂಗಳಲ್ಲಿ 7 ಕಾಡಾನೆಗಳು ಬಲಿ

ಒಂದು ತಿಂಗಳಲ್ಲಿ 7 ಕಾಡಾನೆಗಳು ಬಲಿ

ಭಾರತದ ಪರಿಸರ ಸಚಿವಾಲಯವು ನೀಡಿರುವ ಅಂಕಿ-ಅಂಶಗಳ ಪ್ರಕಾರ ದೇಶದಲ್ಲಿ ಕಳೆದ ಎಂಟು ತಿಂಗಳಿನಲ್ಲಿ 655 ಕಾಡಾನೆಗಳು ಬಲಿಯಾಗಿವೆ. ಇದನ್ನು ತಿಂಗಳು ಮತ್ತು ದಿನಕ್ಕೆ ಲೆಕ್ಕ ಹಾಕಿದಾಗ ಪ್ರತಿ ನಾಲ್ಕು ದಿನಕ್ಕೆ ಒಂದು ಕಾಡಾನೆಯು ಸಾವನ್ನಪ್ಪುತ್ತದೆ. ಒಂದು ತಿಂಗಳಿನಲ್ಲಿ ಏಳು ಕಾಡಾನೆಗಳು ಪ್ರಾಣ ಬಿಟ್ಟಿರುವುದು ಸ್ಪಷ್ಟವಾಗುತ್ತದೆ.

ಪರಿಸರ ಸಚಿವಾಲಯವು ನೀಡಿದ ಅಂಕಿ-ಅಂಶಗಳು

ಪರಿಸರ ಸಚಿವಾಲಯವು ನೀಡಿದ ಅಂಕಿ-ಅಂಶಗಳು

ಭಾರತೀಯ ಪರಿಸರ ಸಚಿವಾಲಯವು ಕಾಡಾನೆಗಳ ಸಾವಿನ ಸಂಖ್ಯೆ ಮತ್ತು ವಿಧಗಳ ಬಗ್ಗೆ ಪ್ರತ್ಯೇಕ ಅಂಕಿ-ಅಂಶಗಳನ್ನು ನೀಡಿದೆ. ಕಳೆದ 2009-10 ರಿಂದ 2016-17ರ ಎಂಟು ವರ್ಷಗಳ ಅವಧಿಯಲ್ಲಿ ನಾಲ್ಕು ವಿಧಗಳಲ್ಲಿ ಕಾಡಾನೆಗಳು ಪ್ರಾಣ ಬಿಟ್ಟಿವೆ. ವಿಷ ಆಹಾರ ಸೇವನೆಯಿಂದ 44 ಆನೆಗಳು ಬಲಿಯಾಗಿವೆ. ಬೇಟೆಗಾರರ ಕೈಗೆ ಸಿಕ್ಕು 101 ಕಾಡಾನೆಗಳು ಪ್ರಾಣ ಬಿಟ್ಟಿವೆ. ವಿದ್ಯುತ್ ಶಾಕ್ ನಿಂದಾಗಿ 390 ಕಾಡಾನೆಗಳು ಅಸುನೀಗಿವೆ. ಇನ್ನು ರೈಲು ಅಪಘಾತದಲ್ಲಿ 120 ಕಾಡಾನೆಗಳು ಮೃತಪಟ್ಟಿವೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ದೇಶದಲ್ಲಿ ಪ್ರತಿವರ್ಷ ಬಲಿಯಾದ ಕಾಡಾನೆಗಳ ಸಂಖ್ಯೆ

ದೇಶದಲ್ಲಿ ಪ್ರತಿವರ್ಷ ಬಲಿಯಾದ ಕಾಡಾನೆಗಳ ಸಂಖ್ಯೆ

ಭಾರತೀಯ ಪರಿಸರ ಸಚಿವಾಲಯವು ಕಳೆದ ಎಂಟು ವರ್ಷಗಳಲ್ಲಿ ಪ್ರತಿವರ್ಷ ಎಷ್ಟು ಕಾಡಾನೆಗಳು ಬಲಿಯಾಗಿವೆ ಎನ್ನುವ ಬಗ್ಗೆ ಪ್ರತ್ಯೇಕ ಅಂಕಿ-ಅಂಶಗಳನ್ನು ನೀಡಿದೆ. 2009-10ರಲ್ಲಿ 89 ಆನೆ, 2010-11ರಲ್ಲಿ 106 ಕಾಡಾನೆ, 2011-12ರಲ್ಲಿ 82 ಕಾಡಾನೆ, 2012-13ರಲ್ಲಿ 105 ಕಾಡಾನೆ, 2013-14ರಲ್ಲಿ 80 ಕಾಡಾನೆ, 2014-15ರಲ್ಲಿ 80ಕಾಡಾನೆ, 2015-16ರಲ್ಲಿ 69 ಕಾಡಾನೆ, 2016-17ರಲ್ಲಿ 44 ಕಾಡಾನೆಗಳು ಪ್ರಾಣ ಬಿಟ್ಟಿವೆ. ಈ ಪೈಕಿ 2016-17ರ ಅಂಕಿ-ಅಂಶಗಳು ಇನ್ನೂ ಪೂರ್ಣವಾಗಿ ಸಿಕ್ಕಿಲ್ಲ ಎಂದು ಪರಿಸರ ಸಚಿವಾಲಯವು ತಿಳಿಸಿದೆ.

ಕಾಡಾನೆ ಸಾವಿನ ಕುರಿತು ಅಂಕಿ-ಸಂಖ್ಯೆ ಖಚಿತವಲ್ಲ

ಕಾಡಾನೆ ಸಾವಿನ ಕುರಿತು ಅಂಕಿ-ಸಂಖ್ಯೆ ಖಚಿತವಲ್ಲ

2016-17ನೇ ಸಾಲಿನಲ್ಲಿನ ಕಾಡಾನೆಗಳ ಸಾವಿನ ಸಂಖ್ಯೆಯ ಬಗ್ಗೆ ಖಚಿತವಾದ ಅಂಕಿ-ಸಂಖ್ಯೆಗಳು ಇನ್ನೂ ಲಭ್ಯವಾಗಿಲ್ಲ. ಎಲ್ಲ ರಾಜ್ಯಗಳಲ್ಲಿ ಮೃತಪಟ್ಟ ಕಾಡಾನೆಗಳ ಸಂಖ್ಯೆಯು ಸಿಕ್ಕ ಬಳಿಕವಷ್ಟೇ ಸ್ಪಷ್ಟವಾದ ದತ್ತಾಂಶ ಸಿಗಲಿದೆ. 655 ಕಾಡಾನೆಗಳ ಸಾವಿನ ಸಂಖ್ಯೆಯು ಪರಿಪೂರ್ಣವಾಗಿಲ್ಲ. 2016-17ನೇ ಸಾಲಿನಲ್ಲಿ ಕಾಡಾನೆ ಸಾವಿನ ಸಂಖ್ಯೆಯ ಸಂಪೂರ್ಣ ಮಾಹಿತಿ ಸಿಕ್ಕಾಗ ಈ ಸಂಖ್ಯೆಯು ಮತ್ತಷ್ಟು ಏರಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಪರಿಸರ ಸಚಿವಾಲಯದ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಕಾಡಾನೆಗಳ ಸುರಕ್ಷತೆಗೆ 1992ರಲ್ಲೇ ಯೋಜನೆ ಸಿದ್ಧ

ಕಾಡಾನೆಗಳ ಸುರಕ್ಷತೆಗೆ 1992ರಲ್ಲೇ ಯೋಜನೆ ಸಿದ್ಧ

ಕಳೆದ 1992ರಲ್ಲಿ ಕಾಡಾನೆಗಳ ಸುರಕ್ಷತೆಗೆ ಯೋಜನೆಯೊಂದನ್ನು ರೂಪಿಸಲಾಯಿತು. ಅದರಂತೆ ಏಷ್ಯಾದಲ್ಲಿರುವ ಕಾಡಾನೆಗಳ ಕುರಿತು ಪ್ರತಿ ನಾಲ್ಕು ಅಥವಾ ಐದು ವರ್ಷಗಳಿಗೊಮ್ಮೆ ಗಣತಿ ಕಾರ್ಯ ಆರಂಭಿಸಲಾಯಿತು. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ ಅಂಕಿ-ಅಂಶಗಳ ಪ್ರಕಾರ ಏಷ್ಯಾದಲ್ಲಿ 41,410 ರಿಂದ 52,345 ಕಾಡಾನೆಗಳಿವೆ. ಈ ಪೈಕಿ ಭಾರತದಲ್ಲೇ ಶೇಕಡಾ.60ರಷ್ಟು ಕಾಡಾನೆಗಳಿವೆ.

English summary
Human Elephant Conflict Kills over 80 elephants every year in India on an average. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X