ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

UV ದೀಪಗಳೇ ಕೊರೊನಾ ವೈರಸ್ ನಿರ್ಮೂಲನೆಗೆ ಪರಿಣಾಮಕಾರಿ ಅಸ್ತ್ರ!

|
Google Oneindia Kannada News

ನವದೆಹಲಿ, ಮೇ.30: ಕೊರೊನಾ ವೈರಸ್. ಇದೊಂದು ಶಬ್ದವನ್ನು ಕೇಳಿದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಕೇವಲ ಭಾರತವಷ್ಟೇ ಅಲ್ಲ ಜಗತ್ತಿನಾದ್ಯಂತ ಸೃಷ್ಟಿಯಾಗಿದೆ. ಮಹಾಮಾರಿ ಕೊವಿಡ್-19 ಯಾವಾಗ ಯಾರಿಗೆ ಯಾವ ರೂಪದಲ್ಲಿ ಹೇಗೆ ಅಂಟಿಕೊಳ್ಳುತ್ತದೆ ಎನ್ನುವುದೇ ತಿಳಿಯುತ್ತಿಲ್ಲ.

Recommended Video

IPLನಲ್ಲಿ ಈವರೆಗೂ ಅತಿ ಹೆಚ್ಚು ಸ್ಟ್ರೈಕ್ ರೇಟ್ ಇರುವ ಬ್ಯಾಟ್ಸ್ಮನ್ ಯಾರು ? | Oneindia Kannada

ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 60 ಲಕ್ಷದ ಗಡಿ ದಾಟಿದೆ. ಭಾರತದಲ್ಲೂ 1.6 ಲಕ್ಷಕ್ಕಿಂತ ಹೆಚ್ಚು ಜನರಿಗೆ ಕೊವಿಡ್-19 ಸೋಂಕು ಪಕ್ಕಾ ಆಗಿದೆ. ಕರ್ನಾಟಕದಲ್ಲೂ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 2,700ಕ್ಕಿಂತ ಹೆಚ್ಚಾಗಿದೆ.

ಆದಿವಾಸಿಗಳು ಬೆಳೆದ ಸಸ್ಯ ಸಂಕುಲದಲ್ಲಿ ಸಿಕ್ಕಿತಾ ಕೊರೊನಾ ವೈರಸ್ ಔಷಧಿ?ಆದಿವಾಸಿಗಳು ಬೆಳೆದ ಸಸ್ಯ ಸಂಕುಲದಲ್ಲಿ ಸಿಕ್ಕಿತಾ ಕೊರೊನಾ ವೈರಸ್ ಔಷಧಿ?

ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ ಡೌನ್ ಮಾಡುವುದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಹೀಗೆ ಸಾಲು ಸಾಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಈ ಎಲ್ಲ ಕ್ರಮಗಳಿಗಿಂತಲೂ ನೇರಳಾತೀತ ಬೆಳಕು(UV Light) ಹೊರಸೂಸುವ ದೀಪಗಳ ಬಳಕೆಯು ಪರಿಣಾಮಕಾರಿ ಎಂದು ಹೇಳಲಾಗುತ್ತಿದೆ.

ಕೊವಿಡ್-19 ನಾಶಕ್ಕೆ ಎಲ್ಲ ನೇರಳಾತೀತ ದೀಪಗಳು ಬಳಕೆಯಾಗಲ್ಲ

ಕೊವಿಡ್-19 ನಾಶಕ್ಕೆ ಎಲ್ಲ ನೇರಳಾತೀತ ದೀಪಗಳು ಬಳಕೆಯಾಗಲ್ಲ

ನೇರಳಾತೀತ ದೀಪಗಳಲ್ಲಿ ಕ್ರಿಮಿನಾಶಕ ಮತ್ತು ಸೋಂಕು ಹರಡುವ ವೈರಸ್ ಗಳ ಶಕ್ತಿಯನ್ನು ಕುಗ್ಗಿಸುವಂತಾ ಶಕ್ತಿಯಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಎಲ್ಲ ಬಗೆಯ ನೇರಳಾತೀತ ದೀಪಗಳು ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. UV ದೀಪಗಳಲ್ಲಿನ ತರಂಗಾಂತರ ಶಕ್ತಿ, ಬೆಳಕಿನ ತೀವ್ರತೆ, ಮಾನ್ಯತೆಯ ಅವಧಿಯು ಸೂಕ್ಷ್ಮಾಣು ಜೀವಿಗಳ ವಿರುದ್ಧ ಎಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಪತ್ತೆ ಮಾಡುವ ಪ್ರಮುಖ ಅಂಶಗಳಾಗಿವೆ.

ಸುದ್ದಿಕ್ವಿಜ್ : 10 ಸರಳ ಪ್ರಶ್ನೆಗಳಿವೆ, ಸುಲಭವಾಗಿ ಉತ್ತರಿಸಿಸುದ್ದಿಕ್ವಿಜ್ : 10 ಸರಳ ಪ್ರಶ್ನೆಗಳಿವೆ, ಸುಲಭವಾಗಿ ಉತ್ತರಿಸಿ

ಕೊರೊನಾ ವೈರಸ್ ವಿನಾಶಕ್ಕೆ ಸೂರ್ಯನ ವಿಕಿರಣದ ಅಸ್ತ್ರ

ಕೊರೊನಾ ವೈರಸ್ ವಿನಾಶಕ್ಕೆ ಸೂರ್ಯನ ವಿಕಿರಣದ ಅಸ್ತ್ರ

ಸೂರ್ಯನಿಂದ ಹಾದು ಭೂಮಿಗೆ ತಲುಪುವ ವಿಕಿರಣಗಳನ್ನು ವಿಭಾಗಿಸಲಾಗಿದ್ದು, ನೇರಳಾತೀತ ಬೆಳಕಾಗಿ ವಿಭಾಗಿಸಲಾಗಿದೆ. ಇದರಲ್ಲೂ ಮೂರು ರೀತಿಯಲ್ಲಿ ಉಪ ವಿಭಾಗಗಳನ್ನು ಮಾಡಲಾಗಿದೆ. UV-A ವಿಭಾಗವು 320 ರಿಂದ 400 ನ್ಯಾನೋ ಮೀಟರ್, UV-B ವಿಭಾಗವು 280 ರಿಂದ 320 ನ್ಯಾನೋ ಮೀಟರ್ ಹಾಗೂ UV-C ವಿಭಾಗವು 200 ರಿಂದ 280 ನ್ಯಾನೋ ಮೀಟರ್ ಬೆಳಕನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

ಕೊರೊನಾ ವೈರಸ್ ನಾಶಕ್ಕೆ ಗರಿಷ್ಠ ತರಂಗಾಂತರ ಬಳಕೆ

ಕೊರೊನಾ ವೈರಸ್ ನಾಶಕ್ಕೆ ಗರಿಷ್ಠ ತರಂಗಾಂತರ ಬಳಕೆ

ನೇರಳಾತೀತ ಲೈಟ್ ಗಳೆಲ್ಲ ಕೊರೊನಾ ವೈರಸ್ ನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. 260 ನ್ಯಾನೋ ಮೀಟರ್ ನಿಂದ 275 ನ್ಯಾನೋ ಮೀಟರ್ ಗರಿಷ್ಠ ತರಂಗಾಂತರವನ್ನು ಹೊಂದಿರುವ UV ಲೈಟ್ ಗಳಿಂದ ಮಾತ್ರ ಕೊರೊನಾ ವೈರಸ್ ಸೋಂಕು ನಾಶಗೊಳಿಸುವ ಸಾಮರ್ಥ್ಯವಿರುತ್ತದೆ. ಕನಿಷ್ಠ 260 ರಿಂದ 275 ನ್ಯಾನೋ ಮೀಟರ್ ವಿಕಿರಣದ UV ಲೈಟ್ ಗಳು ಬ್ಯಾಕ್ಟಿರಿಯಾ ಹಾಗೂ ಕೊರೊನಾ ವೈರಸ್ ಗಳಲ್ಲಿರುವ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ನಾಶಗೊಳಿಸುತ್ತದೆ.

GUV ದೀಪದ ಬಳಕೆಯಿಂದ ಕೊರೊನಾ ವೈರಸ್ ನಿಯಂತ್ರಣ

GUV ದೀಪದ ಬಳಕೆಯಿಂದ ಕೊರೊನಾ ವೈರಸ್ ನಿಯಂತ್ರಣ

ಸೂಕ್ಷ್ಮಾಣು ಜೀವಿಹಾರಕ ನೇರಳಾತೀತ (Germicidal UV Light) ದೀಪಗಳನ್ನು ಸಾಕಷ್ಟು ಪ್ರದೇಶಗಳಲ್ಲಿ ಬಳಕೆ ಮಾಡಲಾಗುತ್ತಿದೆ. GUV ದೀಪಗಳಿಗೆ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುವ ಶಕ್ತಿಯಿದ್ದು, ಆಸ್ಪತ್ರೆ, ಕಚೇರಿ, ಉದ್ಯಾನವನ ಪ್ರದೇಶ, ಹೋಟೆಲ್, ವೇರ್ ಹೌಸಸ್, ರೈಲ್ವೆ ನಿಲ್ದಾಣ ಸೇರಿದಂತೆ ಹಲವೆಡೆ ಹಾಕಲಾಗಿರುತ್ತದೆ. ಇದರಿಂದ ಬ್ಯಾಕ್ಟಿರಿಯಾ ಹಾಗೂ ಅಪಾಯಕಾರಿ ರೋಗಾಣುಗಳು ಸಾಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ನಾಶಪಡಿಸುವ ಉದ್ದೇಶದಿಂದ GUV ದೀಪಗಳನ್ನು ಅಸ್ತ್ರವಾಗಿ ಬಳಸಿಕೊಳ್ಳಬೇಕಿದೆ.

ಜನರಿಗೆ UV ದೀಪ ಬಳಸುವುದರಿಂದ ಅಪಾಯವಿಲ್ಲವೇ?

ಜನರಿಗೆ UV ದೀಪ ಬಳಸುವುದರಿಂದ ಅಪಾಯವಿಲ್ಲವೇ?

ಸಾಮಾನ್ಯವಾಗಿ ವಸ್ತುಗಳು ಮತ್ತು ನಿರ್ದಿಷ್ಟ ಪ್ರದೇಶದಲ್ಲಿರುವ ಸೂಕ್ಷ್ಮಾಣುಗಳನ್ನು ನಾಶಪಡಿಸುವ ನಿಟ್ಟಿನಲ್ಲಿ UV ದೀಪಗಳನ್ನು ಬಳಲಾಗುತ್ತದೆ. ಇದರ ಬೆಳಕಿನಿಂದ ಮನುಷ್ಯರಿಗೆ ಅಪಾಯವಾಗುತ್ತದೆಯೇ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಇಲ್ಲ. ಮನುಷ್ಯರ ಮೇಲ್ಮೈ ಚರ್ಮದ ಮೇಲಷ್ಟೇ UV-C ದೀಪಗಳು ಪ್ರಭಾವವನ್ನು ಬೀರಬಲ್ಲದು. ಇದರಿಂದ ಮೇಲ್ಮೈ ಚರ್ಮ ಹಾಗೂ ಕಣ್ಣುಗಳ ಮೇಲೆಷ್ಟೇ ಇದು ಪ್ರಭಾವ ಬೀರುತ್ತದೆ. ಹೀಗಾಗಿ ಯಾವುದೇ ರೀತಿ ಕೆಟ್ಟ ಪರಿಣಾಮಗಳೂ ಆಗುವುದಿಲ್ಲ.

ಕೇರಳದಲ್ಲಿ 25 ಕೊರೊನಾ ಸೋಂಕಿತರ ಹಿಂದಿನ ಇತಿಹಾಸ ಭಯಾನಕ!ಕೇರಳದಲ್ಲಿ 25 ಕೊರೊನಾ ಸೋಂಕಿತರ ಹಿಂದಿನ ಇತಿಹಾಸ ಭಯಾನಕ!

ದೇಶದಲ್ಲಿ GUV ದೀಪಗಳ ಬಳಕೆ ಹೆಚ್ಚಿಸಲು ಕ್ರಮ

ದೇಶದಲ್ಲಿ GUV ದೀಪಗಳ ಬಳಕೆ ಹೆಚ್ಚಿಸಲು ಕ್ರಮ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗು ಒಂದು ತಾತ್ಕಾಲಿಕ ಮತ್ತು ಅಲ್ಪಾವಧಿಯ ಮಹಾಮಾರಿ ರೋಗವಾಗಿದೆ. ಮುಂದೆಯೂ ಇಂಥದ್ದೇ ಅಥವಾ ಇದಕ್ಕಿಂತ ಅಪಾಯಕಾರಿ ರೋಗಗಳು ಸಾಂಕ್ರಾಮಿಕ ಪಿಡುಗುಗಳನ್ನು ಜಗತ್ತು ಎದುರಿಸಬಹುದು. ಅದಕ್ಕಾಗಿ ಮೊದಲೇ ಅಣಿಯಾಗಿರಬೇಕು. ಅಪಾಯಕಾರಿ ವೈರಸ್ ಗಳನ್ನು ಕೊಲ್ಲಬಲ್ಲ ಶಕ್ತಿಯುಳ್ಳ GUV ದೀಪಗಳ ಬಳಕೆಯನ್ನು ದೇಶದಲ್ಲಿ ಹೆಚ್ಚಿಸಬೇಕಿದೆ. ತಂತ್ರಜ್ಞಾನವನ್ನು ತಕ್ಕಮಟ್ಟಿಗೆ ಬಳಸಿಕೊಳ್ಳಬೇಕಿದೆ.

ಸೂಕ್ಷ್ಮಾಣುಗಳನ್ನು ಕೊಲ್ಲುವ ದೀಪಗಳಿಗೆ ಭಾರಿ ಬೇಡಿಕೆ

ಸೂಕ್ಷ್ಮಾಣುಗಳನ್ನು ಕೊಲ್ಲುವ ದೀಪಗಳಿಗೆ ಭಾರಿ ಬೇಡಿಕೆ

ಜಾಗತಿಕ ಮಟ್ಟದಲ್ಲಿ GUV ದೀಪಗಳಿಗೆ ಮುಂದಿನ ದಿನಗಳಲ್ಲಿ ಅತಿಹೆಚ್ಚಿನ ಬೇಡಿಕೆ ಸೃಷ್ಟಿಯಾಗುವ ಸಾಧ್ಯತೆಗಳಿವೆ. ಮನುಷ್ಯರ ಪ್ರಾಣಕ್ಕೆ ಹಾನಿಕಾರಕವಾಗಿರುವ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವ ಸಾಮರ್ಥ್ಯವುಳ್ಳ GUV ದೀಪಗಳಿಗೆ 2018ರಲ್ಲಿ 1.1 ಬಿಲಿಯನ್ ಡಾಲರ್ ಬೆಲೆಯಿತ್ತು. 2016ರ ವೇಳೆಗೆ ಇದೇ GUV ದೀಪಗಳ ಮೌಲ್ಯವು 3.4 ಬಿಲಿಯನ್ ಡಾಲರ್ ಗೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಆಲಿಯಡ್ ಮಾರ್ಕೆಟ್ ರಿಸರ್ಚ್ ತಿಳಿಸಿದೆ.

ಆಸ್ಪತ್ರೆಗಳಿಗಷ್ಟೇ GUV ದೀಪಗಳು ಸೀಮಿತವಾಗಿರಬೇಕೇ?

ಆಸ್ಪತ್ರೆಗಳಿಗಷ್ಟೇ GUV ದೀಪಗಳು ಸೀಮಿತವಾಗಿರಬೇಕೇ?

ಕೆಟ್ಟ ಮೇಲೆ ಬುದ್ಧಿ ಕಲಿಯುವ ಮೊದಲು ಎಚ್ಚೆತ್ತುಕೊಳ್ಳುವುದು ಉತ್ತಮ. ದೇಶಾದ್ಯಂತ ಬಹುತೇಕ ಆಸ್ಪತ್ರೆಗಳಲ್ಲಿ GUV ದೀಪಗಳನ್ನು ಬಳಕೆ ಮಾಡಲಾಗುತ್ತಿದೆ. ಸೂಕ್ಷ್ಮಾಣು ಜೀವಿಗಳು, ಬ್ಯಾಕ್ಟಿರಿಯಾಗಳನ್ನು ಕೊಲ್ಲುವ ಶಕ್ತಿಯುಳ್ಳ ಈ GUV ದೀಪಗಳು ಆಸ್ಪತ್ರೆಗಳ ಮಟ್ಟಿಗಷ್ಟೇ ಏಕೆ ಸೀಮಿತವಾಗಿರಬೇಕು. ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಂತಾ ಸಾರ್ವಜನಿಕ ಪ್ರದೇಶಗಳಲ್ಲಿ ಏಕೆ ಈ GUV ದೀಪಗಳನ್ನು ಬಳಸಬಾರದು.

ಕೊರೊನಾ ವೈರಸ್ ಸೋಂಕು ಹರಡುವಿಕೆ ಸಂದಿಗ್ಧ ಪರಿಸ್ಥಿತಿಯಲ್ಲಷ್ಟೇ ಎಂದಲ್ಲ. ಮುಂದಿನ ದಿನಗಳಲ್ಲಿ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ದೇಶವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಷ್ಟೇ ಅಲ್ಲದೇ, ಬ್ಯಾಕ್ಟಿರಿಯಾ ಮತ್ತು ವೈರಸ್ ಕೊಲ್ಲುವ ಶಕ್ತಿಯುಳ್ಳ GUV ದೀಪಗಳನ್ನು ಸಾರ್ವಜನಿಕ ಪ್ರದೇಶ ಮತ್ತು ಮನೆಗಳಲ್ಲಿಯೂ ಬಳಸುವಂತೆ ಆಗಬೇಕಿದೆ.

English summary
How UV Lights Are Effective Weapon For Coronavirus Destruction. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X